ಮೈಸೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಕೊಂಚ ಹೆಚ್ಚಳವಾಗಿದೆ.
ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಅಳೆಯಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಮೈಸೂರಿನ ಹೆಬ್ಬಾಳ್‌ನಲ್ಲಿರುವ ಮಂಡಳಿಯ ಕಚೇರಿ ಆವರಣ ಹಾಗೂ ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದ ಬಳಿ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಎರಡೂ ಮಾಪನ ಕೇಂದ್ರಗಳಲ್ಲಿ ದೀಪಾವಳಿ ಹಬ್ಬದ ಪೂರ್ವದಲ್ಲಿ ಅ.೧೮ರಂದು ಮತ್ತು ದೀಪಾವಳಿ ಹಬ್ಬದ ವೇಳೆ ನ.೨೪ ರಿಂದ ೨೬ರವರೆಗೆ ಮೂರು ದಿನಗಳ ಕಾಲ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ಅಳೆಯಲಾಗಿದೆ.
ಹೆಬ್ಬಾಳ್ ಮಾಪನ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪೂರ್ವದಲ್ಲಿ ೨೦೨೧ರಲ್ಲಿ ವಾಯು ಮಾಲಿನ್ಯ ಪ್ರಮಾಣ ೩೪ ಪಾಯಿಂಟ್ ದಾಖಲಾಗಿದ್ದರೆ, ಹಬ್ಬದ ಮೂರು ದಿನಗಳ ಕಾಲ ೩೫, ೫೩ ಹಾಗೂ ೭೨ ಪಾಯಿಂಟ್ ದಾಖಲಾಗಿತ್ತು. ಈ ವರ್ಷ ಹಬ್ಬದ ಪೂರ್ವದಲ್ಲಿ ೪೪ ಪಾಯಿಂಟ್ ಇದ್ದ ಮಾಲಿನ್ಯದ ಪ್ರಮಾಣ ಹಬ್ಬದ ಮೂರು ದಿನಗಳಲ್ಲಿ ಕ್ರಮವಾಗಿ ೬೪, ೭೧ ಹಾಗೂ ಹಬ್ಬದ ದಿನ ಗರಿಷ್ಠ ೧೧೭ ಪಾಯಿಂಟ್ ಮಾಲಿನ್ಯ ಪ್ರಮಾಣ ದಾಖಲಾಗಿದೆ.
ಶಬ್ದ ಮಾಲಿನ್ಯ ೨೦೨೧ರಲ್ಲಿ ದೀಪಾವಳಿ ಹಬ್ಬದ ಪೂರ್ವದಲ್ಲಿ ೬೬ ಪಾಯಿಂಟ್ ದಾಖಲಾಗಿದ್ದರೆ, ಹಬ್ಬದ ಮೂರು ದಿನಗಳಲ್ಲಿ ೬೫, ೬೪ ಹಾಗೂ ೬೯ ಪಾಯಿಂಟ್, ಈ ವರ್ಷ ಹಬ್ಬದ ಪೂರ್ವ ಅ.೧೮ರಂದು ೬೧ ಪಾಯಿಂಟ್ ಇದ್ದ ಮಾಲಿನ್ಯ ಪ್ರಮಾಣ ಹಬ್ಬದ ಮೂರು ದಿನಗಳಲ್ಲಿ ೬೫ ಮತ್ತು ಮೂರನೇ ದಿನ ೭೪ ಪಾಯಿಂಟ್ ದಾಖಲಾಗಿದೆ.
ಮೂರು ದಿನಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಮೈಸೂರು ರಾಜ್ಯದಲ್ಲಿ ೧೯ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶಬ್ದ ಮಾಲಿನ್ಯ ಶೇ.೧೬.೫ರಷ್ಟಿದೆ, ವಾಯು ಮಾಲಿನ್ಯ ಶೇ.೫೩ರಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗಣೇಶ್ ತಿಳಿಸಿದ್ದಾರೆ.
ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…
ಮೈಸೂರು: ಮುಡಾ 50:50 ಸೈಟ್ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…
ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…
ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್ ಸೇವೆಗಳಲ್ಲಿ…
ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…