ಚಿತ್ರ ಮಂಜರಿ

ಬಂಗಾಲಿಯ ಖ್ಯಾತ ನಟಿ  ಐಂದ್ರಿಲಾ ಶರ್ಮಾ ಇನ್ನಿಲ್ಲ

ಬಂಗಾಲಿಯ ಖ್ಯಾತ ನಟಿ  ಐಂದ್ರಿಲಾ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ (ನವೆಂಬರ್ 20) ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ನವೆಂಬರ್ 20) ಮಧ್ಯಾಹ್ನ ಕೊನೆಯುಸಿರೆಳೆದರು. ಐಂದ್ರಿಲಾ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ನಿಧನರಾಧರು ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಐಂದ್ರಿಲಾಶರ್ಮಾ ಬಾಯ್ ಫ್ರೆಂಡ್ ವದಂತಿಯನ್ನು ತಳ್ಳಿ ಹಾಕಿದ್ದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಪಿಆರ್ ಮಾಡಲಾಯಿತು. ಆದರೆ  ಐಂದ್ರಿಲಾ ದೇಹ ಸ್ಪಂದಿಸಲಿಲ್ಲ. ಹಾಗಾಗಿ ಅವರನ್ನು ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಯಿತು. ಅಂಡ್ರಿಲಾ ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಐಂದ್ರಿಲಾ ಇನ್ನಿಲ್ಲ

ಐಂದ್ರಿಲಾ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬಂಗಾಲಿ ಕಿರುತೆರೆ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ. ಅಂದಹಾಗೆ ನಟಿ ಐಂದ್ರಿಲಾ ಕ್ಯಾನ್ಸರ್‌ ರೋಗಕ್ಕೆ ಒಳಗಾಗಿದ್ದರು. ಇತ್ತೀಚಿಗಷ್ಟೆ ಕ್ಯಾನ್ಸರ್ ನಿಂದ ಗುಣಮುಖರಾಗಿದ್ದರು. ಕ್ಯಾನ್ಸರ್ ಗೆದ್ದ ನಟಿ ಮತ್ತೆ ಬಣ್ಣ ಹಚ್ಚಲು ಸ್ಜಜಾಗಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು ಕ್ಯಾನ್ಸರ್ ನಿಂದ ಗುಣಮುಖರಾಗುತ್ತಿದ್ದಂತೆ  ಅಂಡ್ರಿಯಾ ಬ್ರೈನ್ ಸ್ಟ್ರೋಕ್‌ಗೆ ಒಳಗಾದರು. ಮತ್ತೆ ಐಂದ್ರಿಲಾ ಆಸ್ಪತ್ರೆಗೆ ದಾಖಲಾದರು. ಎರಡೂ ಕಾಯಿಲೆಯಿಂದ ಸುಧಾರಿಸಿಕೊಂಡಿದ್ದ ಅಂಡ್ರಿಯಾ ಇದೀಗ ಹೃದಯಾಘಾತಕ್ಕೆ ಬಲಿಯಾದರು.

ಐಂದ್ರಿಲಾ ಬಂಗಾಲಿಯಲ್ಲಿ ತುಂಬಾ ಪ್ರಸಿದ್ಧ ನಟಿ. ‘ಜುಮುರ್’ ಟಿವಿ ಶೋ ಮೂಲಕ  ಶೋಬಿಜ್‌ಗೆ ಕಾಲಿಟ್ಟರು. ಬಳಿಕ ಅಂಡ್ರಿಲಾ ‘ಜಿಯೋನ್ ಕತಿ’, ‘ಜಿಬೋನ್ ಜ್ಯೋತಿ’ ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಧಾರಾವಾಹಿ ಜೊತೆಗೆ ವೆಬ್ ಸರಣಿಯಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ‘ಭಾಗರ್’ ವೆಬ್ ಸರಣಿಯನ್ನು ಮುಗಿಸಿದ್ದರು. ಬಳಿಕ ಅಂಡ್ರಿಯಾ ಸ್ಥಿತಿ ಗಂಭೀರವಾಗಿತ್ತು. ನಟಿ ಐಂದ್ರಿಲಾ ಶರ್ಮಾ ಚೇತರಿಸಿಕೊಳ್ಳಲಿ ಸಿನಿಮಾ ಗಣ್ಯರು ಮತ್ತು ಅಭಿಮಾನಿಗಳು ಪ್ರಾರ್ಥಿಸಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.

andolana

Recent Posts

2025 ಸವಿನೆನಪು: ಸ್ಯಾಂಡಲ್‌ವುಡ್ ಏಳು-ಬೀಳು

‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…

2 hours ago

ಉದ್ಘಾಟನೆಯಾಗದ ಅಂಬಾರಿ ಖ್ಯಾತಿಯ ಅರ್ಜುನನ ಸ್ಮಾರಕ

ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…

2 hours ago

ಸಾಂಸ್ಕೃತಿಕ ನಗರಿಯಲ್ಲಿ ಕ್ರಿಸ್‌ಮಸ್ ಸಂಭ್ರಮ

ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…

2 hours ago

ರಾಗಿ, ಹುರುಳಿ ಒಕ್ಕಣೆಗೆ ರಸ್ತೆಯೇ ಕಣ!

ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…

2 hours ago

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

13 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

13 hours ago