ಚಿತ್ರ ಮಂಜರಿ

ಗಂಧದ ಗುಡಿ ಚಿತ್ರ ಕಂಡು ಕಣ್ಣೀರು ಹಾಕಿದ ಅಪ್ಪು ಅಭಿಮಾನಿಗಳು

ಚಿತ್ರ ಕಾಣಲು ಬೆಳಗ್ಗಿನಿಂದಲೇ ಚಿತ್ರಮಂದಿರದ ಮುಂದೆ ಕ್ಯೂ ನಿಂತ ಅಭಿಮಾನಿಗಳು

ಮೈಸೂರು: ಕನ್ನಡಿಗರೆಲ್ಲರ ಮನದಲ್ಲಿ ಚಿರಾಯುವಾಗಿ ಉಳಿದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ನಾಳೆಗೆ ( ಅಕ್ಟೋಬರ್ 29) ಒಂದು ವರ್ಷ. ಆದರೆ ಈ ವಾಸ್ತವವನ್ನು ಒಪ್ಪಲು ಅಪ್ಪು ಅಭಿಮಾನಿಗಳು ಇನ್ನೂ ಸಿದ್ದರಿಲ್ಲ.

ಅಪ್ಪು ಅಗಲಿದ ನಂತರದಲ್ಲಿ ಅವರು ನಟಿಸಿದ ಜೇಮ್ಸ್ ಮತ್ತು ಲಕ್ಕಿಮ್ಯಾನ್ ಚಿತ್ರ ಬಿಡುಗಡೆಯಾಗಿದೆ. ಇದೀಗ ಬಹು ನಿರೀಕ್ಷೆಯ ಗಂಧದ ಗುಡಿ ಚಿತ್ರ ಬಿಡುಗಡೆಯಾಗಿದೆ. ಅಮೋಘವರ್ಷ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ನೋಡಿ ಪ್ರಧಾನಿಯಿಂದ ಹಿಡಿದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ತನಕ ನೂರಾರು ಗಣ್ಯರು ಮೆಚ್ಚಿಕೊಂಡಿದಾರೆ. ಕರ್ನಾಟಕದ ಸಮೃದ್ಧ ಅರಣ್ಯ ಮತ್ತು ವನ್ಯಜೀವಿಗಳ ಕುರಿತಾದ ಈ ಚಿತ್ರವನ್ನು ಕಾಣಲು ಅಪ್ಪು ಅಭಿಮಾನಿಗಳಂತೂ ಶುಕ್ರವಾರ ಬೆಳಗಿನ ಜಾವದಿಂದಲೇ ಥಿಯೇಟರ್ ಮುಂದೆ ಕ್ಯೂ ನಿಂತಿದ್ದರು.

ಅಪ್ಪು ಅವರ ಹೃದಯಕ್ಕೆ ಬಹಳ ಹತ್ತಿರವಾದ, ಅವರ ಕನಸಿನ ಕೂಸು ಎಂದೇ ಬಿಂಬಿತವಾದ ಗಂಧದ ಗುಡಿ ಸಿನಿಮಾ ಬೆಂಗಳೂರು ನಗರ ಒಂದರಲ್ಲೇ 300ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಕಾಂತಾರ ಚಿತ್ರದ ಅಬ್ಬರದ ನಡುವೆ ಈಗ ಗಂಧದ ಗುಡಿ ಪರಿಮಳ ಪಸರಿಸುತ್ತಿದೆ. ಈ ನಡುವೆ ಹೆಡ್ ಆ್ಯಂ ಡ್ ಬುಷ್ ಚಿತ್ರ ತಲೆ ಎತ್ತಲು ಕಷ್ಟಪಡುತ್ತಿದೆ.

ಪುನೀತ್ ಅವರ ಅಭಿಮಾನಿಗಳು ರಾಜ್ಯದ ಎಲ್ಲಾ ಥಿಯೇಟರ್ಗಳ ಮುಂದೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಅಪ್ಪು ಅವರು ನಮ್ಮೊಂದಿಗೆ ಇಲ್ಲ ಎನ್ನುವ ಕೆಟ್ಟ ನೆನಪು ಮಾತ್ರ ಎಲ್ಲರನ್ನು ಭಾವುಕರನ್ನಾಗಿಸುತ್ತಿದೆ. ಸಿನಿಮಾ ನೋಡಿದ ಕಲಾವಿದರಿಂದ ಹಿಡಿದು ಅಭಿಮಾನಿಗಳ ತನಕ ಎಲ್ಲರೂ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಮೈಸೂರಿನ ಪದ್ಮ ಚಿತ್ರಮಂದಿರದಲ್ಲಿ ತೆರೆಕಂಡ ಸಿನಿಮಾದ ಮೊದಲ ಪ್ರದರ್ಶನ ಬೆಳಗ್ಗೆ 7ಗಂಟೆಗೆ ಶುರುವಾಗಿದ್ದು ಅಪ್ಪು ಫ್ಯಾನ್ಸ್ ಸಾಗರೋಪಾದಿಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ನಟನ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು.

ಸಿನಿಮಾ ರಿಲೀಸ್ ಮುನ್ನವೇ ಪುನೀತ್ ಕಟೌಟ್ಗ ಳು ಎಲ್ಲರ ಗಮನ ಸೆಳೆದವು. ಥಿಯೇಟರ್ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ ತಮಟೆ, ಡೊಳ್ಳು ಬಾರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಂಜಿಸಿದರು.

ಈ ಮಧ್ಯೆ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಚಿತ್ರ ಬಿಡುಗಡೆಯಾದ ಬೆನ್ನಿಗೇ ಶುಕ್ರವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ನಂತರ ನಂಜನಗೂಡಿಗೆ ಭೇಟಿ ನೀಡಿ ಶ್ರೀಕಂಠೇಶ್ವರನ ದರ್ಶನ ಪಡೆದರು. ಬೆಂಗಳೂರಿನಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾದರು.

ಕೆಆರ್ಜಿ ಸಂಸ್ಥೆಯು ರಾಜ್ಯಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ಗಳು ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಕಡೆ ಎರಡು ದಿನಗಳ ಶೋಗಳ ಟಿಕೆಟ್ ಮಾರಾಟ ಆಗಿದೆ ಎಂದು ತಿಳಿದುಬಂದಿದೆ. ಎರಡನೇ ವಾರದಿಂದ ಮತ್ತಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಗಂಧದ ಗುಡಿ ಸಿನಿಮಾ ಪ್ರಿಇವೆಂಟ್ ನಲ್ಲಿ ಮಾತನಾಡಿದ್ದ ನಟ ಯಶ್, ಈ ಚಿತ್ರ ಹೊಸ ದಾಖಲೆಗಳನ್ನು ಮಾಡಬೇಕು. ಕೆಜಿಎಫ್-2 ನ ಎಲ್ಲಾ ರೆಕಾರ್ಡ್ ಬ್ರೇಕ್ ಆಗುವಂತೆ ಅಭಿಮಾನಿಗಳು ಅದನ್ನು ಬಹಳ ಎತ್ತರಕ್ಕೆ ಒಯ್ಯಬೇಕು ಎಂದು ಹೇಳಿದ್ದರು. ಅಪ್ಪು ಅನುಪಸ್ಥಿತಿಯಲ್ಲೂ ಈ ಮಾತು ನಿಜವಾಗುವ ಸಾಧ್ಯತೆ ಇದೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

9 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago