ಚಿತ್ರ ಮಂಜರಿ

ಚಂದ್ರಯಾನ-3ರ ಯಶಸ್ಸಿನ ಕೀರ್ತಿ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್’ ತಿರುಪತಿಗೋ?: ಚೇತನ್‌ ಪ್ರಶ್ನೆ

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆ ಬರೆದಿದೆ. ಚಂದ್ರಯಾನ–3ರ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ. ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್’ ತಿರುಪತಿಗೋ? ಎಂದು ನಟ ಚೇತನ್ ಅಹಿಂಸಾ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, ‘ಚಂದ್ರಯಾನ–3 ಯೋಜನೆ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡಲ್ ಚಂದ್ರನ ಮೇಲೆ ಇಳಿದ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.

ಮುಂದುವರಿದು, ಆದರೆ, ಚಂದ್ರಯಾನ–3ರ ಈ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್‘ ತಿರುಪತಿಗೋ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಅವರು, ‘ವಾಸ್ತವ’ ಎಂದು ಬರೆದುಕೊಂಡಿದ್ದು, ಚಂದ್ರಯಾನ-3 ನೌಕೆಯ ಉಡಾವಣೆ ಚಿತ್ರ ಮತ್ತು ವ್ಯಕ್ತಿಯೊಬ್ಬ ಮ್ಯಾನ್‌ಹೋಲ್‌ಗೆ ಇಳಿದಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ಆಗಸ್ಟ್ 23ರ ಬುಧವಾರ ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡ್ ರೋವರ್ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ. ಇಸ್ರೋ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು.

andolanait

Recent Posts

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಸಿ.ಪಿ.ಯೋಗೇಶ್ವರ್‌

ರಾಮನಗರ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು…

1 hour ago

ಡಿ.ಕೆ.ಶಿವಕುಮಾರ್‌ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌: ಬುಧವಾರ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ…

3 hours ago

ಓದುಗರ ಪತ್ರ: ಕ್ರಿಕೆಟ್ ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರಿಡಿ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ.…

4 hours ago

ಓದುಗರ ಪತ್ರ: ನಾಳಿನ ನೆರಳಿಗೆ ಇಂದೇ ಗಿಡ ನೆಡೋಣ

ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ…

4 hours ago

ಓದುಗರ ಪತ್ರ: ಸಿದ್ದರಾಮಯ್ಯನವರ ಆಡಳಿತ ಮಾದರಿ

ರಾಜ್ಯದಲ್ಲಿ ಅತ್ಯಂತ ಪ್ರಬಲ ನಾಯಕರಲ್ಲಿ ಸಿದ್ದರಾಮಯ್ಯನವರೂ ಕೂಡ ಒಬ್ಬರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ಅವರ ಆಡಳಿತ…

4 hours ago

ಸಿದ್ದು ರಾಜೀನಾಮೆ; ಒಂದು ಯುಗದ ಅಂತ್ಯ!

ಕೆ.ಪಿ.ನಾಗರಾಜ್, ಮೈಸೂರು ಕರ್ನಾಟಕ ರಾಜಕೀಯ ವ್ಯಾಕರಣವನ್ನೇ ಬದಲಾಯಿಸಿದ ಸಿದ್ದರಾಮಯ್ಯ ಮೈಸೂರು ರಾಜಕಾರಣ ಅಂದರೆ ಒಮ್ಮೆ ಒಡೆಯರ್ ಯುಗ, ನಂತರ ದೇವರಾಜ…

4 hours ago