ಆಂದೋಲನ ಪುರವಣಿ

ಜಗದ ವೇಗ ಹೆಚ್ಚಿಸಲಿದೆ 5ಜಿ

ಭಾರತದಲ್ಲಿ ಆರಂಭವಾಯ್ತು 5ಜಿ; ಎರಡು ಮೂರು ವರ್ಷದೊಳಗೆ ದೇಶಾದ್ಯಂತ ಲಭ್ಯ

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಭರ್ಜರಿ ಬದಲಾವಣೆಯೊಂದು ಅನಾವರಣವಾಗುವ ಹೊತ್ತಿದು. ಈಗಾಗಲೇ ೫ ಜಿ ಇಂಟರ್‌ನೆಟ್‌ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ೫ನೇ ತಲೆಮಾರಿನ ತಂತ್ರಜ್ಞಾನ ಮನೆ, ಮನ, ಮೊಬೈಲ್‌ಗಳನ್ನು ಹೊಕ್ಕಲಿದೆ. ಇಂತಿಪ್ಪ ವೇಗದ ಜಗತ್ತಿಗೆ ಪ್ರವೇಶ ಒದಗಿಸುವ ೫ ಜಿ ತಂತ್ರಜ್ಞಾನದ ಸುತ್ತಮುತ್ತ, ಹಿಂದೆ ಮುಂದಿನ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಮೊದಲನೇ ಜನರೇಷನ್

ಸದ್ಯ ನಾವೀಗ ಮೊಬೈಲ್ ತೆಗೆದು ಡಾಟಾ ಆನ್ ಮಾಡಿದರೆ ಮೇಲಿನ ಮೂಲೆಯಲ್ಲಿ ೪ಜಿ ಎಲ್‌ಇಟಿ ಎನ್ನುವ ಅಕ್ಷರಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೂ ಹಿಂದಿನದ್ದು ೩ ಜಿ, ೨ ಜಿ, ೧ ಜಿಗಳ ಜಮಾನ. ದಪ್ಪದಾದ ಫೋನ್‌ಗೆ ಆಂಟೆನಾ ಸಿಕ್ಕಿಸಿಕೊಂಡು ಗಜಿಬಿಜಿ ದನಿಯೊಂದಿಗೆ ಸಂಪರ್ಕವನ್ನು ಕಷ್ಟ ಸಾಧ್ಯವಾಗಿಸುತ್ತಿದ್ದದ್ದು ೧ ಜಿ. ೮೦ ರ ದಶಕದಲ್ಲಿ ಜಿಎಸ್‌ಎಂ ತಂತ್ರಜ್ಞಾನದ ಮೂಲಕ ಅನ್‌ಲಾಗ್ ದನಿಯನ್ನಷ್ಟೇ ಹಂಚಿಕೊಳ್ಳಲು ಇದರಿಂದ ಸಾಧ್ಯವಾಗುತ್ತಿತ್ತು.

೨ನೇ ಪೀಳಿಗೆ

ನಂತರ ೯೦ರ ದಶಕದ ವೇಳೆಗೆ ಕಾಲಿಟ್ಟ ೨ ಜಿ ಡಿಜಿಟಲ್ ದನಿ ಸಂಪರ್ಕ ಸಾಧ್ಯವಾಗಿಸಿತ್ತು. ಜಿಪಿಆರ್‌ಎಸ್ ತಂತ್ರಜ್ಞಾನದ ಮೊಬೈಲ್‌ಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದ ೨ ಜಿ ಮೊಬೈಲ್ ಸಂದೇಶಕ್ಕೂ ವೇದಿಕೆ ತೆರೆದಿಟ್ಟಿತ್ತು. ಅಂಬೆಗಾಲಿಡುತ್ತಿದ್ದ ಭಾರತದ ಟೆಲಿಕಾಂ ಕ್ಷೇತ್ರಕ್ಕೆ ತುಸು ವೇಗ ದೊರಕಿಸಿಕೊಟ್ಟ ೨ ಜಿ ನಗರ ಪ್ರದೇಶಗಳಿಗೆ ಹೆಚ್ಚು ಸೀಮಿತವಾಗಿತ್ತು.

೩ ಜಿ ಬಂದ ನಂತರದಲ್ಲಿ

೨೦ನೇ ಶತಮಾನದ ವೇಳೆಗೆ ಬಂದ ೩ ಜಿ ತಂತ್ರಜ್ಞಾನ ದೊಡ್ಡ ಮಟ್ಟದ ಬದಲಾವಣೆಗೆ ನಾಂದಿ ಹಾಡಿತ್ತು. ಮೊಬೈಲ್‌ಗಳಲ್ಲಿಯೇ ವೆಬ್‌ಸೈಟ್ ವೀಕ್ಷಣೆ, ಕಲರ್ ಫೋಟೋಗಳ ರವಾನೆ, ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ೩ ಜಿ ತಂದುಕೊಟ್ಟಿತ್ತು. ಇದೇ ವೇಳೆಯಲ್ಲಿ ಸ್ಮಾರ್ಟ್ ಫೋನ್‌ಗಳ ಪ್ರವೇಶವಾಗಿ ಎಲ್ಲರ ಕೈಯಲ್ಲೂ ನಿಧಾನವಾಗಿ ಮೊಬೈಲ್‌ಗಳು ರಾರಾಜಿಸತೊಡಗಿದವು.

೪ ಜಿ ಆಗಮನದಿಂದ ಆದದ್ದು

ಕೇವಲ ಕರೆ ಮಾಡಲು, ಸಂದೇಶ ಕಳಿಸಲು, ಸರ್ಜ್ ಇಂಜಿನ್‌ಗಳಲ್ಲಿ ಪುಟ್ಟ ಪುಟ್ಟ ಮಾಹಿತಿಗಳನ್ನು ತಿಳಿಯಲಷ್ಟೇ ಬಳಕೆಯಾಗುತ್ತಿದ್ದ ಮೊಬೈಲ್ ಒಂದೇ ಏಟಿಗೆ ಬಹುಉಪಯೋಗಿ ಆಗಿದ್ದು ೪ಜಿ ಎಂಟ್ರಿಯ ಬಳಿಕವೇ. ಎಲ್‌ಟಿಇ ತಂತ್ರಜ್ಞಾನ ಎಂದು ಕರೆಯಲ್ಪಟ್ಟ ಇದರಿಂದ ವಿಡಿಯೋ ಕರೆಗಳು, ಲೈವ್ ಟಿವಿ ವೀಕ್ಷಣೆ, ವೇಗದ ಇಂಟರ್‌ನೆಟ್ ಎಲ್ಲವೂ ಇಲ್ಲಿ ಸಾಧ್ಯವಾಯ್ತು. ಇದೇ ವೇಳೆಗೆ ಸಾಮಾಜಿಕ ಮಾಧ್ಯಮಗಳ ಅಬ್ಬರ ಹೆಚ್ಚಿ ಭಾರತದಂತಹ ದೇಶದಲ್ಲಿ ದೊಡ್ಡ ಬದಲಾವಣೆಯೇ ಸಾಧ್ಯವಾಯಿತು.

೫ ಜಿ ಎಂಬ ಎಕ್ಸ್‌ಪ್ರೆಸ್

೪ ಜಿ ಸೇವೆಗಳನ್ನು ಆನಂದಿಸುತ್ತಿರುವ ನಮಗೆ ಇನ್ನೇನು ೫ ಜಿ ಬರುತ್ತದೆ ಎನ್ನುವುದೇ ದೊಡ್ಡ ಸಂಭ್ರಮ. ಈಗ ಒಂದು ಗಂಟೆಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ವಿಡಿಯೋವನ್ನು ಕ್ಷಣಾರ್ಧದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರೆ ಅಚ್ಚರಿಯಲ್ಲವೇ? ಅಲ್ಲದೇ ವಿಡಿಯೋ ಕಾಲ್, ಗೇಮ್, ಹೈ ರೆಸಲ್ಯೂಷನ್ ವಿಡಿಯೋಗಳ ಅನಿಯಂತ್ರಿತ ವೀಕ್ಷಣೆ ಸೇರಿ ವೇಗದ ಸೇವೆ ಲಭ್ಯವಾಗಲಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆಯ ವೇಗವನ್ನು ೫ ಜಿ ಹೆಚ್ಚಿಸಲಿದೆ.

ಪ್ರಮುಖ ಅಂಶಗಳು

* ದೇಶಾದ್ಯಂತ ೫ ಜಿ ಸೇವೆ ಲಭ್ಯವಾಗಲು ಬೇಕು ಇನ್ನೂ ಒಂದೆರಡು ವರ್ಷ

* ಶಿಕ್ಷಣ, ಆರೋಗ್ಯ, ಕೃಷಿ, ವಾಣಿಜ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಭಾರಿ ಬದಲಾವಣೆ ನಿರೀಕ್ಷೆ

* ನಿಮ್ಮ ಬಳಿ ಈಗ ಇರುವ ಮೊಬೈಲ್ ೫ ಜಿಗೆ ಸಹಕರಿಸದೇ ಇದ್ದರೆ ಹೊಸ ೫ ಜಿ ಮೊಬೈಲ್ ಕೊಳ್ಳಬೇಕು

* ೫ ಜಿಯಿಂದ ಕ್ಲೌಡ್ ಸಮರ್ಥ ಬಳಕೆ, ಮೊಬೈಲ್‌ಗಳ ಸಂಗ್ರಹ ಸಾಮರ್ಥ್ಯದ ಮೇಲೆ ಕಡಿಮೆ ಹೊರೆ

* ಗುಣಮಟ್ಟದ ಕರೆ, ವಿಡಿಯೋ ಕರೆ, ಹೆಚ್ಚು ಗಾತ್ರದ ಫೈಲ್‌ಗಳ ರವಾನೆ ಸಾಧ್ಯ

andolana

Recent Posts

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

2 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

2 hours ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

2 hours ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

2 hours ago

ಕೆರೆ ನೀರಿಗಾಗಿ ಎರಡು ಗ್ರಾಮಸ್ಥರ ತಿಕ್ಕಾಟ!

ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ  ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…

2 hours ago

ಅಪಾಯಕಾರಿ ರೈಲ್ವೆ ಅಂಡರ್‌ಪಾಸ್ ಫುಟ್‌ಪಾತ್

ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…

2 hours ago