ಬೆಂಗಳೂರು : ನನ್ನ ತಾಯಿಯನ್ನು ಪೂಜೆ ಮಾಡಲು ನನಗೆ ತುಂಬಾ ಇಷ್ಟ, ಅವರು ತಮ್ಮ ಜೀವನವನ್ನು ಸವೆಸಿದ ಸೋಲದೇವನಹಳ್ಳಿಯಲ್ಲಿ ಅವರ ನೆನಪಿಗಾಗಿ ಪುಟ್ಟ ದೇವಾಲಯವನ್ನು ನಿರ್ಮಿಸಿ, ಪ್ರತಿದಿನವೂ ಅಮ್ಮನನ್ನು ಪೂಜಿಸಿ ಭಕ್ತಿಯಿಂದ ನಮಸ್ಕರಿಸುತ್ತೇನೆ. ದಿನಾ ಅವರ ದರ್ಶನ ಪಡೆಯುವ ಮೂಲಕ ನನ್ನ ಜೀವನವನ್ನು ಕಳೆಯುತ್ತೇನೆ ಎಂದು ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ತಾಯಿಯ ಪ್ರೀಯಿಯನ್ನು ನೆನದಿದ್ದು ಹೀಗೆ.
ಅಮ್ಮನ ಜೊತೆ ಇಷ್ಟು ವರ್ಷಗಳ ಕಾಲ ಒಡನಾಟ, ಬಾಂಧವ್ಯ ಇದ್ದುದರಿಂದಲೇ ಬಡವರು, ಕಷ್ಟದಲ್ಲಿರುವವರು, ಪ್ರಾಣಿಗಳ ಬಗ್ಗೆ ಕರುಣೆ ಉಂಟಾಗಿರುವುದು. ಅನುಕಂಪ, ಪ್ರೀತಿ ಅಮ್ಮ ನನಗೆ ಹೇಳಿಕೊಟ್ಟ ಪಾಠ, ನನ್ನ ತಾಯಿಯವರು ನನ್ನನ್ನು ನಿಮಗೆ ಒಪ್ಪಿಸಿ ಹೋಗಿದ್ದಾರೆ, ನಿಮ್ಮ ಜೊತೆಯಲ್ಲಿ ಅವರಿದ್ದಾರೆ, ಅಭಿಮಾನಿಗಳಲ್ಲಿ ಅವರನ್ನು ಕಾಣುತ್ತೇನೆ, ನನ್ನ ಜನ್ಮ ಸಾರ್ಥಕ ಎನಿಸುತ್ತದೆ ಎಂದರು.
ನಟಿ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ತಮ್ಮ 85ನೇ ವರ್ಷದಲ್ಲಿ ನಿಧನರಾಗಿದ್ದು ಇಂದಿಗೆ ಮೂರು ದಿನವಾಗಿದೆ. ಈ ತೀರಿಕೊಂಡು ಮೂರು ದಿನವಾದ ಹಿನ್ನೆಲೆಯಲ್ಲಿ ಇಂದು ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದರು.
ಆನಂದ್ ತೇಲ್ತುಂಬ್ಡೆ ಅಮ್ಮನೂ ಹೋರಾಟಗಾರರು! ವಿ.ಎಲ್.ನರಸಿಂಹಮೂರ್ತಿ ಹೆಸರಾಂತ ಚಿಂತಕ, ಮಾನವ ಮಾನವ ಹಕ್ಕುಗಳ 'ಹೋರಾಟ ಗಾರ ಡಾ.ಆನಂದ್ ತೇಲ್ತುಂಬ್ಡೆಯವರ ತಾಯಿ…
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬುದು ಇಂದು ನಿನ್ನೆಯ ಆರೋಪವಲ್ಲ. ಮೊದಲಿನಿಂದಲೂ ಈ ಆರೋಪ ಇದೆ. ರೈಲ್ವೆಯಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ…
ರಾಮನಗರ : ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ…
ಹಲವು ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಶೇ.5 ಹೆಚ್ಚಳ ಫಾಸ್ಟ್ ಫುಡ್, ಜಂಕ್‌ಫುಡ್‌ಗಳ ದರವೂ ಗಗನಮುಖಿ • ಚಿರಂಜೀವಿ ಸಿ…
• ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ಹತ್ತಿರತ್ತಿರ ಒಂದೂ ಕಾಲು ಶತಮಾನದ ಚಿರನೂತನ ಶಾಲೆ... ವೃದ್ಧಾಪ್ಯದಲ್ಲೂ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡು…
ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…