ರೈತಾಪಿ ವರ್ಗವು ಬೆಳೆಗಳನ್ನು ಬೆಳೆದು ಕಟಾವು ಮುಗಿಸಿದ ನಂತರ ಮುಂದಿನ ಬೆಳೆಗಾಗಿ ಮಣ್ಣಿನ ಫಲವತ್ತತೆಗೆ ಬೇಕಾದ ಗೊಬ್ಬರ ಹಾಕುವ ಉದ್ದೇಶದಿಂದ ಕುರಿಮಂದೆಗಳನ್ನು ತಮ್ಮ ಜಮೀನುಗಳಿಗೆ ಬರಮಾಡಿಕೊಂಡು ವಾರಗಟ್ಟಲೇ ಅಲ್ಲೇ ತಂಗಿಸಿಕೊಂಡು ಗೊಬ್ಬರ ಪಡೆದುಕೊಳ್ಳುವುದು ರೂಢಿಯಲ್ಲಿರುವ ಪರಿಪಾಠ.
ಕುರಿಮಂದೆಯ ಮಾಲೀಕರ ಮೂಲ: ಮಂದೆ ಕುರಿಗಳನ್ನು ಸಾಕಿ ನಿರ್ವಹಿಸುವವರು ಮೂಲತಃ ಚಿತ್ರದುರ್ಗ, ಹುಲಿಯೂರು, ಮಂಡ್ಯ, ಕೆ.ಆರ್. ನಗರ,ಹಾವೇರಿ ಮುಂತಾದ ಸ್ಥಳಗಳಿಗೆ ಸೇರಿದವರು. ಇವರು ಶಾಶ್ವತವಾಗಿ ಒಂದೆಡೆ ನೆಲೆ ನಿಲ್ಲುವುದಿಲ್ಲ, ಅಲೆಮಾರಿ ಬದುಕಿಗೆ ಹೊಂದಿಕೊಂಡಿರುವ ಇವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಂದೆ ಕುರಿಗಳೊಡನೆ ಸ್ಥಳಾಂತರವಾಗುತ್ತಿರುತ್ತಾರೆ. ಅಂದಾಜು ಒಂದು ಜಿಲ್ಲೆಯಲ್ಲಿ ತಿಂಗಳುಗಟ್ಟಲೆ ನೆಲೆನಿಲ್ಲುತ್ತಾರೆ. ಕುರಿಗಳ ಮಂದೆಯನ್ನು ತಂಗಿಸುವ ರೈತರ ಜಮೀನುಗಳಲ್ಲೇ ಇವರ ವಾಸ.
ಯಾವ ಸಮಯ : ಬಹುಪಾಲು ಬೇಸಿಗೆ ಸಮಯದಲ್ಲಿ, ಸಾಮಾನ್ಯವಾಗಿ ಭತ್ತ ಕಟಾವಾದ ಸಂದರ್ಭದಲ್ಲಿ ಇವರ ಆಗಮನವಾಗುತ್ತದೆ. ಬೆಳೆ ಕೊಯ್ಲಾದ ನಂತರ ಜಮೀನಿನ ಮಾಲಿಕರು ಇವರ ಜತೆ ಅಗತ್ಯವಿರುವಷ್ಟು ದಿನ ಒಪ್ಪಂದ ಮಾಡಿಕೊಂಡು ಕುರಿಮಂದೆಯನ್ನು ತಂಗುವಂತೆ ಮಾಡುತ್ತಾರೆ. ಕುರಿಮಂದೆ ಅಲ್ಲಿರುವಷ್ಟು ದಿನ ಹಾಕುವ ಹಿಕ್ಕೆ ಗೊಬ್ಬರ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಮುಂದಿನ ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ. ಕುರಿಮಂದೆಯ ಮಾಲೀಕರು ಎಕರೆಗಿಷ್ಟು ಎಂಬ ಲೆಕ್ಕದಲ್ಲಿ ಜಮೀನು ಮಾಲೀಕರಿಂದ ಹಣ ಪಡೆಯುತ್ತಾರೆ. ಇರುವಷ್ಟು ದಿನ ಜಮೀನಿನ ಮಾಲೀಕರಿಂದ ಊಟೋಪಚಾರ ಪಡೆಯುವುದುಂಟು.
ಈ ರೀತಿಯ ಕುರಿಮಂದೆ ಸಾಕುವ ವೃತ್ತಿಯಲ್ಲಿರುವವರು ಏನಿಲ್ಲೆಂದರೂ ಒಬ್ಬರು ೫೦೦ ರಿಂದ ೧೦೦೦ ಕುರಿಗಳಿಗೆ ಮಾಲೀಕರಾಗಿರುತ್ತಾರೆ.
ಉತ್ಕೃಷ್ಟ ಗೊಬ್ಬರ: ಮಂದೆ ಕುರಿಗಳ ಪಿಕ್ಕೆ ಹಾಗೂ ಮೂತ್ರದಲ್ಲಿರುವ ಅಂಶವು ತುಂಬಾ ಉತ್ಕೃಷ್ಟವಾದ ಅಂಶವನ್ನು ಹೊಂದಿರುವುದರಿಂದ ರೈತರಿಗೆ ಇದೊಂದು ವರದಾನ.ರಾಸಾಯನಿಕ ಮುಕ್ತ ಸಾವಯವ ಗೊಬ್ಬರ ಜಮೀನಿಗೆ ಲಭ್ಯವಾಗುತ್ತದೆ. ಮಣ್ಣೂ ಸಹ ಆರೋಗ್ಯವಾಗಿರಲು ಸಹಕಾರಿ.
ಸರ್ಕಾರದ ಸೌಲಭ್ಯಗಳು: ಮಂದೆ ಕುರಿಗಳನ್ನು ನಿರ್ವಹಿಸುವ ರೈತ ಕುಟುಂಬಗಳಿಗೆ ಸರ್ಕಾರದಿಂದ ಟಾರ್ಚ್‌ಗಳು, ಸ್ವೆಟರ್, ರೇನ್ ಕೋಟ್, ಕುರಿಗಳಿಗೆ ಜಂತುಹುಳು ಬಾಧೆ ಉಂಟಾದಾಗ ಬಳಸಲು ಔಷಧಿಗಳನ್ನು ನೀಡಲಾಗುತ್ತದೆ. ಕುರಿಗಳು ಅನಾರೋಗ್ಯಕ್ಕೀಡಾದಾಗ ಚಿಕಿತ್ಸೆ ಕೊಡಿಸಲು ಆಯಾ ತಾಲ್ಲೂಕುಗಳಲ್ಲಿ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಕುರಿಗಳ ಉಣ್ಣೆಯಿಂದ ಆರೋಗ್ಯಯುತ ಮ್ಯಾಟ್‌ಗಳು, ಕಂಬಳಿಗಳನ್ನು ತಯಾರಿಸಲಾಗುತ್ತದೆ. ಈ ವೃತ್ತಿ ಕೌಶಲಕ್ಕೆ ನೆರವಾಗಲು ಕುರಿಹುಣ್ಣೆ ನಿಗಮದಿಂದಲೇ ತರಬೇತಿ ನೀಡಿ, ಕುರಿ ಉಣ್ಣೆ ಕಟಾವು ಮಾಡುವ ಯಂತ್ರಗಳನ್ನೂ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು ೧೬ ಕುರಿ ಮತ್ತು ಉಣ್ಣೆ ಸಹಕಾರ ಸಂಘಗಳಿವೆ. ಈ ಸಹಕಾರ ಸಂಘಗಳ ಮೂಲಕ ಯೋಜನೆಗಳನ್ನು ತಲುಪಿಸಲಾಗುತ್ತಿದೆ.ಮಂದೆ ಕುರಿಗಳನ್ನು ಮೇಯಿಸಿಕೊಂಡು ಗುಳೆ ಹೋದ ಸಂದರ್ಭದಲ್ಲಿ ಯಾವುದಾದರೂ ಕುರಿ ಆಕಸ್ಮಿಕವಾಗಿ ಸತ್ತರೆ ನಿಗಮದಿಂದ ಒಂದು ಕುರಿಗೆ ೬ ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಪ್ರಕೃತಿ ವಿಕೋಪದಿಂದ ಮರಣ ಹೊಂದಿದರೆ ಕಂದಾಯ ಇಲಾಖೆಯಿಂದ, ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಂಡರೆ ಅರಣ್ಯ ಇಲಾಖೆಯಿಂದ, ವಿದ್ಯುತ್ ಅಪಘಾತದಿಂದ ಸತ್ತುಹೋದರೆ ಕೆಇಬಿ ಯಿಂದ ಪರಿಹಾರ ನೀಡಲಾಗುತ್ತದೆ. ಸರ್ಕಾರದ ವತಿಯಿಂದ ಮಂದೆಕುರಿಗಳಿಗೆ ಉಚಿತ ವಿಮೆ ಮಾಡಿಕೊಡಲಾಗಿದೆ.ಆದರೆ ಕುರಿಮಂದೆ ನಿರ್ವಹಿಸುವ ಅನೇಕರಿಗೆ ಸರ್ಕಾರದ ಈ ಸೌಲಭ್ಯದ ಅರಿವಿಲ್ಲ.
ಮಂದೆ ಕುರಿಗಳನ್ನು ಮೇಯಿಸುವ ಕುರಿಗಾಹಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು,ಜೊತೆಗೆ ವ್ಯಾಪಾರ ಮಾಡಲು ಘೆಉಔ (್ಞಠಿಜಿಟ್ಞಚ್ಝ ಛಿ ಞಚ್ಟಛಿಠಿಜ್ಞಿಜ ್ಝಜಿಞಜಿಠಿಛಿ) ಎಂಬ ಡಿಜಿಟಲ್ ಇ- ಮಾರ್ಕೆಟಿಂಗ್ ಆಪ್ ಅನ್ನು ಸದುಪಯೋಗ ಮಾಡಿಕೊಳ್ಳಬಹುದು. ಮೈಸೂರು ತಾಲ್ಲೂಕಿನಲ್ಲಿ ಈ ವರೆಗೆ ೮ ಸಂಘಗಳಲ್ಲಿರುವವರು ಘೆಉಔ ಸದಸ್ಯತ್ವ ಪಡೆದುಕೊಂಡಿದ್ದಾರೆ.
–ಡಾ.ಡಿ.ಎನ್. ನಾಗರಾಜು, ಸಹಾಯಕ ನಿರ್ದೇಶಕರು ,ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಮೈಸೂರು.
ನಮ್ಮ ಕುಟುಂಬದವರು ೨೫ ವರ್ಷಗಳಿಂದ ಕುರಿಗಳನ್ನು ಮೇಯಿಸಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ಕುಲ ಕಸುಬೇ ಇದಾಗಿರುವುದರಿಂದ ಊರೂರು ಸುತ್ತಿ ಕುರಿಗಳನ್ನು ಮೇಯಿಸುತ್ತೇವೆ. ಇದರಿಂದ ಆದಾಯ ಬರದಿದ್ದರೂ, ಕುರಿಗಳ ಪಾಲನೆ ದೃಷ್ಟಿಯಿಂದಾದರೂ ಈ ಕಸುಬು ಮಾಡುತ್ತಿದ್ದೇವೆ.
– ಚೆೆಂಗಪ್ಪ, ಮಂದೆಕುರಿಗಾಹಿ,ಸಿರಾ, ತುಮಕೂರು ಜಿಲ್ಲೆ.
ಜಮೀನಿನಲ್ಲಿ ಕುರಿಗಳೊಟ್ಟಿಗೆ ವಾಸ್ತವ್ಯ ಹೂಡುತ್ತೇವೆ. ಗಂಡಸರು ಕುರಿಗಳನ್ನು ಮೇಯಿಸಲು ಹೊರಹೋಗುತ್ತಾರೆ, ನಾವು ಅವರಿಗೆ ಊಟೋಪಚಾರ ಮಾಡಿಕೊಂಡು ಸಂಜೆವರೆಗೆ ಇಲ್ಲಿರುವ ಸಣ್ಣ ಕುರಿಗಳ ಪಾಲನೆ ಮಾಡುತ್ತೇವೆ. ತಿಂಗಳಿಗೋ ಅಥವಾ ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತೇವೆ.
-ಕೆಂಚಮ್ಮ ಮಂದೆ ಕುರಿಗಾಹಿ, ಚೆಂಗಪ್ಪನ ಪತ್ನಿ, ತುಮಕೂರು.
—————
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…