ಬೆಂಗಳೂರು: ವೀರಗಾಸೆ ಕುಣಿತಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಹೆಡ್ ಬುಷ್ ಸಿನಿಮಾ ವಿರುದ್ಧ ಎದ್ದಿದ್ದ ವಿವಾದ ಕೊನೆಗೂ ಅಂತ್ಯವಾಗಿದೆ. ವಿವಾದಾತ್ಮಕ ಡೈಲಾಗ್ ಮ್ಯೂಟ್ ಮಾಡಲು ಚಿತ್ರ ತಂಡ ಒಪ್ಪಿಗೆ ನೀಡಿದೆ.
ಸಿನಿಮಾದಲ್ಲಿ ಬೆಂಗಳೂರಿನ ಕರಗೋತ್ಸವಕ್ಕೆ, ವೀರಗಾಸೆ ಕುಣಿತಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ದೂರಲಾಗಿತ್ತು. ಈ ಬಗ್ಗೆ ನಟ ಡಾಲಿ ಧನಂಜಯ್ ವಿವರಣೆ ನೀಡಿ, ವೀರಗಾಸೆಗೆ ಯಾವುದೇ ಅಪಮಾನ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಆದರೂ ಕೂಡ ಚಿತ್ರತಂಡದ ವಿರುದ್ಧ ವಿರೋಧ ಮುಂದುವರಿದಿತ್ತು. ಆ ದೃಶ್ಯಗಳನ್ನು ಕತ್ತರಿಸಿ ಎಂದು ಕೆಲವರು ಬೇಡಿಕೆ ಇಟ್ಟಿದ್ದರು. ಇದೀಗ ಪಿಲ್ಮ್ ಚೇಂಬರ್ ಹಾಗೂ ಚಿತ್ರ ತಂಡ ಜಂಟಿಯಾಗಿ ಸುದ್ದಿಗೋಷ್ಠಿ ಕರೆದು, ವಿವಾದ ಅಂತ್ಯವಾಗಿರುವುದಾಗಿ ತಿಳಿಸಿದೆ.
ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ
ಬೆಂಗಳೂರಿನ ಫಿಲ್ಮ್ ಚೇಂಬರ್ನಲ್ಲಿ ಗುರುವಾರ ಹೆಡ್ ಬುಷ್ ಚಿತ್ರತಂಡ ಹಾಗೂ ಫಿಲ್ಮ್ ಚೇಂಬರ್ ಪದಾದಿಕಾರಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಈ ಸ್ಪಷ್ಟನೆ ನೀಡಿದರು. ನಟ ಡಾಲಿ ಧನಂಜಯ, ಅಗ್ನಿ ಶ್ರೀಧರ್, ಕರಗ ಸಮಿತಿ ಹಾಗೂ ಫಿಲ್ಮ್ ಚೇಂಬರ್ ಪಧಾದಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಸಮಸ್ಯೆ ಈಗ ಬಗೆಹರಿದಿದೆ ಎಂದು ಮಾಹಿತಿ ನೀಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಸುಂದರ್ ರಾಜ್ ಹೇಳಿದ್ದಾರೆ.
ವಿವಾದಾತ್ಮಕ ಡೈಲಾಗ್ ಮ್ಯೂಟ್ ಮಾಡಲು ಒಪ್ಪಿಗೆ
ಚಿತ್ರದಲ್ಲಿ ಬರುವ ವಿವಾದಾತ್ಮಕ ಸಂಭಾಷಣೆಯನ್ನ ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿದೆ ಅಂತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡು ದಿನದಲ್ಲಿ ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ ಹಾಕಲು ಚಿತ್ರ ತಂಡ ಒಪ್ಪಿರುವುದಾಗಿ ತಿಳಿಸಲಾಗಿದೆ.
ಡಾಲಿ ಧನಂಜಯ್ ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಡಾಲಿ ಧನಂಜಯ ಅವರು, “ಎಲ್ಲ ಇಲ್ಲಿ ಕೂತು ಮಾತನಾಡಿದ್ದು ತುಂಬಾ ಖುಷಿಯಾಯ್ತು. ಎಲ್ಲರೂ ನೀಟಾಗಿ ಅ ವಿಚಾರದ ಬಗ್ಗೆ ಮಾತನಾಡಿದ್ರು ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಕೇಳ್ತಿನಿ. ಎಲ್ಲರಿಗೂ ಧನ್ಯವಾದಗಳು. ಖಂಡಿತ ನಾನು ಆ ಡೈಲಾಗ್ ಮ್ಯೂಟ್ ಮಾಡ್ತಿನಿ. ವೀರಗಾಸೆ ವಿಚಾರವನ್ನು ಕ್ಲೀಯರ್ ಮಾಡಿದ್ದೀನಿ. ನಾನು ಇಲ್ಲಿಗೆ ಬಂದಿರೋದು ಸಿನಿಮಾ ಮಾಡೋಕೆ ಕಾಂಟ್ರವರ್ಸಿ ಮಾಡೋಕಲ್ಲʼʼ ಎಂದು ಹೇಳಿದರು.
ವಿವಾದ ಮಾಡಿದ್ದು ಆರ್ ಎಸ್ಎಸ್ ಅಲ್ಲ, ಕಿಡಿಗೇಡಿಗಳು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗ್ನಿಶ್ರೀಧರ್, ವೇದಿಕೆ ಮೇಲೆ ಎದುರಾಳಿಗಳಾಗಿ ಕೂತಿರೋರು ಎಲ್ಲ ನನ್ನವರೇ. ನಮ್ಮ ಸಮಸ್ಯೆ ಹಾಗೂ ಅವರ ನೋವು ನಮಗೆ ಅರ್ಥ ಆಗುತ್ತದೆ. ನಿನ್ನೆ ನಾನು ಕೋಪದಲ್ಲಿ ಕಿಡಿಗೇಡಿಗಳ ವಿರುದ್ದ ಕೂಗಾಡಿದ್ದೆ. ಈ ವಿವಾದ ಮಾಡಿದ್ದು ಅರ್ ಎಸ್ ಎಸ್ ಅಲ್ಲ ಕಿಡಿಗೇಡಿಗಳು ಎಂದರು.
ಮಳೆಬಿದ್ದು ತಣ್ಣಗಾದಂತಹ ಅನುಭವ ಆಗಿದೆ
ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಚಿನ್ನೆಗೌಡ ಮಾತನಾಡಿ, ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಏನೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸಿಕೊಂಡು ಬಂದಿದ್ದೀವಿ. ಈಗ ಮಳೆಬಿದ್ದು ತಣ್ಣಗಾದಂತಹ ಅನುಭವ ಆಗಿದೆ. ಎಲ್ಲರೂ ಹೋಗಿ ಸಿನಿಮಾ ನೋಡ್ತಿವಿ ಎಂದರು.
ಬೆಂಗಳೂರು: ನಾಳೆ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯ ಬಜೆಟ್ ಮಂಡನೆಯ…
ಹನೂರು: ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವನ್ಯಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಳ್ಳೇಗಾಲ…
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಎಐಸಿಸಿ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಈ…
ಮಂಡ್ಯ: ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವವನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವತಿಯಿಂದ “ಕೃಷಿ ಯಂತ್ರೋಪಕರಣ…
ಮಂಡ್ಯ: ಹಳೆಯ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಾಗ ಬದಲಾಯಿಸುವುದು ಶಕ್ತಿ ಉಳಿತಾಯ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ದೀರ್ಘಾವಧಿಯ ಬಾಳಿಕೆಗೆ…