ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ತಾಯಿಯ ಕನಸಿನಂತೆ ದೇಗುಲ ನಿರ್ಮಾಣ
ಜನರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹ, ಜಾತ್ರೆ, ವಿಶೇಷ ಪೂಜೆಗೆ ಮೈದಳೆದು ನಿಂತ ಕಲ್ಯಾಣಿ
ಮೈಸೂರು: ಯದುವಂಶದ ಅರಸರ ಕಾಲದಲ್ಲಿ ಯದುನಾಡು ಎಂದೇ ಕರೆಯಿಸಿಕೊಂಡಿದ್ದ ಹದಿನಾರು ಗ್ರಾಮದಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಗೆ ಸಜ್ಜಾಗಿದ್ದು, ಧಾರ್ಮಿಕ, ಪ್ರವಾಸಿ ತಾಣವಾಗಿ ರೂಪುಗೊಂಡಿದೆ.
ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟು ಧಾರ್ಮಿಕ ವಿಚಾರಗಳಿಂದ ದೂರವಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಮ್ಮ ತಾಯಿಯ ಆಶಯ ಹಾಗೂ ಗ್ರಾಮಸ್ಥರ ಕೋರಿಕೆಯಂತೆ ಆಸಕ್ತಿ ವಹಿಸಿ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ದೇವಾಲಯದ ಮಾದರಿಯಲ್ಲೇ ಹುಟ್ಟೂರಿನ ದೇವಾಲಯದ ಪುನರ್ ನಿರ್ಮಾಣಕ್ಕೆ ಮೂಲ ಕಾರಣವಾಗಿದ್ದಾರೆ.
ದೇವಸ್ಥಾನವು ಪುರಾತನ ಶೈಲಿಯಲ್ಲೇ ಪುನರ್ ನಿರ್ಮಾಣಗೊಂಡು ಸಾರ್ವಜನಿಕರ ಆಕರ್ಷಣೆಗೆ ಸಜ್ಜಾಗಿದ್ದು, ಗುರುವಾರದಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭವಾಗಿವೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸ್ವಗ್ರಾಮವಾಗಿರುವ ಹದಿನಾರು ಗ್ರಾಮವನ್ನು ರಾಜರ ಕಾಲದಲ್ಲಿ ಯದುನಾಡು ಎಂದು ಕರೆಯಲಾಗುತ್ತಿತ್ತು. ನಂತರ ಯದುನಾಡು ಹದಿನಾರು ಗ್ರಾಮವಾಗಿ ಪರಿವರ್ತನೆಯಾಯಿತು. ಈ ಗ್ರಾಮದಲ್ಲಿ ಜನಿಸಿದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಲೋಕೋಪ ಯೋಗಿ ಸಚಿವರಾಗಿದ್ದಾಗ ಸುತ್ತಮುತ್ತಲಿನ ಗ್ರಾಮಗಳ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಂತೆ ಅಭಿವೃದ್ಧಿಗೊಳಿಸಿದ್ದರು.
ಅದೇ ರೀತಿ ತಮ್ಮ ತಾಯಿ ಅವರು ಗ್ರಾಮದ ದೇವಸ್ಥಾನವನ್ನು ಪುನರ್ ನವೀಕರಣ ಮಾಡಿಸುವ ಬಗ್ಗೆ ಬಯಕೆ ಹೊಂದಿದ್ದರು. ಇದೇ ವೇಳೆ ಗ್ರಾಮದ ಮುಖಂಡರು, ಮಹದೇಶ್ವರನ ಒಕ್ಕಲಿನವರು ಕೋರಿಕೊಂಡಿದ್ದರು. ಇದನ್ನು ಪರಿಗಣಿಸಿದ್ದ ಮಹದೇವಪ್ಪ ತಾವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿ ೭ ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಈ ಹಣದಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಜತೆಗೆ, ಹೊಸ ದೇವಸ್ಥಾನದಲ್ಲಿ ರಾಜಗೋಪುರ, ಮದುವೆ, ಶುಭ ಸಮಾರಂಭಗಳನ್ನು ನಡೆಸಲು ಕಲ್ಯಾಣಮಂಟಪ, ಭಕ್ತರ ವಾಸ್ತವ್ಯಕ್ಕೆ ವಿಶ್ರಾಂತಿಗೃಹ ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ.
ಕಾರ್ತಿಕ ಮಾಸದಲ್ಲಿ ದೊಡ್ಡ ಜಾತ್ರೆ ನಡೆಯುವ ಕಾರಣ ತೆಪ್ಪೋತ್ಸವ ನಡೆಸಲುಕಲ್ಯಾಣಿಗೆ ಹೊಸ ರೂಪ ನೀಡಿ ಶುದ್ಧ ನೀರು ನಿಲ್ಲುವಂತೆ ಮರು ನಿರ್ಮಾಣ ಮಾಡಲಾಗಿದೆ. ಸಂಜೆ ಹೊತ್ತು ಕಲ್ಯಾಣಿಯ ಸುತ್ತಲೂ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಬಿಳಿಕೆರೆ ಶ್ರೀ ಮಹದೇಶ್ವರಸ್ವಾಮಿ, ಗಣಪತಿ ಸುಬ್ರಹ್ಮಣ್ಯ ವಿಗ್ರಹ ಪ್ರತಿಷ್ಠಾಪನೆ, ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ದೇವಸ್ಥಾನದ ಸಂಪ್ರೋಕ್ಷಣೆ ಕಾರ್ಯ ಗುರುವಾರದಿಂದಲೇ ಆರಂಭವಾಗಿದ್ದು, ಶುಕ್ರವಾರ ಬೆಳಿಗ್ಗೆ ಪ್ರಧಾನ ಹೋಮ, ಕಲಾಹೋಮ, ಪೂರ್ಣಾಹುತಿ, ಕುಂಭಾಭಿಷೇಕ, ನೇತ್ರದ ಮಿಲನ, ಮಹಾ ನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ. ನ.೧೬ರಂದು ಸಾವಿರಾರು ಜನರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನ.೧೭ರಂದು ಮುಂಜಾನೆ ಶ್ರೀ ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಉಪಚಾರ ಪೂಜೆ, ೧೦.೨೦ಕ್ಕೆ, ಹಾಲ್ಹರವಿ ಸೇವೆಹಾಗೂ ರಥೋತ್ಸವ ವೈಭವದಿಂದ ಜರುಗಲಿದೆ. ಬೆಳಿಗ್ಗೆ ೧೦.೩೦ಕ್ಕೆ, ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಲಿಂಗಸ್ವಾಮಿ, ಮಹಾಂತ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಕೆ.ವೆಂಕಟೇಶ್, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನಿಲ್ ಬೋಸ್, ಶಾಸಕರಾದ ಜಿ.ಟಿ.ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ ಇತರೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
” ಬಿಳಿಕೆರೆ ಮಹದೇಶ್ವರ ದೇವಾಲಯದ ಪುನರ್ನಿರ್ಮಾಣ ಕಾರ್ಯವು ಕೇವಲ ಕಟ್ಟಡದ ಬದಲಾವಣೆ ಅಲ್ಲ, ಅದು ಒಂದು ಸಾಂಸ್ಕೃತಿಕ ಪುನರ್ ಜೀಣೋದ್ಧಾರದ ಸಂಕೇತವಾಗಿದೆ. ದೇವಾಲಯದ ಹೊಸ ರೂಪವು ಗ್ರಾಮಸ್ಥರ ಹೆಮ್ಮೆಯ ತಾಣವಾಗಿದ್ದು, ಮೈಸೂರು ಜಿಲ್ಲೆಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು.”
ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು
ಅಪರೂಪದ ಪಕ್ಷಿಗಳ ತಾಣ:
ಹದಿನಾರು ಕೆರೆಯು ಹಲವಾರು ಪಕ್ಷಿಗಳ ನೆಚ್ಚಿನ ತಾಣವಾಗಿದೆ. ಪ್ರತಿವರ್ಷ ಈ ಕೆರೆಗೆ ಅಪರೂಪದ ನೂರಾರು ಪಕ್ಷಿಗಳು ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವುದರಿಂದ ಸಾರ್ವಜನಿಕರ ಗಮನ ಸೆಳೆದಿದೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…