Andolana originals

ಮೈಸೂರು ಸಂಸ್ಥಾನಕ್ಕೂ ಬಾಬುರಾಯನ ಕೊಪ್ಪಲಿಗೂ ಸಂಬಂಧವೇನು?

ಧರ್ಮೇಂದ್ರ ಕುಮಾರ್‌ ಮೈಸೂರು

ಮೈಸೂರು ಸಂಸ್ಥಾನಕ್ಕೂ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮಕ್ಕೂ ಅವಿನಾಭಾವ ಸಂಬಂಧ ಇದೆ. ಆ ಸಂಬಂಧದ ಮೂಲವನ್ನು ಹುಡುಕುತ್ತಾ ಹೋದರೆ ಟಿಪ್ಪು ಸುಲ್ತಾನ್ ಆಡಳಿತದ ಕಾಲಕ್ಕೆ ಕರೆದೊಯ್ಯುತ್ತದೆ.

ಸೈನಿಕನಾಗಿದ್ದು, ದಿವಾನ ಹುದ್ದೆಗೇರಿದವರೊಬ್ಬರ ಹೆಸರು ಮುಂಚೂಣಿಗೆ ಬರುತ್ತದೆ. ಮೈಸೂರು ಸಂಸ್ಥಾನ ಅನೇಕ ಶ್ರೇಷ್ಠ ದಿವಾನರುಗಳನ್ನು ಕಂಡಿದೆ. ಅದರಲ್ಲಿ ಕೆಲವರು ಅಗ್ರಗಣ್ಯ ಸ್ಥಾನ ಪಡೆದರೆ, ಇನ್ನೂ ಕೆಲವರು ಶ್ರೇಷ್ಠ ಆಡಳಿತ ನೀಡಿದ್ದರು. ಅಂತಹವರ ಪೈಕಿ ಬಾಬು ರಾವ್ ಕೂಡ ಒಬ್ಬರು. ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಬಾಬುರಾವ್, ಶ್ರೀರಂಗಪಟ್ಟಣ ಚರಿತ್ರೆಯಲ್ಲಿ ಅಜರಾಮರ ಆಗಿದ್ದಾರೆ.

ಮೈಸೂರು-ಬೆಂಗಳೂರು ಹಳೇ ರಸ್ತೆಯಲ್ಲಿ ಬಾಬುರಾಯನ ಕೊಪ್ಪಲು ಎಂಬ ಗ್ರಾಮವಿದೆ. ಗ್ರಾಮಕ್ಕೆ ಶತಮಾನಗಳ ಇತಿಹಾಸವಿದ್ದು, ಬಾಬು ರಾವ್ ಅವರ ನೆನಪಿನಾರ್ಥ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಟಿಪ್ಪು ಖಾಸಾ ಪಡೆಯ ಸೈನಿಕ ಈ ಬಾಬುರಾವ್: ಬಾಬು ರಾವ್ ಅವರು ಟಿಪ್ಪು ಸುಲ್ತಾನ್ ಅವರ ಖಾಸಾ ಪಡೆಯಲ್ಲಿದ್ದ ೧೦ ಸಾವಿರ ಮಂದಿ ಪೈಕಿ ಪ್ರಮುಖರಲ್ಲಿ ಒಬ್ಬರಾಗಿದ್ದರು. ಬಾಬು ರಾವ್ ದೃಢಕಾಯ ಹಾಗೂ ಅತ್ಯಂತ ಶಕ್ತಿಶಾಲಿ ಸೈನಿಕ ಆಗಿದ್ದರು. ಆಂಗ್ಲೋ-ಮೈಸೂರು ಯುದ್ಧ ನಡೆದಾಗ ಕರ್ನಲ್ ಬೈಲಿ ಡಂಜಿಯನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಬಂಧಿಸಿ ಕರೆತಂದ ಸೈನಿಕ ತುಕಡಿಯಲ್ಲಿ ಬಾಬು ರಾವ್ ಕೂಡ ಒಬ್ಬರಾಗಿದ್ದರು. ಬಾಬು ರಾವ್ ಅವರು ಸೇನೆಯಷ್ಟೆ ಅಲ್ಲದೆ, ಆಡಳಿತಾತ್ಮಕ ವಿಚಾರದಲ್ಲೂ ಪರಿಣತರಾಗಿದ್ದರು. ಹಾಗಾಗಿ ಅವರನ್ನು ಮೈಸೂರು ಸಂಸ್ಥಾನದ ರಾಜರಾಗಿದ್ದ ಹೈದರ್ ಅಲಿ ಅವರು ದಿವಾನ್ಸ್ ಕಚೇರಿಗೆ ನೇಮಕ ಮಾಡಿದ್ದರು. ಆಗಿನಿಂದ ಬಾಬು ರಾವ್ ಮೈಸೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಗಮನಾರ್ಹ ಪಾತ್ರವಹಿಸಿದ್ದರು.

ನಾಲ್ಕು ಬಾರಿ ದಿವಾನರಾಗಿದ್ದ ಬಾಬುರಾವ್: ಆಡಳಿತದ ಚಾತುರ್ಯವನ್ನು ಅರಗಿಸಿಕೊಂಡಿದ್ದ ಬಾಬುರಾವ್, ೧೭೯೯ ರಿಂದ ೧೮೧೧ ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ದಿವಾನ್ ಪೂರ್ಣಯ್ಯರನ್ನು ಸದಾ ವಿರೋಽಸುತ್ತಿದ್ದರು. ದಿವಾನ್ ಪೂರ್ಣಯ್ಯ ಅವರ ಆಡಳಿತ ವಿಚಾರ ಹಾಗೂ ನಿರ್ಧಾರಗಳನ್ನೇ ಪ್ರಶ್ನಿಸುತ್ತಿದ್ದರು. ಮೈಸೂರು ಸಂಸ್ಥಾನದ ದಿವಾನ ಆಗಬೇಕು ಎಂದು ಬಾಬು ರಾವ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪೂರ್ಣಯ್ಯ ಅವರು ಇರುವವರೆಗೆ ಅದು ಸಾಧ್ಯವಾಗಲಿಲ್ಲ.

 

andolana

Recent Posts

ಮೈಸೂರು | ಗುಂಡೇಟಿನಿಂದ ಚಿರತೆ ಸಾವು ; ತನಿಖೆಗೆ ಈಶ್ವರ ಖಂಡ್ರೆ ಆದೇಶ

ಮೈಸೂರು : ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ 2 ಕಿ.ಮೀ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ…

7 hours ago

ಶೀಘ್ರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ : ಡಿಜಿಲಾಕರ್‌ನಲ್ಲೂ ಲಭ್ಯ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025-2026ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ…

8 hours ago

ಏ.7ರಿಂದ ಮೂರು ದಿನ ಮಳೆ, ಮೈಸೂರಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು : ಕರ್ನಾಟಕದಲ್ಲಿ ಪೂರ್ವ ಮುಂಗಾರು ಏಪ್ರಿಲ್ 2 ನೇ ವಾರದಿಂದ ಚುರುಕಾಗುತ್ತಿದ್ದು, ಏಪ್ರಿಲ್ 7ರಿಂದ ಮೂರು ದಿನಗಳು ರಾಜ್ಯದಲ್ಲಿ…

8 hours ago

ಟ್ರಂಪ್ ಅಂತಿಮ ಗಡುವು ; ಪ್ರತಿದಾಳಿ ಎಚ್ಚರಿಕೆ ನೀಡಿದ ಇರಾನ್‌

ವಾಷಿಂಗ್ಟನ್ : ಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ, ಇಲ್ಲದಿದ್ದರೆ ಮಂಗಳವಾರ ರಾತ್ರಿ 8 ಗಂಟೆಯ ನಂತರ ಮತ್ತಷ್ಟು ಮಾರಕ ದಾಳಿ…

9 hours ago

ಕಸ್ಟಡಿ ಸಾವು | 9 ಮಂದಿ ಪೊಲೀಸರಿಗೆ ಮರಣದಂಡನೆ ; ಮಧುರೈ ಕೋರ್ಟ್‌ ಮಹತ್ವದ ತೀರ್ಪು

ಮದುರೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಾಂತನ್‌ಕುಲಂ ಪೊಲೀಸ್ ಠಾಣೆ ಕಸ್ಟಡಿಯಿಂದಲೇ ತಂದೆ,ಮಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ…

9 hours ago

ಇಂಡಿಯಾ ಸ್ಕಿಲ್ಸ್ 2025-26 ರಾಷ್ಟ್ರೀಯ ಸ್ಪರ್ಧೆ : ಕರ್ನಾಟಕಕ್ಕೆ 3ನೇ ಸ್ಥಾನ

ಬೆಂಗಳೂರು : ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ಈಗ ಇಡೀ ದೇಶದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಇತ್ತೀಚೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ…

10 hours ago