ಪಂಚಭಾಷಾ ನಟಿ ಪ್ರಿಯಾಮಣಿ ಹಾಗೂ ಬಾಲಿವುಡ್‌ನ ಖ್ಯಾತ ನಟಿ ಯಾಮಿ ಗೌತಮ್ ಜೊತೆಯಾಗಿ ನಟಿಸಿರುವ ಆರ್ಟಿಕಲ್ 370 ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಅಂಗಳದಲ್ಲಿ ಭರವಸೆ ಹುಟ್ಟುಹಾಕಿದೆ.
ಈ ಸಿನಿಮಾದ ಟ್ರೈಲರ್ 2 ನಿಮಿಷ 40 ಸೆಂಕೆಡ್‌ಗಳಿದ್ದು, ಟ್ರೈಲರ್‌ನಲ್ಲಿ ಭಾರತದ ಪ್ರಸ್ತುತ ಪ್ರಧಾನ ಮಂತ್ರಿ ಮೋದಿಯವರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರಗಳಿರುವುದು ವಿಶೇಷವಾಗಿದೆ. ಜಮ್ಮುಕಾಶ್ಮೀರದ ವಿಶೇಷಾಧಿಕಾರವಾಗಿದ್ದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಹಂತವನ್ನು ಈ ಸಿನಿಮಾ ಹೊಂದಿದೆ.
ಟ್ರೈಲರ್‌ನಲ್ಲಿ ʼಪೂರಾ ಕಾ ಪೂರಾ ಕಾಶ್ಮೀರ್, ಭಾರತ್ ದೇಶ್ ಕಾ ಹಿಸ್ಸಾ ಥಾ ಹೇ ಔರ್ ರೆಹೇಗಾʼ ಎಂಬ ಮಾತು ಹಾಗೂ ಕಾಶ್ಮೀರ ಭಯೋತ್ಪಾದನೆ, ಭಯೋತ್ಪಾದನೆ ಕುತಂತ್ರ, ಸೇನಾಧಿಕಾರಿಗಳ ಹೋರಾಟ, ಮತ್ತು ಆರ್ಟಿಕಲ್ 370ಯನ್ನು ತೆಗೆದರೆ ಏನೆಲ್ಲ ಆಗಲಿದೆ ಎಂಬ ಅಂಶಗಳನ್ನು ತೋರಿಸಲಾಗಿದೆ. ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ನೋಡುಗರ ಗಮನ ಸೆಳೆದಿದೆ. ಯಾಮಿ ಗೌತಮ್ ಎನ್.ಐ.ಎ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರವು ಫೆಬ್ರವರಿ 23ಕ್ಕೆ ತೆರೆ ಕಾಣಲಿದೆ. ಇದುವರೆಗೂ ಕಾಶ್ಮೀರ ಕುರಿತಂತೆ ತೆರೆಗೆ ಬಂದಿರುವ ಯಾವ ಚಿತ್ರವೂ ಸೋತಿಲ್ಲದೆ ಬಾಕ್ಸ್ ಆಫೀನ್‌ನಲ್ಲಿ ಕೋಟಿ ಕೋಟಿ ಹಣಗಳಿಕೆ ಮಾಡಿರುವುದರಿಂದ ಈ ಚಿತ್ರದ ಟ್ರೈಲರ್ ರಿಲೀಸ್ ಆದ ಬಳಿಕ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿವೆ.
ಕಠ್ಮಂಡು : ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಹಿರಿಯ ನಾಯಕ ಬಾಲೇಂದ್ರ ಶಾ ಅವರು ದೇಶದ ನೂತನ ಪ್ರಧಾನಿಯಾಗಿ ಇಂದು(ಮಾರ್ಚ್.27)…
ಮಂಡ್ಯ : ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆಗಾಗಿ ಸೂಕ್ತ ಕ್ರಮಗಳನ್ನು…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಬೆಂಗಳೂರು : ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಆತಂಕ ಸೃಷ್ಠಿಯಾಗಿರುವ ನಡುವೆ ಕೇಂದ್ರ…