ಬಿಡುಗಡೆಗೆ ಸಜ್ಜಾಗಿರುವ ತಮ್ಮ ‘ಶಾಕುಂತಲಂ’ ಚಿತ್ರದ ಕುರಿತು ನಟಿ ಸಮಂತಾ ರುತು ಪ್ರಭು ಅವರು ಟ್ವೀಟರ್‌ನಲ್ಲಿ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದಾರೆ. ಈ ವೇಳೆ, ತಮ್ಮ ಬದುಕಿನ ಸವಾಲುಗಳನ್ನು ಎದುರಿಸಿ ಯಶಸ್ಸು ಕಾಣುತ್ತಿರುವ ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರ ನೀಡಿದ ಸಮಂತಾ, ‘ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಪೌರಾಣಿಕ ಕಥೆಯ ಪಾತ್ರಧಾರಿ ಶಾಕುಂತಲಾ ಹಾಗೆ ಜೀವನ ಮುಗಿಯಬಾರದು ಎಂದು ಉತ್ತರಿಸಿದ್ದಾರೆ.
ಭಾನುವಾರ ತಮ್ಮ ಟ್ವೀಟರ್ ಹ್ಯಾಂಡಲ್‌ನಲ್ಲಿ ‘ಆಸ್ಕ್ ಸ್ಯಾಮ್’ ಎಂದು ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಕೆಲಹೊತ್ತಿನಲ್ಲೇ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗರೆದರು. ಈ ನಡುವೆಯೇ ಒಬ್ಬರು, ‘ಹಲವಾರು ಸಂಕಷ್ಟಗಳನ್ನು ಎದುರಿಸಿಯೂ ನೀವು ಹೇಗೆ ಸಮರ್ಥವಾಗಿ ಮುಂದೆ ಸಾಗುತ್ತಿದ್ದೀರಿ? ಇಷ್ಟು ಶಕ್ತಿ ಸಾಮರ್ಥ್ಯ ಎಲ್ಲಿಂದ ದಕ್ಕಿತು?’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, ‘ಏಕೆಂದರೆ ನನ್ನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ. #ಶಾಕುಂತಲಾ’ ಎಂದು ಬರೆದುಕೊಂಡಿದ್ದಾರೆ.
‘ಸೀತಾ ರಾಮನ್’ ಖ್ಯಾತಿಯ ಮೃಣಾಲ್ ಠಾಕೂರ್ ಕೂಡ ಸಮಂತಾಗೆ ಪ್ರಶ್ನೆ ಕೇಳಿದ್ದು ವಿಶೇಷವಾಗಿತ್ತು. ‘ನಾವಿಬ್ಬರು ಯಾವಾಗ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತೇವೆ’ ಎಂದು ಪ್ರಶ್ನಿಸಿದ್ದಾರೆ. ಮೃಣಾಲ್ ಮುಂದಿನ ಸಿನಿಮಾ ಗುಮ್ರಾಹ್ ಗೆ ಶುಭ ಕೋರಿ ಪ್ರತಿಕ್ರಿಯಿಸಿದ ಸಮಂತಾ, ‘ಈ ಯೋಚನೆ ಇಷ್ಟವಾಯಿತು. ಜೊತೆಗೆ ಕೆಲಸ ಮಾಡೋಣ’ ಎಂದಿದ್ದಾರೆ.
ಸಮಂತಾ ಹಾಗೂ ದೇವ್ ಮೋಹನ್ ನಟನೆಯ ಶಾಕುಂತಲಾ ಏ.14ರಂದು ಬಿಡುಗಡೆಯಾಗಲಿದೆ.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…