Andolana originals

ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖ

ಬಿಸಿಲ ಝಳದಿಂದ ಕುಸಿಯುತ್ತಿರುವ ಅಂತರ್ಜಲ ಮಟ್ಟ ; ಮೇ ತಿಂಗಳಲ್ಲಿ ನೀರಿನ ಕೊರತೆ ಸಾಧ್ಯತೆ

• ಕೆ.ಬಿ.ಶಂಶುದ್ದೀನ್
ಕುಶಾಲನಗರ : ಈ ಬಾರಿಯ ಬಿರು ಬೇಸಿಗೆ ಜನರ ನೆತ್ತಿ ಸುಡುತ್ತಿದೆ. ಬಿಸಿಲು ಮತ್ತು ಸೆಕೆಯಿಂದಾಗಿ ಜನಸಾಮಾನ್ಯರು ಬಸವಳಿದಿದ್ದಾರೆ. ಬಿಸಿಲ ಝಳದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದೆ. ಸದ್ಯದ ಮಟ್ಟಿಗೆ ನೀರಿನ ಸಮಸ್ಯೆ ಇಲ್ಲವಾದರೂ, ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಬಿಸಿಲ ಧಗೆಗೆ ಕಾವೇರಿ ನದಿಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದೆ. ನದಿ ತಟದಲ್ಲಿರುವ ಕುಶಾಲನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿನ ಸರಬರಾಜು ಮೂಲಕ್ಕೆ ಬಹುತೇಕ ಕಾವೇರಿ ನದಿಯನ್ನೇ ಅವಲಂಬಿಸಿವೆ. ಇದರೊಂದಿಗೆ ಕೊಳವೆಬಾವಿ ವ್ಯವಸ್ಥೆಯ ಮೂಲಕವೂ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದರೂ ನೀರಿನ ಅಭಾವ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯ ಮುಳ್ಳು ಸೋಗೆ ಗ್ರಾಮ ಭಾಗಶಃ ಒಳಗೊಂಡಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಮೂರು ದಿನಗಳಿಗೊಮ್ಮೆ 28 ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿದೆ. ಬೈಚನಹಳ್ಳಿ ಬಳಿ ಜಲಾಗಾರದ ಮೂಲಕ ನದಿಯಿಂದ ನೀರು ಪಂಪ್ ಮಾಡಿ ಶುದ್ದೀಕರಿಸಿ ವಿತರಿಸುವ ವ್ಯವಸ್ಥೆಯಿದೆ.

ಮಾರ್ಚ್ ತಿಂಗಳಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದ್ದಂತೆ ಮುನ್ನೆಚ್ಚರಿಕೆಯಾಗಿ ಪಂಪ್ ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಹಾಕಿ ನೀರು ಶೇಖರಣೆಗೆ ಕ್ರಮವಹಿಸಲಾಗಿತ್ತು. ತದನಂತರ ಮಳೆಯಾದ ಹಿನ್ನೆಲೆಯಲ್ಲಿ ಆತಂಕ ದೂರವಾಗಿದೆ. ಆದರೂ ಬಿರು ಬಿಸಿಲಿನ ವಾತಾವರಣ ಹೀಗೇ ಮುಂದು ವರಿದರೆ ಸಮಸ್ಯೆ ಎದುರಾಗಲಿದೆ.

ಕಾವೇರಿ ಮತ್ತು ಹಾರಂಗಿ ನದಿ ಸಂಗಮವಾಗುವ ಕೂಡಿಗೆ ವ್ಯಾಪ್ತಿಯಿಂದ ಕುಶಾಲನಗರಕ್ಕೆ 24*7 ಕುಡಿಯುವ ನೀರು ಪೂರೈಸುವ 40 ಕೋಟಿ ರೂ. ವೆಚ್ಚದ ಅಮೃತ್ 2.0 ಯೋಜನೆ ಕಾಮಗಾರಿ ಶೇ.70 ಮಾತ್ರ ಪೂರ್ಣಗೊಂಡಿದೆ. ಮೇ 2024ರಲ್ಲಿ ಆರಂಭವಾದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬೇಕಾಗುವುದರಿಂದ ಈ ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ದೊರೆ ಯುವುದಿಲ್ಲ.

ಕೂಡಿಗೆ ಗ್ರಾಮದ ಬಳಿ ಕಾವೇರಿ ನದಿ ಹಾಗೂ ಹಾರಂಗಿ ನದಿ ಕೂಡುವ ಜಾಗದಲ್ಲಿ ಕುಶಾಲನಗರ ಪಟ್ಟಣ ಹಾಗೂ ಪಿರಿಯಾಪಟ್ಟಣದ ನೀರಿನ ಬೇಡಿಕೆಗೆ ಅನುಗುಣವಾಗಿ ಕಾಮೆನ್ ಜಾಕ್ವೆಲ್ ಕಂ ಪಂಪ್ ಹೌಸ್ ನಿರ್ಮಾಣದ ಮೂಲಕ ಪಟ್ಟಣದ ಮುಂದಿನ 30 ವರ್ಷಗಳ ಸುಮಾರು 65,500 ಜನಸಂಖ್ಯೆಗೆ ಅವಶ್ಯವಿರುವ 11.60 ಎಂ.ಎಲ್.ಡಿ ನೀರಿನ ಬೇಡಿಕೆಗೆ ಅನು ಗುಣವಾಗಿ ಯೋಜನೆಯನ್ನು ವಿನ್ಯಾಸ
ಮಾಡಲಾಗಿದೆ.

ಕಾಮಗಾರಿಯಡಿ ದಿಂಡಗಾಡು ಗ್ರಾಮದ ಬಳಿ ನೂತನ ಮೂಲ ಸ್ಥಾವರ ನಿರ್ಮಿಸಿ ಜಾಕ್ವೆಲ್ ಕಂ ಪಂಪ್ ಹೌಸ್‌ನಲ್ಲಿ 2 150 ಎಚ್.ಪಿ. ಸಾಮರ್ಥ್ಯದ ಪಂಪಿಂಗ್ ಮೆಷಿನರಿ ಅಳವಡಿಕೆ, ಜಾಕ್ವೆಲ್ ಕಂ ಪಂಪ್ ಹೌಸ್‌ನಿಂದ ನೀರು ಶುದ್ದೀಕರಣ ಘಟಕದವರೆಗೆ ಸುಮಾರು 7.0 ಕಿ.ಮೀ ಉದ್ದಕ್ಕೆ 406 ಮಿ.ಮೀ ವ್ಯಾಸದ ಎಂ. ಎಸ್ ಕೊಳವೆ ಸಾಲು ಅಳವಡಿಕೆ, 5.5 ಎಂ. ಎಲ್.ಡಿ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ ನಿರ್ಮಾಣ, 10.0 ಲಕ್ಷ ಲೀಟ‌ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ, ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 20.0 ಕಿ.ಮೀ ಉದ್ದದ ಎಚ್‌ಡಿಪಿಇ ವಿತರಣಾ ಕೊಳವೆ ಮಾರ್ಗವನ್ನು ಅಳವಡಿಸಿ 2,102 ಸಂಖ್ಯೆಯ ಮನೆಗಳಿಗೆ ನಳ ಸಂಪರ್ಕವನ್ನು ಒದಗಿಸುವ ಯೋಜನೆ ಇದಾಗಿದೆ. ಹೆಚ್ಚುವರಿ ಪ್ರಸ್ತಾವನೆಗೆ ಅನುನೋದನೆ ದೊರೆತ ಬಳಿಕ ಮತ್ತಷ್ಟು ವಿಸ್ತಾರಗೊಳಿಸುವ ಯೋಜನೆ ಒಳಗೊಂಡಿದೆ.

 

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

3 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

3 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

3 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

3 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

3 hours ago

ʼಮಣ್ಣಿನ ಗಣಪನಿಗೆ ಮನ್ನಣೆಗೆ ಸಿಗಲಿʼ

ಭಾರತಿ ಸಜ್ಜನ್‌ ಮೈಸೂರು : ಜಾಗತಿಕ ತಾಪಮಾನ ಏರುಗತಿಯ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಡೆ ಸಿದ್ಧತೆ ನಡೆದಿದೆ.…

4 hours ago