೨ ದಿನದಲ್ಲಿ ನಾಲೆಗೆ ನೀರು: ಇಂಜಿನಿಯರ್ ದರ್ಶನ್
ನಂಜನಗೂಡು: ಕಬಿನಿ ಬಲದಂಡೆ ನಾಲೆಯ ಉಪನಾಲೆ ಹುಲ್ಲಹಳ್ಳಿ ನಾಲೆಗೆ ಕುಸಿದು ಬಿದ್ದು, ಎರಡೂ ನಾಲೆಗಳಲ್ಲಿ ನೀರಿಲ್ಲದ ಸುದ್ದಿ ಮಂಗಳವಾರ ‘ಆಂದೋಲನ’ ದಿನಪತ್ರಿಕೆ ಯಲ್ಲಿ ಬಿತ್ತರವಾಗಿದ್ದನ್ನು ಗಮಿಸಿದ ಅಧಿಕಾರಿಗಳು, ಮಂಗಳವಾರ ಬೆಳಿಗ್ಗೆಯಿಂದಲೇ ದುರಸ್ತಿ ಕೆಲಸ ಆರಂಭಿಸಿದ್ದಾರೆ.
ಮಂಗಳವಾರ ಕೊರೆಹುಂಡಿ ಸಮೀಪದಲ್ಲಿ ನಾಲೆ ಕುಸಿದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಹಾಲಪ್ಪ ಹಾಗೂ ದರ್ಶನ್ ಪತ್ರಿಕೆಯೊಂದಿಗೆ ಮಾತನಾಡಿ, ಈ ಕಿರುನಾಲೆ ಶಿಥಿಲವಾಗಿದ್ದನ್ನು ಗಮನಿಸಿ ೨ ತಿಂಗಳ ಹಿಂದೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದು ನಿಜ. ಆದರೆ ಮಳೆಯಿಂದಾಗಿ ಹೆಚ್ಚಿನ ನೀರು ಹರಿದ ಪರಿಣಾಮ ನಾಲೆ ಕುಸಿದಿದೆ
ಇನ್ನೆರಡು ದಿನಗಳಲ್ಲಿ ಹುಲ್ಲಹಳ್ಳಿ ನಾಲೆಯಲ್ಲಿ ನೀರು ಹರಿಸಲಾಗುವುದು ಎಂದರು. ಈಗ ತಾತ್ಕಾಲಿಕವಾಗಿ ಕಬ್ಬಿಣದ ಬೃಹತ್ ಗಾರ್ಡ್ ಬಳಸಿ ಕಿರುನಾಲೆಯಲ್ಲಿ ನೀರು ಹರಿಸಲು ಕ್ರಮ ಜುರುಗಿಸಲು ಸಿದ್ಧತೆ ನಡೆದಿದೆ. ಹದಿನೈದು ದಿನಗಳಲ್ಲಿ ಕಿರುನಾಲೆಯಲ್ಲಿ ನೀರು ಹರಿಸಲಾಗುತ್ತದೆ. ಈ ನಾಲೆಯ ದುರಸ್ತಿಗಾಗಿ ೧ ಕೋಟಿ ೯೦ ಲಕ್ಷ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಅದು ಮಂಜೂರಾಗಿ ಬರುವವರಿಗೆ ನೀರು ಹರಿಸಲು ಈಗ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದರು.
” ಹುಲ್ಲಹಳ್ಳಿ ನಾಲೆಯಲ್ಲಿ ಬಿದ್ದ ಕಿರುನಾಲೆಯ ಮಣ್ಣು ಕಬ್ಬಿಣ ಸೇರಿದಂತೆ ಇನ್ನಿತರ ಅವಶೇಷಗಳನ್ನು ೨ ದಿನಗಳಲ್ಲಿ ಹೊರ ಸಾಗಿಸಿ ಶುಕ್ರವಾರದೊಳಗಾಗಿ ನಾಲೆಯಲ್ಲಿ ನೀರು ಹರಿಸಲಾಗುವುದು. ಇದರಿಂದ ಬಿಳಿಗರೆ ಹೋಬಳಿಯ ಹುಲ್ಲಹಳ್ಳಿ ನಾಲೆಯ ೭,೨೦೦ ಎಕರೆ ಪ್ರದೇಶದ ಅಚ್ಚುಕಟ್ಟುದಾರರ ನೀರಿನ ಬವಣೆ ನಿವಾರಣೆಯಾಗಲಿದೆ.”
-ದರ್ಶನ್, ಇಂಜಿನಿಯರ್ , ಕಾವೇರಿ ನೀರಾವರಿ ನಿಗಮ
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…