ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ, ಕನ್ನಡ ಜಾನಪದ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವು ಪುಸ್ತಕ ಪ್ರಿಯರನ್ನು ಆಕರ್ಷಿಸುತ್ತಿದೆ.
ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ಆಯೋಜಿಸಿರುವ ‘ಪ್ರಸಾರಾಂಗ ಪುಸ್ತಕೋತ್ಸವ-೨೦೨೫’ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳದಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾ ಟವಾಗುತ್ತಿದ್ದು, ಸಾಹಿತ್ಯ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ, ಕನ್ನಡ ಜಾನಪದ ಪುಸ್ತಕಗಳು, ಕನ್ನಡ ವಿಶ್ವಕೋಶ, ಪಠ್ಯಕ್ರಮ ಮುಗಿದು ಹೋಗಿರುವ ಹಳೆಯ ಪದವಿ ಪೂರ್ವ ಹಾಗೂ ಪದವಿ ಪಠ್ಯ ಪುಸ್ತಕಗಳು, ಪ್ರಕಟಣೆಗೊಂಡು ೪೦ ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಹಳೆಯ ಪ್ರಕಟಣೆಗಳು, ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ ಹಾಗೂ ಎಪಿಗ್ರಾಫಿಯ ಕರ್ನಾಟಕದ ಎಲ್ಲ ಸಂಪುಟಗಳು, ಪ್ರಸಾರಾಂಗದ ದಾಸ್ತಾನಿನಲ್ಲಿರುವ ಎಲ್ಲ ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳು, ಪ್ರಚಾರೋಪ ನ್ಯಾಸ ಮಾಲೆಯ ಪುಸ್ತಕಗಳು ಲಭ್ಯವಿದ್ದು, ಶೇ.೧೦ರಿಂದ ೭೫ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿವೆ. ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆಗೆ ಮಾತ್ರ ಪ್ರಸಾರಾಂಗದಿಂದ ಪ್ರಕಟಗೊಂಡಿರುವ ಹಳೆಯ ನಿಯತಕಾಲಿಕೆಗಳಿಗೆ ವಿಶೇಷ ರಿಯಾಯಿತಿ ದೊರೆಯು ತ್ತಿವೆ. ಇದರೊಂದಿಗೆ ೮೭೦ ಶೀರ್ಷಿಕೆಯ ೯ ಲಕ್ಷಕ್ಕೂ ಹೆಚ್ಚು ವೈವಿಧ್ಯಮಯವಾದ ಪುಸ್ತಕಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.
೫೦ ಸಾವಿರ ರೂ.ಗಳಿಗೆ ಪ್ರಸಾರಾಂಗದ ಎಲ್ಲ ಕೃತಿಗಳನ್ನು ಖರೀದಿಸಬಹುದಾಗಿದ್ದು, ರಿಯಾಯಿತಿ ಮಾರಾಟದಿಂದ ೨೫ಲಕ್ಷ ರೂ. ವ್ಯಾಪಾರದ ನಿರೀಕ್ಷೆಯನ್ನು ಪ್ರಸಾರಾಂಗ ಹೊಂದಿದೆ. ವಿಶ್ವಕೋಶಕ್ಕೆ ಶೇ.೫೦ ರಿಯಾಯಿತಿ: ಇದೇ ಮೊದಲ ಬಾರಿಗೆ ಕನ್ನಡ ವಿಶ್ವಕೋಶಕ್ಕೆ ಶೇ.೫೦ ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ಶೇ.೧೦, ೨೫ಕ್ಕಿಂತ ಹೆಚ್ಚು ರಿಯಾಯಿತಿ ನೀಡಿರಲಿಲ್ಲ. ಇಂಗ್ಲಿಷ್-ಕನ್ನಡ ನಿಘಂಟು ಶೇ.೨೫, ಪ್ರಚಾರೋಪನ್ಯಾಸ ಮಾಲೆ ಶೇ.೧೦, ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆಗೆ ಶೇ.೫೦ ರಿಯಾಯಿತಿ ನೀಡಲಾಗಿದೆ. ಪದವಿಪೂರ್ವ, ಪದವಿ ಹಳೆಯ ಪಠ್ಯ ಪುಸ್ತಕಗಳಿಗೆ ಶೇ.೭೫, ೪೦ ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳಿಗೆ ಶೇ.೭೫, ಪ್ರಾಚ್ಯವಿದ್ಯಾ ಸಂಶೋಧನಾಲಯದ ಹಳೆಯ ಪ್ರಕಟಣೆ ಗಳಿಗೆ ಶೇ.೭೦, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ಪ್ರಕಟಣೆಗಳಿಗೆ ಶೇ.೬೦, ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳಿಗೆ ಶೇ.೫೦ ರಿಯಾಯಿತಿ ಇದೆ.
” ಡಿ.೧೫ ಮತ್ತು ೧೬ರಂದು ಪ್ರಸಾರಾಂಗದ ಆವರಣದಲ್ಲಿ ಪುಸ್ತಕೋತ್ಸವ ಹಮ್ಮಿಕೊಂಡಿದ್ದೇವೆ. ಮೌಲಿಕವಾದ ೮ರಿಂದ ೧೦ ಕೃತಿಗಳ ಕುರಿತು ವಿದ್ವಾಂಸರು ವಿಮರ್ಶೆ ಭಾಷಣ ಮಾಡಲಿದ್ದಾರೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದವ ರನ್ನು ಗೌರವಿಸಲಾಗುತ್ತದೆ. ಮೈಸೂರು ವಿವಿಗೆ ವರಮಾನ ತಂದುಕೊಡುವ ಏಕೈಕ ಸಂಸ್ಥೆ ಪ್ರಾಸಾರಾಂಗ. ವಾರ್ಷಿಕ ೬೦ರಿಂದ ೭೦ ಲಕ್ಷ ರೂ. ವಹಿವಾಟು ನಡೆಯುತ್ತದೆ.”
-ಪ್ರೊ.ನಂಜಯ್ಯ ಎಂ.ಹೊಂಗನೂರು, ನಿರ್ದೇಶಕರು, ಮೈಸೂರು ವಿವಿ ಪ್ರಸಾರಾಂಗ
ಡಿ.೩೧ ರವರೆಗೂ ಪುಸ್ತಕ ಮೇಳ ‘ಪ್ರಸಾರಾಂಗ: ಪುಸ್ತಕೋತ್ಸವ-೨೦೨೫’ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳವು ಡಿ.೩೧ರವರೆಗೆ ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆವರೆಗೆ ನಡೆಯಲಿದೆ.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…