ಸುಟ್ಟಗಾಯಗಳಾದಾಗ ಏನು ಮಾಡಬೇಕು?
ಸುಟ್ಟಗಾಯಗಳು ಮತ್ತು ಬಿಸಿನೀರಿಂದ ಉಂಟಾದ ಬೊಬ್ಬೆಗಳು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಗಾಯ ವಾಸಿಯಾದರೂ ಚರ್ಮದ ಮೇಲೆ ಕಲೆ ಉಳಿದುಕೊಂಡುಬಿಡುತ್ತದೆ. ಹೀಗಾಗಿ ಸುಟ್ಟಗಾಯಗಳಿಗೆ ನಿಖರವಾದ ಚಿಕಿತ್ಸೆ ಅತ್ಯಗತ್ಯ.
ಸುಟ್ಟಗಾಯಗಳು ಹೆಚ್ಚಾಗಿ ಚರ್ಮಕ್ಕೆ ಹಾನಿ ಮಾಡುವುದು. ಗಾಯದ ತೀವ್ರತೆ ಹೆಚ್ಚಾಗಿದ್ದರೆ ಮಾತ್ರ ಮಾಂಸ ಖಂಡಗಳಿಗೆ ತೊಂದರೆ ಆಗುತ್ತದೆ. ನಾವು ನಿತ್ಯವೂ ಕೆಲಸ ಮಾಡುವ ಸ್ಥಳಗಳಲ್ಲಿ ಸುಟ್ಟ ಗಾಯಗಳು ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಅಗತ್ಯ. ಒಂದು ವೇಳೆ ಗಾಯ ಆದರೆ ಸೂಕ್ತ ಪ್ರಥಮ ಚಿಕಿತ್ಸೆ ತೆಗೆದುಕೊಳ್ಳುವುದೂ ಮುಖ್ಯ.
ಏನೇನು ಮಾಡಬಾರದು
* ಸೂಕ್ತ ತಿಳುವಳಿಕೆ ಇಲ್ಲದೇ ಯಾವುದೇ ಬಗೆಯ ಮುಲಾಮು, ಲೊಷನ್ ಅಥವಾ ಎಣ್ಣೆಯನ್ನು ಹಚ್ಚಬಾರದು.
* ಸುಟ್ಟ ಭಾಗಕ್ಕೆ ಯಾವುದೇ ಕಾರಣಕ್ಕೂ ಬೆಣ್ಣೆ, ಹಿಟ್ಟು ಅಥವಾ ಬೇಕಿಂಗ್ ಸೋಡಾವನ್ನು ಹಚ್ಚಬಾರದು.
* ಬೊಬ್ಬೆಗಳು ಬಂದಿದ್ದರೆ ಅವನ್ನು ತೂತು ಮಾಡುವುದು ಅಥವಾ ಒಡೆಯುವುದು ಮಾಡಕೂಡದು.
* ಗಾಯಕ್ಕೆ ಕೊಳಕು ಬಟ್ಟೆ ತಾಗಿಸಬಾರದು. ಗಾಯವಾದ ಭಾಗವನ್ನು ಆಗಾಗ ಮುಟ್ಟುವುದು ಬೇಡ.
* ಕಾಟನ್ ಬಟ್ಟೆಗೆ ಬದಲಾಗಿ ಬೇರೆಯ ಬಟ್ಟೆಗಳನ್ನು ಬಳಸುವುದು ಬೇಡ.
ಪ್ರಥಮ ಚಿಕಿತ್ಸೆ
* ಸುಟ್ಟ ಗಾಯದ ಭಾಗವನ್ನು ತೆಳುವಾಗಿ ಸುರಿಯುತ್ತಿರುವ ತಣ್ಣೀರಿನ ನಲ್ಲಿಯ ಮೇಲೆ ಹಿಡಿಯಿರಿ.
* ಗಾಯವಾದ ಭಾಗವನ್ನು ತಣ್ಣೀರಿನಲ್ಲಿ ಅದ್ದುವುದು ಅಥವಾ ಕೆಲ ಹೊತ್ತು ಶುದ್ಧವಾದ ತಣ್ಣೀರಿನಲ್ಲಿ ಮುಳುಗಿಸಬೇಕು.
* ಶುಚಿಯಾದ ಬಟ್ಟೆ ಇಲ್ಲವೆ ಮೃದುವಾದ ವಸ್ತುವನ್ನು ನೀರಿನಲ್ಲಿ ಅದ್ದಿ ಗಾಯದ ಮೇಲೆ ಬಲವಾಗಿ ಒತ್ತಬೇಕು.
* ತಣ್ಣೀರ ಬಳಕೆಯಿಂದ ಸುಟ್ಟ ದೇಹದ ಭಾಗದ ಉಷ್ಣತೆ ಕಡಿಮೆಯಾಗಿ ಚರ್ಮ ಕೆಂಪಾಗುವುದು, ಬೊಬ್ಬೆಬರುವುದು ಮತ್ತು ನೋವು ಕಡಿಮೆಯಾಗುತ್ತದೆ.
* ಗಾಯವಾದ ಭಾಗವನ್ನು ತೆಳು ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಕಾಟನ್ ಬಟ್ಟೆಯಿಂದ ಡ್ರೆಸ್ಸಿಂಗ್ ಮಾಡುವುದು ಸೂಕ್ತ.
* ಮಂಜುಗಡ್ಡೆಯನ್ನು ಕಾಟನ್ ಬಟ್ಟೆಯಲ್ಲಿ ಸುತ್ತಿ ಗಾಯವಾದ ಭಾಗದ ಮೇಲೆ ಇಡಬೇಕು.
* ಗಾಯ ಮತ್ತು ಗಾಯದ ತೀವ್ರತೆಯನ್ನು ಆಧರಿಸಿ ವೈದ್ಯರನ್ನು ಭೇಟಿ ಮಾಡುವುದು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…
ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…
ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…
ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…
ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…