ಕನ್ನಡದ ಪ್ರಾಮಿಸಿಂಗ್ ಡೈರೆಕ್ಟರ್ ಸಿಂಪಲ್ ಸುನಿ ಅವರ ನಿರ್ದೇಶನದ ಅವತಾರ ಪುರುಷ ಚಿತ್ರದ 2ನೇ ಭಾಗ ರಿಲೀಸ್ ಆಗಲಿದ್ದು, ಈ ಬಗ್ಗೆ ಸ್ವತಃ ನಿರ್ದೇಶಕರೇ ಅಪ್‌ಡೇಟ್ ನೀಡಿದ್ದಾರೆ.
2022 ರ ಮೇ ನಲ್ಲಿ ತೆರೆಕಂಡ ನಟ ಶರಣ್ ಅಭಿನಯದ ಅವತಾರ ಪುರುಷ ಚಿತ್ರ ಭಾರೀ ಮೆಚ್ಚುಗೆ ಪಡೆದಿತ್ತು. ಇದೀಗ ಎರಡು ವರ್ಷಗಳ ಕಾಯುವಿಕೆಯ ನಂತರ ಈ ಚಿತ್ರದ ಎರಡನೇ ಭಾಗ ರಿಲೀಸ್ ಆಗುತ್ತಿದೆ. ಇದರ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ.
ಬರೀ ಲವ್ ಸ್ಟೋರಿಗಳ ಮೂಲಕವೇ ಹೆಚ್ಚು ಜನಮನ ಗೆದ್ದ ಸುನಿ ಅವರು, ಒಂದು ವಿಭಿನ್ನ ಕಥೆಯ ಮೂಲಕ ಹಾಸ್ಯದಲ್ಲಿಯೇ ಮಾಟ-ಮಂತ್ರವನ್ನು ತೋರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹಲವಾರು ಟ್ವಿಸ್ಟ್‌ಗಳೊಂದಿಗೆ ಮೊದಲನೇ ಭಾಗವನ್ನು ಮುಗಿಸಿದ್ದ ಇವರು, ಎಲ್ಲದಕ್ಕೂ ಈ ಉತ್ತರ ನೀಡಲು ಬಂದಿದ್ದಾರೆ.
ಅಂದಹಾಗೆ ಸುನೀ ಅವರು ಇದೇ ಮಾರ್ಚ್ 22 ರಂದು ಅವತಾರ ಪುರುಷ-2 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ʼಕಾಯುವಿಕೆಯ ಅಂತ್ಯ, ಹೊಸಯುಗದ ಅನಾವರಣʼ ಎಂದು ಬರೆದುಕೊಂಡಿದ್ದಾರೆ.
ಪುಷ್ಕರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಟನಾಗಿ ಶರಣ್, ನಾಯಕಿಯಾಗಿ ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯ್ ಕುಮಾರ್ ಸೇರಿದಂತೆ ಹಲವು ನಟರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಣ ಹೂಡಿದರೆ, ಸುನಿ ಆಕ್ಷನ್ ಕಟ್ ಹೇಳಿದ್ದಾರೆ.
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…
ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…
ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…
ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು…
ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…
ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…