ಮೈಸೂರು: ನಗರದ ಕೆಲವು ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಚಿಕ್ಕ ಮಕ್ಕಳು ಭಯದಲ್ಲೇ ಓಡಾಡಿದರೆ, ಎಲ್ಲೆಂದರಲ್ಲಿ ಅಡ್ಡಾಡುವ ಬಿಡಾಡಿ ದನಗಳಿಂದ ವಾಹನ ಸವಾರರು ಮತ್ತು ಪಾದಚಾರಿಗಳ ಪ್ರಾಣಕ್ಕೆ ಕಂಟಕ ಎದುರಾಗುತ್ತಿದೆ.
ಮೈಸೂರು ವಿಶಾಲ ರಸ್ತೆಗಳನ್ನು ಹೊಂದಿರುವ ಸ್ವಚ್ಛನಗರಿ ಎಂಬ ಖ್ಯಾತಿ ಹೊಂದಿದೆ. ಇಲ್ಲಿನ ರಸ್ತೆ ಪಕ್ಕದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ನೋಡುತ್ತಾ ವಾಹನಗಳಲ್ಲಿ ಹೋಗುವುದೇ ಒಂದು ಸುಂದರ ಅನುಭವ. ಹೀಗೆ ವಾಹನ ಚಾಲನೆ ಮಾಡುತ್ತಲೇ ಕೊಂಚ ಮೈಮರೆತರೆ ಅಪಘಾತ ತಪ್ಪಿದ್ದಲ್ಲ. ಇದಕ್ಕೆ ಬಿಡಾಡಿ ದನಗಳು ಕಾರಣವಾಗಿವೆ. ರಸ್ತೆ ಮಧ್ಯದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವುದು, ಮಲಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಸಾವು-ನೋವುಗಳು ಕೂಡ ಸಂಭವಿಸಿವೆ. ಎಷ್ಟೋ ಜನ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
೧೧ ಸಾವಿರ ಹಸುಗಳು: ನಗರದಲ್ಲಿ ಸುಮಾರು ೧೧ ಸಾವಿರ ಹಸುಗಳಿದ್ದು, ಕೆಲವರಿಗೆ ಹಸುಗಳನ್ನು ಸಾಕಲು ಸ್ಥಳವಿಲ್ಲ. ಇನ್ನು ಕೆಲವರಿಗೆ ದಿನವಿಡೀ ಅವುಗಳಿಗೆ ಮೇವು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಸುಗಳನ್ನು ಹಾಲು ಕರೆದ ನಂತರ ರಸ್ತೆಗಳಿಗೆ ಬಿಡುತ್ತಾರೆ. ಇದರ ಬಗ್ಗೆ ನಗರಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿಡಾಡಿ ದನಗಳ ಹಾವಳಿ: ನಗರದ ಹಣ್ಣು ಹಾಗೂ ತರಕಾರಿ ಮಾರುಕಟ್ಟೆಗಳ ಬಳಿ ಈ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಮುಖ್ಯವಾಗಿ ಹಳ್ಳಿ ಪ್ರದೇಶದಲ್ಲಿ ಗಂಡು ಕರುಗಳನ್ನು ೫೦೦ ರೂಪಾಯಿಗೋ ಅಥವಾ ಸಣ್ಣಪುಟ್ಟ ಹಣಕ್ಕೋ ತಂದು ಈ ಕರುಗಳನ್ನು ಪ್ರಮುಖ ಮಾರುಕಟ್ಟೆ ಹಾಗೂ ಅಂಗಡಿ ಪ್ರದೇಶಗಳಲ್ಲಿ ಬಿಡುತ್ತಾರೆ. ಈ ಕರುಗಳು ಒಂದು ವರ್ಷಕ್ಕೆ ಸುಮಾರು ೨೫ ಸಾವಿರ ರೂಪಾಯಿ ಬೆಲೆ ಬಾಳುತ್ತವೆ. ಅದನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಇದೊಂದು ದಂಧೆಯೂ ಆಗಿದೆ ಎಂಬುದು ಕೆಲವರ ಆರೋಪವಾಗಿದೆ.
ಅಷ್ಟೇ ಅಲ್ಲದೇ, ಎಷ್ಟೋ ಗಂಡು ಕರುಗಳು ರಸ್ತೆಯ ಅಕ್ಕ-ಪಕ್ಕ, ಮಧ್ಯ ಹಾಗೂ ಮಾರುಕಟ್ಟೆ ಗಳಲ್ಲಿ ಜನರ ಮೇಲೆ ದಾಳಿ ಮಾಡಿರುವ ಉದಾಹರಣೆಗಳಿವೆ. ಇದರಿಂದಲೇ ಕಳೆದ ಎರಡು ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ನಗರಪಾಲಿಕೆ ಮಾಜಿ ಸದಸ್ಯ ರಂಗಸ್ವಾಮಿ ತಮ್ಮ ತಿಲಕ್‌ನಗರದ ಉದಾ ಹರಣೆಯನ್ನು ನೀಡುತ್ತಾರೆ.
ಹಸುಗಳನ್ನು ರಸ್ತೆಗೆ ಬಿಡದಂತೆ ಆಯಾ ಹಸುವಿನ ಮಾಲೀಕರಿಗೆ ಪಾಲಿಕೆಯ ಆರೋಗ್ಯ ನಿರೀಕ್ಷಕರ ಮೂಲಕ ಎಚ್ಚರಿಕೆ ನೀಡಲಾಗಿದೆ. ಆದರೂ ರಸ್ತೆಗಳಿಗೆ ಹಸುವನ್ನು ಬಿಡುತ್ತಿರುವ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ಮುಂದುವರಿದರೆ ಎರಡು ಬಾರಿ ದಂಡ ಹಾಕಲಾಗುತ್ತದೆ. ಮತ್ತೆ ಮುಂದುವರಿದರೆ ಹಸುಗಳನ್ನು ವಶಕ್ಕೆಪಡೆದು ಹರಾಜು ಹಾಕಲಾಗುವುದು ಎಂದು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಎಚ್ಚರಿಸಿದ್ದಾರೆ.
” ಮಾಲೀಕರಿಗೆ ಎಷ್ಟು ಹೇಳಿದರೂ ದನಗಳನ್ನು ರಸ್ತೆಯಲ್ಲಿ ಬಿಡುತ್ತಾರೆ. ಸಾರ್ವಜನಿಕರಿಂದ ದೂರು ಬಂದರೆ ಪರಿಶೀಲಿಸಿ ತಕ್ಷಣ ಪಾಲಿಕೆ ತಂಡ ಜಾನುವಾರುಗಳನ್ನು ಸಾಗಿಸಿ ದೊಡ್ಡಿಯಲ್ಲಿ ಬಿಡುತ್ತಾರೆ. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.”
-ಡಾ.ವೆಂಕಟೇಶ್, ಆರೋಗ್ಯಾಧಿಕಾರಿ
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…