Andolana originals

ದಸರಾದಲ್ಲಿ ಡಿಜೆ ಬಳಕೆ ವಿಚಾರ ಮತ್ತೆ ಮುನ್ನೆಲೆಗೆ

ನವೀನ್ ಡಿಸೋಜ

ಡಿಜೆ, ಡಿಜಿಟಲ್ ಲೇಸರ್ ಲೈಟ್ ಬಳಕೆ ನಿರ್ಬಂಧಿಸುವಂತೆ ನೋಟಿಸ್; ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಒತ್ತಾಯ

ಮಡಿಕೇರಿ: ದಸರಾ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹೈ ಕೋರ್ಟ್ ವಕೀಲ ಅಮೃತೇಶ್ ಅವರು ಮತ್ತೊಮ್ಮೆ ಜಿಲ್ಲಾಡಳಿತ ಹಾಗೂ ದಸರಾ ದಶಮಂಟಪ ಸಮಿತಿಗಳಿಗೆ ನೋಟಿಸ್ ನೀಡಿದ್ದು, ಈ ಬಾರಿ ಜನೋತ್ಸವದಲ್ಲಿ ಡಿಜೆ ಮತ್ತು ಡಿಜಿಟಲ್ ಲೇಸರ್ ಬಳಸದಂತೆ ಎಚ್ಚರಿಸಿದ್ದಾರೆ.

ಮಡಿಕೇರಿ ದಸರಾ ಜನೋತ್ಸವದಲ್ಲಿ ಡಿಜೆ ಬಳಕೆಗೆ ಸಂಬಂಧಿಸಿದಂತೆ ೨೦೨೩ರಿಂದಲೇ ಚರ್ಚೆಯಾಗುತ್ತಿದೆ. ಆ ವರ್ಷ ಮೊದಲ ಬಾರಿಗೆ ಹೈಕೋರ್ಟ್ ಮೊರೆ ಹೋಗಿದ್ದ ವಕೀಲ ಅಮೃತೇಶ್ ಡಿಜೆ ನಿರ್ಬಂಽಸಬೇಕೆಂದು ಕೋರಿದ್ದರು. ಅದರಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ನ್ಯಾಯಾಲಯ ನಿಯಮ ಉಲ್ಲಂಸದಂತೆ ಎಚ್ಚರವಹಿಸಲು ಮತ್ತು ಉಲ್ಲಂಸಿದರೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿತ್ತು. ಆನಂತರ ೨ ವರ್ಷಗಳಿಂದ ದಸರಾ ಶೋಭಾಯಾತ್ರೆಯಲ್ಲಿ ಡಿಜೆ ಬಳಸುತ್ತಿರುವ ಮಂಟಪಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಈ ಬಾರಿಯೂ ಅಮೃತೇಶ್ ನೋಟಿಸ್ ನೀಡಿದ್ದಾರೆ.

ಉಚ್ಚನ್ಯಾಯಾಲಯದ ವಕೀಲ ಎನ್.ಪಿ.ಅಮೃತೇಶ್ ಮತ್ತು ದೀಕ್ಷಾ ಎನ್.ಅಮೃತೇಶ್ ಅವರು ಮಡಿಕೇರಿ ದಸರಾದಲ್ಲಿ ಡಿಜೆ ಮತ್ತು ಡಿಜಿಟಲ್ ಲೇಸರ್ ಲೈಟ್ ಬಳಕೆಯನ್ನು ನಿರ್ಬಂಽಸಬೇಕೆಂದು ಕೊಡಗು ಜಿಲ್ಲಾಧಿಕಾರಿ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಾಲಿನ್ಯ ನಿಯಂತ್ರಣಾಧಿಕಾರಿ, ಮಡಿಕೇರಿ ಟೌನ್ ಪೊಲೀಸ್ ಉಪ ನಿರೀಕ್ಷಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಮತ್ತು ಕಾರ್ಯದರ್ಶಿಗೆ ನೋಟಿಸ್ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾನೂನು ಪಾಲನೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಮೆರವಣಿಗೆಗಳಲ್ಲಿ ಡಿಜೆ ಬಳಕೆಗೆ ಬಹುತೇಕ ಬ್ರೇಕ್ ಬಿದ್ದಿದೆ. ಹಲವು ಕಡೆಗಳಲ್ಲಿ ಡಿಜೆ ಬದಲಿಗೆ ಸಾಂಪ್ರದಾಯಿಕ ವಾದ್ಯಗಳಾದ ಚಂಡೆ, ಕೇರಳದ ನಾಸಿಕ್ ಡೋಲು, ಕೇರಳ ಬ್ಯಾಂಡ್ ಸೆಟ್, ಡೊಳ್ಳು ಕುಣಿತ, ತಮಟೆ ಮುಂತಾದವುಗಳಿಗೆ ಆದ್ಯತೆ ನೀಡಲಾಗಿದೆ. ಇನ್ನೂ ಕೆಲವೆಡೆ ನಿಯಮ ಉಲ್ಲಂಘನೆಯಾಗಿದ್ದು, ಪ್ರಕರಣ ದಾಖಲಾಗಿದೆ. ಕೊಡಗಿನಲ್ಲಿಯೇ ವಿರಾಜಪೇಟೆಯಲ್ಲಿ ೧೬ ಮತ್ತು ಕುಶಾಲನಗರದಲ್ಲಿ ೫ ಎಫ್‌ಐಆರ್ ದಾಖಲಾಗಿವೆ. ಹೀಗಾಗಿ ದಸರಾ ಉತ್ಸವದಲ್ಲಿಯೂ ಇಂತಹದ್ದೇ ಕ್ರಮವಾಗುವ ಸಾಧ್ಯತೆಯಿದ್ದು, ಸಾಂಪ್ರದಾಯಿಕ ವಾದ್ಯಗಳಿಗೆ ಆದ್ಯತೆ ನೀಡಬೇಕೆಂಬುದು ದೂರುದಾರ ವಕೀಲರ ಆಗ್ರಹವೂ ಆಗಿದೆ.

ಡಿಜೆ ಬಳಕೆಯಿಂದ ಭಾರೀ ಪ್ರಮಾಣದಲ್ಲಿ ಶಬ್ದಮಾಲಿನ್ಯವಾಗುತ್ತದೆ. ಈ ಹಿಂದೆ ಎಚ್ಚರಿಸಿದ್ದರೂ ಡಿಜೆ ಬಳಕೆ ಮಾಡಲಾಗಿದೆ. ಈ ಬಾರಿ ಹೀಗಾದರೆ ಡಿಜೆ ಸೌಂಡ್ ಸಿಸ್ಟಮ್ ಸಹಿತ ಅದಕ್ಕೆ ಬಳಸುವ ವಾಹನವನ್ನು ವಶಪಡಿಸಿಕೊಂಡು ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಕೇಳಿಕೊಳ್ಳುತ್ತೇವೆ. ಪೊಲೀಸ್ ಇಲಾಖೆಯಿಂದಷ್ಟೇ ಅಲ್ಲ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ವಕೀಲ ಅಮೃತೇಶ್ ಹೇಳಿದ್ದಾರೆ.

ಆರ್‌ಸಿಬಿ ವಿಜಯೋತ್ಸವದ ವೇಳೆಯ ಕಾಲ್ತುಳಿತ ಘಟನೆಯ ಬಳಿಕ ಸರ್ಕಾರ ಜನದಟ್ಟಣೆ ನಿರ್ವಹಣೆ ಸಂಬಂಧ ನೂತನ ಎಸ್‌ಒಪಿ ಜಾರಿ ಮಾಡಿದ್ದು, ಅದನ್ನು ಪಾಲಿಸಬೇಕಿದೆ. ಡಿಜೆ ಬಳಕೆಯಿಂದ ಪರಿಸರ ಮಾತ್ರವಲ್ಲದೇ ಯುವ ಜನತೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ. ಹೀಗಾಗಿ ಕಡ್ಡಾಯವಾಗಿ ನಿಷೇಧಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದರು.

” ದಶಮಂಟಪಗಳಲ್ಲಿ ಕಥೆ ಹೇಳಲು ಬೇಕಾದ ದ್ವನಿವರ್ಧಕಗಳನ್ನು ನಿಯಮಾನುಸಾರ ಬಳಸಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅಬ್ಬರದ ಡಿಜೆ ಬಳಸುವ ಮೂಲಕ ಇತರರಿಗೆ ತೊಂದರೆ ನೀಡುವ ಬದಲು ಸಾಂಪ್ರದಾಯಿಕ ವಾದ್ಯಗಳನ್ನು ಬಳಸಬಹುದಲ್ಲವೆ? ಅವರಿಗೂ ಅದರಿಂದ ಅನುಕೂಲವಾದಂತಾಗುತ್ತದೆ. ಡಿಜೆ ವಿಚಾರದಲ್ಲಿ ನಿಯಮ ಸ್ಪಷ್ಟವಾಗಿದ್ದು, ಡಿಜೆ ಬಳಕೆಗೆ ಅನುಮತಿ ಕೋರಿ ಸೌಂಡ್ ಆಪರೇಟರ‍್ಸ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನೂ  ನ್ಯಾಯಾಲಯ ರದ್ದುಗೊಳಿಸಿದೆ” .

-ಅಮೃತೇಶ್ ಎನ್.ಪಿ., ಹೈಕೋರ್ಟ್ ವಕೀಲ

” ಈ ಬಾರಿ ದಸರಾ ಉತ್ಸವದಲ್ಲಿ ನಿಯಮ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಿದ್ದೇವೆ. ಈಸಂಬಂಧ ಸದ್ಯದಲ್ಲಿಯೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.”

-ಬಿ.ಎಂ.ರಾಜೇಶ್, ಗೌರವಾಧ್ಯಕ್ಷ , ದಶಮಂಟಪ ಸಮಿತಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

56 mins ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

58 mins ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

1 hour ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

1 hour ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

1 hour ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

1 hour ago