ಚಿತ್ರ ಮಂಜರಿ

ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ: ಪವರ್ ಸ್ಟಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಸೈಮಾ ಅವಾರ್ಡ್ ಸೌತ್ ಸಮಾರಂಭದ ಬೆನ್ನಲ್ಲೇ ಫಿಲ್ಮ್‌ಫೇರ್ ಅವಾರ್ಡ್ ಸೌತ್ ಸಮಾರಂಭ ಕೂಡ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. 67ನೇ ಸಾಲಿನ ಫಿಲ್ಮ್​ಫೇರ್​ ಸಮಾರಂಭ ಬೆಂಗಳೂರಿನ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ನಡೆಯಿತು. ಭಾನುವಾರ (ಅಕ್ಟೋಬರ್ 9) ನಡೆದ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಾಯಳಂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಕನ್ನಡದಲ್ಲಿ ನಟ ಧನಂಜಯ್, ನಟಿ ಯಜ್ಞಾ ಶೆಟ್ಟಿ, ತಮಿಳಿನಲ್ಲಿ ನಟ ಸೂರ್ಯ, ನಟಿ ಲಿಜೋಮೋಲ್ ಜೋಸ್ ಮತ್ತು ತೆಲುಗಿನಲ್ಲಿ ನಟ ಅಲ್ಲುಅರ್ಜುನ್ ಮತ್ತು ಸಾಯಿ ಪಲ್ಲವಿ ಹಾಗೂ ಮಲಯಾಳಂನಲ್ಲಿ ಬಿಜು ಮೆನನ್ ಮತ್ತು ನಟಿ ನಿಮಿಶಾ ಅವರಿಗೆ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಗರಿ ಸಿಕ್ಕಿದೆ. ಇನ್ನು ಜೀವಮಾನ ಸಾಧನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಅವರಿಗೆ ನೀಡಲಾಗಿದೆ.

ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಧನಂಜಯ್ ಪಾಲಾಗಿದೆ. ಬಡವ ರಾಸ್ಕಲ್ ಸಿನಿಮಾದ ಉತ್ತಮ ಅಭಿನಯಕ್ಕೆ ಧನಂಜಯ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿ ಯಜ್ಞಾ ಶೆಟ್ಟಿ ಪಡೆದಿದ್ದಾರೆ. ಆಕ್ಟ್​ 1978 ಸಿನಿಮಾದ ಉತ್ತಮ ನಟನೆಗೆ ಈ ಪ್ರಶಸ್ತಿ ದೊರೆತಿದೆ. ಇನ್ನು ರಾಜ್​ ಬಿ. ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ನೀಡಲಾಗಿದೆ.

ಫಿಲ್ಮ್‌ಫೇರ್ ಪ್ರಶಸ್ತಿ ಪಡೆಯುವುದು ಅನೇಕ ನಟ-ನಟಿಯರ ಕನಸು. ಅದರಲ್ಲೂ ಬೆಂಗಳೂರಿನಲ್ಲೇ ಫಿಲ್ಮ್‌ಫೇರ್ ಸಮಾರಂಭ ನಡೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಪ್ರತಿವರ್ಷ ಅವಾರ್ಡ್ ಸಾಮಾರಂಭಗಳಿಗೆ ಬೇರೆ ರಾಜ್ಯಗಳಿಗೆ ಹೋಗಬೇಕಿತ್ತು. ಆದರೆ ಈ ವರ್ಷ ಸೈಮಾ ಮತ್ತು ಫಿಲ್ಮ್‌ಫೇರ್ ಅವಾರ್ಡ್ ಸಮಾರಂಭ ಬೆಂಗಳೂರಿನಲ್ಲೇ ನಡೆದಿದ್ದು ವಿಶೇಷ.

ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಕನ್ನಡಿಗರ ಪಟ್ಟಿ:

ಅತ್ಯುತ್ತಮ ನಟ: ಧನಂಜಯ್​ (ಬಡವ ರಾಸ್ಕಲ್​)

ಅತ್ಯುತ್ತಮ ನಟಿ: ಯಜ್ಞಾ ಶೆಟ್ಟಿ (ಆಕ್ಟ್​ 1978)

ಅತ್ಯುತ್ತಮ ಸಿನಿಮಾ: ಆಕ್ಟ್​ 1978 (ನಿರ್ದೇಶನ ಮಂಸೋರೆ)

ಅತ್ಯುತ್ತಮ ನಿರ್ದೇಶಕ: ರಾಜ್​ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

ಅತ್ಯುತ್ತಮ ಪೋಷಕ ನಟ: ಬಿ. ಸುರೇಶ (ಆಕ್ಟ್​ 1978)

ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್​ ಪ್ರಪಂಚ)

ಅತ್ಯುತ್ತಮ ಸಂಗೀತ ನಿರ್ದೇಶನ: ವಾಸುಕಿ ವೈಭವ್​ (ಬಡವ ರಾಸ್ಕಲ್​)

ಅತ್ಯುತ್ತಮ ಸಾಹಿತ್ಯ: ಜಯಂತ ಕಾಯ್ಕಿಣಿ (ಆಕ್ಟ್​ 1978)

ಅತ್ಯುತ್ತಮ ಗಾಯಕ: ರಘು ದೀಕ್ಷಿತ್​ (ನಿನ್ನ ಸನಿಹಕೆ)

ಅತ್ಯುತ್ತಮ ಗಾಯಕಿ: ಅನುರಾಧಾ ಭಟ್​ (ಬಿಚ್ಚುಗತ್ತಿ)

ಅತ್ಯುತ್ತಮ ಛಾಯಾಗ್ರಾಹಣ: ಶ್ರೀಶಾ ಕುದುವಳ್ಳಿ (ಬಡವ ರಾಸ್ಕಲ್​)

ಅತ್ಯುತ್ತಮ ನೃತ್ಯ ನಿರ್ದೇಶಕ: ಜಾನಿ ಮಾಸ್ಟರ್​ (ಫೀಲ್​ ದ ಪವರ್​- ಯುವರತ್ನ)

ಜೀವಮಾನ ಸಾಧನೆ ಪ್ರಶಸ್ತಿ: ಪುನೀತ್​ ರಾಜ್​ಕುಮಾರ್​

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಮಿಲನಾ ನಾಗರಾಜ್​, ಅಮೃತಾ ಅಯ್ಯಂಗಾರ್​

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಡಾರ್ಲಿಂಗ್​ ಕೃಷ್ಣ (ಲವ್​ ಮಾಕ್ಟೇಲ್​)

andolana

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

3 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

4 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

5 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

7 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

7 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

11 hours ago