ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಇಪ್ಪತ್ತು ವರ್ಷಗಳ ಬಳಿಕ ಹುಟ್ಟಿದ್ದು ಕನ್ನಡದ ಕಥೆಗಾರ ನಾಗರಾಜ ವಸ್ತಾರೆ. ಆ ಹೊತ್ತಿಗಾಗಲೇ ಗಾಂಧಿ, ನೆಹರು, ಶಾಸ್ತ್ರಿ ಮುಂತಾದವರ ಕಾಲ ಮುಗಿದಿತ್ತು. ಅವರೊಡನಿದ್ದ ದೊಡ್ಡ ದೊಡ್ಡ ಇತರರೂ ಮುಗಿದಿದ್ದರು. ಸ್ವಾತಂತ್ರ್ಯವೆಂಬುದರ ಪುಳಕಗಳೂ ಮೆತ್ತಗಾಗಿತ್ತು. ಸ್ವಾತಂತ್ರತ್ಯೃಕ್ಕಾಗಿ ತನುಮನ ತೆತ್ತವರೂ ತಣ್ಣಗಾಗಿದ್ದರು. ಇಂದಿರಾ-ದರಬಾರಿನ್ನೂ ಬಾಲ್ಯದಲ್ಲಿತ್ತು. ವಸ್ತಾರೆಗೆ ಬುದ್ಧಿ ಬಂದ ಕಾಲಕ್ಕೆ ಇಂದಿರಾ ಕಾರುಬಾರೂ ಮುಗಿದಿತ್ತು. ಆ ಬಳಿಕದ್ದೆಲ್ಲ, ಜ್ಞಾಪಕವೇ ಶಾಪವೆನಿಸುವ ಹಾಗೆ ಬೇಡವೆಂದರೂ ಅವರ ನೆನಪಿನಲ್ಲಿದೆ. ಈ ನೆನಪುಗಳ ಹಂಗಿನರಮನೆಯಲ್ಲಿ ಕುಳಿತು ಭಾರತದ ಸ್ವಾತಂತ್ರ್ಯ ಅಮೃತೋತ್ಸವದ ಮುನ್ನಾದಿನ ಅವರು ಇಲ್ಲಿ ಬರೆದಿದ್ದಾರೆ.
ಇಂದಿರೋತ್ತರದ ಮೂವತ್ತೆಂಟು ಸಾಲಿನಲ್ಲಿ ನನಗೆ ಬುದ್ಧಿ ಬಂದಿದ್ದೇ ತಪ್ಪೆನಿಸಿದೆಯಾದರೆ, ನನ್ನ ಹಿಂದಿನ ಯಾರೋ ಹತ್ತೆಂಟು ನೂರೆಂಟು ಕಷ್ಟಪಟ್ಟು ಹೋರಾಡಿ ಗಳಿಸಿದ ಈ ಸ್ವಾತಂತ್ರ್ಯದ್ದೇನು ಪಾಡೆಂದು, ಈವರೆಗೆ ನನಗೆ ಮನವರಿಕೆಯಾಗಿಲ್ಲ. ಮನವರಿಕೆಯಿರಲಿ, ಅದರ ಸುಮ್ಮನೆ ಅರಿವು ಪರಿವೆ ಸಹ ನನಗಿಲ್ಲ. ನಾಚುಗೆೆುೀಂನೆಂದರೆ, ಈ ಕುರಿತು ಮಾತು ಬೆಳೆಸಲಿಕ್ಕೆ ನನ್ನೊಳಗೆ ನನ್ನದೇ ಕೆಲವು ಹಿಂಜರಿಕೆಗಳಿವೆ. ಅಂಜುಬುರುಕ ಸಂಕೋಚವಿದೆ. ಅರುಹಲೊಲ್ಲದ ನಿರಶನವೂ ಇದೆ. ತನ್ನ ತಾನೇ ಹೇಸುವ ಜುಗುಪ್ಸೆಯೂ ಇದೆ. ನಾವು ಹೇಳುವ ಒಂದೊಂದನ್ನೂ ‘ರಾಜಕೀಯ ಸಾಮಂಜಸ್ಯ’ದ ನೆಲೆಯಲ್ಲಿ ಒರೆಹಚ್ಚಿ, ಸರಿತಪ್ಪು ನಿಕಷಿಸಿ ಫರಮಾನು ಹೇಳುತ್ತ, ಬಲುವೊಮ್ಮೆ ಫತ್ವಾ ಹೊರಡಿಸುತ್ತ- ತಮ್ಮ ನಡುವೆ ಕರಿಬಿಳಿಯ ಅಂತರವಿಟ್ಟು, ಒಂದಿನ್ನೊಂದರ ತಲೆತೆಗೆದೀತೆಂಬಷ್ಟು ಹಗೆಬಗೆಯುವ ಪರಸ್ಪರ ವಿರೋಧಾಭಾಸಗಳುಳ್ಳ ಈ ಸಮಯದಲ್ಲಿ, ನನಗೆ, ಸರಿತಪ್ಪು ಕುರಿತಾದ ಕಾಳಜಿಯೂ ತಲೆಹಿಡುಕವೆನಿಸುತ್ತಿದೆ.
ಆಳು-ಆಳಿಕೆೆುಂಂಬೆರಡು ಶಬ್ದಗಳು ಬಲುಮುನ್ನಿನಿಂದಲೂ ನನ್ನನ್ನು ಕಾಡಿವೆ. ಕನ್ನಡವರಿತಾಗಲಿನಿಂದಲೂ ಸುಮ್ಮನೆ ನನ್ನರಿವನ್ನು ಕೆಣಕಿವೆ. ನಾನೊಬ್ಬ ಆಳೆನ್ನುವ ಸಂಗತಿಯಷ್ಟೇ, ನನ್ನನ್ನು ಸದಾ ಯಾರೋ ಆಳಿದ್ದಾರೆಂಬ ಇನ್ನೊಂದೂ ಹೇಯವೆನ್ನಿಸಿದೆ. ಮೊದಲಿನದು ದಾಸ್ಯಸೂಚಕವಾದರೆ ಎರಡನೆಯದು ಆಧೀನ್ಯವನ್ನು ಸಂಕೇತಿಸುತ್ತದೆ. ಮನುಷ್ಯನಾದವನಿಗೆ ಆಳಿಕೆ ಅನಿವಾರ್ಯವಂತೆಂಬ ಮಾತಂತೂ ನನಗೆ ಎಲ್ಲದಕ್ಕೂ ಅಜೀಬಿನಿದನ್ನಿಸಿದೆ.
ಇಷ್ಟಿದ್ದೂ, ಸ್ವತಂತ್ರ ಭಾರತದ ಸರ್ವಸ್ವಾಯತ್ತ ಪ್ರಜೆ ನಾನು. ನನಗೀಗ ಐವತ್ತೆ ದು. ನನ್ನ ಸ್ವಾತಂತ್ರ್ಯಕ್ಕೆ ಎಪ್ಪತ್ತೆ ದು.
ಇಷ್ಟು ಹಿನ್ನೆಲೆೊಂಡನೆ, ದೇಶದ ಎಪ್ಪತ್ತೆ ದನೇ ‘ಸ್ವಾಯತ್ತ’ಸಂಭ್ರಮದ ಸಂದರ್ಭದಲ್ಲಿ ದೇಶದ ಸಮಸ್ತಕ್ಕೂ ಒಳಿತು ಹಾರೈಸುತ್ತ, ನನಗೆ ಈಗಿತ್ತಲಾಗಿ ದಟ್ಟವಾಗಿ ಅನಿಸುವ ಸಂಗತಿಗಳನ್ನು ಸ್ವಗತಗಳಂತೆ ಒಪ್ಪಿಸುತ್ತೇನೆ. ಇವು ಒಪ್ಪವೆನಿಸಿದಲ್ಲಿ ಸಂತೋಷ. ಇಲ್ಲವಾದಲ್ಲಿ ಖೇದವಿಲ್ಲ.
೦೧. ದೇಶಭಕ್ತಿಯನ್ನು ವ್ಯಕ್ತಿಯೊಬ್ಬರು ತನ್ನ ನಾಡುನೆಲ ಕುರಿತಾಗಿ ಹೊಂದಿರುವ ‘ಸುಮ್ಮನೆ’ ನೆಚ್ಚುಗೆೆುಂಂದು ಬಣ್ಣಿಸಿದ್ದ ಮೇರೆಗೆ ಹಾಗಂದರೇನೆಂದು ಅರಿತವನು ನಾನು. ತಾ್ಂನೆುಲವೆಂಬುದರ ಸಮಕ್ಕೂ ತಳುಕಿಟ್ಟುಕೊಂಡ ತಾಯ್ನುಡಿಯ ಸಂಗತಿಯೂ ಇದೇ ನೆಚ್ಚುಗೆೊಂಳಗೆ ಇದ್ದುದುಂಟು. ನಾಡಿನ ಇತಿಹಾಸ, ಸಂಸ್ಕೃತಿ, ಜನಪದ, ಜನಸಂಪದ, ಪುರಾಣ, ರಾಜಕೀಯ… ಇತ್ಯಾದಿ ಸರಕನ್ನೂ ಕರಾರು ತಕರಾರಿಲ್ಲದೆ ಮೆಚ್ಚುವ ಅಲಿಖಿತ ನಿಯತಿಯೂ ನಿಯತ್ತೂ ಅದರೊಳಗಿತ್ತು. ಹತ್ತೆಂಟು ಬಗೆಯಿದ್ದೂ ಒಬ್ಬಗೆಯನ್ನು ಮೊಳಗುವ ಬುದ್ಧಿಯ ಕಸರತ್ತಿರದ ನಂಬುಗೆೊಂಂದನ್ನು ಕಲಿಸಿಕೊಡಲಾಗಿತ್ತು. ವಿವಿಧತೆಯಲ್ಲಿ ಏಕತೆೆುಂಂಬುದು ಮಂತ್ರಘೋಷದಂತೆ ತುಟಿಗಳಲ್ಲಿತ್ತು. ಹೃದಯವೂ ಇದರಿಂದ ಹೊರತಿರಲಿಲ್ಲ. ಇಂತಹ ನೆಚ್ಚುಗೆಯು, ಕಳೆದ ಮೂವತ್ತು ಮೂವತ್ತೆ ದು ವರ್ಷಗಳಲ್ಲಿ ನನ್ನ ಎಚ್ಚರದೆದುರೇ ಬದಲಿದೆಯಲ್ಲ, ಇದು ಹೇಗಾಯಿತು? ಈ ಬದಲಾವಣೆಯ ಮೂಲಸೆಲೆ ಎಲ್ಲಿಯದು ಮತ್ತು ಯಾತರದು?
೦೨. ಚಿಕ್ಕಂದಿನಲ್ಲಿ, ‘ಸಾರೇಂ ಜಹಾಂ ಸೆ ಅಚ್ಛಾ…’ ಹಾಡಿಗೆ ಸ್ವಾತಂತ್ರ್ಯೋತ್ಸವದ ಪ್ರಭಾತಫೇರಿಯುದ್ದಕ್ಕೂ ನಾನೂ ಕೊರಳುಗೊಟ್ಟಿದ್ದೆನಲ್ಲ, ಅದರ ಸಾಹಿತ್ಯವನ್ನು ನಾನು ನಿಜಕ್ಕೂ ನಂಬುತ್ತೇನೆೆುೀಂ? ಇವೊತ್ತು ನನ್ನದೆಂದು ನಾನು ನಂಬುವ ನಾಡುನೆಲವು ನಿಜಕ್ಕೂ ಈ ಹಾಡು ಹೇಳುವಷ್ಟು ಚೆನ್ನಿದೆೆುೀಂ? ಅಥವಾ, ಇದು ಸುಮ್ಮಗೊಂದು ಮಾತಿನ ಚಮತ್ಕಾರವೇ? ಇಲ್ಲಾ, ನೂರಾರು ಮಂದಿ ಒಕ್ಕೊರಲಿಟ್ಟು ಹಾಡಿದಾಗ ಸಿಗುವ ಪುಕ್ಕಟೆ ಪುಳಕವೇ?
೦೩. ನನ್ನದೆನ್ನುವ ಈ ನಾಡುನುಡಿ ಐವತ್ತೆ ದು ವರ್ಷಗಳ ಹಿಂದೆ ನನಗೆ ದಕ್ಕಿದಷ್ಟು ಚೆನ್ನಾಗಿ ಇವೊತ್ತಿಗೂ ಇಂದು? ಅಥವಾ, ನನ್ನನ್ನೂ ಒಳಗೊಂಡು ನನ್ನ ಅದಿಬದಿಯ ಓರಗೆಯವನು ತನಗೊದಗಿಬಂದ ನೆಲನೀರು-ಬಾನುಗಾಳಿಗಳನ್ನು, ತಾನು ಸಾಯುವ ಸುಮಾರಿನಲ್ಲಿ, ಮೊದಲಿನಷ್ಟೇ ನೇರ್ಪಾಗಿ ತೊರೆಯಲಿದ್ದಾನೆ ನೋ?
೦೪. ‘ಕಟ್ಟುವೆವು ನಾವು ಹೊಸನಾಡೊಂದನು, ರಸದ ಬೀಡೊಂದನು…’ ಅಂತಲೋ, ‘ಗಾಳಿಯಲ್ಲಿ ಹೊಗೆಯ ತೂರಿ ಯಂತ್ರಘೋಷ ಮೊಳಗುವಲ್ಲಿ…’ ಅಂತಲೋ- ಹೊಸಸ್ವಾತಂತ್ರ್ಯದ ಆಸುಪಾಸಿನಲ್ಲಿ ಬರೆದೊಪ್ಪಿಸಿದ ಹೊಸಹುರುಪಿನ ಕವಿಪಲುಕಿಗೆ, ಎಲ್ಲರೂ ಅತ್ಯುದಾರವಾಗಿ ಕಿವಿತೆತ್ತು ಗುನುಗಿದ್ದೆವಷ್ಟೆ… ಆಳಿದವರು ಹೇಳಿದ್ದೆಲ್ಲದಕ್ಕು ತಲೆದೂಗಿ, ‘ಅಣೆಕಟ್ಟುಗಳು ನವಭಾರತದ ದೇಗುಲ’ವೆಂತಲೂ, ‘ಕೈಗಾರಿಕೆಯಿಲ್ಲದೆ ವಿನಾಶ’ವೆಂತಲೂ- ನಂಬಿದೆವಷ್ಟೆ… ಈಗಿತ್ತಲಾಗಿ ಕೇಳಿಸಲಾದ ‘ಜಗತ್ತೊಂದು ಕುಗ್ಗಿದ ಹಳ್ಳಿ’ೆುಂಂಬುದನ್ನೂ- ನಮ್ಮೊಳಗಿನ ಮಿಡಿತವೆಂಬಷ್ಟು ಕಾಯಾ ವಾಚಾ ಮನಸಾ ನೆಚ್ಚಿದ್ದೂ ಸರಿಯಷ್ಟೆ… ಅಂದಮೇಲೆ, ಸರ್ವತಂತ್ರ ಸ್ವತಂತ್ರ ಜನಾಂಗವೊಂದಾಗಿ ನಮಗೆ ಸಮಸ್ಯೆಗಳೇ ಇರಕೂಡದಷ್ಟೆ? ಆಳಿಕೆಯು ಹೇಳಿದ್ದೆಲ್ಲ ಸತ್ಯವಿದ್ದಿರಬೇಕಷ್ಟೆ?
೦೫. ಕನ್ನಡದ ಹಳ್ಳಿಗಾಡಿನ ಒಳಾಂತರದಲ್ಲಿ ಓದುಬರಹ ಕಲಿತು ಉನ್ನತ ಶಿಕ್ಷಣಕ್ಕಾಗಿ ಈ ಮಹಾನಗರಕ್ಕೆ ಸಂದವನು ನಾನು. ದೊಡ್ಡದೋದಿದೆನೆಂದು ದೊಡ್ಡ ಊರಿನಲ್ಲಿ ನೆಲೆಸಿದವನು. ಸ್ಥಳೀಯವೂ ಪ್ರಾದೇಶಿಕವೂ ಆದ ಹಳೆಯ ನೆಚ್ಚುಗೆಗಳನ್ನು ತೊರೆದು ಶಹರದ ‘ಕಾಸ್ಮೋ’ ೃೃ ಸಂಸ್ಕೃತಿಗೆ ಒಡ್ಡಿಕೊಂಡವನು. ವಿಚಿತ್ರವೇನೆಂದರೆ, ಈ ಬೆಂಗಳೂರಿಗೆ ಬರುವವರೆಗೂ ನನಗೆ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಆಚರಣೆಯುಂಟೆಂದೂ, ವೈಶಾಖ ಶುಕ್ಲದ ತದಿಗೆಯು ಅಕ್ಷಯ ತೃತೀಯವೆಂದೂ, ವೈಕುಂಠೇಕಾದಶಿಯಂದು ಸ್ವರ್ಗದ ಕದ ತೆರೆದಾವೆಂತಲೂ ಗೊತ್ತೇ ಇರಲಿಲ್ಲ. ಇಷ್ಟಿದ್ದೂ, ನಾನೊಲ್ಲದೆಯೂ ನನ್ನೊಳಗೆ ಬಿತ್ತಿ ಬೇರೂರಿದ್ದ ಕಾಸ್ಮೋತನವು ನನ್ನನ್ನು ಇವಾವಕ್ಕೂ ಕ್ಯಾರೇ ಅನ್ನಗೊಡಲಿಲ್ಲ. ಹಾಗಾದರೆ ನಾನು ಯಾರು? ನಾನು ನಂಬುವುದೇನನ್ನು?
೦೬. ‘ಮಂಗಳಯಾನ’ದ ಉಡಾವಣೆಯ ಸಂದರ್ಭದಲ್ಲಿ ಪ್ರಕಟಗೊಂಡ ಚಿತ್ರವೊಂದು ನಿನ್ನೆ ಮೊನ್ನೆಯದೆಂಬಂತೆ ನೆನಪಾಗುತ್ತಿದೆ. ಇಂಥದೊಂದು ಮಹತ್ವಾಕಾಂಕ್ಷೆಯುಳ್ಳ ೋಂಜನೆಯಲ್ಲಿ ಪಾಲ್ಗೊಂಡ ಇಸ್ರೋ-ವಿಜ್ಞಾನಿಗಳಲ್ಲಿ ಹಲವೆಂಟು ಮಹಿಳೆಯರಿದ್ದರಷ್ಟೆ? ಎಲ್ಲರೂ ಜರತಾರಿ ಸೀರೆಯುಟ್ಟು, ಬಳೆ ಕುಂಕುಮವಿಟ್ಟು, ಮುಡಿಗೆ ಮಲ್ಲಿಗೆೆುೀಂರಿಸಿದ ವನಿತೆಯರಾಗಿದ್ದರು. ನನ್ನನ್ನು ನಾನು ‘ಕಾಸ್ಮೋ’ ಎಂದು ಬೀಗುವುದರೆದುರು ನನಗಿಂತಲೂ ದೊಡ್ಡದು ಸಾಧಿಸಿದ ಆ ತೆರೆಮರೆಯ ಹೆಂಗಸರ ದೇಶಸೇವೆ ಕಿಂಚಿತ್ತೇನು? ಅದಿರಲಿ, ಈ ಸ್ವತಂತ್ರ ಭಾರತದೊಳಗೆ ಸಾಧನೆ ಅಂತಂದರೇನು?
೦೭. ಇನ್ನು, ಈ ಮಹಾನಗರದ ಫ್ಲೋಂವರುಗಳು, ಕ್ಲೊವರ್ಲೀಫುಗಳು, ಹೈವೇಟೋಲುಗಳು, ಶಾಪಿಂಗ್ ಮಾಲುಗಳು… ಉದ್ದೀಪಿಸುವ ಲೈಫ್‌ಸ್ಟ್ತ್ಯೈಲ್ ಖಾಯಿಷುಗಳು ನನ್ನನ್ನು ಹೆಚ್ಚು ಹೆಚ್ಚು ಬೈಕುಕಾರೊಡನೆ, ಮೊಬೈಲು-ಕೆಮೆರಾದೊಡನೆ, ‘ಮೆಶೀನ್ ಏಸ್ಥೆಟಿಕ್ಸ್’ ಎಂಬ ‘ಯಾಂತ್ರಿಕ ಸೌಂದರ್ಯ’ದೊಡನೆ ಬೆಸೆದವೇ ವಿನಾ- ಗ್ರಾಮ್ಯ ಮೂಲದ ಸಂಗತಿೊಂಡನಲ್ಲ. ಮನಸೊಲ್ಲದೆಯೂ ನಗರವಾಸಿಯಾಗಿರುವ ನಾನು- ನನ್ನ ಸುತ್ತಲಿನ ಕಡುಶಾಪದಂತಹ ‘ನಾಗರಿಕ’ ಬವಣೆಗೆ ನನ್ನ ಓದನ್ನು ದೂರುವುದೇ? ಅಥವಾ, ಉದ್ಯೋಗವನ್ನೇ? ಹಾಗಾದರೆ ಹಳ್ಳಿ ಎಂಬುದು ನಮ್ಮೊಳಗಿರುವ ಸುಮ್ಮಸುಮ್ಮನೆ ಹಳವಂಡವೇ?
೦೮. ಕನ್ನಡದ ಹಳ್ಳಿ-ಪರಿಸರದಲ್ಲಿ ಕಲಿತ ನನಗೆ ನಲವತ್ತೇಳರ ಸ್ವಾತಂತ್ರ್ಯದೊಡನೆ ಜರುಗಿದ ದೇಶವಿಭಜನೆಯ ಸಂಗತಿಯು ಬರೇ ಪುಸ್ತಕದ ಸಂಗತಿಯಾಗಿತ್ತೇ ಹೊರತು, ಭಾರತದಿಂದ ಹೊರತಾದ ಪಂಜಾಬು-ಸಿಂಧುಗಳು ಎಂದೂ ನನ್ನದನಿಸಲಿಲ್ಲ. ಬಗೆಹರಿಯದ ಕಾಶ್ಮೀರವೂ ನನ್ನನೆಂದೂ ಕಾಡಲಿಲ್ಲ. ಭೀಷ್ಮ್ ಸಹಾನಿಯ ‘ತಮಸ್’ ಆಗಲಿ, ಸದಾತ್ ಹಸನ್ ಮಾಂಟೋನ ವಲಸೆ-ದಂಗೆಯ ಕತೆಗಳಾಗಲಿ, ಇತ್ತೀಚಿನ ‘ಕಶ್ಮೀರ್ ಫೈಲ್ಸ್’ ಆಗಲಿ… ನನ್ನನ್ನು ಕಲಕಲೇ ಇಲ್ಲ. ಅಂದಮೇಲೆ ನಾನು ಭಾರತವೆಂಬ ನಾಡುನೆಲವನ್ನು ಅಖಂಡವಾಗಿ ನಂಬದಷ್ಟು ನಾಸ್ತಿಕನೇ? ‘ಪಂಜಾಬ್ ಸಿಂಧ್ ಗುಜರಾತ್ ಮರಾಠಾ…’ ನನ್ನ ಮಟ್ಟಿಗೆ ಸುಮ್ಮಗೊಂದು ಹಾಡೇ?
೦೯.‘ಇಸ್ಕಾನ್’ನ ಕೃಷ್ಣಸಿದ್ಧಾಂತವನ್ನು ನೆಚ್ಚುವವರು ಮಾತುಮಾತಿಗೂ ‘ಹರೇ ಕೃಷ್ಣ’ ಎಂದನ್ನುವುದಿದೆ. ‘ಆರ್ಟ್ ಆಫ್ ಲಿವಿಂಗ್’ ಅನುಯಾಯಿಗಳು ಎದುರು ಸಿಕ್ಕಾಗಲಿರಲಿ, ಫೋನೆತ್ತಿಕೊಂಡಾಗಲೆಲ್ಲ ‘ಹೆಲೋ’ ಬದಲಿಗೆ ‘ಜೈ ಗುರುದೇವ್’ ಅನ್ನುತ್ತಾರೆ. ನನ್ನ ಕೆಲವು ಮುಸ್ಲಿಂ ಕ್ಲಯಂಟುಗಳ ರಿಂಗ್ಟೋನು ‘ಅಲ್ಲಾ ಹು ಅಕ್ಬರ್’ ಎಂದು ಕರೆದಾಗಲೆಲ್ಲ ‘ಅದಾನು’ ಕೂಗುತ್ತದೆ. ವರ್ಷವರ್ಷವೂ ಶಬರಿಮಲೆಯ ಮಾಲೆ ಧರಿಸುವ ನನ್ನ ಗೆಳೆಯರು ಆ ಒಂದು ತಿಂಗಳು ನನಗೆ ‘ಸ್ವಾಮೀ’ ಅನ್ನುತ್ತಾರೆ. ಈ ನಡುವಿನ ಕೆಲಹಲವೊಮ್ಮೆ, ನನಗೆ, ಈ ದೇಶಭಕ್ತಿಯೂ ಇಂಥದೇ ಕರ್ಮಠ ಧೋರಣೆೆುಂಂದನ್ನಿಸಿದೆ.
೧೦. ಇನ್ನೊಂದು ನೆನಪಾಗುತ್ತದೆ. ೨೦೧೯ರಲ್ಲೇನೋ ಭಾರತ ಸರ್ಕಾರವು ‘ಏರ್ ಇಂಡಿಯಾ’ದ ಪ್ರತಿಯೊಂದು ‘ಆನ್-ಬೋರ್ಡ್’ ಘೋಷಣೆಯ ಬಳಿಕ ‘ಜೈಹಿಂದ್’ ಹೇಳತಕ್ಕ ಆದೇಶ ಹೊರಡಿಸಿತ್ತು. ಆ ದಿನಗಳಲ್ಲಿ, ‘ಈಗ ನಾವು ಆಹಾರಸೇವೆ ಶುರು ಮಾಡುತ್ತೇವೆ. ಜೈಹಿಂದ್… ಇಡ್ಲಿ, ಉಪ್ಮಾ ಆರ್ ರೋಸ್ಟೆಡ್ ನಟ್ಸ್? ಜೈಹಿಂದ್… ವಿಮಾನದ ಏರಿಳಿಕೆಯ ಸಮಯದಲ್ಲಿ ಅವಶ್ಯವಾಗಿ ಸೊಂಟಕ್ಕೆ ಪಟ್ಟಿ ಕಟ್ಟಿರಿ. ಜೈಹಿಂದ್…’ ಎಂದೊಂದು ತಮಾಷೆಯ ವಾಟ್ಸ್ಯಾಪು ಹರಿದಾಡುತ್ತಿತ್ತು. ಕೆಲವರು ಇದನ್ನು ‘ಒತ್ತಾಯ’ದ ದೇಶಭಕ್ತಿಯಂತಲೂ, ಅಷ್ಟೇ ‘ಹಿಸ್ಟಿರಿಕಲ್’ ದೇಶ ಸೇವೆಯಂತಲೂ ಮಾತನಾಡಿದರು. ಹೀಗೆ ಹೇಳಿದವರನ್ನು ದೇಶದ್ರೋಹಿಗಳೆಂದು ಹಳಿದವರೂ ಇದ್ದರು. ಪ್ರಶ್ನೆಯಿಷ್ಟೆ: ದೇಶಭಕ್ತಿಯೇನು ಸರಕಾರದ ಕಟ್ಟಪ್ಪಣೆಯ ಮೇರೆಗೆ ನಡೆಯುವ ಸಂಗತಿಯೇ?
೧೧. ಇತ್ತೀಚೆಗೆ ತೀರಿಕೊಂಡ ನನ್ನ ಅಮ್ಮನಿಗೆ ದೇಶದ ಆಗುಹೋಗುಗಳಲ್ಲಿ ಅಪಾರವಾದ ಆಸಕ್ತಿಯಿತ್ತು. ನೆಹರೂರಿಂದ ಶುರುಗೊಂಡು ಇವೊತ್ತು ನಿನ್ನೆಯ ಮೋದಿ-ಶಾಗಳವರೆಗೂ ಚಾಚೂತಪ್ಪದೆ ಪಲುಕಬಲ್ಲವಳಾಗಿದ್ದಳು. ನಾನರಿತ ಮಟ್ಟಿಗೆ, ಅವಳು ಯಾವೊಂದೂ ಸ್ವಾತಂತ್ರ್ಯ ದಿವಸದಂದು ಕೆಂಪುಕೋಟೆಯ ಭಾಷಣವನ್ನು ಕೇಳದಿರಲಿಲ್ಲ. ಗಣರಾಜ್ಯೋತ್ಸವದ ಯಾವೊಂದೂ ಪೆರೇಡನ್ನು ನೋಡದಿರಲಿಲ್ಲ. ಯಾವ ಚುನಾವಣೆಯಲ್ಲೂ ಮತ ಹಾಕದಿರಲಿಲ್ಲ. ಇಷ್ಟಿದ್ದೂ, ಸ್ವಾತಂತ್ರ್ಯ-ಗಣತಂತ್ರದ ದಿವಸಗಳನ್ನು ಅವಳು ಹಬ್ಬವೆಂದು ಗಣಿಸಲಿಲ್ಲ. ಪ್ರತಿ ಶ್ರಾವಣದಲ್ಲಿ ಮಂಗಳವಾರ, ಶುಕ್ರವಾರಗಳಂದು ತಪ್ಪದೆ ಸಿಹಿ ಮಾಡುವ ಹಾಗೆ, ಈ ರಾಷ್ಟ್ರೀಯ ಉತ್ಸವಗಳಂದು ಯಾವೊಮ್ಮೆಯೂ ಪಾಯಸ ಕುದಿಸಲಿಲ್ಲ. ಅಂದರೆ, ಸ್ವಾತಂತ್ರ್ಯ ದಿನಾಚರಣೆ ಎಂಬ ‘ಬೀದಿಯ’ ಸಡಗರವು ನಮ್ಮ ಒಳಮನೆಯನ್ನು ತಲುಪಲೇ ಇಲ್ಲ. ದೇಶ ಕುರಿತಾದ ಗೌರವನಿಷ್ಠೆಗಳು- ಸದ್ಯದ ‘ಹರ್ ಘರ್ ತಿರಂಗಾ’ ಅಭಿಯಾನದ ಹಾಗೆ, ಸದಾ ಸಾರ್ವಜನಿಕ ಮುಲಾಜಿನಲ್ಲಿ ಜರುಗಿದವೇ ವಿನಾ ನಮ್ಮ ಒಳಬದುಕಿನೊಳಗೆ ಅಡಿ ಬೆಳೆಸಲಿಲ್ಲ.
೧೨. ದೇಶಭಕ್ತಿಗೆ ಸರಿಸಮವಿಲ್ಲದೆಯೂ ಸಮಾನವಾಗಿ ಚರ್ಚೆಗೊಳಪಡುವ ರಾಷ್ಟ್ರೀಯತೆ ಎಂದೊಂದು ವಿಚಾರವಿದೆ. ಇದರಡಿಯಲ್ಲಿ ನಾವು ಪ್ರಜೆಗಳ ಹಕ್ಕುಬಾಧ್ಯತೆೊಂಟ್ಟಿಗೆ ರಾಷ್ಟ್ರನಿಷ್ಠೆಯನ್ನೂ ಗುರುತಿಸಲಾಗುತ್ತದೆ. ಅಸಲಿನಲ್ಲಿದು ರಾಷ್ಟ್ರದ ಸಂವಿಧಾನವನ್ನು ಕುರಿತಾದ ಬದ್ಧತೆ, ಕಾಯಿದೆ-ಕಾನೂನುಗಳ ಪರಿಪಾಲನೆ, ನ್ಯಾಯಾಂಗಕ್ಕೆ ತಕ್ಕುದಾಗಿ ನಡೆಯುವ ನೆಚ್ಚುಗೆ… ಇಂತಹ ಬಾಧ್ಯಸ್ಥಿಕೆಯನ್ನು ಪ್ರತಿಪಾದಿಸುತ್ತದೆ. ‘ಸರ್ವಜನಾಂಗದ ಶಾಂತಿಯ ತೋಟ’ವೆಂಬ ಕವಿಕಲ್ಪನೆಗೆ ತಕ್ಕುದಾಗಿ ಜನಜನಾಂಗದ ಸಹಬಾಳ್ವೆಯನ್ನು ಅನುಮೋದಿಸುತ್ತದೆ. ಇಷ್ಟಿದ್ದೂ, ಅವಕಾಶ ಸಿಕ್ಕರೆ ಸಾಕು- ‘ಪರ’ಜನದ ಬಗ್ಗೆ ತಲೆಗೊಂದು ಹರಟುವ ನಾವು ಎಷ್ಟು ಸಂವಿಧಾನವನ್ನು ಅರಿತಿದ್ದೇವೆ? ತಕ್ಕುದಾಗಿ ಬದ್ಧವಾಗಿ ನಡೆಯುತ್ತೇವೆ?
೧೩. ಸೇಕ್ರೆಡ್ ಮತ್ತು ಪ್ರೊಫೇನ್ ಎಂಬೆರಡು ಮಾತುಗಳನ್ನು ಆರ್ಕಿಟೆಕ್ಚರಿನ ಅಕೆಡೆಮಿಕ್ ಚರ್ಚೆಗಳಲ್ಲಿ ನಾವು ಆಗಿಂದಾಗ ಬಳಸುವುದಿದೆ. ಸೇಕ್ರೆಡನ್ನು ಕನ್ನಡದಲ್ಲಿ ‘ಪವಿತ್ರ’ವೆಂದು ಅರ್ಥಯಿಸುವುವೆವಾದರೂ ಅದು ನಿಜಕ್ಕೂ ಇದಲ್ಲ. ಇನ್ನು, ಪ್ರೊಫೇನ್ ಎಂಬುದಕ್ಕೆ ತಕ್ಕ ‘ಕನ್ನಡ’ವಿರುವುದು ಕಾಣೆ. ಇದು ‘ಸೇಕ್ರೆಡ್’ನ ವಿರುದ್ಧಪದವಾದ್ದರಿಂದ ಅಳ್ಳಕವಾಗಿ ‘ಅಪವಿತ್ರ’ ಅಂತನ್ನಬಹುದೇನೋ… ಅಸಲಿನಲ್ಲಿದು ಹುಟ್ಟಾಕಟ್ಟಾ ಐರೋಪ್ಯ ಕಲ್ಪನೆ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದ ಸಮಾಜಶಾಸ್ತ್ರದಲ್ಲಿ ಇದನ್ನು ಮೊದಮೊದಲು ಬಳಸಲಾಯಿತಾದರೂ, ಇದರ ನಿಜಮೂಲವಿರುವುದು ಯುರೋಪಿನ ಧಾರ್ಮಿಕ ಜಿಜ್ಞಾಸೆಯಲ್ಲಿ. ಪವಿತ್ರವಾದುದೆಲ್ಲ ದೇವರ ಸೇವೆಗೆ ೋಂಗ್ಯವಾದುದೆಂದೂ, ಅಲ್ಲದ್ದು ಅಪವಿತ್ರವೆಂದೂ ಕೆಲವು ‘ಅಬ್ರಹಾಮಿಕ್’ ಧರ್ಮಗಳ ನಂಬುಗೆ. ಇದಕ್ಕೆ ತಕ್ಕುದಾಗಿ ಮುಂದೆ, ಪ್ರೋಫೇನ್ ಶಬ್ದದಡಿ ದೈವವಿರೋಧೀ ಅಭಿಮತಗಳನ್ನೂ ಇರಿಸಿ ಅರ್ಥಯಿಸಲಾಯಿತು. ದೇವರನ್ನು ಅಲ್ಲಗಳೆಯುವ ನಾಸ್ತಿಕವಾದವೂ ಒಂದು ಪ್ರೊಫೇನ್ ಚಟುವಟಿಕೆೆುಂಂತಲೇ ಅಭಿಪ್ರಾಯಿಸಲಾಯಿತು. ಇದೇ ಮುಂದೆ ‘ಸೆಕ್ಯುಲರ್’ ಅಂತೆಂಬ ಹೊಸಕಾಲದ ೋಂಚನೆಯತ್ತ ಹೊರಳಿತೆನ್ನುವುದು ಒಂದು ವಾದ. ಇರಲಿ. ಪ್ರಶ್ನೆಯಿಷ್ಟೆ: ಈ ಇಪ್ಪತ್ತೊಂದನೇ ಶತಮಾನದ ಈ ‘ಅಜ್ಞೇಯತೆ’ಯಲ್ಲೂ ನಾವು ದೇವರನ್ನು ಕುರಿತಾದ ನಂಬುಗೆ ಅಪನಂಬುಗೆಗಳ ಬಗ್ಗೆ ಸಾರ್ವಜನಿಕವಾಗಿ ವ್ಯಾಜ್ಯಕ್ಕೆ ತೊಡಗುತ್ತೇವಲ್ಲ- ಇದರ ಸ್ವಾತಂತ್ರ್ಯವೇತರದು? ಮತ್ತು ಅದೆಷ್ಟು ಸರಿ?
೧೪. ನನ್ನ ಕಡುವಯಸ್ಕ ಕಾಲಮಾನದಲ್ಲಿ ದೇಶದ ರಾಜಕೀಯವು ‘ಸೆಕ್ಯುಲರ್’ ಎಂಬುದನ್ನು ಹಿಡಿದು ಹಿಂಡಿ ಹಿಪ್ಪೆ ಮಾಡಿದಷ್ಟು ಜಗತ್ತಿನ ಬೇರಿನ್ನಾವ ಸಂಗತಿಯನ್ನೂ ಟಿಪ್ಪಣಿಸಿಲ್ಲ. ಬಲುಹಲವೊಮ್ಮೆ ಸಾಕುಸಾಕೆನಿಸುವ ಮಟ್ಟಿಗೆ ಈ ಸಂಗತಿಯನ್ನು ಕೊಚ್ಚಿ ಹೆಚ್ಚಿ ಉಪ್ಪೇರಿಸಿ ಚಪ್ಪರಿಸಲಾಗಿದೆ. ಇದನ್ನು ಗೋದಾವರಿಗೆ ಉತ್ತರದ ಹಿಂದೀಜನವು ‘ಧರ್ಮನಿರಪೇಕ್ಷ’ವೆಂದು ಕರೆದರೆ, ಕನ್ನಡವು ‘ಜಾತ್ಯತೀತ’ವೆಂದು ಬಗೆದು ಸದರಿ ಶಬ್ದಮೂಲವನ್ನೇ ಜಾಲಾಡಿ ಬದಿಗಿಟ್ಟಿದೆ. ನನಗಂತೂ, ದೇಶಕ್ಕೆ ದೇಶವೇ ಈ ಪದದೆದುರು ಎಡಬಲವೆಂದು ಇಬ್ಬಣವಾಗಿ ಒಡೆದಿರುವ ಪರಿ ದಿಗಿಲು ಹುಟ್ಟಿಸುತ್ತದೆ. ಏತನ್ಮಧ್ಯೆ, ಅಮಾಯಕರ ಭೀತಮನಸ್ಸುಗಳ ಮೇಲೆ- ಸದಾ ಒಂದಲ್ಲೊಂದು ಆಳಿಕೆಗೈದಿರುವ ಇವೆರಡೂ ಬಣಗಳ ತಲೆತಿರುಕ ಕಿತ್ತಾಟವೇ ಭೋಂತ್ಪಾದನೆೆುಂನಿಸಿದರೆ ಉಡಾಫೆೆುೀಂನು? ರಾಮನಾಮ ಪಾಯಸದೊಳಗೆ ‘ಟಿಪ್ಪೂ’ನಾಮ ಸಕ್ಕರೆ ಸಿಕ್ಕು ಆಗುವ ಕಕ್ಕಾವಿಕ್ಕಿಯ ಹೊಣೆೆುಂಂಥದು ಮತ್ತು ಯಾರದು? ನಮ್ಮೆದುರಿನ ಟೀವಿ-ಸಂವಾದಗಳು ಜೋರುದನಿಯಲ್ಲಿ ಈ ಕುರಿತು ನಾಲಗೆ ಝಳಪಿಸುವ ಕರುಮವಾದರೂ ಏನು? ಮಾಧ್ಯಮಗಳ ಟೀರ್ಪೀ-ಕಟಕಟೆಯಲ್ಲಿ ಕಟುಸತ್ಯವೇ ತನ್ನೊಳಗು ತಿರುಚಿಕೊಂಡಲ್ಲಿ ಯಾವುದನ್ನು ನೆಚ್ಚುವುದು? ಯಾರಲ್ಲಿ ಮೊರೆಹೋಗುವುದು? ತಮ್ಮ ಮಂಡನೆಯ ‘ಪ್ರತಿ’ರಾಷ್ಟ್ರೀಯವೆಂದು ಪರಿಗಣಿಸುವ ನಮ್ಮ ಟೆಲಿವಿಶನುಗಳ ಹೈವಾಲ್ಯೂಮ್ ಅಹಮಿಕೆಯನ್ನು ಸಹಿಸುವುದೆಂತು?
೧೫. ಇಪ್ಪತ್ತನೇ ಶತಮಾನವು ಅಭೂತಪೂರ್ವವಾಗಿ ತಂದೆರೆದ ಸೆಕ್ಯುಲರ್ ಪರಿಕಲ್ಪನೆಯನ್ನು ಇನ್ನಿರದೆ ಮುನ್ನಿರದೆ ಸಾಕೃತಿಸಿದ ಎರಡು ವಸ್ತುವಿಷಯವೆಂದರೆ ಕಾಂಕ್ರೀಟು ಮತ್ತು ಪ್ಲಾಸ್ಟಿಕು. ಜಾತಿಮತಧರ್ಮಭೇದವಿಲ್ಲದೆ ಲೋಕದಲ್ಲಿನ ಸರಿಸುಮಾರು ಎಲ್ಲರೂ ಮನಸಾರೆ ಒಪ್ಪಿ ಬಳಸಿರುವ ಸಂಗತಿಗಳಿವು. ಈ ಜಗತ್ತಿನಲ್ಲಿ ನೀರಿನ ಬಳಿಕ ಅತಿಹೆಚ್ಚು ಉಪೋಂಗಿಸಲ್ಪಡುವ ಇವೆರಡೂ ವಸ್ತುಗಳು ಗುಡಿ-ಇಗರ್ಜಿ-ಮಸಜಿದ್ದುಗಳ ಕಟುಸಂಪ್ರದಾಯವನ್ನೇ ಮಣಿಸಿರುವುದು ಸುಮ್ಮನೆ ಸೋಗೇ? ಕಳಪೆ ಮೈಕ್ರಾನಿನ ಪಾಲಿಥೀನಿನ ಕವರು ತನ್ನೊಳಗಿನ ಹೂವೊಡನೆ ಮಡಿಮಡಿಯಾದ ಗರ್ಭಗುಡಿಯನ್ನೂ ಹೊಕ್ಕೀತೆಂದರೆ ಸುಮ್ಮಗೆಯೇ?
೧೬. ಸಾಂವಿಧಾನಿಕ ಒತ್ತಾಯದ ಮೇರೆಗೆ ಈ ‘ಸೆಕ್ಯುಲರಿಕೆ’ಯನ್ನು ಒಪ್ಪಿದ್ದೇ ಆದಲ್ಲಿ, ನಾವೊಂದು ಜನಾಂಗವಾಗಿ ಸಾವಿರಾರು ಕಾಲದಿಂದ ಕಟ್ಟಿಕೊಂಡಿರುವ ದೇವರು, ದಿಂಡರು, ನಂಬುಗೆ, ಆಚರಣೆ, ಧರ್ಮವಿತ್ಯಾದಿ ಸರಕನ್ನು ಯಾವ ಹೊಳೆಯಲ್ಲಿ ವಿಸರ್ಜಿಸುವುದು? ಬೇಕೆನಿಸಿದಾಗ ‘ಕಂಟ್ರೋಲ್ ಆಲ್ಟ್ ಡೆಲೀಟ್’ ಒತ್ತಿ ಹುಟ್ಟಡಗಿಸಲು- ಅವೇನು ಕಂಪ್ಯೂಟರಿನಲ್ಲಿ ಕೀಲಿಸಿಟ್ಟ ಸುಮ್ಮನೆ ಮಾಹಿತಿಯೇ? ಹೋಗಲಿ, ನಮ್ಮ ನುಡಿೊಂಳಗೆ ಭಂಡಾರವೆಂಬಂತೆ ನೆಲೆಸಿರುವ ಕೈವಲ್ಯ, ಕೈಲಾಸ, ಮೋಕ್ಷ, ನಿರ್ವಾಣ, ಧ್ಯಾನ, ದಾನ… ಪಾಪಪುಣ್ಯ, ಪೂಜೆ, ಪುನಸ್ಕಾರ… ಮುಂತಾದವನ್ನು, ರಾಜಕೀಯವು ಧರ್ಮವನ್ನು ಒಲ್ಲೆನ್ನಲೇಬೇಕೆಂಬ ನೆಲೆಯಲ್ಲಿ ಕೈಬಿಡಲಾದೀತೆ? ಅದು ಸಾಧ್ಯವೇ? ಹೀಗಾದ ಪಕ್ಷಕ್ಕೆ, ರಾಮ-ಕೃಷ್ಣರ ಬುದ್ಧ-ಮಹಾವೀರರ ನಾನಕ-ಪೈಗಂಬರರ ಏಸು-ಕ್ರಾಸುಗಳ ಕತೆಯ ಕತೆ ಏನು?
೧೭. ಇಷ್ಟಿದ್ದೂ ಜಾತಿ ಎಂಬುದನ್ನು, ಇತ್ತಿತ್ತಲಾಗಿ, ಅಗತ್ಯಕ್ಕೂ ಹೆಚ್ಚಾದ ಮುನ್ನೆಲೆಯಲ್ಲಿ ಚರ್ಚಿಸಲಾಗುತ್ತದೆ. ರಾಜಕೀಯದ ನಿಷ್ಕರ್ಷೆಗಳೂ ಅದರ ಸೋಂಕುತಾಂಕಿಲ್ಲದೆ ಜರುಗವೆನ್ನುವ ಮಟ್ಟಿಗೆ, ಈ ದೇಶದ ಸುಪ್ತಿಜಾಗೃತಿಗಳಲ್ಲಿ ಹೊಕ್ಕುನೆಲೆಸಿದೆ. ನಮ್ಮ ನಡುವಿನ ಯಾವ ಸಾಹಿತ್ಯಿಕ ಸಂವಾದವೂ ‘ಜಾತೀಯ’ನೆಲೆಯಾಚೆಗೆ ನಡೆಯುವುದನ್ನು ಕಾಣೆ. ವಿಚಿತ್ರವೆಂದರೆ, ಜಾತಿ ತೊಡೆದೇವೆಂದು ಹೊಡೆದಾಡುವ ಮಂದಿಯೇ ಅದನ್ನು ಪದೇಪದೇ ಮುಂಚೂಣಿಗೆ ತಂದು ಎಲ್ಲರ ನಾಲಗೆಗೆ ಚೋದ್ಯವೊದಗಿಸುತ್ತಾರೆ. ಈಗಿತ್ತಲಾಗಿ, ನಾಡಿನ ಒಂದೊಂದು ಚುನಾವಣೆಯನ್ನೂ ಜಾತೀವಾರು ಪೂರ್ವಗ್ರಹದೊಂದಿಗೆ ಕಾಯಲಾಗುತ್ತಿದೆ. ಫಲಿತಾಂಶವನ್ನೂ ಅದೇ ನಿಟ್ಟಿನಲ್ಲಿ ಸಮೀಕ್ಷಿಸಲಾಗುತ್ತಿದೆ. ಕೈಫೋನೊಳಗಿನ ಸಮೂಹ ಮಾಧ್ಯಮದ ತಲೆತಲೆಯೂ, ತನ್ನ ‘ಸ್ವ’ತಂತ್ರಾಂಶದ ನಿಜಧರ್ಮವೆನ್ನುವ ಹಾಗೆ, ಮುನ್ನೆಂದಿಗಿಂತಲೂ ಜಾತಿ ಚಟುವಟಿಕೆಯನ್ನು ಪಿಟಿಪಿಟಿಸುತ್ತದೆ. ಸಂಸ್ಕೃತಿಕರಣ ೃ, ಬ್ರಾಹ್ಮಣೀಕರಣ… ಇತ್ಯಾದಿಗಳ ‘ಕರಣ’ವಾದವು ‘ಕಾಫೀ ವಿತ್ ಕರಣ್’-ರಂಜನೆಯ ಹಾಗೆ, ಮಾತುಮಾತಿಗೂ ನಮ್ಮ ೃೃ ಸಾಂಸ್ಕೃತಿಕ ನಿರೂಪಗಳನ್ನು ಅಟ್ಟಾಡಿಸಿದೆ. ರಣಹದ್ದಿನ ಹಾಗೆ ಎರಗಿ ಕುಕ್ಕುವ ಈ ವಿಷಯದ ಪ್ರಾರಂಭದಿಂದ ನಾನರಿಯೇ . ಹೋಗಲಿ, ಕೊನೆ ಎಂಬುದಂತೆ ಉಂಟೆ?
೧೮. ಇದೊಂದು ಸಮಸ್ಯೆೆುಂನಿಸಿದಲ್ಲಿ ಇಂಗ್ಲಿಷ್ ಓದು ಮತ್ತು ಕಲಿಕೆಯಲ್ಲಿ ಪರಿಹಾರವಿದೆೆುಂನಿಸುತ್ತದೆ. ಕನ್ನಡದ ಓದು ಪದೇಪದೇ ನಮ್ಮನ್ನು ನಾಡಿನೊಳಕ್ಕೆ ತೂರಿಸಿ ತೊಡಗಿಸಿದರೆ, ಇಂಗ್ಲಿಷ್ ಇತರೆ ಜಗತ್ತಿನ ಕೂಡ ನಮ್ಮನ್ನು ಬೆಸೆದು- ತಕ್ಕಮಟ್ಟಿಗಿನ ಜಾತ್ಯತೀತ ನೆಲೆ ಕಲ್ಪಿಸುತ್ತದೆ. ನಮ್ಮ ಮಹಾನಗರಗಳಲ್ಲಿನ ಸರಕಾರೇತರ ವೃತ್ತಿಪರಲೋಕದಲ್ಲಿ ಜಾತಿಯ ಲೆಕ್ಕವಿದ್ದಂತಿಲ್ಲ. ನಾನಂತೂ ಕಂಡಿಲ್ಲ. ಒಟ್ಟಿನಲ್ಲಿ, ನಾವೊಂದು ದೇಶವಾಗಿ ಜಾತ್ಯತೀತಗೊಳ್ಳುವಲ್ಲಿ ಇಂಗ್ಲಿಷು ಕಾಯಕಲ್ಪವಾದೀತೇನೋ. ಈ ಪರಿಹಾರವನ್ನು ನಾವು ಒಪ್ಪಿದ ಪಕ್ಷಕ್ಕೆ, ನಾಡುನುಡಿನೆಲ ಕುರಿತಾದ ಉಳಿದ ಮಿಡುಕು-ದುಡುಕುಗಳ ಗತಿೆುೀಂನು? ಇಂಗ್ಲಿಷ್ ತೆಕ್ಕೆಯಲ್ಲಿ ಇಲ್ಲಿನದನ್ನು ಮರೆೆುಂಂಬುದು ಸಾಧ್ಯವೇ? ಸಿಂಧುವೇ?
೧೯. ಇಷ್ಟರ ಮಧ್ಯೆ ‘ಭಾರತೀಯತೆ’ ಕುರಿತಾದ ಪ್ರಶ್ನೆ ತಲೆೆುಂತ್ತಿ ಕಾಡುವುದಿದೆ. ಇಷ್ಟಕ್ಕೂ, ‘ಭಾರತೀಯ’ವೆಂಬುದಕ್ಕೆ ದಿಟವಾದ ವಿವರಣೆಯುಂಟೆ? ಸರಿಯುದಾಹರಣೆಯುಂಟೆ? ಹಾಗೊಂದು ಕಟುದಿಟ್ಟ ದಿಟವು ನಮ್ಮೊಡನುಂಟೆ? ವಿಷಯವನ್ನು ವೇದಗಳಿಂದ ಮೊದಲು ಮಾಡಿದಲ್ಲಿ ವೈದಿಕಪರವಾದ ಮಂಡನೆಯಾದೀತಷ್ಟೆ? ವೇದಗಳ ಸಮಸಮಕ್ಕೂ ಇಲ್ಲಿನ ನೆಲದಲ್ಲಿದ್ದ ಹರಪ್ಪ-ಮೊಹೆಂಜೊದಾರೋ ಸಂಗತಿಯನ್ನು ಬಿಟ್ಟುಬಳಸಿ ಆಡಲಾದೀತೆ? ಇನ್ನು, ಇತ್ತೀಚೆಗೆ ಬೆಳಕುಕಂಡ ರಾಖೀಘರಿಯ ಉತ್ಖನನವನ್ನೂ, ಅದು ಹೊಮ್ಮಿದ ಹೊಸಬೆಳಕನ್ನೂ ಏನನ್ನುವುದು? ಕಳೆದ ನೂರು ವರ್ಷಗಳಲ್ಲಿ ನಾವು ನಂಬಿ ನೆಚ್ಚಿ ಬರೆದೊರೆದ ಇತಿಹಾಸವನ್ನೆಲ್ಲ ಸುಮ್ಮನೆ ಪೋಲುಮಾಡುವುದೇ? ನಮ್ಮ ನಡುವಿರುವ ಹತ್ತೆಂಟು ನೂರೆಂಟು ಅವೈದಿಕ ಆಸ್ಥಾಭೀಪ್ಸೆಯನ್ನು ಅಲ್ಲಗಳೆಯುವುದೇ? ಅಥವಾ, ಅದು ತರವೇ? ದೇಶದುದ್ದಗಲಕ್ಕೂ ಚಾಲ್ತಿಯಲ್ಲಿರುವ ಬಗೆಬಗೆಯ ಉಡುಗೆತೊಡುಗೆ ಊಟೋಪಚಾರದ ವಾಡಿಕೆಯನ್ನು ತೊಡೆದು, ಒಂದೇ ಒಂದು ಜನಾಂಗೀಯ ಪದ್ಧತಿೆುಂದುರು ಬಳಿದೆಸೆಯಲುಂಟೆ? ಬಡಗಣದ ಹಿಂದೀಸೀಮೆಯ ಮೇಲುವರ್ಗದ ನಂಬುಗೆಯನ್ನು ಕಾವೇರೀತಟದ ದಕ್ಷಿಣದಲ್ಲಿ ಹೇರಿ ಅದೇ ರಾಷ್ಟೀಯತೆನ್ನುವುದು ಎಷ್ಟು ಸರಿ? ಮೂರು ಕಡಲಿನ ನಡುವಿರುವ ಈ ನೆಲರಾಶಿಯೊಳಗೆ ನಾವು ಈವರೆಗೆ ಗಣಿಸಲೊಲ್ಲದ ಹಲವೆಂಟು ಉಪನುಡಿ, ೃೃ ಉಪಸಂಸ್ಕೃತಿ ಮತ್ತಿತರೆ ಉಪರಿಗಳುಂಟಷ್ಟೆ- ಅವುಗಳ ಲೆಕ್ಕವೇನು? ಹೋಗಲಿ, ತಕ್ಕಮಟ್ಟಿಗೆ ಚೆನ್ನಾದ ಇಂಗ್ಲಿಷ್ ಅರಿತೂ ಇಲ್ಲಿ ಕಡುಗನ್ನಡವನ್ನು ಧೇನಿಸುವ ನಾನೆಂಬ ನಾನು ಯಾರು? ಆರ್ಯನೇ? ದ್ರಾವಿಡನೇ? ಭಾರತೀಯನೇ? ನಿಜಕ್ಕೂ ಯಾರು?
೨೦. ರಾಷ್ಟ್ರಪ್ರೇಮವಂತೆಂಬ ಕೆಲನೂರಷ್ಟೇ ವರ್ಷದ ಕಲ್ಪನೆಯನ್ನು ಪ್ರತಿರೋಧಿಸುವ ‘ಪ್ರತಿ’ ರಾಷ್ಟ್ರೀಯವಾದವೂ- ಇವೊತ್ತು ನಮ್ಮ ನಡುವಿಲ್ಲದಿಲ್ಲ. ಇದನ್ನು ಅಳ್ಳಕವಾಗಿ (ಸುಖಾಸುಮ್ಮನೆ) ರಾಷ್ಟ್ರವಿರೋಧೀ ಧೋರಣೆೆುಂಂದು ಕಾಣುವುದೂ ಸರಿಯಲ್ಲವಷ್ಟೆ? ಇನ್ನು, ನಮ್ಮ ನಗರಗಳೊಳಗಿನ ಬದುಕು ಅಲಿಖಿತವಾಗಿ, ಅಷ್ಟೇ ಅನಿಯಮಿತವಾಗಿ ತಂದೆರೆಯುವ ‘ಕಾಸ್ಮೋಪಾಲಿಟನಿಸಂ’ ಎಂಬ ‘ವಿಶ್ವಬಂಧುತ್ವ’ದೆದುರು- ಇಲ್ಲಿನ ಪ್ರಜಾಪ್ರಭುತ್ವಕ್ಕೂ ಹೆಚ್ಚು ಆಚೆಗಿನ ವಿಶ್ವವನ್ನು ನೆಚ್ಚಿದ್ದಾದರೆ ತಪ್ಪೇ? ಲೋಕಸಂಗತಿಯ ಒಂದೊಂದೂ ತನ್ನದೆಂದು ಗಣಿಸುವುದನ್ನು ತರವಲ್ಲವೆನ್ನಲಹುದೇ? ಅಸಲಿನಲ್ಲಿದು ಸಂಕುಚಿತವಲ್ಲದ ಅತ್ಯುದಾತ್ತ ೋಂಚನೆಯಷ್ಟೆ? ಹಾಗಾದಲ್ಲಿ, ನಮ್ಮನು ನಾವು ಆಳಿಕೊಳ್ಳಲೆಂದು ನಾವೇ ಕಟ್ಟಿಕೊಂಡಿರುವ ಪ್ರಜಾತಂತ್ರ-ಗಣತಂತ್ರಗಳೆಷ್ಟು ಸರಿ? ನಾವು ಕಂಡುಕೊಂಡಿರುವ ಸಂವಿಧಾನವು ಪ್ರಶ್ನಾತೀತವೇ? ಅಥವಾ, ನಮ್ಮನ್ನು ಆಳುತ್ತಿರುವ ನಮ್ಮದೇ ಪ್ರತಿನಿಧಿಗಳ ನಿಜನಿಷ್ಠೆೆುಂಷ್ಟಿದೆ? ಸರ್ಕಾರ ಬದಲಿದಾಗಲೆಲ್ಲ ಬೆಳಕಿಗೆ ಬರುವ ಸಾವಿರಾರು ಕೋಟಿ ದುಡ್ಡಿನ ಹಗರಣಗಳ ಕತೆೆುೀಂನು? ಚುನಾಯಿತ ವಿಧಾನಸಭೆಗಳ ಸಂಖ್ಯಾ-ಸಮೀಕರಣವನ್ನೇ ಅಲುಗಿಸಿ, ಜನಪ್ರತಿನಿಧಿಗಳನ್ನು ಕೊಳ್ಳುವ ಮಾರುವ ಸ್ವದೇಶ-ಸ್ವಪ್ರಭುತ್ವಕ್ಕೆ ಒಗ್ಗಿಹೋದಾಗ, ಯಾರೊಲ್ಲದೆಯೂ ನೆಚ್ಚುವುದಾಗುವ ಈ ಆಳಿಕೆೆುಂಂಬುದಕ್ಕೆ ಅರ್ಥವುಂಟೆ? ಈ ನಡುವೆ ನಾವು ಕಟ್ಟಿಟ್ಟುಕೊಂಡಿರುವ ಸಾಮಾಜಿಕತೆಯ ಆಶಯವೇನು? ಒಂದು ಸಮಾಜವಾಗಿ, ಜನಾಂಗವಾಗಿ, ಬೀಗಿಕೊಳ್ಳುವ ದೇಶವೊಂದಾಗಿ ನಾವು ಅನುಮೋದಿಸುವ ನೀತಿನಿಯತಿಗಳೆಂಥವು? ಉರಿತೀರಿದ ತಾರಕೆಯಂತೆ ಕುಸಿಯುತ್ತಿರುವ ನೈತಿಕತೆಯನ್ನು ಯಾವ ಧರ್ಮದೆದುರಿಟ್ಟು ಅಳೆಯಲಾದೀತು? ಹಿಂಸೆ, ವ್ಯಭಿಚಾರ, ಕಳ್ಳದಂಧೆ, ದರೋಡೆ… ವಗೈರೆಕಾರರ ಹೀರೋಗಿರಿಯನ್ನು ಪ್ರತಿಪಾದಿಸುವ ಇಲ್ಲಿನ ಸಿನೆಮಾಕತೆಗಳ ಪರಿಗೇನನ್ನುವುದು? ಟೀವೀ-ಸೀರಿಯಲುಗಳಲ್ಲಿ ಅನುದಿನವೂ ಮೆರೆಸಲಾಗುವ ಮನೆಮುರುಕತನದ ನೀತಿ ಏನು? ರಿಯಾಲಿಟಿಶೋಗಳು ಖುಲ್ಲಂಖುಲ್ಲ ತೆರೆದಿಡುವ ನಿಸ್ಸಂಕೋಚ ಹಾದರದ್ದೇನು ಎಣೆ? ಇವೆಲ್ಲದರ ನಡುವೆ ಸ್ವಾತಂತ್ರ್ಯವೆಂದರೇನು? ವಾಕ್ಸ್ವಾತಂತ್ರ್ಯವೆಂದರೇನು? ಸ್ವಾಭಿವ್ಯಕ್ತಿ ಎಂಬ ಇನ್ನೊಂದುಂಟಲ್ಲ- ಅದರ ನಿಜಾರ್ಥವೇನು?
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…