ಮಂಜು ಕೋಟೆ
ಕೋಟೆ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಮೊಳಿಯೂರು ಆನಂದ್ ಮುಂದುವರಿಕೆಗೆ ನ್ಯಾಯಾಲಯದ ತೀರ್ಪು
ಎಚ್.ಡಿ.ಕೋಟೆ: ತಾಲ್ಲೂಕು ಕುರುಬ ಸಮಾಜದಲ್ಲಿ ಸಂಘದ ಅಧ್ಯಕ್ಷರ ವಿಚಾರವಾಗಿ ಒಂದು ವರ್ಷದಿಂದ ಮೊಳಿಯೂರು ಆನಂದ್ ಮತ್ತು ಕ್ಯಾತನಹಳ್ಳಿ ಮಾಲೇಗೌಡರವರ ಗುಂಪುಗಳ ನಡುವೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಜಿಲ್ಲಾ ನಿಬಂಧಕರು, ನ್ಯಾಯಾಲಯದ ಮುಖಾಂತರ ಸಮಾಜದ ಅಧ್ಯಕ್ಷರು ಮತ್ತು ಕನಕ ಭವನದ ಗೊಂದಲಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮೂಲಕ ಸಂಘರ್ಷಕ್ಕೆ ತೆರೆ ಎಳೆದಿದ್ದಾರೆ.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಮತ್ತು ಕನಕ ಭವನದ ನಿರ್ವಹಣೆಗೆ ಸಂಬಂಽಸಿದಂತೆ ಎರಡು ಗುಂಪುಗಳ ನಡುವೆ ತೀವ್ರ ಸಂಘರ್ಷ ಎದುರಾಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದವು. ಮುಖ್ಯಮಂತ್ರಿಗಳ ಆಪ್ತರಾಗಿರುವ ಮೊಳೆಯೂರು ಆನಂದ್ ಸಮಾಜದ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಜ.೩೦ರಂದು ಜಿಲ್ಲಾ ನಿಬಂಧಕರು, ಸಹಕಾರ ಸಂಘಗಳ ನ್ಯಾಯಾಲಯದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಬಿ.ಆನಂದ್‌ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿದೆ.
೨೦೨೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಹಾಗೂ ತಾಲ್ಲೂಕು ಸಮಾಜದ ಮುಖಂಡರುಗಳ ಸಮ್ಮುಖದಲ್ಲಿ ಮೊಳೆಯೂರು ಆನಂದ್‌ರನ್ನು ಸಮಾಜದ ಅಧ್ಯಕ್ಷರೆಂದು ಆಯ್ಕೆ ಮಾಡಿದ್ದು, ನಂತರ ಸಂಘವನ್ನು ನವೀಕರಣ ಮಾಡಿಕೊಂಡು ಕನಕ ಭವನದಲ್ಲಿ ಮೂಲ ಸೌಕರ್ಯಗಳಿಲ್ಲದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲು ಕೆಲವರ ಸಹಕಾರದಿಂದ ಮುಂದಾಗಿದ್ದರು.
ಸಮಾಜದ ಎರಡು ಬಣಗಳ ನಡುವೆ ಕನಕ ಭವನದ ಖರ್ಚು ವೆಚ್ಚ, ಕಾಮಗಾರಿಗಳು ಮತ್ತು ಅಧ್ಯಕ್ಷರ ವಿಚಾರವಾಗಿ ಮತ್ತಷ್ಟು ಸಂಘರ್ಷ ಎದುರಾಗಿ ೨೦೨೫ರ ಫೆಬ್ರವರಿಯಲ್ಲಿ ಕನಕ ಭವನದ ಮುಂಭಾಗದಲ್ಲಿ ಸಮಾಜದ ಉಪಾಧ್ಯಕ್ಷರಾದ ವೀರೇಗೌಡ ಮತ್ತು ಶಿರಮಳ್ಳಿ ಚಿಕ್ಕಣ್ಣ, ಸಿಂಡನಹಳ್ಳಿ ಯತೀಶ್ ಕುಮಾರ್ ಹಾಗೂ ಅನೇಕರು ಸಭೆ ನಡೆಸಿ ಅಧ್ಯಕ್ಷರಾದ ಆನಂದ್ ಸೇರಿದಂತೆ ಇನ್ನಿತರರನ್ನು ಪದಚ್ಯುತಿಗೊಳಿಸಿ ಕ್ಯಾತನಹಳ್ಳಿ ಮಾಲೇಗೌಡರನ್ನು ಸಮಾಜದ ಅಧ್ಯಕ್ಷರೆಂದು ಘೋಷಣೆ ಮಾಡಿ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಶಿವಪ್ಪ ಕೋಟೆ ಮತ್ತು ಮಾಲೇಗೌಡರ ಬಣದವರು, ಮೈಸೂರು ಜಿಲ್ಲಾ ನಿಬಂಧಕರು ಸಹಕಾರ ಸಂಘದ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಪರಿಶೀಲಿಸಿ ವಿಚಾರಣೆ ನಡೆಸಿದ ನ್ಯಾಯಾಧಿಶರು ಮಾಲೇಗೌಡರ ಅರ್ಜಿಗಳನ್ನು ವಜಾಗೊಳಿಸಿ ಹಿಂದೆ ಇದ್ದ ಅಧ್ಯಕ್ಷರಾದ ಆನಂದ್ ಸಂಘದ ಬೈಲಾದ ಪ್ರಕಾರಅಧ್ಯಕ್ಷರೆಂದು ಹಾಗೂ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿರಮಳ್ಳಿ ಚಿಕ್ಕಣ್ಣ ಹಾಗೂಖಜಾಂಚಿ ಯತೀಶ್ ಕುಮಾರ್ ಇವರುಗಳಹುದ್ದೆಗಳನ್ನು ರದ್ದುಗೊಳಿಸಿ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ ಮಹದೇವೇಗೌಡ, ಖಜಾಂಚಿಯಾಗಿ ಬೈಪಾಸ್ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಿಬಂಧಕರು, ಜಿಲ್ಲಾ ಸಹಕಾರ ಸಂಘದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
” ಸಂಘದ ಮತ್ತುಸಮುದಾಯದಸಾವಿರಾರು ಜನರುನಡೆಸಿದ ವಿಶೇಷ ಮಹಾಸಭೆಯ ನಿರ್ಣಯವನ್ನೇ ಕೆಲವರ ಪ್ರಭಾವದಿಂದ ನ್ಯಾಯಾಲಯದ ಮುಖಾಂತರ ನಮಗೆ ಸೋಲು ಮಾಡಿಸಿರಬಹುದು. ಮುಂದಿನ ದಿನಗಳಲ್ಲಿ ಸಮುದಾಯದ ಪರವಾಗಿ ನ್ಯಾಯ ಸಿಗಲಿದೆ.”
-ಕ್ಯಾತನಹಳ್ಳಿ ಮಾಲೇಗೌಡ, ಮಾಜಿ ಅಧ್ಯಕ್ಷ
” ಸಮಾಜದ ಮತ್ತು ಕನಕ ಭವನದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನ್ಯಾಯಾಲಯದ ಆದೇಶದಂತೆ ಸಂಘದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಸತ್ಯಕ್ಕೆ ಜಯ ಸಿಗಲಿದೆ. ಎಲ್ಲರೂ ಒಗ್ಗಟ್ಟಿನಿಂದ ಸಮಾಜ ಕಟ್ಟುವ ಕೆಲಸ ಮಾಡೋಣ.”
– ಮೊಳೆಯೂರು ಆನಂದ್, ಅಧ್ಯಕ್ಷರು, ತಾಲ್ಲೂಕು ಕುರುಬ ಸಮಾಜ
ನವೀನ್ ಡಿಸೋಜ ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಸುರಿದಿದ್ದ ಕಸ ವಿಂಗಡಣೆ ಕೆಲಸ ಚುರುಕು ಮಡಿಕೇರಿ: ವಾಯು ಗುಣಮಟ್ಟದಲ್ಲಿ ದೇಶದಲ್ಲೇ ಹೆಸರಾಗಿರುವ…
ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ಗ್ಯಾಂಗ್ರಿನ್ ರೂಪ ಪಡೆದುಕೊಳ್ಳುತ್ತದೆ.…
ಎಸ್.ಎಸ್.ಭಟ್ ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ…
ಕೆ.ಬಿ.ರಮೇಶನಾಯಕ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ ಮೈಸೂರು: ಬಡವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಿಂಡಿ, ಊಟವನ್ನು…
ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಿಬ್ಬಂದಿಗೆ 26 ತಿಂಗಳ ಬಾಕಿ…