ನವೀನ್‌ಕುಮಾರ್
ಗುರುಭವನ ನಿರ್ಮಾಣಕ್ಕಾಗಿ ಸಂಗ್ರಹವಾಗಿದ್ದ ೯೫ ಲಕ್ಷ ರೂ.; ಕಾಮಗಾರಿ ನನೆಗುದಿಗೆ ಬಿದ್ದಿರುವುದಕ್ಕೆ ಶಿಕ್ಷಕರ ಅಸಮಾಧಾನ
ಪಿರಿಯಾಪಟ್ಟಣ : ಗುರುಭವನ ಕಟ್ಟಡ ನಿರ್ಮಾಣದ ಕೆಲಸ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ತಾಲ್ಲೂಕಿನ ಶಿಕ್ಷಕರ ಕನಸಿನ ಭವನ ನಿರ್ಮಾಣ ಹಂತದಲ್ಲಿಯೇ ಸೊರಗಿದೆ.
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೇ ಪ್ರಮುಖವಾದದ್ದು. ಶಿಕ್ಷಕರ ಹುದ್ದೆ ಸಮಾಜದಲ್ಲಿ ಅದರದ್ದೇ ಆದ ಜವಾಬ್ದಾರಿ ಮತ್ತು ಗೌರವವನ್ನು ಹೊಂದಿದೆ. ರಾಜಕೀಯವಾಗಿ ಕೂಡ ಶಿಕ್ಷಕರು ಹೆಚ್ಚು ಸಂಘಟಿತರು. ಚುನಾವನೆಗಳು ಬಂದರೆ ಶಿಕ್ಷಕರ ಗುಂಪುಗಳನ್ನು ಓಲೈಸುವುದು, ಶಿಕ್ಷಕರ ದಿನಾಚರಣೆಯಲ್ಲಿ ಅವರನ್ನು ಹೊಗಳುವುದು ಎಲ್ಲವನ್ನೂ ರಾಜಕಾರಣಿಗಳು ಮಾಡುತ್ತಾರೆ.
ಮಹಿಳಾ ಶಿಕ್ಷಕರು ಅನೇಕ ಕೆಲಸಗಳಿಗೆ ಬಿಇಒ ಕಚೇರಿ, ಸಂಘದ ಕಚೇರಿಗೆ ಬರುತ್ತಾರೆ. ಒಂದು ನಿರೀಕ್ಷಣಾ ಕೊಠಡಿ, ಶೌಚಾಲಯ ಕೂಡ ಇಲ್ಲದೆ ಪರದಾಡುವಂತಾಗಿದೆ. ಅನೇಕ ವರ್ಷಗಳ ಗುರುಭವನದ ಕನಸು ಇಂದಿಗೂ ನನಸಾಗದೆ ಪಾಳುಬಿದ್ದಿದೆ.
೧.೧೦ ಎಕರೆ ಜಾಗ ಮೀಸಲು: ತಾಲ್ಲೂಕು ಕೇಂದ್ರದಲ್ಲಿ ಗುರುಭವನ ನಿರ್ಮಾಣಕ್ಕಾಗಿ ೧.೧೦ ಎಕರೆ ಜಾಗವನ್ನು ೨೦೦೩-೦೪ರಲ್ಲಿ ಮೀಸಲು ಇರಿಸಲಾಯಿತು. ಗುರುಭವನ ನಿರ್ಮಾಣಕ್ಕೆ ಅಂದಿನ ಶಿಕ್ಷಣ ಮಂತ್ರಿ ವಿಶ್ವನಾಥ್‌ರಿಂದ ಹಿಡಿದು ಎಚ್.ಸಿ.ಬಸವರಾಜು, ಕೆ.ವೆಂಕಟೇಶ್ ಸೇರಿದಂತೆ ಹಲವರು ಅನೇಕ ಬಾರಿ ಗುದ್ದಲಿಪೂಜೆ ನೆರವೇರಿಸಿದರು. ಆದರೂ ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. ಈ ಹಿಂದೆ ಶಾಸಕರಾಗಿದ್ದ ಕೆ.ಮಹದೇವ್ ಅವಧಿಯಲ್ಲಿ ಗುದ್ದಲಿಪೂಜೆ ನೆರವೇರಿಸಿ ಕೆಲಸ ಆರಂಭಿಸಲಾಯಿತ್ತಾದರೂ ಅರೆಬರೆ ನಿರ್ಮಾಣ ಮಾಡಿ ಆರಂಭದಲ್ಲಿಯೇ ಕಾಮಗಾರಿ ಸಂಪೂರ್ಣ ನಿಂತುಹೋಗಿದೆ.
ಲೋಕಾಯುಕ್ತಕ್ಕೆ ದೂರು: ಗುರು ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣವನ್ನು ವಿನಯೋಗಿಸಲು ಗುರುಭವನ ಸಮಿತಿ ಆಯುಕ್ತರಿಂದ ಅನುಮತಿ ಪಡೆಯಬೇಕಿತ್ತು. ಅಲ್ಲದೆ ಸರ್ಕಾರಿ ನಿಯಮಗಳನ್ನು ಪಾಲಿಸದೆ ಸಮಿತಿ ಅನಧಿಕೃತವಾಗಿ ೯೫ ಲಕ್ಷ ರೂ. ಗಳನ್ನು ನೀಡಿದೆ ಎಂದು ಆರೋಪಿಸಿ ೨೦೨೨ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಹೀಗೆ ಅನೇಕ ವರ್ಷಗಳಿಂದ ಗುರುಭವನ ನಿರ್ಮಾಣವಾಗದೆ ಉಳಿದಿದೆ. ಇತ್ತ ಶಿಕ್ಷಕರು ಕೂಡಿಟ್ಟಿದ್ದ ಹಣ ಕೂಡ ಖರ್ಚಾಗಿದೆ. ಭವನ ಮಾತ್ರ ಇನ್ನು ಆರಂಭಿಕ ಹಂತದಲ್ಲೆ ಉಳಿದಿದೆ.
ಶಿಕ್ಷಕರಲ್ಲಿಯೇ ಹಲವಾರು ಗುಂಪುಗಳು, ಆರೋಪ-ಪ್ರತ್ಯಾರೋಪ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಇವೆಲ್ಲ ಕಾರಣಗಳಿಂದ ಗುರುಭವನ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಇದಕ್ಕಾಗಿ ಹಣ ನೀಡಿದ ನಿವೃತ್ತ ಶಿಕ್ಷಕರು, ಪ್ರತಿನಿತ್ಯ ಪಟ್ಟಣಕ್ಕೆ ತಮ್ಮ ಕೆಲಸಗಳಿಗೆ ಬರುವ ಶಿಕ್ಷಕರು ತಮಗಾಗಿ ಒಂದು ಭವನ ಇಲ್ಲದೆ ಪರದಾಡುವಂತಾಗಿದೆ.
೩.೫ ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, ಆರಂಭಿಸಿದ ಕಾಮಗಾರಿಗೆ ಪ್ರಸ್ತುತ ಎಸ್‌ಆರ್ ರೇಟ್ ಹೆಚ್ಚಾಗಿರುವುದರಿಂದ ಸರಿಸುಮಾರು ೫ ಕೋಟಿ ರೂ.ಗಳು ತಗುಲಬಹುದು. ಪ್ರಸ್ತುತ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾಗಿರುವ ಕೆ. ವೆಂಕಟೇಶ್ ಈ ಬಗ್ಗೆ ಗಮನಹರಿಸಿ ಇದಕ್ಕೆ ಇರುವ ಅಡ್ಡಿ-ಆಂತಕಗಳನ್ನು ನಿವಾರಿಸಿ ಕಾಮಗಾರಿಯನ್ನು ಪುನರಾರಂಭಿಸುವರೆ ಎಂಬುದನ್ನು ಕಾದು ನೋಡಬೇಕಿದೆ.
” ಶಿಕ್ಷಕರ ಸಂಘದಿಂದ ಗುರುಭವನ ನಿರ್ಮಾಣ ಕಾಮಗಾರಿಗೆ ೩.೫ ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿದ್ದು ಅವರು ನೀಡಿದ ರೂ. ೯೫ ಲಕ್ಷಕ್ಕೆ ನಿಯಮಾನುಸಾರ ಟೆಂಡರ್ ನಡೆಸಿ ಕೆಲಸ ಮಾಡಿಸಲಾಗಿದೆ. ೫ ಲಕ್ಷರೂಗಳು ಉಳಿದಿದ್ದು ಅದನು ವಾಪಸ್ ಪಡೆಯುವಂತೆ ಸೂಚಿಸಲಾಗಿದೆ. ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಇಲಾಖೆಗಳು ಅನುಮತಿ ನೀಡಿ ಹಣ ನೀಡಿದರೆ ಮುಂದಿನ ಕಾಮಗಾರಿ ನಡೆಸಲಾಗುವುದು.”
– ಎಂ.ಆರ್.ವೆಂಕಟೇಶ್ , ಎಇಇ ಲೋಕೋಪಯೋಗಿ ಇಲಾಖೆ
” ಗುರುಭವನ ನಿರ್ಮಾಣ ಕಾಮಗಾರಿಗೆ ೯೫ ಲಕ್ಷ ರೂ. ಗಳನ್ನು ನೀಡಿರುವ ಬಗ್ಗೆ ಲೋಕಾಯುಕ್ತದಲ್ಲಿ ಎರಡು ದೂರುಗಳು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬಿಇಒ ಡಿ.ಎನ್ .ರವಿಪ್ರಸನ್ನ ತಿಳಿಸಿದ್ದಾರೆ. ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘದಲ್ಲಿ ಗುರುಭವನ ನಿರ್ಮಾಣಕ್ಕೆ ಠೇವಣಿ ಇಟ್ಟಿದ್ದ ಹಣ ೧ ಕೋಟಿ ರೂ.ಗೂ ಹೆಚ್ಚು ಬೆಳೆದಿದೆ. ಈ ಹಣವನ್ನು ಸಂಪೂರ್ಣವಾಗಿ ಗುರಭವನ ನಿರ್ಮಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿದು ಗುರುಭವನ ನಿರ್ಮಾಣವಾಗಬೇಕು ಎಂಬುದು ನಮ್ಮ ಆಗ್ರಹ.”
-ಬಿ.ಆರ್.ರವಿಕುಮಾರ್, ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು
ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ…
ಸ್ವಾಗತಾರ್ಹ ನಡೆ! ಜಾತಿ ಮೀರಿ ಪ್ರೀತಿಸಿದರೆ ಕುಂದಲ್ಲವದು ಮರ್ಯಾದೆಗೆ ಬದಲಿಗೆ ಹೆಚ್ಚುವುದು ಮರ್ಯಾದೆ ಗೌರವ! ಜಾತಿ ಕಟ್ಟಳೆ ಮುರಿವ ಸಮತೆಯ…
ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ…
ಲೊಕ್ಕನಹಳ್ಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಹನೂರು: ಒಂದೆಡೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು…
ನವೀನ್ ಡಿಸೋಜ ೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು ಮಡಿಕೇರಿ:…
ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ…