Andolana originals

ನೀರಿನ ಕರ ಬಿಲ್: ಕೋಟಿಗಟ್ಟಲೇ ಹಣ ಗುಳುಂ

ಎಚ್.ಎಸ್.ದಿನೇಶ್‌ ಕುಮಾರ್‌ 

ಮೈಸೂರು ಮಹಾನಗರಪಾಲಿಕೆ: ಕೆಲ ವಾಟರ್ ಇನ್‌ಸ್ಪೆಕರ್, ಸಿಬ್ಬಂದಿ ಕರಾಮತ್ತು

ತಪ್ಪಿತಸ್ಥರ ವಿರುದ ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿರುವ ನಗರಪಾಲಿಕೆ ಆಯುಕ್ತರು

ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಅವ್ಯವಹಾರ

ಕಟ್ಟಡಗಳಲ್ಲಿ ನೀರು ಸಂಪರ್ಕ ಪಡೆದವರಿಗೆ ನಕಲಿ ಬಿಲ್ ಕೊಟ್ಟು ವಂಚನೆ

ಸುಮಾರು ಒಂದು ವರ್ಷದಿಂದಲೂ ನಡೆಯುತ್ತಿರುವ ಮೋಸ

ಆಪರೇಟರ್‌ಗಳು ಸಾಥ್ ಈ ವಂಚನೆಯ ಪ್ರಕರಣದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಆಪರೇಟರ್‌ಗಳು ಸಾಥ್ ನೀಡಿದ್ದಾರೆ. ವಾಟರ್ ಇನ್ ಸ್ಪೆಕ್ಟರ್‌ಗಳು ಹೇಳಿದಂತೆ ಮಾಡಿದ ತಪ್ಪಿನಿಂದ ಅವರೀಗ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿ ಇದ್ದಾರೆ.

ಮೈಸೂರು: ಇದು ‘ಬೇಲಿಯೇ ಎದ್ದು ಹೊಲ ಮೇಯ್ದ’ ಕಥೆ. ಒಂದೆಡೆ ಕೋಟ್ಯಂತರ ರೂ. ನೀರಿನ ತೆರಿಗೆ ಬಾಕಿ ಇದೆ ಎಂದು ನಗರಪಾಲಿಕೆ ಅಧಿಕಾರಿಗಳು ಬೊಬ್ಬಿಡುತ್ತಿದ್ದರೆ, ಮತ್ತೊಂದೆಡೆ ಕೆಲ ವಾಟರ್ ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿಯೇ ನಕಲಿ ಬಿಲ್ ನೀಡಿ ೨ ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಗುಳುಂ ಮಾಡಿದ್ದಾರೆ.

ಇದು ನಗರಪಾಲಿಕೆ ಅಧೀನದಲ್ಲಿರುವ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಕರ್ಮಕಾಂಡ. ಅಲ್ಲಿನ ವಾಟರ್ ಇನ್‌ಸ್ಪೆಕ್ಟರ್ ಹಾಗೂ ನೀರಿನ ಬಿಲ್ ತಯಾರಿಸಿ ನೀಡುವ ಡಾಟಾ ಆಪರೇಟರ್‌ಗಳು ಸೇರಿ ಮಾಡಿರುವ ವಂಚನೆ. ಸ್ವತಃ ನಗರಪಾಲಿಕೆಯ ಆಯುಕ್ತರು ಈ ಅಕ್ರಮವನ್ನು ಒಪ್ಪಿಕೊಂಡಿದ್ದು, ಆದಷ್ಟು ಶೀಘ್ರವಾಗಿ ತಪ್ಪಿತಸ್ಥರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಪ್ಪಿತಸ್ಥರನ್ನು ಅಮಾನತ್ತುಗೊಳಿಸುವ ಪ್ರಕ್ರಿಯೆಯಲ್ಲೂ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.

ಅಕ್ರಮವಾಗಿ ನೀರಿನ ಸಂಪರ್ಕ ಪಡೆಯುವವರಿಗೆ ದಂಡ ವಿಧಿಸುವುದರ ಜೊತೆಗೆ ಕಾಲಕಾಲಕ್ಕೆ ನೀರಿನ ಬಿಲ್ ಪಾವತಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಽಕಾರಿಗಳೇ ವಂಚನೆ ಎಸಗಿರು ವುದು ಆಶ್ಚರ್ಯ ಹುಟ್ಟಿಸುತ್ತದೆ.

ವಂಚನೆ ಹೇಗೆ?: ನಗರಪಾಲಿಕೆ ವ್ಯಾಪ್ತಿಯ ಯಾವುದೇ ಬಡಾವಣೆಗಳಲ್ಲಿ ವಾಣಿಜ್ಯ ಕಟ್ಟಡ ಅಥವಾ ಮನೆಗಳನ್ನು ನಿರ್ಮಿಸಬೇಕಾದಲ್ಲಿ ನಗರಪಾಲಿಕೆಗೆ ಹಣ ಪಾವತಿಸಿ ತಾತ್ಕಾಲಿಕ ಸಂಪರ್ಕ ಪಡೆದುಕೊಳ್ಳ ಬೇಕಾಗುತ್ತದೆ.

ಆದರೆ, ಕೆಲವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ನೀರಿನ ಸಂಪರ್ಕವನ್ನು ಪಡೆದು ನೀರನ್ನು ಉಪ ಯೋಗಿಸಿಕೊಳ್ಳುವುದು ಆಗಾಗ್ಗೆ ನಡೆಯುತ್ತಿರುತ್ತದೆ. ಇಂತಹ ಕಟ್ಟಡಗಳನ್ನೇ ಗುರಿಯಾಗಿಟ್ಟುಕೊಳ್ಳುವ ನೀರು ಸರಬರಾಜು ಕೇಂದ್ರದ ಸಿಬ್ಬಂದಿ ಕಟ್ಟಡದ ಮಾಲೀಕರನ್ನು ಸಂಪರ್ಕಿಸಿ, ನೀವು ದಂಡ ಸಹಿತ ನೀರಿನ ಬಿಲ್ ಪಾವತಿಸಬೇಕು ಎಂದು ನೋಟಿಸ್ ನೀಡುತ್ತಿದ್ದರು. ನಂತರ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ ಕೆಲ ವಾಟರ್ ಇನ್ಸ್ಪೆಕ್ಟರ್‌ಗಳು ಅವರಿಗೆ ನೀಡುತ್ತಿದ್ದುದು ಮಾತ್ರ ನಕಲಿ ಬಿಲ್!

ಈ ವಂಚನೆ ಸುಮಾರು ಒಂದು ವರ್ಷದಿಂದಲೂ ನಡೆದುಕೊಂಡು ಬಂದಿದೆ. ಕಳೆದ ತಿಂಗಳು ಕಟ್ಟಡದ ಮಾಲೀಕರೊಬ್ಬರಿಗೆ ಮಾಸಿಕ ನೀರಿನ ಬಿಲ್ ಬಂದಿದೆ. ಜೊತೆಗೆ ಬಾಕಿ ಹಣವೆಂದು ೫೫ ಸಾವಿರ ರೂ. ಬಂದಿದೆ. ಇದರಿಂದ ಶಾಕ್‌ಗೆ ಒಳಗಾದ ಅವರು ಬಿಲ್ ಸಮೇತ ನೀರು ಸರಬರಾಜು ಕೇಂದ್ರಕ್ಕೆ ಬಂದಿದ್ದಾರೆ. ನಾನು ಈ ಹಿಂದೆಯೇ ಹಣ ಪಾವತಿಸಿದ್ದರೂ ಬಿಲ್ ಬಂದಿದೆ ಎಂದು ದೂರಿದ್ದಾರೆ. ಈ ಸಂದರ್ಭದಲ್ಲಿ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಮರುಪಾವತಿ: ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ನಗರಪಾಲಿಕೆ ಅಧಿಕಾರಿಗಳು ಸಂಬಂದಪಟ್ಟ ವಾಟರ್ ಇನ್‌ಸ್ಪೆಕ್ಟರ್‌ಗಳಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ ನೀಡಿದ್ದಾರೆ.

ಇದರಿಂದ ಆತಂಕಕ್ಕೊಳಗಾದ ವಾಟರ್ ಇನ್‌ಸ್ಪೆಕ್ಟರ್‌ಗಳು ಸುಮಾರು ೭೬ ಲಕ್ಷ ರೂ. ಗಳಷ್ಟು ವಾಪಸ್ ನಗರಪಾಲಿಕೆ ಖಾತೆಗೆ ಜಮೆ ಮಾಡಿದ್ದಾರೆ. ಉಳಿದವರೂ ಕೂಡ ಹಣ ಪಾವತಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ನಗರಪಾಲಿಕೆ ಅಧಿಕಾರಿಗಳು ಇದೀಗ ೬ ಮಂದಿ ವಾಟರ್ ಇನ್‌ಸ್ಪೆಕ್ಟರ್ ಗಳು ಹಾಗೂ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ೭ ಮಂದಿ ಆಪರೇಟರ್ ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

೬ ಮಂದಿ ಇನ್‌ಸ್ಪೆಕ್ಟರ್‌ಗಳನ್ನು ಅಮಾನತ್ತು ಮಾಡಲು ನಿರ್ಧರಿಸಲಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ೭ ಮಂದಿ ಆಪರೇಟರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಲು ಅಽಕಾರಿಗಳು ನಿರ್ಧ ರಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತನಿಖೆಯನ್ನು ವಿಸ್ತರಿಸಲು ನಿರ್ಧರಿಸಿರುವ ನಗರ ಪಾಲಿಕೆ ಅಧಿಕಾರಿಗಳು ನಗರ ವ್ಯಾಪ್ತಿಯ ೬೫ ವಾರ್ಡ್ ಗಳಲ್ಲಿ ನೀರಿನ ಬಿಲ್‌ಗಳ ಪರಿ ಶೀಲನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಯ ತಲೆದಂಡವಾಗುವುದು ಖಚಿತ ಎನ್ನಲಾಗಿದೆ

ಆಂದೋಲನ ಡೆಸ್ಕ್

Recent Posts

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 14 ನಕ್ಸಲರ ಹತ್ಯೆ

ಸುಕ್ಮಾ/ಬಿಜಾಪುರ: ಛತ್ತಿಸ್‍ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್‍ಕೌಂಟರ್‌ಗಳಲಿ ಕುಖ್ಯಾತ ಮಾವೋವಾದಿ ಮಾಂಗ್ಟು (ಮತ್ತು ಹಂಗಾ ಮಡ್ಕಮ್…

4 mins ago

ಬಳ್ಳಾರಿ ಗಲಾಟೆ: ಸಸ್ಪೆಂಡ್‌ ಆಗಿದ್ದ ಎಸ್‌ಪಿ ಪವನ್‌ ನಜ್ಜೂರ್‌ ಆತ್ಮಹತ್ಯೆಗೆ ಯತ್ನ

ತುಮಕೂರು: ಬಳ್ಳಾರಿಯಲ್ಲಿ ನಡೆದಿದ್ದ ಫೈರಿಂಗ್‌ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ್‌ ಆಗಿದ್ದ ಎಸ್‌ಪಿ ಪವನ್‌ ನಜ್ಜೂರ್‌ ಆತ್ಮಹತ್ಯೆಗೆ ಯತ್ನಿಸಿರುವ…

27 mins ago

ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು…

47 mins ago

ಚಿಕ್ಕಬಳ್ಳಾಪುರ: 60ಕ್ಕೂ ಹೆಚ್ಚು ಕುರಿಗಳ ಅನುಮಾನಾಸ್ಪದ ಸಾವು

ಚಿಕ್ಕಬಳ್ಳಾಪುರ: ಸುಮಾರು 60ಕ್ಕೂ ಹೆಚ್ಚು ಕುರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಕಾಚಹಳ್ಳಿಯಲ್ಲಿ ನಡೆದಿದೆ. ಸಾವಿಗೆ ನಿಖರ ಕಾರಣ…

2 hours ago

ಕೋಗಿಲು ಲೇಔಟ್‌ ಅಕ್ರಮ ಮನೆಗಳ ತೆರವು ವಿಚಾರ: ಜಿಬಿಎ ಕೈಸೇರಿದ ನಿರಾಶ್ರಿತರ ಮಾಹಿತಿ

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರ ಮಾಹಿತಿ ಜಿಬಿಎ ಕೈಸೇರಿದ್ದು ಒಟ್ಟು 188 ಮನೆಗಳನ್ನು…

2 hours ago

ಬಳ್ಳಾರಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಡಿಐಜಿ ವರ್ತಿಕಾ ಕಟಿಯಾರ್‌

ಬಳ್ಳಾರಿ: ಬಳ್ಳಾರಿಯಲ್ಲಿ ಗಲಾಟೆ, ಫೈರಿಂಗ್‌ ಪ್ರಕರಣ ಸಂಬಂಧ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರನ್ನೂ ಬಂಧಿಸಿಲ್ಲ ಎಂದು ಬಳ್ಳಾರಿ ವಲಯ ಡಿಐಜಿ ವರ್ತಿಕಾ…

3 hours ago