ಪ್ರಶಾಂತ್ ಎನ್. ಮಲ್ಲಿಕ್
‘ಆಂದೋಲನ’ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಗರದ ಜನತೆ
ಮೈಸೂರು: ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್, ಗಾಂಜಾ ಬಳಕೆಯಿಂದ ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವಸಮೂಹ ಇಂದು ನಶೆಯ ಚಟಕ್ಕೆ ಬಲಿಯಾಗಿತ್ತಿದ್ದಾರೆ ಎಂದು ನಗರದ ಜನತೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಶಾಂತಿನಗರ, ರಾಜೀವ್‌ನಗರ ಬಡಾವಣೆಗಳಲ್ಲಿ ‘ಆಂದೋಲನ’ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅನೇಕರು, ಶಾಲಾ-ಕಾಲೇಜುಗಳ ಯುವಕರು ನಶೆಯ ಮೋಹಕ್ಕೆ ಒಳಗಾಗುತ್ತಿದ್ದು, ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದಿದ್ದಾರೆ.
‘ಮನೆಯಿಂದ ಹೊರ ಹೋದ ಮಕ್ಕಳ ಮೇಲೆ ನಿಗಾ ಇಡಬೇಕು’: ಈ ಬಗ್ಗೆ ಪ್ರತಿಕ್ರಿಯಿಸಿದ ಸೈಯದ್ ಇಸಾಕ್, ಇಂದಿನ ಯುವಕರು ನಶೆಯಲ್ಲಿ ಮುಳುಗಿ ಹೋಗಿದ್ದಾರೆ. ೧೪, ೧೫ ಹಾಗೂ ೧೭ ವರ್ಷದ ಯುವಕರೇ ಹೆಚ್ಚು ಗಾಂಜಾ, ಡ್ರಗ್ಸ್ ಎಂಬ ಅಪಾಯಕಾರಿ ನಶೆಗೆ ಒಳಗಾಗಿದ್ದಾರೆ. ಇದು ಆತಂಕದ ವಿಷಯ ಎಂದರು.
ಈ ಡ್ರಗ್ಸ್ ಹಾವಳಿ ತಡೆಗಟ್ಟಲು ಪೊಲೀಸ್ ಇಲಾಖೆ ತನ್ನದೇ ಆದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಆದರೂ, ಈ ನಡುವೆ ಇಷ್ಟೊಂದು ಪ್ರಮಾಣದ ಡ್ರಗ್ಸ್ ಎಲ್ಲಿಂದ ದೊರೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಇಂದಿನ ಯುವಕರು ಭವಿಷ್ಯದಲ್ಲಿ ಉತ್ತಮವಾಗಿ ಜೀವನ ನಡೆಸಬೇಕೆಂದರೆ ಡ್ರಗ್ಸ್, ಗಾಂಜಾಗಳಂತಹ ಕೆಟ್ಟ ನಶೆಗಳಿಂದ ಹೊರ ಬರಬೇಕು. ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಿ ನಶೆ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಮನೆಯಿಂದ ಹೊರಗಡೆ ಹೋದ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಚಿಂತೆ ತಂದೆ ತಾಯಿಗೂ ಇರಲಿದೆ. ಆದರೂ, ಈ ಬಗ್ಗೆ ಹೆಚ್ಚಿನ ಗಮನ ಹರಿಸಿ, ಅವರನ್ನು ಹಿಂಬಾಲಿಸಬೇಕು. ಮಕ್ಕಳ ಇಂತಹ ಕೆಟ್ಟ ಕೆಲಸಗಳು ಪೋಷಕರ ಗಮನಕ್ಕೆ ಬಂದಾಗ ಆರಂಭದಲ್ಲೇ ಎಚ್ಚರಿಸಿ ಸೂಕ್ತ ಮಾರ್ಗದರ್ಶನ ನೀಡಿ, ನಶೆಯಿಂದ ಹೊರ ಬರುವಂತೆ ಕೆಲಸ ಮಾಡಬೇಕು. ಸರ್ಕಾರ ಡ್ರಗ್ಸ್, ಗಾಂಜಾ ಮಾರಾಟದ ಜಾಲ ಪತ್ತೆ ಹಚ್ಚಿ ಯುವಕರು ದುಷ್ಚಟಕ್ಕೆ ಬಲಿಯಾಗುವುದನ್ನು ತಡೆಯಲು ಕ್ರಮವಹಿಸಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
‘ತಾಯಿ-ತಂದೆಯವರ ಕಷ್ಟ ಅರ್ಥಮಾಡಿಕೊಳ್ಳಬೇಕು’: ಮತ್ತೋರ್ವ ಯುವಕ ಸಯ್ಯದ್ ಜಮೀರ್ ಅಹಮದ್ ಮಾತನಾಡಿ, ಡ್ರಗ್ಸ್, ಗಾಂಜಾ ಜಾಲದ ಹಿಂದೆ ದೊಡ್ಡವರ ಕೈವಾಡ ಇದೆಯಾ ಎಂಬುದು ಗೊತ್ತಿಲ್ಲ. ಪೊಲೀಸರು ಸಾಧ್ಯವಾದಷ್ಟು ಕಾರ್ಯಾಚರಣೆ ನಡೆಸಿ ತಡೆಗಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗಿ ಕಾಲೇಜುಗಳಲ್ಲಿ ಕಂಡು ಬರುತ್ತಿವೆ. ಈ ವ್ಯಸನ ಕೇವಲ ಮೈಸೂರು ಯುವಕರಲ್ಲಿ ಮಾತ್ರವಲ್ಲ, ರಾಜ್ಯದ ಇತರ ಕಡೆಗಳಲ್ಲೂ ಹೆಚ್ಚಾಗಿದೆ. ಪೋಷಕರುಗಳು ಆಟೋ ಓಡಿಸಿ, ಕೂಲಿ ಮಾಡಿ, ಮತ್ಯಾವುದೋ ಕೆಲಸ ಮಾಡಿ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಾರೆ. ಯುವಕರು ತಮ್ಮ ತಾಯಿ-ತಂದೆಯವರ ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು. ಎಷ್ಟೋ ತಾಯಂದಿರು ಸಂಘಕ್ಕೆ ಸಾಲ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೂ, ತಾವು ಊಟ ಮಾಡದಿದ್ದರೂ, ಮಕ್ಕಳ ಶಾಲಾ ಕಾಲೇಜು ಶುಲ್ಕ ಪಾವತಿಸಿ ಭವಿಷ್ಯದ ಚಿಂತನೆ ಮಾಡುತ್ತಾರೆ. ಆದರೆ, ಯುವಕರು ಇದೆಲ್ಲವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು’: ಗಾರೆ ಕೆಲಸದ ಮೇಸ್ತ್ರಿ ಅಬ್ದುಲ್ ವಜೀದ್ ಮಾತನಾಡಿ, ಇಂದಿನ ಯುವಕರು ವಯಸ್ಸಿಗೂ ಮೀರಿ ಅತೀ ಚಿಕ್ಕ ವಯಸ್ಸಿನಲ್ಲೆ ಡ್ರಗ್ಸ್ ಎಂಬ ಮಹಾಭೂತಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು ಅಂದರೆಮನೆಗಳಲ್ಲಿ ಪೋಷಕರು ತಮ್ಮ ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಯಾವ ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಬೇಕು. ಸಮಾಜದಲ್ಲಿ ಪೊಲೀಸ್ ಎಂದರೆ ಭಯ ಇರಬೇಕು. ಯುವಕರು ಪಾರ್ಕ್‌ಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಗುಂಪಾಗಿ ಕುಳಿತು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಸಹವಾಸ ದೋಷದಿಂದ ಒಳ್ಳೆಯ ಹುಡುಗರೂ ಸಹ ನಶೆಯ ಮೋಹಕ್ಕೆದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದರು. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ತಮ್ಮ ಆರೋಗ್ಯ ಹಾಳು ಮಾಡಿಕೊಂಡರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಡ್ರಗ್ಸ್ ಹಾಗೂ ಗಾಂಜಾ ವ್ಯಸನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…