Andolana originals

ಉತ್ತನಹಳ್ಳಿಯಲ್ಲೇ ಯುವ ದಸರಾ ಜೋಶ್

ಕೆ.ಬಿ.ರಮೇಶನಾಯಕ

ಸೆ.೨೩ರಿಂದ ೨೭ ರವರೆಗೆ ಐದು ದಿನಗಳ ಕಾಲ ಖ್ಯಾತನಾಮರ ಸಂಗೀತ ಕಾರ್ಯಕ್ರಮ 

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಲಕ್ಷಾಂತರ ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಮಾಡುವ ಯುವ ದಸರಾ ಕಾರ್ಯಕ್ರಮ ಈ ಬಾರಿಯೂ ರಿಂಗ್ ರಸ್ತೆಯಲ್ಲಿರುವ ಉತ್ತನಹಳ್ಳಿ ಸಮೀಪ ನಡೆಯಲಿದೆ. ಇದರಿಂದಾಗಿ ಹಲವು ದಿನ ಗಳಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆಯೇ ಅಥವಾ ಉತ್ತನಹಳ್ಳಿ ಗ್ರಾಮದ ಬಳಿ ನಡೆ ಯುವುದೇ ಎನ್ನುವ ಬಗ್ಗೆ ಉಂಟಾಗಿದ್ದ ಕುತೂಹಲ, ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

ಕಳೆದ ವರ್ಷ ಹೆಸರಾಂತ ಸಂಗೀತ ನಿರ್ದೇಶಕರಾದ ಇಳಯ ರಾಜ, ಎ.ಆರ್.ರೆಹಮಾನ್ಕಾರ್ಯಕ್ರಮ ನಡೆಸಿ ಕೊಟ್ಟಿದ್ದ ಜಾಗದಲ್ಲೇ ಈ ಬಾರಿ ಹಾಲಿವುಡ್, ಬಾಲಿವುಡ್ ಗಾಯಕರು ಮೋಡಿ ಮಾಡಲಿದ್ದು, ಕಲಾವಿದರ ದಿನಾಂಕ ನಿಗದಿಯಾಗಿದೆ. ಯುವ ದಸರಾ ಉಪ ಸಮಿತಿ ಪದಾಧಿಕಾರಿಗಳು ಈಗಾಗಲೇ ಕಲಾವಿದರ ಜೊತೆಗೆ ಮಾತುಕತೆ ನಡೆಸಿ ದಿನಾಂಕ ನಿಗದಿಪಡಿಸಿದ್ದು, ಶೀಘ್ರದಲ್ಲೇ ಅಂತಿಮ ಹಂತಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಐದು ದಿನಗಳ ಕಾಲ ಮೋಡಿ: ಸೆ.೨೩ರಿಂದ ೨೭ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಮೊದಲನೇ ದಿನವೇ ಅರ್ಜುನ್ ಜನ್ಯ ನೇತೃತ್ವದ ಸ್ಯಾಂಡಲ್‌ವುಡ್ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೆ.೨೪ರಂದು ಪ್ರೀತಂ ಚಕ್ರವರ್ತಿ, ಸೆ.೨೫ರಂದು ಜುಬಿನ್ ನೌಟಿಯಾ, ೨೬ರಂದು ದೇವಿಶ್ರೀ ಪ್ರಸಾದ್, ೨೭ರಂದು ಸುನಿಧಿ ಚೌಹಾಣ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಯಾಂಡಲ್‌ವೈಟ್ ನೈಟ್‌ನಲ್ಲಿ ಸಾಧುಕೋಕಿಲ ತಂಡ ಸೇರಿದಂತೆ ಅನೇಕ ತಂಡಗಳು ಕಾರ್ಯಕ್ರಮ ನಡೆಸಿದ್ದು, ಅರ್ಜುನ್ ಜನ್ಯ ಅವರಿಗೆ ಮೊದಲನೆಯದಾಗಿದೆ ಎಂದು ಹೇಳಲಾಗಿದೆ.

ಸಿದ್ಧತಾ ಕಾರ್ಯ ಶೀಘ್ರ ಆರಂಭ: ಉತ್ತನಹಳ್ಳಿ ಸಮೀಪದ ದೇವಲಾಪುರ ಗ್ರಾಮದ ಮಾರ್ಗದಲ್ಲಿ ನೂರು ಎಕರೆ ವಿಶಾಲ ಪ್ರದೇಶದಲ್ಲಿವೇದಿಕೆ ನಿರ್ಮಾಣ ಮಾಡುವ ಕಾರ್ಯ ಶೀಘ್ರ ಶುರುವಾಗಲಿದೆ. ಐದು ಸಾವಿರ ಮಂದಿ ಪ್ರಾಯೋಜಕತ್ವದವರು, ಐದು ಸಾವಿರ ಅಧಿಕಾರಿಗಳ ವರ್ಗ, ಜನಪ್ರತಿನಿಧಿಗಳು, ಪಾಸ್ ಹೊಂದಿರುವವರು, ೩೦ರಿಂದ ೫೦ ಸಾವಿರ ಮಂದಿ ಕುಳಿತು ವೀಕ್ಷಣೆ ಮಾಡುವ ರೀತಿಯಲ್ಲಿ ಶಾಮಿಯಾನ ಹಾಕಲಾಗುತ್ತದೆ ಎಂದು ಅಧಿಕಾರಿಗಳ ಮೂಲಗಳು ಖಚಿತಪಡಿಸಿವೆ. ಕಳೆದ ಬಾರಿ ಯುವ ದಸರೆಗೆ ಹದಿನೈದು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಈ ಬಾರಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

” ಈ ಬಾರಿಯೂ ಯುವ ದಸರೆಯು ಉತ್ತನಹಳ್ಳಿ ಗ್ರಾಮದ ಸಮೀಪದಲ್ಲೇ ನಡೆಯಲಿದೆ. ಐದು ದಿನಗಳ ಕಾಲ ಹೆಸರಾಂತ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶೀಘ್ರದಲ್ಲೇ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಕೆಲವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.”

ಕೆ.ಆರ್.ರಕ್ಷಿತ್, ಆಯುಕ್ತರು, ಎಂಡಿಎ

ಪ್ರಾಯೋಜಕತ್ವಕ್ಕೆ ಮೊರೆ: ನಾಡಹಬ್ಬಕ್ಕೆ ರಾಜ್ಯಸರ್ಕಾರ ಉದಾರವಾಗಿ ಅನುದಾನ ನೀಡಿದರೂ ಯುವ ದಸರಾ ಉಪ ಸಮಿತಿಯು ಪ್ರಾಯೋಜಕತ್ವದ ಮೂಲಕ ಒಂದಿಷ್ಟು ಹಣ ಸಂಗ್ರಹಿಸಲು ಪ್ಲಾನ್ ಮಾಡಿದೆ. ದೊಡ್ಡ ದೊಡ್ಡಕಂಪೆನಿಗಳು, ಕಾರ್ಖಾನೆಗಳು, ಬಿಲ್ಡರ‍್ಸ್ ಸಂಸ್ಥೆಗಳು ಸೇರಿದಂತೆ ಇನ್ನಿತರ ಅಂದರೆ ೫ ರಿಂದ ೨೫ ಲಕ್ಷ ರೂ. ತನಕ ಪ್ರಾಯೋಜಕತ್ವ ನೀಡುವಂತಹ ಸಂಸ್ಥೆಗಳ ಮೊರೆ  ಹೋಗಲಾಗಿದೆ.

ಆಂದೋಲನ ಡೆಸ್ಕ್

Recent Posts

ನಾಳೆ ಶ್ರೀ ಅಯ್ಯಪ್ಪ ಕ್ಷೇತ್ರದ ಮುಖಮಂಟಪ ಲೋಕಾರ್ಪಣೆ

ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…

48 mins ago

‘ದೇಸಿ ಬೀಜಗಳನ್ನು ಉಳಿಸಿದರೆ ವಿಷಮುಕ್ತ ಆಹಾರ ನೀಡಲು ಸಾಧ್ಯ’

ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…

53 mins ago

ಕ್ರಿಸ್‌ಮಸ್ ಹಬ್ಬಕ್ಕೆ ಅರಮನೆ ನಗರಿ ಸಜ್ಜು

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…

58 mins ago

ಡಿಎಚ್‌ಒ ವರ್ಗಾವಣೆಯಲ್ಲಿ ಎಡವಟ್ಟು

ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…

1 hour ago

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

13 hours ago