ಆಂದೋಲನ ಪುರವಣಿ

ಕಲಿಯುವ ಮಕ್ಕಳಿಗೆ ಬಹುಮುಖ್ಯ ಕಲೆ

ಔದ್ಯೋಗಿಕ ಪ್ರಗತಿ, ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಪೂರಕ

-ಕೆ. ಸಂಗೀತಾ, ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಜಿ.ಬಿ. ಸರಗೂರು

ಕಲಾವಿದರಿಗೆ ಇಂದು ಹೆಚ್ಚಿನ ಅವಕಾಶಗಳಿವೆ. ಕಲೆಯ ಜೊತೆಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ತುಸು ತಿಳಿದುಕೊಂಡರಂತೂ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಹೋಗಬಹುದು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೆ ಅಂಕಗಳ ಹಿಂದೆ ಬಿದ್ದು, ಕಲೆಯ ಕಡಗಣನೆಯಾಗುತ್ತಿದೆ ಎನ್ನುವ ಆತಂಕವೂ ಇದೆ. ಇದನ್ನು ದಾಟಿ ಕಲೆಯನ್ನು ಅಪ್ಪಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಜಿ.ಬಿ. ಸರಗೂರಿನ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಕೆ. ಸಂಗೀತಾ.

ಶಾಲೆ, ಕಾಲೇಜುಗಳಲ್ಲಿ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಇರುವಂತೆ ಚಿತ್ರಕಲೆಗೂ ಶಿಕ್ಷಕರು ಇರಬೇಕು. ಆಗ ಕಲೆಯ ಬಗ್ಗೆಯೂ ಮಕ್ಕಳಿಗೆ ಆಸಕ್ತಿ ಹೆಚ್ಚಾಗುತ್ತದೆ. ಕ್ರೀಡೆಯಿಂದ ಮಕ್ಕಳು ದೈಹಿಕವಾಗಿ ಸದೃಢರಾಗುತ್ತಾರೆ. ಅದೇ ರೀತಿ ಕಲಾ ಚಟುವಟಿಕೆಗಳಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಏಕಾಗ್ರತೆ ವೃದ್ಧಿಸುತ್ತದೆ. ಇತರ ವಿಷಯಗಳ ಕಲಿಕೆಯಲ್ಲಿಯೂ ಪ್ರಗತಿ ಸಾಧ್ಯವಾಗುತ್ತದೆ.

ತಪ್ಪು ತಿಳುವಳಿಕೆ ಬೇಡ

ಡ್ರಾಯಿಂಗ್, ಪೇಂಟಿಗ್, ಆರ್ಟ್ ವರ್ಕ್‌ಗಳ ಕಡೆಗೆ ಮಕ್ಕಳು ಹೆಚ್ಚಿನ ಗಮನ ನೀಡಿದರೆ ಓದಿನ ಕಡೆಗೆ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದ ಅಂಕಗಳು ಕಡಿಮೆ ಬಂದು ಮುಂದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿನ್ನಡೆ ಆಗಬಹುದು ಎನ್ನುವ ಆತಂಕ ಹೆಚ್ಚಿನ ಪೋಷಕರು, ಮಕ್ಕಳಲ್ಲಿ ಇದೆ. ಆದರೆ ಇದು ತಪ್ಪು. ಕಲೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಕಲಿಕೆಯ ಸಾಮರ್ಥ್ಯ ಇನ್ನೂ ಹೆಚ್ಚಾಗುತ್ತದೆ. ಇದು ಹಲವಾರು ಅಧ್ಯಯನಗಳಿಂದಲೂ ಸಾಬೀತಾಗಿದೆ. ನಾನು ಕೆಲಸ ಮಾಡುವ ಶಾಲೆಯಲ್ಲಿಯೇ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಮಕ್ಕಳು ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಗಳಿಸಿದ್ದಾರೆ.

ಮಕ್ಕಳಿಗೆ ಕಲೆ ಎಷ್ಟು ಮುಖ್ಯ?

ಮಕ್ಕಳು ಜಗತ್ತನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿರುತ್ತಾರೆ. ಆ ಕುತೂಹಲವನ್ನು ಹಿಡಿದಿಡುವ ಕಲೆಯನ್ನು ಅವರಿಕೆ ಕಲಿಸಬೇಕು. ಆಗ ಅವರು ಜಗತ್ತನ್ನು ಬೇಗನೇ ಅರ್ಥ ಮಾಡಿಕೊಳ್ಳುತ್ತಾರೆ. ಉದಾಹರಣಗೆ ಒಂದು ಹೂ ಬಿಟ್ಟ ಮರವನ್ನು ಸಾಮಾನ್ಯವಾಗಿ ನೋಡುವುದು ಬೇರೆ. ಅದನ್ನು ಚಿತ್ರವಾಗಿಸುವ ಹಿನ್ನೆಲೆಯಲ್ಲಿ ನೋಡುವ ರೀತಿ ಬೇರೆಯಾಗುತ್ತದೆ. ಆ ನೋಟದಲ್ಲಿ ಸೂಕ್ಷ್ಮತೆ, ಆಳ, ಸೌಂದರ್ಯ ಪ್ರಜ್ಞೆ ಎಲ್ಲವೂ ಅಡಗಿರುತ್ತದೆ. ಹೀಗಾಗಿ ಮಕ್ಕಳು ವಿಚಾರಗಳನ್ನೂ ಬೇಗ ಗ್ರಹಿಸುತ್ತಾರೆ, ಓರೆಗೆ ಹಚ್ಚಿ ನೋಡುತ್ತಾರೆ. ಇದನ್ನು ಕಲೆ ಕಲಿಸುತ್ತದೆ.

ಹೆಣ್ಣು ಮಕ್ಕಳಿಗೆ ಅವಕಾಶ ಬೇಕು

ನನ್ನ ಅನುಭವಕ್ಕೆ ನಿಲುಕಿದಂತೆ ಗ್ರಾಮೀಣ ಭಾಗದ ಮಕ್ಕಳು ತುಂಬಾ ಬುದ್ಧಿವಂತರಿದ್ದಾರೆ. ಅದರಲ್ಲಿಯೂ ಹೆಣ್ಣು ಮಕ್ಕಳು ಹೇಳಿಕೊಟ್ಟಿದ್ದನ್ನು ಬೇಗ ಗ್ರಹಿಸುತ್ತಾರೆ. ಆದರೆ ಇವರಿಗೆ ಉನ್ನತ ಶಿಕ್ಷಣ ದೊರೆಯುವುದು ತೀರಾ ಕಡಿಮೆ. ಇದಕ್ಕೆ ನಮ್ಮ ಸಾಮಾಜಿಕ ಚೌಕಟ್ಟು ಕಾರಣ. ಗಂಡು ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಾರೆ. ಹೊರಗೆ ಸುತ್ತಾಡಿ ಅನುಭವ ಗಳಿಸುತ್ತಾರೆ. ಆದರೆ ಹೆಣ್ಣು ಮಕ್ಕಳಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಅವಕಾಶ ಸಿಗಬೇಕು. ಮುಖ್ಯವಾಗಿ ಕಲೆಯ ಶಿಕ್ಷಣ ಅವರಿಗೆ ಸಿಗಬೇಕು.

ಸಾಂಪ್ರದಾಯಿಕ ಕಲೆಯ ಬಗ್ಗೆ ಸೆಳೆತವಿದೆ

ಆಧುನಿಕ ತಂತ್ರಜ್ಞಾನದೊಂದಿಗೆ ಕಲೆ, ಚಿತ್ರಕಲೆ ಸಾಕಷ್ಟು ಪ್ರಮಾಣದಲ್ಲಿ ತೆರೆದುಕೊಂಡಿದೆ. ಅನಿಮೇಷನ್ ಪ್ರಪಂಚ ವಿಸ್ತಾರವಾಗಿದೆ. ಹೀಗಿದ್ದರೂ ನಾನು ಕಂಡಂತೆ ಮಕ್ಕಳಿಗೆ ಜಾನಪದ ಕಲೆಗಳ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಇದನ್ನು ಶಿಕ್ಷಕರು, ಪೋಷಕರು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡಬೇಕು.

ಚೆನ್ನಾಗಿ ಲೈಫ್ ಲೀಡ್ ಮಾಡಬಹುದು

ಮನರಂಜನೆ, ಸಿನಿಮಾ, ಸಾಹಿತ್ಯ ಸೇರಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಲಾವಿದರಿಗೆ ಅವಕಾಶಗಳಿವೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಉತ್ತಮವಾದ ಜೀವನ ನಿರ್ವಹಣೆ ಸಾಧ್ಯ. ಇಂದು ಕಲಾವಿದರಿಗೆ ದೊಡ್ಡ ಮಟ್ಟದ ಅವಕಾಶಗಳಿವೆ. ನನ್ನ ಪ್ರಕಾರ ಇದೊಂದು ಎವರ್ ಗ್ರೀನ್ ಫೀಲ್ಡ್. ಮನೆಯಲ್ಲಿಯೇ ಕುಳಿತು ಸಂಪಾದನೆ ಮಾಡಬಹುದು, ಸಂತೋಷವಾಗಿಯೂ ಇರಬಹುದು.

ಯಾವೆಲ್ಲಾ ಕೋರ್ಸ್‌ಗಳಿವೆ?

ಮೈಸೂರಿನಲ್ಲಿ ಕಲೆಗೆ ಉತ್ತಮ ಪ್ರೋತ್ಸಾಹ ಇದೆ. ರವಿ ವರ್ಮಾ, ಕಲಾನಿಕೇತನ, ವೈಜಯಂತಿ ಸೇರಿ ಹಲವಾರು ಸಂಸ್ಥೆಗಳು ಚಿತ್ರಕಲೆಯ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಕಾಲೇಜು ಕಾವಾ ಕೂಡ ಇದೆ. ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಮಕ್ಕಳು ೩ ವರ್ಷ, ೫ ವರ್ಷದ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಇದು ಪದವಿಗೆ ಸಮ. ಜೊತೆಗೆ ೨ ವರ್ಷದ ಫೌಂಡೇಷನ್ ಕೋರ್ಸ್ ಇದೆ. ಇದಾದ ಮೇಲೆ ಒಂದೊಂದು ವಿಷಯವನ್ನೇ ಕೇಂದ್ರೀಕರಿಸಿ ಕೋರ್ಸ್ ತೆಗೆದುಕೊಳ್ಳಬಹುದು.

andolana

Recent Posts

ಬಳ್ಳಾರಿ ಬ್ಯಾನರ್‌ ಗಲಾಟೆ | ಕೈ ಕಾರ್ಯಕರ್ತನಿಗೆ ಗುಂಡೇಟು ; ಸಾವು, ಉದ್ವಿಗ್ನ ವಾತಾವರಣ

ಬಳ್ಳಾರಿ : ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ…

6 hours ago

ವಾಲ್ಮೀಕಿ ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಗುಂಪುಗಳ ನಡುವೆ ಮಾರಾಮಾರಿ ; ಗಾಳಿಯಲ್ಲಿ ಗುಂಡು , ಓರ್ವನಿಗೆ ಗಾಯ

ಬಳ್ಳಾರಿ : ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,…

7 hours ago

ನಂಜೇದೇವನಪುರ : ಹುಲಿಗಳ ಕೂಂಬಿಂಗ್ ಗೆ ಬಂದಿದ್ದ ಆನೆಗಳು ವಾಪಸ್

ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…

7 hours ago

ಮೈಸೂರಿನ ನೂತನ ಎಸ್‌ಪಿಯಾಗಿ ಅಧಿಕಾರಿ ಸ್ವೀಕರಿಸಿದ ಮಲ್ಲಿಕಾರ್ಜುನ್‌ ಬಾಲದಂಡಿ

ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…

8 hours ago

ಗುಂಡ್ಲುಪೇಟೆ ಪಟ್ಟಣದ ರಸ್ತೆಗೆ ನಾಗರತ್ನಮ್ಮ ಹೆಸರಿಡಿ ಪುತ್ಥಳಿ ನಿರ್ಮಿಸಿ : ವಾಟಾಲ್ ಆಗ್ರಹ

ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.‌ನಾಗರತ್ನಮ್ಮ ಅವರ…

8 hours ago

ಅಧಿಕ ಭಾರಹೊತ್ತು ಸಾಗುವ ಟಿಪ್ಪರ್‌ಗಳು ; ಅಧಿಕಾರಿಗಳು ಮೌನ

ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…

8 hours ago