ಚಿತ್ರ ಮಂಜರಿ

ದೀಪಿಕಾ ಬಿಕಿನಿ ಧರಿಸಿರೋದು ಅವರ ಸಮಸ್ಯೆಯಲ್ಲ, ಕೇಸರಿ ಬಣ್ಣ ಇರೋದು ಹಲವರ ಸಮಸ್ಯೆ :ದೀಪಿಕಾ ಪರ ನಿಂತ ನಟಿ ಆಶಾ ಪರೇಖ್

ನವದೆಹಲಿ : ಬಾದಷಾ ಶಾರುಖ್ ನಟನೆಯ `ಪಠಾಣ್’  ಮುಂದಿನ ಜನವರಿಗೆ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರಿಲೀಸ್‌ಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹುಟ್ಟು ಹಾಕಿದೆ. ಇನ್ನೂ ದೀಪಿಕಾ  ಕೇಸರಿ ಬಿಕಿನಿ ವಿವಾದ, ಸಿನಿಮಾ ಬ್ಯಾನ್  ವಿಷ್ಯವಾಗಿ ದಾದಾ ಫಾಲ್ಕೆ ಪುರಸ್ಕೃತ ನಟಿ ಆಶಾ ಪರೇಖ್ ಮಾತನಾಡಿದ್ದಾರೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಕೇಸರಿ ಬಿಕಿನಿ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. `ಪಠಾಣ್’ ಚಿತ್ರದ ಹಾಡಿನಲ್ಲಿ ನಟಿ ದೀಪಿಕಾ ಸಖತ್ ಹಾಟ್ ಆಗಿ ಮೈಚಳಿ ಬಿಟ್ಟು ಶಾರುಖ್‌ ಜೊತೆ ಸೊಂಟ ಬಳುಕಿಸಿದ್ದಾರೆ. ʻಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಕುರಿತಾಗಿ ಈ ಚಿತ್ರವನ್ನೇ ನಿಷೇಧಿಸಬೇಕು ಎಂಬ ಕೆಲ ಮಾತುಗಳು ಸಹ ಕೇಳಿ ಬಂದಿದ್ದವು. ಸದ್ಯ ಇದೇ ವಿಚಾರವಾಗಿ ಹಿರಿಯ ನಟಿ ಆಶಾ ಪರೇಖ್ ಮಾತನಾಡಿದ್ದಾರೆ. ಪಠಾಣ್‌ ಪರ ಹಿರಿಯ ನಟಿ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಆಶಾ ಪರೇಖ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ `ಬೇಷರಂ ರಂಗ್’ ಹಾಡಿನ ಕುರಿತಾಗಿ ಕೇಳಲಾಗಿದೆ. ಈ ಬಗ್ಗೆ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದ ಮೂಲ ಉದ್ದೇಶ ಮನರಂಜನೆ ನೀಡುವುದಾಗಿದೆ. ದೀಪಿಕಾ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ. ದೀಪಿಕಾ ಬಿಕಿನಿ ಧರಿಸಿರೋದು ಅವರ ಸಮಸ್ಯೆಯಲ್ಲ. ಕೇಸರಿ ಬಣ್ಣ ಇರೋದು ಹಲವರ ಸಮಸ್ಯೆ. ನಮ್ಮ ಯೋಚನೆ ಸಂಕುಚಿತ ಸ್ವಭಾವದಿಂದ ಇದೆ. ನಾವು ಯೋಚಿಸುವ ರೀತಿ ಬದಲಾಗಬೇಕಿದೆ. ಈ ಮೂಲಕ ಬಾಲಿವುಡ್‌ನ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ನಟಿ ಆಶಾ ಮಾತನಾಡಿದ್ದಾರೆ. ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ದಾಖಲೆ ಮಾಡುತ್ತಿಲ್ಲ. ಹಾಗಾಗಿ ಹಿಂದಿ ಚಿತ್ರರಂಗ ಸೋಲುತ್ತಿದೆ ಎಂದಿದ್ದಾರೆ.

andolanait

Recent Posts

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

3 hours ago

ಓದುಗರ ಪತ್ರ: ಶೇ. ೭.೫ರಷ್ಟು ಮೀಸಲಾತಿ: ಜನ ಮೆಚ್ಚುವ ನಿರ್ಧಾರ

ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ…

3 hours ago

ಓದುಗರ ಪತ್ರ: ಸುಪ್ರೀಂಕೋರ್ಟ್ ಪೀಠಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು

ಸುಪ್ರೀಂ ಕೋರ್ಟ್ ಬಾಗಿಲು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತೆರೆದಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಆದರೆ ದೇಶದ ಉತ್ತರದ…

3 hours ago

‘ಬಂದೋಬಸ್ತ್ ’ ಎಂಬ ಬದ್ಧತೆ

ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತಿಹಾಸದಿಂದ ಪ್ರಸ್ತುತ ಪೊಲೀಸ್ ಕರ್ತವ್ಯದವರೆಗೆ  ಸಾರ್... ಎಲ್ಲ…

3 hours ago

ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಕೃಷ್ಣ ಸಿದ್ದಾಪುರ ನೀರಿಗೂ ಪರದಾಟ, ಕತ್ತಲಲ್ಲೇ ಮಕ್ಕಳ ವಿದ್ಯಾಭ್ಯಾಸ   ಸಿದ್ದಾಪುರ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್…

3 hours ago

ಡೆಡ್ ಬಾಡಿ ಬಿಸಾಕಿದ ಜಾಗದಲ್ಲಿ ಹೊಸ ಸುಳಿವು

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಸ್ಕಾರ್ಪಿಯೋ ಹೋಗಿ-ಬರುವುದು, ೩ ಜನರು ನಡೆದು ಬರುವುದು ವಿಡಿಯೋದಲ್ಲಿ ಸೆರೆ ನಾಳೆ ೧೦ ಗಂಟೆಯವರೆಗೆ…

3 hours ago