Andolana originals

ಒಣಗಿದ ಅಪಾಯಕಾರಿ ಮರಗಳ ತೆರವು

ಕಾರ್ಯಾಚರಣೆ ಆರಂಭಿಸಿದ ನಗರಪಾಲಿಕೆ 

ಮೈಸೂರು: ನಗರದ ವಿವಿಧ ಬಡಾವಣೆಗಳಲ್ಲಿಒಣಗಿದ ಮರಗಳು ಹಾಗೂ ಅಪಾಯಕಾರಿ ರೆಂಬೆಗಳ ತೆರವಿಗೆ ಮಹಾ ನಗರಪಾಲಿಕೆಯ ತೋಟಗಾರಿಕೆ ವಿಭಾಗ ಕಾರ್ಯಾಚರಣೆ ಆರಂಭಿಸಿದೆ.

‘ಆಂದೋಲನ’ ದಿನಪತ್ರಿಕೆ ನಡೆಸಿದ ‘ಒಣ ಮರ ಜನರು ಹೈರಾಣ’ ಅಭಿಯಾನದಲ್ಲಿ ಫೆ.೨೬ ರಿಂದ ಮಾ.೩ರವರೆಗೆ ಒಣ ಮರಗಳು ಹಾಗೂ ರೆಂಬೆಗಳ ಬಗ್ಗೆ ಸಾರ್ವಜನಿಕರು ನೀಡಿರುವ ದೂರುಗಳು, ಅಭಿಪ್ರಾಯಗಳನ್ನು ಪ್ರಕಟಿಸಲಾಗಿತ್ತು. ಒಣಗಿದ ಅಪಾಯಕಾರಿ ಮರದ ಬೃಹತ್ ರೆಂಬೆಗಳನ್ನು ನಗರಪಾಲಿಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಅವರ ಮಾರ್ಗದರ್ಶನದಲ್ಲಿ ತೆರವುಗೊಳಿಸಲಾಗಿದೆ.

ರಾಜೀವನಗರದ ಮುಖ್ಯರಸ್ತೆಯಲ್ಲಿ ಸಂಪೂರ್ಣವಾಗಿ ಒಣಗಿ ನಿಂತಿದ್ದ ದೊಡ್ಡ ಮರದ ಬಗ್ಗೆ ಇಂದ್ರೇಶ್ ಎಂಬವರು ಪತ್ರಿಕೆಗೆ ಫೋಟೊ ಸಹಿತ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಆ ಮರದ ಎ ರೆಂಬೆಗಳನ್ನು ತೆರವು ಮಾಡಲಾಗಿದೆ.

ಪೂರ್ಣವಾಗಿ ತೆರವು ಮಾಡಲು ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ತೆರವು ಮಾಡಲಾಗಿದೆ ಎಂದು ಮೋಹನ್ ತಿಳಿಸಿದರು.

ನಗರದ ವಿವಿಧ ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕಂಡು ಬಂದಿರುವ ಒಣಗಿದ ರೆಂಬೆಗಳನ್ನು ತೋಟಗಾರಿಕೆ ವಿಭಾಗದ ಸಿಬ್ಬಂದಿ ನಿರಂತರವಾಗಿ ಹುಡುಕಾಡಿ ಏಣಿ ಇರುವ ಜೀಪ್ ಸಹಾಯದಿಂದ ತೆರವು ಮಾಡುತ್ತಿzರೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ರೆಂಬೆಗಳು ಕೂಡ ಒಣಗಲು ಆರಂಭಿಸಿವೆ.

ಕೆಲವು ದೊಡ್ಡ ಮರಗಳಲ್ಲಿ ಅರ್ಧ ಮುರಿದಿರುವ ರೆಂಬೆಗಳೂ ಇವೆ. ಅವು ಸ್ವಲ್ಪ ಹಸಿರಾಗಿ ಕಂಡರೂ ಯಾವ ಗಳಿಗೆಯಲ್ಲಿ ಬೇಕಾದರೂ ಮುರಿದು ಬೀಳುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಸಿಬ್ಬಂದಿ ಹೇಳುತ್ತಾರೆ.

ನಗರದ ಕೆಲವು ಉದ್ಯಾನಗಳಲ್ಲಿ ದಟ್ಟವಾಗಿ ಬೆಳೆದಿರುವ ಮರಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಮುರಿದಿರುವ ರೆಂಬೆಗಳ ಹುಡುಕಾಟ ನಡೆಸಿದ್ದಾರೆ.

ರಸ್ತೆ ಬದಿಯಲ್ಲಿ ಕಂಡುಬಂದ ಅಪಾಯಕಾರಿ ಹಾಗೂ ಒಣಗಿದ ಮರಗಳು ಹರಡಿಕೊಂಡಿರುವ ರೆಂಬೆಗಳನ್ನು ತೆರವು ಮಾಡಿದ್ದೇವೆ ಎಂದು ಹೇಳಿದರು.

” ‘ಆಂದೋಲನ’ ದಿನಪತ್ರಿಕೆ ವರದಿ ಆಧರಿಸಿ ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಕೋರಿದ್ದೇವೆ. ಈವರೆಗೂ ನಮಗೆ ಅನುಮತಿ ಸಿಕ್ಕಿಲ್ಲ. ಆದರೂ ಯಾವಾಗ ಬೇಕಾದರೂ ಅಪಾಯ ಉಂಟು ಮಾಡುವ ಒಣಗಿರುವ ಮರಗಳ ರೆಂಬೆಗಳನ್ನು ತೆರವು ಮಾಡಿದ್ದೇವೆ. ಅಪಾಯದ ಅಂಚಿನಲ್ಲಿರುವ ಹಲವು ಹಸಿ ಮರಗಳನ್ನು ಅನುಮತಿ ಇಲ್ಲದ ಕಾರಣ, ಹಾಗೆಯೇ ಉಳಿಸಿದ್ದೇವೆ.”

 ಮೋಹನ್ ಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆ, ಮೈಸೂರು

ಆಂದೋಲನ ಡೆಸ್ಕ್

Recent Posts

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

3 mins ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

6 hours ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

6 hours ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

6 hours ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

6 hours ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

6 hours ago