ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಿರಿಯ ನಟಿ ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ವಯೋಸಹಜ ಕಾರಣದಿಂದ ಹಾಸಿಗೆ ಹಿಡಿದಿರುವ ನಟಿ ಲೀಲಾವತಿ ಅವರ ಮನೆಗೆ ತರೆಳಿದ ದರ್ಶನ್ ಅವರು ಲೀಲಾವತಿಯವರ ಪುತ್ರ ವಿನೋದ್ ರಾಜ್ ಬಳಿ ಯೋಗಕ್ಷೇಮ ವಿಚಾರಿಸಿದ್ದು ಕೆಲಕಾಲ ಅಲ್ಲಿಯೇ ಇದ್ದು ನಾನಾ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ಚಿತ್ರರಂಗದ ಹಲವು ನಟ ನಟಿಯರು ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ಮನೆಗೆ ತೆರಳಿ ವಯೋಸಹಜ ಕಾರಣದಿಂದ ಹಾಸಿಗೆ ಹಿಡಿದಿರುವ ನಟಿಯ ಆರೋಗ್ಯ ವಿಚಾರಿಸುತ್ತಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ನಟ ಅರ್ಜುನ್ ಸರ್ಜಾ ಅವರು ಕೂಡ ಲೀಲಾವತಿಯವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದರು. ನೆನ್ನೆ ದರಶನ್ ಅವರು ಕೂಡ ಲೀಲಾವತಿಯವರನ್ನು ಭೇಟಿಯಾಗಿದ್ದಾರೆ.
ಕೆಲದಿನಗಳ ಹಿಂದೆ ಲೀಲಾವತಿಯವರು ನಿಧನರಾದರೆಂಬ ಸುಳ್ಳು ವದಂತಿಯನ್ನು ಹಬ್ಬಿಸಲಾಗಿತ್ತು. ಇದು ಅವರ ಪುತ್ರ ವಿನೋದ್ ರಾಜ್ ಅವರಿಗೆ ಬಹಳ ಬೇಸರ ತರಿಸಿತ್ತು. ಈ ಬಗ್ಗೆ ವಿನೋದ್ ರಾಜ್ ಅವರು ಸಂದರ್ಶನವೊಂದರಲ್ಲಿ ತಮ್ಮ ತಾಯಿಯ ಆರೋಗ್ಯದ ಬಗೆಗಿನ ಮಾಹಿತಿ ಹಂಚಿಕೊಂಡಿದ್ದರು. ಅಮ್ಮ ಆರೋಗ್ಯವಾಗಿದ್ದಾರೆ. ಅವರ ವಯಸ್ಸಿಗೆ ತಕ್ಕಂತೆ ಹೇಗೆ ಇರಬೇಕೋ ಹಾಗೆ ಇದ್ದಾರೆ ಅಮ್ಮ 86-87 ವಯಸ್ಸು ಮುಟ್ಟಿದ್ದಾರೆ. ಅವರ ಕಾಲದಲ್ಲಿ ಒಂದು ದಿನಕ್ಕೆ ನಾಲ್ಕು ಸಿನಿಮಾಗೆ ಪಾತ್ರ ಮಾಡಿದವರು. ಅಮ್ಮ ಒಟ್ಟು 650 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಜನ ಯಾಕೆ ಅಮ್ಮನ ಸಾವಿನ ಸುದ್ದಿ ಹಬ್ಬಿಸಿದ್ರು ಅನ್ನೋದನ್ನು ಮಂಜುನಾಥನಿಗೆ ಬಿಟ್ಟಿದ್ದೀವಿ. ಅವನೇ ನೋಡಿಕೊಳ್ಳಬೇಕು ಅಷ್ಟೇ ಎಂದು ಹೇಳಿದ್ದರು.
ನಟಿ ಲೀಲಾವತಿಯವರು ಕಳೆದ ಕೆಲ ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ದಶಕಗಳಕಾಲ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದ ಲೀಲಾವತಿಯವರು ತಮ್ಮ ಅತ್ಯದ್ಭುತ ನಟನೆಯ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…