ಮಹೇಂದ್ರ ಹಸಗೂಲಿ
ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ
ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು ಏಕಕಾಲದಲ್ಲಿ ಕಿರುಬನ ಕೊಳಚಿ ಕೆರೆಯಲ್ಲಿ ಒಂದು ದೊಡ್ಡಹುಲಿ ಮತ್ತು ಐದು ಮರಿಗಳನ್ನು ಕಂಡು ಪುಳಕಿತರಾದರು.
ಕಳೆದ ವರ್ಷ ತಾಯಿ ಹುಲಿ ಕಣ್ಮರೆಯಾದ ನಂತರ ಹೊರಗೆ ಕಾಣಿಸದೆ ಕಾಡಿನೊಳಗೇ ಇದ್ದ ಮೂರು ಮರಿಗಳೂ ಇದೇ ಮೊದಲ ಬಾರಿಗೆ ಹೊರಗೆಕಾಣಿಸಿಕೊಂಡಿರುವುದು ವಿಶೇಷ. ಕಳೆದ ನವೆಂಬರ್‌ನಲ್ಲಿ ಸಫಾರಿ ಬಂದ್ ಆಗಿದ್ದರಿಂದ ಯಾವುದೇ ವಾಹನಗಳ ಓಡಾಟವಿಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ವನ್ಯಜೀವಿಗಳು ಸಫಾರಿ ಆರಂಭವಾದ ನಂತರ ಪ್ರವಾಸಿಗರಿಗೆ ಕಾಣಿಸತೊಡಗಿವೆ.
ಸೋಮವಾರ ಬೆಳಿಗ್ಗೆ ಸಫಾರಿ ಸಂದರ್ಭದಲ್ಲಿ ಕಿರುಬನ ಕೊಳಚಿ ಕೆರೆ ಸಮೀಪ ಕೇತಳ್ಳಿ ಕೆರೆ ಬಳಿ ತಾಯಿ ಹುಲಿ ತನ್ನ ಎರಡು ಮರಿಗಳ ಜತೆ ಮಲಗಿರುವುದು ಹಾಗೂ ಅದೇ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಮೂರ್ಕೆರೆ ತಾಯಿ ಹುಲಿಯ ಮೂರು ಮರಿಗಳು ಕಾಡಿನತ್ತ ಓಡಿಹೋದ ವಿಡಿಯೋ ವೈರಲ್ ಆಗುತ್ತಿದೆ.
ಅರಣ್ಯ ಇಲಾಖೆಯ ಪಾಲನೆ: ಕಳೆದ ವರ್ಷ ತನ್ನ ಮೂರು ಮರಿಗಳ ಜತೆಗೆ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ನೀಡುತ್ತಿದ್ದ ಮೂರ್ಕೆರೆ ಫೀಮೇಲ್ ಹೆಸರಿನ ಹೆಣ್ಣುಹುಲಿ ಅಕ್ಟೋಬರ್ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಎಡ ಕಾಲಿಗೆ ಆದ ಗಾಯದಿಂದ ಕುಂಟುತ್ತಿದ್ದ ತಾಯಿ ತನ್ನ ೧೦ ತಿಂಗಳ ಮರಿಗಳನ್ನು ತೊರೆದುಹೋಗಿತ್ತು. ಅರಣ್ಯ ಇಲಾಖೆ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಅದು ಬದುಕಿದೆಯೋ ಸತ್ತಿದೆಯೇ ಎಂಬುದೇ ತಿಳಿಯದಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರಿಗಳ ರಕ್ಷಣೆ ಹಾಗೂ ಪಾಲನೆಗೆ ಮುಂದಾಗಿತ್ತು.
ಬೇಟೆಯಾಡುವ ಕೌಶಲ ಕಲಿಯದೆ ತಮ್ಮ ಆಹಾರವನ್ನು ಸಂಪಾದಿಸಲು ಸಾಧ್ಯವಾಗದೆ ಅನಾಥವಾಗಿದ್ದ ಮರಿಗಳಿಗೆ ಆಹಾರ ನೀಡುವ ವ್ಯವಸ್ಥೆಯನ್ನೂ ಇಲಾಖೆ ಮಾಡಿತ್ತು. ಜತೆಗೆ ಕಾಡಿನಲ್ಲಿರುವ ಇತರ ಹುಲಿ, ಚಿರತೆಗಳಿಂದ ಅಪಾಯವಾಗದಂತೆ ಥರ್ಮಲ್ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲಿರಿಸಿ ಸಂರಕ್ಷಿಸಿತ್ತು. ನಿಧಾನಕ್ಕೆ ಬೆಳೆಯುತ್ತಾ ಬಂದ ಮರಿಗಳಿಗೆ ಸದ್ಯ ಒಂದೂವರೆ ವರ್ಷ ವಯಸ್ಸಾಗಿದ್ದು ಇವು ಪ್ರಸ್ತುತ ಬೇಟೆಯಾಡುವ ಸಾಮರ್ಥ್ಯ ಬೆಳೆಸಿಕೊಂಡಿವೆ. ಜಿಂಕೆಗಳನ್ನು ಬೇಟೆಯಾಡಿ ತಿನ್ನುತ್ತಿವೆ.
” ಇದೇ ಮೊದಲ ಬಾರಿಗೆ ಮೂರ್ಕೆರೆ ಫೀಮೇಲ್‌ನ ಮೂರು ಮರಿಗಳು ಹಾಗೂಕೇತಹಳ್ಳಿ ಕೆರೆ ಫೀಮೇಲ್ ಮರಿಗಳು ಒಟ್ಟಾಗಿ ಕಿರುಬನ ಕೊಳಚಿಯಲ್ಲಿ ಕಾಣಿಸಿಕೊಂಡಿವೆ. ತಾಯಿಯಿಲ್ಲದೆ ಅನಾಥವಾಗಿದ್ದ ಮೂರು ಮರಿಗಳು ತಮ್ಮ ಬೇಟೆಯನ್ನು ಸಂಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿವೆ.”
ಎನ್.ಸಿ.ಮಹದೇವ, ಆರ್‌ಎಫ್‌ಒ, ಬಂಡೀಪುರ ವಲಯ
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ…
ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಭಾರತದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಯನಿಮಿತ್ತ…
ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯ ಸೌಲಭ್ಯ ಪೂನಾದ ಇಂದಿರಾ ವಸಾಹತ್ ಎಂಬ ಪ್ರದೇಶದ ಒಂದು ಸ್ಲಮ್ಮಿನಲ್ಲಿ ವಾಸಿಸುವ ಲತಾ ರತನ್…
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಗೂ ಮುನ್ನವೇ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡ ಅರಣ್ಯ ಇಲಾಖೆ ವೀರನಹೊಸಹಳ್ಳಿ: ಈ ಬಾರಿ ಬೇಸಿಗೆಗೂ ಮುನ್ನವೇ…
ದಿನೇಶ್ ಕುಮಾರ್ ಹೆಚ್.ಎಸ್. ಒಂದೆಡೆ ಬೆಲೆ ಏರಿಕೆ ಬಿಸಿ, ಮತ್ತೊಂದೆಡೆ ವಾಣಿಜ್ಯ ಸಿಲಿಂಡರ್ ಕೊರತೆ ಎದುರಾಗುವ ಆತಂಕ ಇರಾನ್‌ನ ಹೊರ್ಮುಜ್…
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…