Andolana originals

ಕೆಲವೆಡೆ ಈಗಲೇ ದನಕರುಗಳಿಗೆ ಮೇವಿನ ಕೊರತೆ!

ಮೇವು ಕೊಳ್ಳಲು ನೀರಾವರಿ ಪ್ರದೇಶದತ್ತ ಮುಖ ಮಾಡಿರುವ ರೈತರು…

ಚಾಮರಾಜನಗರ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜನವರಿ ಅಂತ್ಯದೊಳಗೆಯೇ ದನಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಮುಂದೇನು? ಎಂಬ ಆತಂಕ ಎದುರಾಗಿದ್ದು, ಭತ್ತದ ಹುಲ್ಲು ಖರೀದಿಗೆ ನೀರಾವರಿ ಪ್ರದೇಶದತ್ತ ರೈತರು ಮುಖ ಮಾಡಿದ್ದಾರೆ. ಹತ್ತಿರದ ನರಸೀಪುರ, ನಂಜನಗೂಡು ಕಡೆ ಭತ್ತದ ಹುಲ್ಲು ಕೊಳ್ಳಲು ಎಡತಾಕುತ್ತಿದ್ದು, ಅಲ್ಲಿಯೂ ಹಿಂದಿಗಿಂತ ಮೇವಿಗೆ ಬೇಡಿಕೆ ಹಾಗೂ ಬೆಲೆಯೂ ಹೆಚ್ಚಳವಾಗಿದೆ ಎನ್ನುತ್ತಾರೆ ಜಿಲ್ಲೆಯ ರೈತರು.

ಬಯಲಲ್ಲಿ ದನಕರು ಮೇಯಿಸಿ ಅಷ್ಟಿಷ್ಟು ಹಾಲನ್ನು ಡೇರಿಗೆ ಹಾಕಿ ಜೀವನ ನಡೆಸುತ್ತಿರುವ ಜನರು ಸಾಕಷ್ಟು ಮಂದಿ ಇದ್ದು, ಇಂಥವರ ಸ್ಥಿತಿ ಡೋಲಾಯಮಾನವಾಗಿದೆ. ಹೆಚ್ಚಿನ ಬೆಲೆಗೆ ಮೇವು ಖರೀದಿಸಿ ಸಾಕಬೇಕಾ ಇಲ್ಲಾ ದನಕರುಗಳನ್ನೇ ಮಾರಾಟ ಮಾಡಬೇಕಾ ಎಂಬ ಸಂಕಟದಲ್ಲಿ ಇದ್ದಾರೆ.

ಮಳೆ ಆಶ್ರಿತ ಪ್ರದೇಶದತ್ತ ಕಣ್ಣಾಡಿಸಿದರೆ ಎಲ್ಲೆಲ್ಲೂ ಬಟ್ಟ ಬಯಲಿನ ದರ್ಶನವಾಗುತ್ತದೆ. ಚಾಮರಾಜನಗರ ತಾಲ್ಲೂಕಿನ ಪುಣಜನೂರು ಸುತ್ತಮುತ್ತಲಿನ ೧೫ ಗ್ರಾಮಗಳಲ್ಲಿ ಮತ್ತು ಇದೇ ರೀತಿ ಹನೂರು ತಾಲ್ಲೂಕಿನ ದಂಟಳ್ಳಿ ವ್ಯಾಪ್ತಿಯಲ್ಲಿ ಹಾಗೆಯೇ ಗುಂಡ್ಲುಪೇಟೆ ಭಾಗದ ವಿವಿಧ ಕಡೆ ಮೇವಿನ ಸಮಸ್ಯೆ ಎದ್ದು ಕಾಣುತ್ತಿದೆ.

ಮಳೆ ಅಭಾವದಿಂದ ಜೋಳ, ರಾಗಿ , ಹುರುಳಿ ಇನ್ನಿತರ ಬೆಳೆಗಳು ನಿರೀಕ್ಷಿತ ರೀತಿಯಲ್ಲಿ ಬೆಳೆಯದಿರುವುದು, ಈ ಭಾಗದಲ್ಲಿ ಪ್ರಮುಖ ನೀರಿನ ಮೂಲಗಳು ಇಲ್ಲದಿರುವುದು ಮೇವಿನ ಸಮಸ್ಯೆಗೆ ಕಾರಣ ಎನ್ನಲಾಗಿದೆ

ಭತ್ತದ ಹುಲ್ಲಿನ ಕೊರತೆ ಯಾಕೆ?: 

ಕೇರಳದಲ್ಲಿ ಶುಂಠಿ ಹೆಚ್ಚು ಬೆಳೆಯಲಾಗುತ್ತದೆ. ಜಿಲ್ಲೆಯ ವಿವಿಧ ಕಡೆಯೂ ಕೇರಳದವರು ಬಂದು ಶುಂಠಿ ಬೆಳೆಯುತ್ತಿದ್ದಾರೆ.ಶುಂಠಿ ನಾಟಿ ಬಳಿಕ ಅದರ ಮೇಲೆ ಹೊದಿಕೆಯಾಗಿ ಭತ್ತದ ಹುಲ್ಲು ಬಳಸುವುದರಿಂದ ಈ ಭಾಗದ ನೀರಾವರಿ ಪ್ರದೇಶದ ಹುಲ್ಲು ಕೇರಳಾಕ್ಕೆ ಮಾರಾಟವಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಮೇವಿನ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

” ಜಿಲ್ಲೆಯಲ್ಲಿ ೨.೨೦ ಲಕ್ಷ ದನಕರುಗಳಿದ್ದು ಪ್ರತಿ ರಾಸಿಗೂ ನಿತ್ಯ ೬ಕೆಜಿ ಮೇವಿನಂತೆ ಲೆಕ್ಕ ಹಾಕಿದರೆ ಇನ್ನೂ ೨೪ವಾರಗಳಿಗೆಆಗುವಷ್ಟು ಮೇವು ಲಭ್ಯವಿದೆಯಾದರೂ ಕೆಲವೊಂದು ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಇರುವುದು ಇಲಾಖೆ ಗಮನಕ್ಕೆ ಬಂದಿದೆ.”

ಡಾ.ಬಿ.ಮಂಜುನಾಥ್, ಉಪನಿರ್ದೇಶಕರು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

” ಸರ್ಕಾರ, ಮಳೆಗಾಲ ಪ್ರಾರಂಭವಾಗುವ ತನಕ ಹಾಲಿನ ಡೇರಿಗಳ ಮೂಲಕ ರಿಯಾಯಿತಿ ದರದಲ್ಲಿ ಪಶು ಆಹಾರವನ್ನು ರೈತರಿಗೆ ಒದಗಿಸಬೇಕು. ಬೇಸಿಗೆ ದಿನಗಳಲ್ಲಿ ಸಹಜವಾಗಿಯೇ ಹಾಲು ಉತ್ಪಾದನೆಯೂ ಕಡಿಮೆ ಆಗುವುದರಿಂದ ರೈತರ ನೆರವಿಗೆ ಹಾಲು ಒಕ್ಕೂಟಗಳೂ ನಿಲ್ಲಬೇಕು.”

ಹೊನ್ನೂರು ಪ್ರಕಾಶ್, ರಾಜ್ಯ ರೈತ ಮುಖಂಡರು

ಮೇವು ಬೆಲೆ ಏರಿಕೆ: ಬೇಸಿಗೆ ದಿನಗಳು ಹತ್ತಿರವಾಗುತ್ತಿರುವಾಗಲೇ ದುಡ್ಡು ಕೊಟ್ಟರೂ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.೧೫ರಿಂದ ೨೦ಕೆಜಿ ತೂಗುವ ಭತ್ತದ ಹುಲ್ಲಿನ ಪಿಂಡಿ ಮುಂಚೆ ೧೫೦ ರೂ. ಇದ್ದದ್ದು ಈಗ ೨೫೦ರೂ.ಆಗಿದೆ. ನೀರಾವರಿ ಪ್ರದೇಶದಲ್ಲಿ ಮುಸುಕಿನ ಜೋಳದ ಹಸಿ ಕಡ್ಡಿ ಟನ್‌ಗೆ ೨,೨೦೦ ರೂ.ಗೆ ಸಿಗುತ್ತಿತ್ತು. ಅದರ ಬೆಲೆ ಈಗ ೩ ಸಾವಿರ ರೂ. ದಾಟಿದ್ದರೂ ಅಗತ್ಯ ಇರುವಷ್ಟು ಸಿಗುತ್ತಿಲ್ಲ. ಹಾಗಾಗಿ ಅನೇಕರು ಅಲ್ಲಲ್ಲಿ ದನಕರುಗಳನ್ನೇ ಮಾರಾಟ ಮಾಡಿದ್ದಾರೆ. ಹೊರರಾಜ್ಯಗಳಿಗೆ ಮೇವು ಸಾಗಣೆಯಾಗದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಬೇಕು.”

ಮೂಡ್ನಾಕೂಡು ಮಹೇಶ್, ರೈತ ಮುಖಂಡರು

 

 

ಆಂದೋಲನ ಡೆಸ್ಕ್

Recent Posts

ಪರಿಷತ್‌ ಚುನಾವಣೆಯಲ್ಲಿ ಕ್ರಾಸ್‌ ವೋಟ್‌ ಮಾಡಿದ ಶಾಸಕರು ಗೊತ್ತಿದೆ ; ಎಚ್‌.ಡಿ.ಕುಮಾರಸ್ವಾಮಿ

ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…

10 hours ago

ಮಂಡ್ಯ | ಐವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…

10 hours ago

ಜೂನ್‌ 21ರಂದು ನೀಟ್‌ ಮರುಪರೀಕ್ಷೆ ; ಮೈಸೂರು ಜಿಲ್ಲೆಯಲ್ಲಿ 7886 ಪರೀಕ್ಷಾರ್ಥಿಗಳ ನೋಂದಣಿ

ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…

10 hours ago

ನೀಟ್‌ಗಾಗಿ ಟೆಲಿಗ್ರಾಂ ನಿಷೇಧ ; ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಕೋರ್ಟ್‌

ಹೊಸದಿಲ್ಲಿ : ನೀಟ್‌-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…

11 hours ago

ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ ; ಡಾ.ಎಚ್.ಸಿ.ಮಹದೇವಪ್ಪ

ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…

12 hours ago

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

20 hours ago