ಮಂಜು ಕೋಟೆ
ಸಾರ್ವಜನಿಕರ ಕೆಲಸ ಕಾರ್ಯಗಳಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕು
ಎಚ್.ಡಿ.ಕೋಟೆ: ಪುರಸಭೆಯ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕಾದ ಇಂಜಿನಿಯರ್‌ಗಳು ಮೂರು ತಿಂಗಳಿನಿಂದ ಇಲ್ಲದಂತಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು, ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳು ನಡೆಯದಂತಾಗಿವೆ.
ಜಿಲ್ಲೆಯ ಯಾವುದೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಇಲ್ಲದಿರುವಷ್ಟು ಸಮಸ್ಯೆಗಳು, ಅವ್ಯವಹಾರ, ಭ್ರಷ್ಟಾಚಾರ ಕೋಟೆ ಪುರಸಭೆಯಲ್ಲಿ ತಾಂಡವವಾಡುತ್ತಿದೆ ಎಂಬ ಆರೋಪವಿದೆ.
ಇಂತಹ ಸನ್ನಿವೇಶದಲ್ಲಿ ೨೩ ವಾರ್ಡುಗಳನ್ನು ಹೊಂದಿರುವ ಕೋಟೆ ಪುರಸಭೆಯಲ್ಲಿ ೩ ತಿಂಗಳುಗಳಿಂದ ನಿಯಮದಂತೆ ಇರಬೇಕಿದ್ದ ಇಬ್ಬರು ಇಂಜಿನಿಯರ್ ಸ್ಥಾನಗಳು ಖಾಲಿ ಇರುವುದು ವಿಪರ್ಯಾಸವಾಗಿದೆ.
ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಇಂಜಿನಿಯರ್ ಕರ್ತವ್ಯಲೋಪದ ಆಧಾರದ ಮೇಲೆ ೪ ತಿಂಗಳ ಹಿಂದೆ ಅಮಾನತ್ತಾಗಿದ್ದು, ಅವರ ಸ್ಥಳಕ್ಕೆ ನಿಯೋಜನೆಗೊಂಡಿದ್ದ ಇಂಜಿನಿಯರ್ ವಾರವಷ್ಟೇ ಕೆಲಸ ಮಾಡಿದ್ದು, ಮತ್ತೆ ಬರಲೇ ಇಲ್ಲ.
ಹೀಗಾಗಿ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಕೆಲಸ ಕಾರ್ಯ ನಡೆಯುತ್ತಿದ್ದು, ಅದರ ಉಸ್ತುವಾರಿ ನೋಡಿಕೊಳ್ಳಬೇಕಾಗಿದ್ದ ಇಂಜಿನಿಯರ್‌ಗಳೇ ಇಲ್ಲದಿದ್ದರೆ ಗುತ್ತಿಗೆದಾರ ಮಾಡಿದ್ದೇ ಅಂತಿಮ ಕೆಲಸ ಎಂಬಂತಾಗುತ್ತದೆ. ಸಾಲ ಮಾಡಿ ಮನೆ ಕಟ್ಟುವ ಕನಸು ಹೊಂದಿರುವ ನಿವಾಸಿಗಳಿಗೆ ಪರವಾನಗಿ ಪಡೆಯಲು ಪುರಸಭೆ ಯಲ್ಲಿ ಇಂಜಿನಿಯರ್‌ಗಳಿಲ್ಲದೆ ಸಾಧ್ಯವಾಗುತ್ತಿಲ್ಲ.
ಬೀದಿ ದೀಪಗಳ ಮತ್ತು ಕುಡಿಯುವ ನೀರಿನ ಸರಬರಾಜು ನಗರೋತ್ಥಾನ ಯೋಜನೆಯಡಿ ಮತ್ತು ಅನೇಕ ವಿಶೇಷ ಯೋಜನೆಗಳಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಆಗಿದ್ದರೂ ಇಂಜಿನಿಯರ್‌ಗಳಿಲ್ಲದೆ ಕೆಲಸ ಕಾರ್ಯಗಳು ಒಂದೂ ನಡೆಯುತ್ತಿಲ್ಲ.
ಬಡಜನರಿಗೆ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರದಿಂದ ಅವಕಾಶ ಮಾಡಿಕೊಟ್ಟಿದ್ದರೂ ಅದನ್ನು ಪರಿಶೀಲಿಸಿ ಅವರಿಗೆ ಸಹಾಯಧನ ನೀಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಪುರಸಭೆ ಯಲ್ಲಿ ಮೂರು ತಿಂಗಳಿನಿಂದ ಒಬ್ಬರು ಇಂಜಿನಿ ಯರ್ ಕೂಡ ನೇಮಕವಾಗಿಲ್ಲ.
ಇನ್ನೊಂದೆಡೆ ಮೈಸೂರಿನ ಸುತ್ತಮುತ್ತ ಮತ್ತು ಹೊಸದಾಗಿ ಮೇಲ್ದರ್ಜೆಗೇರಿರುವ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆಗಳಿಗೆ ಇಂಜಿನಿಯರ್‌ಗಳು ನೇಮಕವಾಗಿ ಕೆಲಸ ಮಾಡಲು ಮುಗಿಬಿದ್ದಿದ್ದಾರೆ.
ಆದರೆ, ಈ ಹಿಂದುಳಿದ ಪಟ್ಟಣದ ಪುರಸಭೆಯಲ್ಲಿ ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವ ಇಂಜಿನಿಯರ್‌ಗಳನ್ನು ನೇಮಕ ಮಾಡುವಲ್ಲಿ ಜನಪ್ರತಿನಿಧಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರು ವುದರಿಂದ ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.
ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಇಂಜಿನಿಯರ್‌ಗಳನ್ನು ನೇಮಕ ಮಾಡಿ ಪುರಸಭೆ ಮತ್ತು ಸಾರ್ವಜನಿಕರ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ.
” ಕೋಟೆ ಪುರಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಚುನಾಯಿತರಾಗದೇ ಇಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸಾರ್ವಜನಿಕರ ಕೆಲಸಗಳು, ಮೂಲ ಸೌಕರ್ಯಗಳು ನನೆಗುದಿಗೆ ಬಿದ್ದಿವೆ. ಶಾಸಕ ಅನಿಲ್ ಚಿಕ್ಕಮಾದು ಮತ್ತು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಇತ್ತ ಗಮನಹರಿಸಿ ಅಧಿಕಾರಿಗಳ ನೇಮಕ ಮಾಡಬೇಕಾಗಿದೆ”
-ಶಿವಮ್ಮ ಚಾಕಳ್ಳಿ ಕೃಷ್ಣ, ಪುರಸಭಾ ಸದಸ್ಯರು
” ಪುರಸಭಾ ಕಚೇರಿಯಲ್ಲಿದ್ದ ಇಂಜಿನಿಯರ್ ಮೂರು ತಿಂಗಳಿಂದ ಕರ್ತವ್ಯ ನಿರ್ವಹಿಸದೇ ಇರುವುದರಿಂದ ಅಭಿವೃದ್ಧಿಗೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಇಂಜಿನಿಯರ್ ಒಬ್ಬರನ್ನು ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಮತ್ತು ಮೇಲಾಧಿಕಾರಿಗಳಿಗೆ ೪-೫ ಬಾರಿ ಪತ್ರ ಬರೆದಿದ್ದೇನೆ.”
-ಸುರೇಶ್, ಮುಖ್ಯಾಧಿಕಾರಿ, ಪುರಸಭೆ
ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…
ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…
ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…
ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…