‘ಆಂದೋಲನ’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರುಗಳ ಮಳೆ
ಮೈಸೂರು: ‘ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕರೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಅವರ ಬಳಿ ಹೇಳಿಕೊಂಡ ಸಮಸ್ಯೆಗಳ ಬಗೆಗಿನ ವಿವರ ಇಲ್ಲಿದೆ.
ಚಿರಂಜೀವಿ ಸಿ. ಹುಲ್ಲಹಳ್ಳಿ
ಹುಲ್ಲಹಳ್ಳಿ ಜಗದೀಶ್: ಹುಲ್ಲಹಳ್ಳಿ ಮಾಂಸಾಹಾರದ ಹೋಟೆಲ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಪೊಲೀಸರೊಬ್ಬರು ಇದರಲ್ಲಿ ಶಾಮೀಲಾ ಗಿರುವ ಶಂಕೆ ಇದೆ. ಪೇದೆ ಕುಡಿದ ಮತ್ತಿನಲ್ಲಿ ಕೆಲಸ ಮಾಡುತ್ತಾರೆ. ಸಾರ್ವಜನಿಕ ರೊಂದಿಗೆ ದುವರ್ತನೆ ತೋರುತ್ತಿದ್ದು, ಶಿಸ್ತು ಕ್ರಮ ಜರುಗಿಸಿ.
ಎಸ್‌ಪಿ:ಕುಡಿದು ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು. ಜೊತೆಗೆ ಸಾರ್ವಜನಿಕ ರೊಂದಿಗೆ ಸರಿಯಾಗಿ ವರ್ತಿಸಲು ಸೂಚನೆ ನೀಡುವೆ.
ಕೃಷ್ಣ (ಸರಗೂರು): ಸರಗೂರು ಠಾಣೆಯಲ್ಲಿ ಇರುವ ಸಿಬ್ಬಂದಿಗಳ ಕೊರತೆ ನೀಗಿಸಿ.
ಎಸ್‌ಪಿ: ಜಿಲ್ಲೆಯಲ್ಲಿನ ಪೊಲೀಸ್ ಠಾಣೆಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪೊಲೀಸ್ ಠಾಣೆ ಸಿಬ್ಬಂದಿ ಕೊರತೆಯನ್ನು ಸರಿದೂಗಿಸಲಾಗುವುದು. ಸರಗೂರು ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಸಾರ್ವಜನಿಕರು ಹೆಚ್ಚಿನ ಸಮಸ್ಯೆ ಇದ್ದರೆ ೧೧೨ಗೆ ಕರೆ ಮಾಡಬಹುದು.
ಪ್ರದೀಪ್ (ಎಚ್. ಡಿ. ಕೋಟೆ): ಕೊಲೆ ಯತ್ನದ ಆರೋಪಿ ಸಣ್ಣ ಕುಮಾರ ಜಾಮೀನು ರದ್ದು ಪಡಿಸಿ. ಇವರಿಗೆ ಕುಮ್ಮಕ್ಕು ನೀಡಿದ ಪೊಲೀಸ್ ಪೇದೆ ಮಹದೇವಸ್ವಾಮಿ ಮತ್ತು ಯೋಗೇಶ್ ವಿರುದ್ಧ ಕ್ರಮ ಕೈಗೊಳ್ಳಬೆಕು.
ಎಸ್‌ಪಿ: ಹಲ್ಲೆ ಆರೋಪದ ಪ್ರಕರಣವನ್ನು ಪರಿ ಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಪೊಲೀಸ್ ಪೇದೆಗಳ ವರ್ತನೆಯ ವಿರುದ್ಧ ಲಿಖಿತ ದೂರು ದಾಖಲಿಸಿದರೆ ಕಚೇರಿಯಲ್ಲಿ ಕೂಲಂಕಷವಾಗಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.
ಪುಟ್ಟರಾಜು (ವಕೀಲ ಹುಣಸೂರು): ಅಕ್ಟೋಬರ್‌ನಲ್ಲಿ ಗಿರಿಜನ ಆಶ್ರಮ ಶಾಲೆಯಲ್ಲಿ ನಡೆದಿರುವ ಪೋಕ್ಸೋ ಪ್ರಕರಣವನ್ನು ಮಕ್ಕಳಿಗೆ ಬೆದರಿಕೆ ಹಾಕಿ ಮುಚ್ಚಿ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳು ಅಳಲು ತೋಡಿಕೊಂಡಿರುವ ವಿಡಿಯೋ ನನ್ನ ಬಳಿ ಇವೆ. ಈಗ ಯಾವ ರೀತಿ ದೂರು ನೀಡಬೇಕು.
ಎಸ್‌ಪಿ: ಫೋಕ್ಸೋ ಪ್ರಕರಣ ಸಂಬಂಧ ತಡ ಮಾಡದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ದಾಖಲಿಸಿ. ಆ ನಂತರ ಇಲಾಖೆಯೊಂದಿಗೆ ಜಂಟಿ ಯಾಗಿ ಕಾರ್ಯಾಚರಣೆ ನಡೆಸಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.
ಶಿವಕುಮಾರ್ (ಮಲೆಯೂರು): ತಿ. ನರಸೀಪುರ ತಾಲ್ಲೂಕಿನ ಮಲೆಯೂರಿನಲ್ಲಿ ಹೆಚ್ಚಿರುವ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿ
ಎಸ್‌ಪಿ: ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಯೊಂದಿಗೆ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮದ್ಯ ಅಕ್ರಮ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
ಉಷಾ ಪ್ರಕಾಶ್ (ಮೈಸೂರು): ವಿವೇಕಾನಂದ ವೃತ್ತದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ
ಎಸ್‌ಪಿ: ಈಗಾಗಲೇ ನಗರ ಮತ್ತು ಜಿಲ್ಲಾ ವ್ಯಾಪ್ತಿಯ ವೃತ್ತಗಳಲ್ಲಿ ಹಲವಾರು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಇನ್ನೂ ಅವಶ್ಯವಿದ್ದರೆ ಜಿಲ್ಲಾದಿಕಾರಿಯವರೊಂದಿಗೆ ಚರ್ಚಿಸಿ ಹೆಚ್ಚಿನ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು.
ದೀಕ್ಷಿತ್ (ಅಂತರಸಂತೆ): ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಿ ಮತ್ತು ಎಚ್. ಡಿ. ಕೋಟೆ ಪೊಲೀಸ್ ಪೇದೆ ಕಿರಣ್ ಕುಮಾರ್‌ಗೆ ನಾಗರಿಕ ಸ್ನೇಹಿಯಾಗಿ ವರ್ತಿಸುವಂತೆ ಸೂಚನೆ ನೀಡಿ
ಎಸ್‌ಪಿ: ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸು ವಂತೆ ಎಲ್ಲ ಪೊಲೀಸರಿಗೂ ಸೂಚನೆ ನೀಡಲಾ ಗಿರುತ್ತದೆ. ದುವರ್ತನೆ ತೋರುವ ಪೊಲೀಸರ ವಿರುದ್ಧ ಲಿಖಿತ ದೂರು ನೀಡಬಹುದು. ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಸಿದ್ದರಾಜು (ಎಚ್. ಡಿ. ಕೋಟೆ): ಪೊಲೀಸ್ ಠಾಣೆ ಎದುರಿನ ಗುರುಭವನದ -ಂಡ್ಲಿ ಫಿಟ್ನೆಸ್ ಕೆಳಗಡೆ ಬೇಕರಿ ಬಳಿ ಕೆಲವರಿಂದ ನಡೆಯುತ್ತಿರುವ ಪುಡಾಂಟ ತಡೆಗೆ ಕ್ರಮ ಕೈಗೊಳ್ಳಬೇಕು.
ಎಸ್‌ಪಿ: ಶೀಘ್ರದಲ್ಲಿಯೇ ಪುಂಡಾಟ ನಿಯಂತ್ರಣಕ್ಕೆ ಬರಲಿದೆ. ನಾಳೆಯಿಂದ ಸಮಸ್ಯೆ ಇರುವುದಿಲ್ಲ.
ನಗರ್ಲೆ ವಿಜಯಕುಮಾರ್ (ಸಾಮಾಜಿಕ ಕಾರ್ಯಕರ್ತ): ನಗರ್ಲೆ ಒಳಗಡೆ ಬೀಟ್ ಪೊಲೀಸ್ ಬರುತ್ತಿಲ್ಲ. ಆರೋಪ ಮತ್ತು ಪ್ರತ್ಯಾರೋಪ ಎರಡು ಪ್ರಕರಣದಲ್ಲಿಯೂ ಚಾರ್ಜ್‌ಶೀಟ್ ಸಲ್ಲಿಸುತ್ತಿದ್ದು, ಇದರಿಂದ ಅನ್ಯಾಯ ಆದವರಿಗೆ ನ್ಯಾಯ ಸಿಗುತ್ತಿಲ್ಲ. ಇದರ ವಿರುದ್ಧ ಕ್ರಮ ಜರುಗಿಸಿ
ಎಸ್‌ಪಿ: ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುವುದು. ನಿಷ್ಪಕ್ಷ ತನಿಖೆ ನಡೆಸಿ ಅನ್ಯಾ ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುತ್ತೇವೆ. ನಗರ್ಲೆ ಗ್ರಾಮಕ್ಕೆ ಬೀಟ್ ಪೊಲೀಸರು ಬರುವಂತೆ ಸೂಚಿಸುತ್ತೇನೆ.
ಚೆಲುವಸ್ವಾಮಿ (ಉಪ್ಪಿನಹಳ್ಳಿ): ರಾಷ್ಟ್ರೀಯ ಹೆದ್ದಾರಿ ೭೭೬ರ ಹೊಸಹಳ್ಳಿ ಬಳಿ ಸೇತುವೆ ನಿರ್ಮಾಣ ಕಾಮಗಾರಿಯಿಂದ ಅಪಘಾತ ವಾಗುವ ಸಂಭವ ಎದುರಾಗಿದ್ದು, ಸ್ಥಳದಲ್ಲಿ ಸಿಗ್ನಲ್ ಲೈಟ್ ಅಥವಾ ಬ್ಯಾರಿಕೇಡ್ ಅಳವಡಿಸಬೇಕು.
ಎಸ್‌ಪಿ: ಬ್ಯಾರಿಕೇಡ್‌ಗಳನ್ನು ಹಾಕಿಸಲಾಗುತ್ತಿದೆ. ಸಿಗ್ನಲ್ ಲೈಟ್ ಮತ್ತು ಹಂಪ್ಸ್ ಹಾಕಿಸುವ ಕುರಿತು ಪರಿಶೀಲನೆ ನಡೆಸಲಾಗುವುದು.
ಮೋಹನ್ ಕುಮಾರ್ (ಅಂತರಸಂತೆ): ಗ್ರಾಮದಲ್ಲಿ ಗೋ ಹತ್ಯೆ ಮತ್ತು ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಕ್ರಮ ಜರುಗಿಸಬೇಕು.
ಎಸ್‌ಪಿ: ಗೋ ಹತ್ಯೆ ಮತ್ತು ಮಾರಾಟ ಮಾಡುತ್ತಿರುವ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸುತ್ತೇವೆ. ಆದರೆ, ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು. ನೈತಿಕ ಪೊಲೀಸ್ ಗಿರಿ ಅಪರಾಧ. ನಮಗೆ ದೂರು ಕೊಡಿ ನಾವು ನಿಯಂತ್ರಣಕ್ಕೆ ತರುತ್ತೇವೆ.
ಮೈಸೂರು ಬಸವಣ್ಣ: ಕೇರ್ಗಳ್ಳಿಯಲ್ಲಿ ಪೊಲೀಸ್ ಬೂತ್ ಆರಂಭಿಸಿ
ಎಸ್‌ಪಿ: ಸ್ಥಳ ಪರಿಶೀಲನೆ ನಡೆಸಿ ಅವಶ್ಯ ಇದ್ದಲ್ಲಿ ಪೊಲೀಸ್ ಬೂತ್ ಅಳವಡಿಸುತ್ತೇವೆ.
ಸಂತೋಷ್ (ಕಮ್ಮಾರಹಳ್ಳಿ): ಇಲ್ಲೊಬ್ಬ ಜೈಲು ವಾಸ ಅನುಭವಿಸಿದರೂ ಅಕ್ರಮ ಮದ್ಯ ಮಾರಾಟ ನಿಲ್ಲಿಸಿಲ್ಲ.
ಎಸ್‌ಪಿ: ಅಬಕಾರಿ ಇಲಾಖೆಯವರೊಂದಿಗೆ ಮತ್ತೊಮ್ಮೆ ಜಂಟಿ ಕಾರ್ಯಾಚರಣೆ ನಡೆಸಿ ಆತನ ವಿರುದ್ಧ ಕ್ರಮ ಜರುಗಿಸಲಾಗುವುದು.
ಅಲ್ವಿನ್ ಡಿ’ಸೋಜಾ (ಮೈಸೂರು): ನನ್ನ ಮನೆಯಲ್ಲಿ ೬ ಮೇಕೆಗಳು ಕಳ್ಳತನವಾಗಿವೆ. ಆದರೆ, ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ.
ಎಸ್‌ಪಿ: ಈ ಬಗ್ಗೆ ಪರಿಶೀಲನೆ ನಡೆಸಿ ನಿಮ್ಮನ್ನು ನಮ್ಮ ಕಚೇರಿಗೆ ಕರೆಸಿ ಸಮಸ್ಯೆ ಬಗೆಹರಿಸುತ್ತೇವೆ.
ಮಹದೇವಶೆಟ್ಟಿ ಸೋಸಲೆ: ಶಾಲಾ-ಕಾಲೇಜು ಬಳಿ ಬೀಡಿ, ಸಿಗರೇಟು ಮಾರಾಟಕ್ಕೆ ಕಡಿವಾಣ ಹಾಕಿ
ಎಸ್‌ಪಿ: ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ಮಾಡುವವರ ವಿರುದ್ಧ ಪ್ರಕ ರಣ ದಾಖಲಾಗುತ್ತಿವೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು.
ಮಾದು: ನಿರ್ವಾಹಕನ ಸುಳ್ಳು ಆರೋಪಕ್ಕೆ ನನಗೆ ಪೊಲೀಸರಿಬ್ಬರು ಕಪಾಳಕ್ಕೆ ಹೊಡೆದರು, ಈ ಬಗ್ಗೆ ಕ್ರಮವಹಿಸಿ
ಎಸ್‌ಪಿ: ಏಕಾಏಕೀ ಹಲ್ಲೆ ಮಾಡಿರುವ ಕುರಿತು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿ.
ವೆಂಕಟೇಶ್, ವಿಜಯನಗರ: ರಸ್ತೆಯಲ್ಲಿ ಧಾನ್ಯ ಒಕ್ಕಣೆಯನ್ನು ಪೊಲೀಸರು ತಡೆಯಬೇಕು.
ಎಸ್‌ಪಿ: ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ರೈತರಿಗೆ ತಿಳಿ ಹೇಳಲಾಗುತ್ತಿದೆ. ಮಾತು ಕೇಳದವರ ವಿರುದ್ಧ ಕ್ರಮ ಜರುಗಿಸುತ್ತೇವೆ.
ಕಾಳಿಹುಂಡಿ ಶಿವಕುಮಾರ್: ಮುಂಜಾನೆ ಕಳ್ಳತನಗಳು ಹೆಚ್ಚಾಗಿದ್ದು, ಗಸ್ತು ಹೆಚ್ಚಿಸಬೇಕು. ದಟ್ಟಗಳ್ಳಿಯಲ್ಲಿ ಪೊಲೀಸ್ ಠಾಣೆ ತೆರೆಯಿರಿ
ಎಸ್‌ಪಿ: ಜಿಲ್ಲೆಯಲ್ಲಿ ಗುಡ್ ಮಾರ್ನಿಂಗ್ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ಬೆಳಿಗ್ಗೆ ೫ರಿಂದ ೯ರವರೆಗೆ ಪೊಲೀಸರು ಗಸ್ತಿನಲ್ಲಿರುತ್ತಾರೆ. ಸ್ಥಳೀಯವಾಗಿ ಸಮಸ್ಯೆ ಇದ್ದರೆ ೧೧೨ಕ್ಕೆ ಕರೆ ಮಾಡಿದರೆ ೧೫-೨೦ ನಿಮಿಷದೊಳಗೆ ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಬರಲಿದ್ದೇವೆ. ದಟ್ಟಗಳ್ಳಿಯಲ್ಲಿ ಪೊಲೀಸ್ ಠಾಣೆ ಆರಂಭಿಸುವ ಕುರಿತು ನಗರ ಆಯುಕ್ತರ ಗಮನಕ್ಕೆ ತರುತ್ತೇವೆ.
ಭಾನು ಪ್ರಕಾಶ್ (ಮೈಸೂರು ಗ್ರಾಹಕರ ಪರಿಷತ್)
ಅಕ್ರಮ ಪಿಜಿಗಳಿಗೆ ಕಡಿವಾಣ ಹಾಕಿ. ಪಿಜಿಯಲ್ಲಿ ಉಳಿಯುವ ಸಾರ್ವಜನಿಕರಿಗೆ ನಿಯಮಗಳನ್ನು ರೂಪಿಸಿ
ಎಸ್‌ಪಿ: ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿ ರುವ ಪಿಜಿಗಳ ಪರಿಶೀಲನೆ ನಡೆಸಲಾಗುವುದು. ನಗರ ಪ್ರದೇಶದಲ್ಲಿ ಪಿಜಿಗಳಿಂದ ಆಗಿರುವ ತೊಂದರೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗುವುದು.
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…
ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…