ವಿಜೃಂಭಿಸಲಿದೆ ನಾಡಿನ ಕಲೆ ಕುಸ್ತಿ
ಸೆ.೨೨ರಿಂದ ಒಂದು ವಾರ ಆಯೋಜನೆ
ದಸರಾ ಮಹೋತ್ಸವದಲ್ಲಿ ರೋಚಕ ಅನುಭವ ನೀಡಲಿದೆ ಕುಸ್ತಿ ಪಂದ್ಯ
ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಾಡಿನ ‘ಕುಸ್ತಿ’ ಪರಂಪರೆ ವಿಜೃಂಭಿಸಲಿದೆ. ದಸರಾ ಅಂಗವಾಗಿ ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ ದಲ್ಲಿ ಸೆ.೨೨ರಿಂದ ಒಂದು ವಾರ ಕಾಲ ಕುಸ್ತಿ ಪ್ರೇಮಿಗಳಿಗೆ ‘ನಾಡಕುಸ್ತಿ’, ‘ರಾಜ್ಯಮಟ್ಟದ ಪಾಯಿಂಟ್ ಕುಸ್ತಿ’ ಹಾಗೂ ‘ಪಂಜಕುಸ್ತಿ’ ಪಂದ್ಯಾವಳಿಗಳು ರೋಚಕ ಅನುಭವ ನೀಡಲಿವೆ.
‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಯೂ ಇರಲಿವೆ. ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಜೇತರಿಗೆ ‘ದಸರಾ ಕುಮಾರ’, ರಾಜ್ಯ ಮಟ್ಟದ ವಿವಿಧ ವಿಭಾಗಗಳ ಕುಸ್ತಿ ಪಂದ್ಯಗಳ ವಿಜೇತರಿಗೆ ಪ್ರತಿಷ್ಠಿತ ‘ದಸರಾ ಕಂಠೀರವ’,‘ದಸರಾ ಕೇಸರಿ’ ಪ್ರಶಸ್ತಿ ನೀಡಲು ಚರ್ಚಿಸಲಾಗುತ್ತಿದೆ.
ನಾಡಕುಸ್ತಿಯ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಪುರುಷರ ಗ್ರೀಕೋ ರೋಮನ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಕುಸ್ತಿ, ರಾಜ್ಯಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ ಪಂದ್ಯಗಳನ್ನೂ ಆಯೋಜಿಸಲು ಕುಸ್ತಿ ಉಪ ಸಮಿತಿ ಹಾಗೂ ಕ್ರೀಡಾ ಉಪ ಸಮಿತಿ ಮುಂದಾಗಿವೆ. ಈ ಬಾರಿ ವಿಶೇಷವಾಗಿ ದಸರಾ ಕಿಶೋರ ಹಾಗೂ ದಸರಾ ಕಿಶೋರಿ ಪ್ರಶಸ್ತಿಗಳ ಕುಸ್ತಿಗಳನ್ನು ನಡೆಸಲಾಗುತ್ತಿದೆ.
ಮಹಿಳಾ ಕುಸ್ತಿಪಟುಗಳಿಗೆ ದಸರಾ ಕಿಶೋರಿ ಸ್ಪರ್ಧೆ, ೫೭ ಕೆ.ಜಿ.ಯಿಂದ ೬೫ ಕೆ.ಜಿ.ವಿಭಾಗದಲ್ಲಿ ದಸರಾ ಕಿಶೋರ ಪ್ರಶಸ್ತಿ ಕುಸ್ತಿ ನಡೆಯಲಿದೆ. ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಭಾಗದಲ್ಲಿ ‘ಮೈಸೂರು ದಸರಾ ಕುಮಾರ’(೭೪ ಕೆ.ಜಿ.ಮೇಲ್ಪಟ್ಟ) ಪ್ರಶಸ್ತಿ ನೀಡಲಾಗುತ್ತದೆ. ಉಳಿದಂತೆ ‘ದಸರಾ ಕಂಠೀರವ’(೮೬ ಕೆ.ಜಿ.ಮೇಲ್ಪಟ್ಟ ), ‘ದಸರಾ ಕೇಸರಿ’(೭೪ರಿಂದ ೮೬ ಕೆ.ಜಿ.ವರೆಗೆ) ಕುಸ್ತಿಗಳು ನಡೆಯಲಿವೆ.
ನಾಡ ಕುಸ್ತಿ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಕುಸ್ತಿ, ರಾಜ್ಯಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿಗಳು ನಡೆಯಲಿವೆ. ದಸರಾ ಕಂಠೀರವ, ದಸರಾ ಕೇಸರಿ, ಮೈಸೂರು ದಸರಾ ಕುಮಾರ್, ದಸರಾ ಕಿಶೋರಿ ಮತ್ತು ದಸರಾ ಕಿಶೋರ್ ಪ್ರಶಸ್ತಿಗಳಿಗೆ ಕ್ರಮವಾಗಿ ೧.೨೫ ಕೆಜಿ, ೧ ಕೆ.ಜಿ., ೦.೭೫ ಕೆ.ಜಿ., ೦.೫೦ ಕೆ.ಜಿ. ಮತ್ತು ೦.೫೦ ಕೆ.ಜಿ. ಬೆಳ್ಳಿ ಗದೆಗಳನ್ನು ನೀಡಲು ಚಿಂತಿಸಲಾಗಿದೆ. ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ನಾಡಕುಸ್ತಿ ಪರಂಪರೆ ವಿಜೃಂಭಿಸಲಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಸರಾ ಕುಸ್ತಿ ಅಖಾಡದಲ್ಲಿ ಪಟ್ಟು ಹಾಕಲು ಹಾತೊರೆಯುತ್ತಾರೆ. ತಮಗೂ ಕುಸ್ತಿ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ನೂರಾರು ಸ್ಥಳೀಯ ಪೈಲ್ವಾನರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ನಾಡಕುಸ್ತಿ, ದೊಡ್ಡಕುಸ್ತಿ, ಮಾರ್ಫಿಟ್ ಕುಸ್ತಿಯ ಗಮ್ಮತ್ತು ಸವಿಯಲು ಕುಸ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗಾಗಿ ನಿತ್ಯ ೩೦ಕ್ಕೂ ಹೆಚ್ಚಿನ ನಾಡಕುಸ್ತಿ ಹಾಗೂ ೪ ರಿಂದ ೫ ಮಾರ್ಫಿಟ್ ಕುಸ್ತಿಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಮಾರ್ಫಿಟ್ ಕುಸ್ತಿಗೆ ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಭಾಗಗಳ ಸ್ಟಾರ್ ಕುಸ್ತಿಪಟುಗಳನ್ನು ಕರೆತರಲು ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ ದಸರಾ ನಾಡ ಕುಸ್ತಿಯಲ್ಲಿ ನೂರಾರು ಪೈಲ್ವಾನರು ಕೆಮ್ಮಣ್ಣು ಮಟ್ಟಿಯಲ್ಲಿ ತೊಡೆ ತಟ್ಟಲು ಕಾತರರಾಗಿದ್ದಾರೆ.
ಕುಸ್ತಿ ಕಲೆಗೆ ಮತ್ತೆ ಜೀವಕಳೆ: ವಿಶ್ವವಿಖ್ಯಾತ ಮೈಸೂರು ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧ. ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪೈಲ್ವಾನರ ನಡುವೆ ಅಖಾಡದಲ್ಲಿ ನಡೆಯುವ ಹಣಾಹಣಿ ರೋಚಕ ಅನುಭವ ನೀಡುತ್ತದೆ. ಪ್ರತಿ ದಿನ ಸಂಜೆ ೪ ಗಂಟೆಗೆ ನಾಡಕುಸ್ತಿ ಆರಂಭವಾಗಲಿದೆ. ವಿಜೇತರಿಗೆ ಮೇಯರ್ ಕಪ್, ಸಾಹುಕಾರ್ ಚನ್ನಯ್ಯ ಕಪ್, ಮೈಸೂರು ಒಡೆಯರ್ ಕಪ್ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಲು ಚಿಂತಿಸಲಾಗಿದೆ.
” ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೆ.೨೨ರಿಂದ ದಸರಾ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ‘ದಸರಾ ಕಿಶೋರಿ’ ಜತೆಗೆ ‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಗಳು ನಡೆಯಲಿದೆ. ಶೀಘ್ರದಲ್ಲಿಯೇ ನಾಡಕುಸ್ತಿ ಸಂಬಂಧ ಜೋಡಿ ಕಟ್ಟಲಾಗುತ್ತದೆ.”
ಎಲ್.ನಾಗೇಶ್, ಉಪ ವಿಶೇಷಾಧಿಕಾರಿ, ದಸರಾ ಕುಸ್ತಿ ಸಮಿತಿ
” ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಬಾರಿಯೂ ‘ದಸರಾ ಕಿಶೋರಿ’ ಪ್ರಶಸ್ತಿ ನೀಡಲು ದಸರಾ ಕುಸ್ತಿ ಉಪ ಸಮಿತಿ ಚಿಂತಿಸಿದೆ. ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಗೆಲ್ಲುವವರಿಗೆ ಬೆಳ್ಳಿ ಗದೆ, ನಗದು ಬಹುಮಾನ, ಮೈಸೂರು ಪೇಟಾ ಮತ್ತು ಪ್ರಶಸ್ತಿ ಪತ್ರ ನೀಡಲು ದಸರಾ ಕುಸ್ತಿ ಉಪ ಸಮಿತಿ ಚಿಂತಿಸಿದೆ”
ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ…
ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…
ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…
ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…
ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇವಲ ಎರಡನೇ ಮಾತಿನಲ್ಲಿ…