ಅಣ್ಣೂರುಸತೀಶ್
ಶ್ರೀಆದಿಚುಂಚನಗಿರಿ ಮಠದ ನೇತೃತದಲ್ಲಿ ಅದ್ಧೂರಿ ಜಾತ್ರೆ
ಭಾರತೀನಗರ: ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪರಿಚಿತವಾಗಿ ಹಲವಾರು ಮಂದಿಯನ್ನು ತನ್ನತ್ತ ಸೆಳೆಯುತ್ತಿದೆ.
ಏ.೭ರಿಂದ ಏ.೧೨ರ ವರೆಗೂ ಶ್ರೀ ಆದಿಚುಂಚನಗಿರಿ ಮಠದ ನೇತೃತ್ವದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಲಿದೆ.
ಈ ದೇವಸ್ಥಾನದ ವೈಶಿಷ್ಟ್ಯವೇನೆಂದರೆ ಶ್ರೀ ಕಾಲಭೈರವನ ರೂಪವೇ ಶ್ರೀಬಸವ. ಇಂದಿಗೂ ಈ ಕ್ಷೇತ್ರ ಹಲವಾರು ಮಂದಿಗೆ ದೈವ ಕ್ಷೇತ್ರವಾಗಿದ್ದು, ಬಸವಪ್ಪನ ಅನುಗ್ರಹ ಪಡೆಯುವುದೇ ವಿಶೇಷವಾಗಿದೆ.
ಚಿಕ್ಕರಸಿನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವನ್ನು ಸಾಕಷ್ಟು ಮಂದಿ ಮನೆದೇವರಂತೆ ಕಾಣುತ್ತಾ ಬಂದಿದ್ದಾರೆ. ಮುಖ್ಯವಾಗಿ ಬಸವನನ್ನು ಆರಾಧ್ಯ ದೈವದಂತೆ ಕಂಡು ಪೂಜಿಸುವುದು ಇಲ್ಲಿನ ವಿಶೇಷತೆ.
ನಿತ್ಯವೂ ಅನ್ನದಾಸೋಹ: ಈ ದೇವಸ್ಥಾನದಲ್ಲಿ ನಿತ್ಯವೂ ಅನ್ನದಾಸೋಹ ನಡೆಯುತ್ತದೆ. ಜನಸಾಮಾನ್ಯರು ತಾವು ಬೆಳೆದ ದವಸ ಧಾನ್ಯಗಳನ್ನು ತಂದು ದಾಸೋಹಕ್ಕೆ ನೀಡುತ್ತಾರೆ. ಇನ್ನು ಕೆಲವರು ತಮ್ಮ ಕೈಲಾದ ಮಟ್ಟಿಗೆ ಹಣಕಾಸಿನ ನೆರವನ್ನೂ ಕೊಡುತ್ತಾರೆ.
” ಕಾಲಭೈರವೇಶ್ವರಸ್ವಾಮಿ ಚಿಕ್ಕರಸಿನಕೆರೆ ಕ್ಷೇತ್ರದಲ್ಲಿ ನೆಲೆನಿಂತಿದೆ. ಚುಂಚನಗಿರಿ ಕ್ಷೇತ್ರಕ್ಕೆ ಒಳಪಟ್ಟ ನಂತರ ಉತ್ತಮ ಅಭಿವೃದ್ಧಿಯಾಗಿ ಸಹಸ್ರಾರು ಭಕ್ತಾದಿಗಳನ್ನು ಹೊಂದಿದೆ.”
-ಡಾ.ನಿರ್ಮಲಾನಂದನಾಥಸ್ವಾಮೀಜಿ, ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನ
” ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಪುಣ್ಯಕ್ಷೇತ್ರ ದಕ್ಷಿಣಕಾಶಿ ಎಂದೇ ಪ್ರಸಿದ್ಧಿಗೊಂಡಿದ್ದು, ಇಂದು ರಾಜ್ಯಾದ್ಯಂತ ಬಸವಪ್ಪನ ಮಹಿಮೆಯಿಂದ ಪ್ರಚಲಿತಗೊಂಡಿದೆ. ಹಾಗಾಗಿ ಸಾವಿರಾರು ಭಕ್ತಾದಿಗಳನ್ನು ಹೊಂದಿದೆ.”
-ಯಜಮಾನ್ ಶಿವಲಿಂಗಯ್ಯ, ಅಧ್ಯಕ್ಷರು, ಕಾಲಭೈರವೇಶ್ವರ ಟ್ರಸ್ಟ್
” ಇವತ್ತಿಗೂ ಸುತ್ತಮುತ್ತಲ ಗ್ರಾಮಗಳ ಜನತೆ ಸೇರಿದಂತೆ ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯಗಳ ಜನಸಾಮಾನ್ಯರು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ಕಾಲ ಭೈರವನ ಪ್ರತಿರೂಪದಂತಿರುವ ಬಸವನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ ಅವುಗಳು ನೆರವೇರಿದ ನಂತರ ಬಸವಪ್ಪನನ್ನು ಗ್ರಾಮಕ್ಕೆ ಕರೆಸಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸುತ್ತಾರೆ.”
-ಪುಟ್ಟರಾಜು, ಯಜಮಾನರು, ಚಿಕ್ಕರಸಿನಕೆರೆ
” ನಮ್ಮ ರಾಜ್ಯವೂ ಸೇರಿ ದೇಶದ ಸಾಕಷ್ಟು ಮಂದಿ ಈ ದೇವಸ್ಥಾನಕ್ಕೆ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಬಸಪ್ಪನ ಅನುಗ್ರಹ ಪಡೆಯುತ್ತಾರೆ.”
-ಜೋಗಪ್ಪ, ಬಸವನನ್ನು ನೋಡಿಕೊಳ್ಳುವವರು
ರಥೋತ್ಸವ , ಅನ್ನಸಂತರ್ಪಣೆ: ಏ.೭ರ ಮಧ್ಯಾಹ್ನ ೩ ಗಂಟೆಗೆ ಕಾಲಭೈರವೇಶ್ವರಸ್ವಾಮಿ ಮಹಾ ರಥೋತ್ಸವ ಹಾಗೂ ದೇವತೆಗಳ ಉತ್ಸವಗಳು, ಅನ್ನಸಂತರ್ಪಣೆಯ ಉಸ್ತುವಾರಿಯನ್ನು ಅರೆಕಲ್ಲುದೊಡ್ಡಿ, ಬನ್ನಹಳ್ಳಿ, ಹೊನ್ನಾಯಕನಹಳ್ಳಿ ಹಾಗೂ ಕಾಂಡಂಕನಹಳ್ಳಿ ಕುಲಬಾಂಧವರು ನಿರ್ವಹಿಸಲಿದ್ದಾರೆ. ಏ.೮ರ ಸಂಜೆ ೫ ಗಂಟೆಗೆ ಓಕಳಿ ಸೇವೆ ಉತ್ಸವ ನಡೆಯಲಿದೆ. ಏ.೧೨ ರಂದು ಮುಕ್ತಾಯಗೊಳ್ಳಲಿದೆ.
ದೇಗುಲ ಬಸವನ ಪವಾಡಗಳು: ಕಾಲಭೈರವೇಶ್ವರನ ಬಸಪ್ಪನ ವಿಶೇಷವೆಂದರೆ ಕಳ್ಳರು ಹಾಗೂ ಮೋಸಗಾರರಿಗೆ ಸಿಂಹಸ್ವಪ್ನವಾಗಿ ವಿವಿಧ ಗ್ರಾಮಗಳಲ್ಲಿ ದೇವಸ್ಥಾನದ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸುತ್ತ-ಮುತ್ತಲ ಗ್ರಾಮಗಳ ಹಾಗೂ ಜಿಲ್ಲೆಗಳ ಜನರಲ್ಲಿ ಅಪಾರ ದೈವಭಕ್ತಿಯನ್ನುಂಟು ಮಾಡಿದೆ. ಭಕ್ತರು ದೇವಾಲಯವನ್ನು ಅಭಿವೃದ್ಧಿಪಡಿಸಿದ್ದಾರೆ.
ಮೈಸೂರು: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ…
ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಏಪ್ರಿಲ್.15ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶ್ರೀಮಠದಲ್ಲಿ…
ಮೈಸೂರು : ಬಾಲ ಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ…
ಬೆಂಗಳೂರು : ರಾಜ್ಯದಲ್ಲಿರುವ ಆಟೋ ಮಾಲೀಕರು ಮತ್ತು ಚಾಲಕರು ಆತಂಕಕ್ಕೆ ಒಳಗಾಗಬಾರದು ಹಾಗೂ ಆಟೋ ಗ್ಯಾಸ್ ಕೊರತೆಯ ಬಗ್ಗೆ ಯಾವುದೇ…
ಚಿಕ್ಕಮಗಳೂರು : ಬಾಬಾಬುಡನ್‌ಗಿರಿ ಪ್ರದೇಶದಕ್ಕೆ ಪ್ರವಾಸ ಬಂದಿದ್ದ ಕೇರಳದ 16 ವರ್ಷದ ವಿದ್ಯಾರ್ಥಿನಿ ಶ್ರೀನಂದಾ ನಾಪತ್ತೆಯಾಗಿದ್ದು, ಕುಂಟುಬದವರು ಮತ್ತು ಪೊಲೀಸರು…
ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ…