Andolana originals

ವ್ಯರ್ಥ ಪದಾರ್ಥಗಳ ಸಂಗ್ರಹಣೆ ಬ್ಯಾಂಕ್‌

ಎಂ.ಕೆಂಡಗಣ್ಣಸ್ವಾಮಿ

ಅಕ್ಷಯ ಆಹಾರ ಫೌಂಡೇಶನ್ ರಾಜೇಂದ್ರ ಮಾದರಿ ಸೇವಾ ಕಾರ್ಯ

ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಶೇಖರಿಸಿದ ಪದಾರ್ಥಗಳ ಹಂಚಿಕೆ

ಅವಶ್ಯಕತೆ ಇದ್ದವರಿಗೆ ಒದಗಿಸುವ ಪರಿಕಲ್ಪನೆ

ಮೈಸೂರು: ಕಸವನ್ನು ರಸವಾಗಿ ಪರಿವರ್ತಿಸಿ ಸಮಾಜದ ಅಭಿವೃದ್ಧಿಗೆ ಬಳಸುವ ಅಗತ್ಯ ಇಂದಿನ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಇದೇ ನೆಲೆಯಲ್ಲಿ ಸೇವಾ ಸಂಸ್ಥೆಯೊಂದು ವ್ಯರ್ಥವೆಂದು ಮನೆಯಲ್ಲಿ ಮೂಲೆಗೆ ಸೇರಿಸಿರುವ ಅಥವಾ ಎಸೆಯುವ ಆಲೋಚನೆಯಲ್ಲಿರುವ ಹಳೆಯ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಅಗತ್ಯ ಇರುವವರಿಗೆ ಒದಗಿಸುವ ಅಪರೂಪದ ಕಾರ್ಯದಲ್ಲಿ ನಿರತವಾಗಿದೆ.

ಇಂತಹ ಮಾನವೀಯ ಕೆಲಸಕ್ಕೆ ಮುಂದಾಗಿರುವುದು ನಗರದ ಅಕ್ಷಯ ಆಹಾರ ಫೌಂಡೇಶನ್. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮೈಸೂರು ನಗರದಲ್ಲಿ ಅಕ್ಷಯ ಆಹಾರ ಜೋಳಿಗೆ ಮೂಲಕ ಮದುವೆ, ಗೃಹ ಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ವ್ಯರ್ಥವಾಗಿ ಉಳಿದ ಆಹಾರವನ್ನು ಸಂಗ್ರಹಿಸಿ ‘ತಿನ್ನುವ ಹಕ್ಕಿದೆ ಎಸೆಯುವ ಹಕ್ಕಿಲ್ಲ’ ಎಂಬ ಧ್ಯೇಯವಾಕ್ಯ ದೊಂದಿಗೆ ನಿತ್ಯ ಹಸಿದವರಿಗೆ ನೀಡುತ್ತಾ ಬಂದಿರುವ ಅಕ್ಷಯ ಆಹಾರ ಫೌಂಡೇಶನ್‌ನ ಡಾ.ಎಚ್. ಆರ್. ರಾಜೇಂದ್ರ ಮತ್ತು ಅವರ ಪತ್ನಿ ಎಂ.ಕೆ. ಶ್ವೇತಾ ಅವರೇ, ಈಗ ‘ವೇಸ್ಟ್ ಟು ಹೆಲ್ತ್ ಬ್ಯಾಂಕ್’ ಎಂಬ ಹೆಸರಿನೊಂದಿಗೆ ಮತ್ತೊಂದು ವಿಶಿಷ್ಟ ಸೇವಾ ಕಾರ್ಯವನ್ನು ನಡೆಸುತ್ತಿರುವವರು.

ಸಾರ್ವಜನಿಕರು ಮನೆಗಳಲ್ಲಿ, ಖಾಸಗಿ ಸಂಸ್ಥೆಗಳು ಅಥವಾ ಸರ್ಕಾರಿ ಇಲಾಖೆಗಳಲ್ಲಿ ಅನುಪಯುಕ್ತವಾಗಿರುವ ಪುಸ್ತಕ, ಬಟ್ಟೆ, ಚಾಪೆ, ಪಾತ್ರೆಗಳು ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳನ್ನು ನೀಡಿದರೆ ಅದನ್ನು ಅಗತ್ಯ ಇರುವವರಿಗೆ ತಲುಪಿಸುತ್ತೇವೆ ಎಂದು ಅವುಗಳೆಲ್ಲವನ್ನೂ ಸಂಗ್ರಹಿಸುವ ಮೂಲಕ ಸಾವಿರಾರು ಅಶಕ್ತರಿಗೆ ಈ ವಸ್ತುಗಳು ಮರು ಸದ್ಬಳಕೆಯಾಗುವಂತೆ ಮಾಡಿದ್ದಾರೆ.

ವಿತರಣೆ ಹೇಗೆ?: ರಾಜೇಂದ್ರ ಅವರು ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಿ ಅವುಗಳನ್ನು ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕಡಿಮೆ ಆದಾಯದ ಕುಟುಂಬಗಳು ಸೇರಿದಂತೆ ಗುರುತಿಸಲಾದ ಫಲಾನುಭವಿಗಳಿಗೆ ವಿತರಿಸುತ್ತಿದ್ದಾರೆ.

ವೇಸ್ಟ್ ಟು ವೆಲ್ತ್ ಬ್ಯಾಂಕ್‌ನ ಪ್ರಯೋಜನಗಳು: 

* ತ್ಯಾಜ್ಯಗಳ ವಿಲೇವಾರಿ, ಸಂಪನ್ಮೂಲ ಸಂರಕ್ಷಣೆ ಮತ್ತು ಸುಸ್ಥಿರತೆಗೆ ಅನುಕೂಲ

* ಹಿಂದುಳಿದ ಸಮುದಾಯಗಳಿಗೆ ಬೆಂಬಲ, ಸಾಮಾಜಿಕ ಕಲ್ಯಾಣಕ್ಕೆ ಉತ್ತೇಜನ ಮತ್ತು ಸಮುದಾಯದ ಪ್ರಜ್ಞೆ ಬೆಳವಣಿಗೆಗೆ ಪ್ರೋತ್ಸಾಹ

* ಹೆಚ್ಚುವರಿ ಸರಕುಗಳು, ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ದಾನ ಮಾಡಬಹುದು.

* ಸಂಗ್ರಹಿಸಿದ ಪದಾರ್ಥಗಳನ್ನು ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕಡಿಮೆ ಆದಾಯದ ಕುಟುಂಬಗಳು ಸೇರಿದಂತೆ ಹಿಂದುಳಿದ ಸಮುದಾಯಗಳ ಜನರಿಗೆ ಹಂಚಿಕೆ ಮಾಡಲಾಗುವುದು

ಬ್ಯಾಂಕ್ ಆರಂಭಿಸಲು ಪ್ರೇರಣೆ:  ಡಾ.ಎಚ್.ಆರ್.ರಾಜೇಂದ್ರ ಅವರು ಆಗಾಗ್ಗೆ ತಮ್ಮ ಊರಿನಲ್ಲಿರುವ ಪೋಷಕರನ್ನು ನೋಡಲು ಹೋಗುತ್ತಿರುತ್ತಾರೆ. ಈ ವೇಳೆ ರಾಜೇಂದ್ರ ಅವರ ತಂದೆಯವರು, ಮನೆಯಲ್ಲಿರುವ ಬಳಕೆಯಾಗದ ಬಟ್ಟೆ ಬರೆ, ಪುಸ್ತಕ ಸೇರಿದಂತೆ ಯಾವುದಾದರೂ ವಸ್ತುಗಳನ್ನು ಕೊಡು. ಇವುಗಳನ್ನು ಅಗತ್ಯವಿರುವ ಜನರಿಗೆ ಕೊಟ್ಟರೆ ಉಪಯೋಗವಾಗುತ್ತದೆ ಎಂದು ಹೇಳಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ರಾಜೇಂದ್ರ ಅವರು, ತಾವು ಮಾಡುತ್ತಿದ್ದ ಆಹಾರ ಸಂಗ್ರಹದ ಜೊತೆಗೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ.

” ಸಾರ್ವಜನಿಕರು ತಮ್ಮಲ್ಲಿರುವ ಬೇಡವಾದ ವಸ್ತುಗಳನ್ನು ನಮಗೆ ತಲುಪಿಸಿದರೆ ಸಾಕು. ನಾವು ಅವುಗಳನ್ನು ಸಂಗ್ರಹಿಸಿ ಸಾಧ್ಯವಾದಷ್ಟು ಅಗತ್ಯ ಇರುವವರಿಗೆ ನೀಡುತ್ತೇವೆ. ಈ ಮೂಲಕ ವಸ್ತುಗಳೆಲ್ಲಾ ಸದುಪಯೋಗವಾಗಲಿದ್ದು, ಪರಿಸರಕ್ಕೂ ಯಾವುದೇ ಹಾನಿಯಾಗದಂತೆ ತಡೆಯುತ್ತದೆ.”

ಕೆ.-ಡಾ.ಎಚ್.ಆರ್.ರಾಜೇಂದ್ರ, ಅಕ್ಷಯ ಆಹಾರ ಫೌಂಡೇಶನ್

ಹಳೆಯ ಪದಾರ್ಥಗಳ ಸಂಗ್ರಹಣೆ ಕೇಂದ್ರಗಳು:  ಅಕ್ಷಯ ಆಹಾರ ಫೌಂಡೇಶನ್‌ನಿಂದ ಆಹಾರ ಸಂಗ್ರಹಿಸಲು ಮೈಸೂರಿನ ಕೆ.ಆರ್.ಆಸ್ಪತ್ರೆ, ಕುವೆಂಪುನಗರ ಹಾಗೂ ಶ್ರೀರಾಂಪುರದ ಬಳಿ ಕೇಂದ್ರಗಳಿವೆ. ಈ ಕೇಂದ್ರ ಗಳಲ್ಲಿಯೇ ಸಾರ್ವಜನಿಕರು ತಮಗೆ ಬೇಡವಾದ ವಸ್ತುಗಳನ್ನು ನೀಡಬಹುದಾಗಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ: ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸ್ಪಷ್ಟನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎನ್‌ಸಿಬಿ ದಾಳಿ ವೇಳೆ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್‌ ಕಮಿಷನರ್‌ ಸೀಮಾ…

24 mins ago

ಮೈಸೂರು: ಕೆಮಿಕಲ್‌ ಘಟಕದ ಮೇಲೆ ದೆಹಲಿ ಪೊಲೀಸರ ದಾಳಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್‌ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್‌ಗಳನ್ನು…

57 mins ago

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

4 hours ago

ಓದುಗರ ಪತ್ರ: ವಿವೇಕಾನಂದ ಪ್ರತಿಮೆ ಅನಾವರಣಗೊಳಿಸಿ

ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…

4 hours ago

ಓದುಗರ ಪತ್ರ: ಮಲ್ಲಯ್ಯನ ಬೆಟ್ಟ ಅಭಿವೃದ್ಧಿಗೊಳಿಸಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…

4 hours ago

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…

4 hours ago