Andolana originals

ಬಿಸಿಲ ಝಳ; ಜನರ ಚಿತ್ತ ಸೆಳೆಯುತ್ತಿರುವ ಈಜುಕೊಳ

ಚಿರಂಜೀವಿ ಸಿ. ಹುಲ್ಲಹಳ್ಳಿ

ಬೇಸಿಗೆಯಲ್ಲಿ ಈಜು ಕಲಿಕಾ ಶಿಬಿರ ಆಯೋಜನೆಗೆ ಸಿದ್ಧತೆ

ಮೈಸೂರು ವಿವಿ ವ್ಯಾಪ್ತಿಯ ಸರಸ್ವತಿಪುರಂ ಈಜುಕೊಳದಲ್ಲಿ ೬ ತಂಡಗಳಿಗೆ ತರಬೇತಿ

ಮಾ.೨೦ರಿಂದ ಜೆ.ಪಿ.ನಗರ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದಲ್ಲಿ ಬೇಸಿಗೆ ಶಿಬಿರ

ಮೈಸೂರು: ಕೆಂಡದಂತೆ ಸುಡುವ ಬಿಸಿಲಿನ ತಾಪದಿಂದ ಪಾರಾಗಲು ಜನರು ವಿವಿಧ ದಾರಿಗಳನ್ನು ಹುಡುಕುತ್ತಿದ್ದಾರೆ. ಕೆಲವರು ತಂಪು ಪಾನೀಯಗಳ ಮೊರೆ ಹೋದರೆ, ಹಲವರು ಈಜುಕೊಳಗಳತ್ತ ಮುಖ ಮಾಡುತ್ತಿದ್ದಾರೆ.

ಹಾಗಾಗಿ ನಗರದ ಈಜು ಕೊಳಗಳಲ್ಲಿ ಸಡಗರದ ವಾತಾವರಣ ಮೂಡಿದೆ.

ಕೆಲವೇ ದಿನಗಳಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಬೇಸಿಗೆ ರಜೆಯೂ ಆರಂಭವಾಗಲಿದೆ. ಮಕ್ಕಳಿಗೆ ಈಜು ಕಲಿಕಾ ಶಿಬಿರಗಳೂ ಶುರುವಾಗುವ ಸಾಧ್ಯತೆಗಳಿವೆ. ಇನ್ನು ಯುವ ಜನರು, ಮಧ್ಯವಯಸ್ಕರು ಕೂಡ ಈಜುಕೊಳಗಳಿಗೆ ಇಳಿಯುತ್ತಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಈಜುಕೊಳದ ಶುಲ್ಕದಲ್ಲೂ ಏರಿಕೆಯಾಗಿದೆ.

ನಗರದ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಈಜುಕೊಳ ಮತ್ತು ಜೆ.ಪಿ.ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಈಜುಕೊಳದಶುಲ್ಕಗಳನ್ನೂ ಏರಿಕೆ ಮಾಡಲಾಗಿದೆ.

ಹೆಚ್ಚಾಗಿ ಪೋಷಕರು ಚಿಕ್ಕ ಮಕ್ಕಳನ್ನು ಈಜುಕೊಳಕ್ಕೆ ಕರೆತರುತ್ತಿದ್ದಾರೆ. ಅಲ್ಲದೇ, ಬೇಸಿಗೆ ವೇಳೆ ಈಜುಕೊಳಕ್ಕೆ ಹೆಚ್ಚು ಜನರು ಬರುವುದರಿಂದ ಸರಸ್ವತಿಪುರಂ ಈಜುಕೊಳದಲ್ಲಿ ೭ ವರ್ಷ ಮೇಲ್ಪಟ್ಟವರಿಗೆ ಪ್ರತಿ ಗಂಟೆಗೆ ೭೦ ರೂ. ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ೪೦ ರೂ. ದರವಿದೆ. ಈ ಹಿಂದಿನ ವರ್ಷಗಳಲ್ಲಿ ೭ ವರ್ಷ ಮೇಲ್ಪಟ್ಟವರಿಗೆ ೫೦ ರೂ. ಇತ್ತು. ವಿದ್ಯಾರ್ಥಿಗಳಿಗೆ ೩೦ ರೂ. ನಿಗದಿಪಡಿಸಲಾಗಿತ್ತು. ಈಗ ಶುಲ್ಕ ಹೆಚ್ಚಾಗಿದೆ.

ಬೇಸಿಗೆ ಶಿಬಿರವನ್ನು ಏಪ್ರಿಲ್ ಮೊದಲ ವಾರದಲ್ಲಿ ಆರಂಭಿಸುವುದು ವಾಡಿಕೆ. ಈ ಬಗ್ಗೆ ಮೇಲಾಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ. ೬ ತಂಡಗಳಲ್ಲಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಇನ್ನೂ ಪರೀಕ್ಷೆ ನಡೆಯುತ್ತಿದ್ದು, ಮಾರ್ಚ್ ಕೊನೆಯ ವಾರದಲ್ಲಿ ಈಜು ಕೊಳಗಳು ಭರ್ತಿ ಆಗಲಿವೆ. ಹೀಗಾಗಿ ಪ್ರಮುಖ ಈಜುಕೊಳಗಳಲ್ಲದೆ, ತರಬೇತಿ ನೀಡುತ್ತಿರುವ ಖಾಸಗಿ ಈಜುಕೊಳಗಳಿಗೆ ಸೇರಿಸಲು ಪೋಷಕರು ಮುಂದಾಗಿದ್ದಾರೆ ಎಂದು ಈಜು ತರಬೇತುದಾರ ಜಯಕುಮಾರ್ ತಿಳಿಸಿದ್ದಾರೆ.

ಸರಸ್ವತಿಪುರಂ ಈಜುಕೊಳದಲ್ಲಿ ಬೇಸಿಗೆ ಶಿಬಿರ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ೬ ತಂಡಗಳಲ್ಲಿ ಈಜಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ತಂಡದಲ್ಲಿ ೭೦ ರಿಂದ ೧೦೦ ಜನರಿಗೆ ಅವಕಾಶವಿರಲಿದೆ. ದಿನದ ಟಿಕೆಟ್ ದರ ೭೦ ರೂ., ತಿಂಗಳ ಶುಲ್ಕ ೧,೨೦೦ ರೂ. ನಿಗದಿಪಡಿಸಲಾಗಿದೆ.

ಸರಸ್ವತಿಪುರಂ ಈಜುಕೊಳದಲ್ಲಿ ಬೇಸಿಗೆ ಶಿಬಿರದ ಶುಲ್ಕ ೪,೩೮೦ ರೂ. ನಿಗದಿಯಾಗುವ ಸಾಧ್ಯತೆ ಇದೆ. ಆದರೆ, ಜೆ.ಪಿ.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದಲ್ಲಿ ಮಾ.೨೦ರಿಂದ ಬೇಸಿಗೆ ಶಿಬಿರ ಆರಂಭವಾಗಲಿರುವ ೨ ತಿಂಗಳ ಬೇಸಿಗೆ ಶಿಬಿರಕ್ಕೆ ೪,೫೦೦ ರೂ.ಶುಲ್ಕ ನಿಗದಿಪಡಿಸಲಾಗಿದೆ. ಈ ಬಾರಿ ಪೋಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಮಕ್ಕಳು, ಯುವಕರು ಬರುವ ನಿರೀಕ್ಷೆಯಿದೆ ಎಂದು ಈಜು ತರಬೇತುದಾರ ಪವನ್ ‘ಆಂದೋಲನ’ ದಿನಪತ್ರಿಕೆಗೆ ತಿಳಿಸಿದರು.

” ಪ್ರತಿ ತಂಡದಲ್ಲಿ ೨೦ ಮಂದಿಗೆ ಅವಕಾಶವಿದ್ದು, ೬ ತಂಡಗಳು ಇರಲಿವೆ. ಈಜು ಕೊಳದ ನಿರ್ವಹಣೆಗೆ ಹೆಚ್ಚು ಹಣ ವ್ಯಯಿಸಬೇಕಿದೆ.”

ಪವನ್, ಈಜು ತರಬೇತುದಾರ, ಸರಸ್ವತಿಪುರಂ ಈಜುಕೊಳ 

ಆಂದೋಲನ ಡೆಸ್ಕ್

Recent Posts

ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…

2 hours ago

ತ್ರಿಪುರ ಸುಂದರಿ ಅಮ್ಮನವರ ಜಾತ್ರೆಗೆ ಸಕಲ ಸಿದ್ಧತೆ

ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…

2 hours ago

ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್

ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…

2 hours ago

ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!

ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…

2 hours ago

ಕೊಡಗು‌ ಸಿದ್ದಾಪುರ ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

11 hours ago