Andolana originals

ಅವಸಾನದಂಚಿನಲ್ಲಿ ಸಂಬಾರ ಪದಾರ್ಥಗಳ ರಾಣಿ

ಅಕಾಲಿಕ ಮಳೆಯಿಂದ ಕಟ್ಟೆರೋಗ, ಕೊಳೆರೋಗ ಬಾಧೆ; ಏಲಕ್ಕಿ ಕೃಷಿಯ ಮೇಲೆ ದುಷ್ಪರಿಣಾಮ

ಸೋಮವಾರಪೇಟೆ: ಸಂಬಾರ ಪದಾರ್ಥಗಳ ರಾಣಿ ಎಂದೇ ಕರೆಸಿಕೊಳ್ಳುವ ಏಲಕ್ಕಿ ರೋಗಬಾಧೆಯಿಂದ ತಾಲ್ಲೂಕಿನಲ್ಲಿ ಅವಸಾನದ ಅಂಚಿನಲ್ಲಿದೆ. ಕಳೆದ ಮೇ ತಿಂಗಳಿನಿಂದ ನಿರಂತರವಾಗಿ ಸುರಿದ ಮುಂಗಾರು ಮಳೆ ಪರಿಣಾಮ ಕಟ್ಟೆ ರೋಗ, ಕೊಳೆರೋಗ ತೋಟಗಳಿಗೆ ವ್ಯಾಪಿಸಿ ಏಲಕ್ಕಿ ಕೃಷಿಯ ಮೇಲೆ ದುಷ್ಪರಿಣಾಮ ಬೀರಿದ್ದು, ರೈತರು ಹೈರಾಣಾಗಿದ್ದಾರೆ.

ವಾರ್ಷಿಕ ಸರಾಸರಿ ೧೫೦ರಿಂದ ೨೫೦ ಇಂಚು ಮಳೆ ಬೀಳುವ ಪ್ರದೇಶದಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ಬೆಟ್ಟ ತಪ್ಪಲಿನ ಪ್ರದೇಶ, ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಕಕ್ಕಬ್ಬೆ, ವಿರಾಜಪೇಟೆ ತಾಲ್ಲೂಕಿನಬಿರುನಾಣಿ, ಬಿ.ಶೆಟ್ಟಿಗೇರಿ ಪ್ರದೇಶದಲ್ಲಿ ಏಲಕ್ಕಿ ಪ್ರಧಾನ ಷಿಯಾಗಿದೆ.

ಎರಡು ದಶಕಗಳ ಹಿಂದೆ ಏಲಕ್ಕಿ ಕಣಜವೆಂದು ಕರೆಸಿಕೊಳ್ಳುತ್ತಿದ್ದ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ನಾಡ್ನಳ್ಳಿ, ಹೆಗ್ಗಡಮನೆ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಮುಕ್ಕೊಡ್ಲು, ಕುಮಾರಳ್ಳಿ, ಮಾಲ್‌ಮಾನೆ, ಕೂತಿ, ತೋಳೂರುಶೆಟ್ಟಳ್ಳಿ, ಬಿಳಿಗೇರಿ, ತಾಕೇರಿ, ಕಿರಗಂದೂರು, ತಲ್ತಾರೆ ಶೆಟ್ಟಳ್ಳಿ ಗ್ರಾಮಗಳ ಏಲಕ್ಕಿ ಬೆಳೆಗಾರರು ಈಗ ನಷ್ಟವನ್ನು ಅನುಭವಿಸುತ್ತಿದ್ದಾರೆ.

ನಾಲ್ಕೈದು ವರ್ಷಗಳಿಂದ ಸಂಭವಿಸುತ್ತಿರುವ ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆ, ಅಧಿಕ ಉತ್ಪಾದನಾ ವೆಚ್ಚ, ಕಡಿಮೆ ಬೆಲೆ, ಕೃಷಿಕರಿಗೆ ಕಾಫಿ ಮೇಲಿನ ವ್ಯಾಮೋಹ ಇನ್ನಿತರೆ ಕಾರಣಗಳಿಂದ ನೂರಾರು ಕೃಷಿಕರು ಏಲಕ್ಕಿ ತೋಟದ ನಿರ್ವಹಣೆ ಮಾಡದೆ ಕೃಷಿಯನ್ನು ಕೈಬಿಟ್ಟಿದ್ದಾರೆ. ಇನ್ನು ಕೆಲವರು ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ೫,೮೦೯ ಹೆಕ್ಟೇರ್‌ನಲ್ಲಿ ಏಲಕ್ಕಿ ಕೃಷಿ ಬೆಳೆಯಲಾಗುತ್ತಿತ್ತು. ಸೋಮವಾರಪೇಟೆ ತಾಲ್ಲೂಕಿನ ೧,೭೩೬ ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಕೃಷಿ ಮಾಡಲಾಗುತ್ತಿದೆ. ಆದರೆ ಇಳುವರಿಯಲ್ಲಿ ಹಿನ್ನಡೆಯಾಗುತ್ತಿದೆ. ಸರಿಯಾದ ಬೆಲೆಯೂ ಸಿಗುತ್ತಿಲ್ಲ.

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಏಲಕ್ಕಿ ಕೃಷಿ ಲಾಭದಾಯಕ. ರೋಗ ರಹಿತ ಏಲಕ್ಕಿ ಸಸಿಗಳು ನೆಟ್ಟು ಬೆಳೆಸಬೇಕು. ಐಗೂರು ನರ್ಸರಿಯಲ್ಲಿ ರಿಯಾಯಿತಿ ದರದಲ್ಲಿ ಸಸಿಗಳು ದೊರೆಯುತ್ತವೆ. ರೈತರು ಕಟ್ಟೆರೋಗವಿರುವ ತಂಡೆಗಳಿಂದ ಬೀಜಗಳನ್ನು ತೆಗೆದು ನರ್ಸರಿ ಮಾಡಬಾರದು. ರೋಗ ನಿಯಂತ್ರಣದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಂಬಾರ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ: ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆ ; ಸುಗಮ ಆಡಳಿತದ ಚಿಂತೆ

” ಅಕಾಲಿಕ ಮಳೆ, ರೋಗಬಾಧೆಯಿಂದ ಶಾಂತಳ್ಳಿ ಹೋಬಳಿಯಲ್ಲಿ ಏಲಕ್ಕಿ ಅವಸಾನದ ಅಂಚಿನಲ್ಲಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಇಳುವರಿ ಕಡಿಮೆಯಿದೆ. ನಾಲ್ಕೈದು ವರ್ಷಗಳಿಂದ ೧ ಕೆ.ಜಿ. ಏಲಕ್ಕಿಗೆ ಒಂದೂವರೆ ಸಾವಿರ ರೂ.ಗಳಷ್ಟು ಬೆಲೆ ಸಿಗುತ್ತಿದೆ. ಕೆ.ಜಿ.ಗೆ ನಾಲ್ಕು ಸಾವಿರ ರೂ.ಗಳಷ್ಟು ಬೆಲೆ ಸಿಕ್ಕರೆ ಮಾತ್ರ ಏಲಕ್ಕಿ ಕೃಷಿ ಮಾಡಬಹುದು. ಸರ್ಕಾರ ರೈತರಿಗೆ ಎಕರೆಗೆ ೫೦ ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು.”

-ಉತ್ತಯ್ಯ, ಏಲಕ್ಕಿ ಕೃಷಿಕ, ಇನಕನಹಳ್ಳಿ ಗ್ರಾಮ

” ಏಲಕ್ಕಿ ಪುನಶ್ಚೇತನಕ್ಕಾಗಿ ೨೦೨೫-೨೬ನೇ ಸಾಲಿಗೆ ಸಂಬಾರ ಮಂಡಳಿ ಅನೇಕ ಸಹಾಯಧನ ಯೋಜನೆಗಳನ್ನು ರೂಪಿಸಿದ್ದು, ಏಲಕ್ಕಿ ಮರುನಾಟಿ, ಏಲಕ್ಕಿ ನರ್ಸರಿಗೆ ಸಾಕಷ್ಟು ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸುವ ದಿನಾಂಕ ಸೆ.೩೦ಕ್ಕೆ ಮುಗಿದಿದೆ. ಕಾಳು ಮೆಣಸು ಬಿಡಿಸುವ ಯಂತ್ರ ಖರೀದಿ, ಸ್ಪೈಸ್ ಕ್ಲಿನರ್ ಗ್ರೇಡರ್ ಖರೀದಿಗೆ ಸಹಾಯಧನಕ್ಕಾಗಿ ಅ.೩೦ರವರೆಗೆ ರೈತರು ಅರ್ಜಿ ಸಲ್ಲಿಸಬಹುದು. ಏಲಕ್ಕಿ ಪುನಶ್ಚೇನಕ್ಕೆ ಸಂಬಾರ ಮಂಡಳಿ ಕೃಷಿಕರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಕೃಷಿಕರು ಉಪಯೋಗಿಸಿಕೊಳ್ಳಬೇಕು.”

-ಎನ್.ಬಿ.ಲೋಕೇಶ್, ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಸೋಮವಾರಪೇಟೆ.

ಆಂದೋಲನ ಡೆಸ್ಕ್

Recent Posts

ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ: ದಂಪತಿಗೆ ಗಂಭೀರ ಗಾಯ

ಚಾಮರಾಜನಗರ: ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ದಂಪತಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಾಮರಾಜನಗರದ ರೈಲ್ವೆ ಬಡಾವಣೆಯಲ್ಲಿ…

1 hour ago

ಕನ್ನಡ ಶಾಲೆಗಳ ಉಳಿವಿಗೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಮಂಡ್ಯ: ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ…

1 hour ago

ನಾಳೆ ಕೇರಳ, ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಕೇರಳ: ಕೇರಳ ಮತ್ತು ತಮಿಳುನಾಡು ಚುನಾವಣೆಗೆ ದಿನಾಂಕ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಮಾರ್ಚ್.‌11ರಂದು ಪ್ರಧಾನಿ…

1 hour ago

ಬಂಡೀಪುರ: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನ

ಗುಂಡ್ಲುಪೇಟೆ: ಸೋಮವಾರ ಬೆಳಗ್ಗೆ ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು ಏಕಕಾಲದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಕಿರುಬನ ಕೊಳಚಿ ಕೆರೆಯಲ್ಲಿ ಒಂದು…

2 hours ago

ಹನೂರು: ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ…

2 hours ago

ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ: ವಿಜೃಂಭಣೆಯಿಂದ ನಡೆದ ತಂಪುಜ್ಯೋತಿ ಹಾಗೂ ರಥೋತ್ಸವ

ಮಹಾದೇಶ್ ಎಂ.ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಎರಡನೇ ದಿನ…

3 hours ago