Andolana originals

ಮನಸೂರೆಗೊಳ್ಳುತ್ತಿರುವ ಸುತ್ತೂರು ಜಾತ್ರೆಯಲ್ಲಿನ ಕಲಾವೈಭವ

ಎಸ್.ಎಸ್.ಭಟ್

ನಂಜನಗೂಡು: ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿನ ಕಲಾ ವೈಭವ ಕಲಾಸಕ್ತರೂ ಸೇರಿದಂತೆ ಎಲ್ಲರ ಮನಸೂರೆಗೊಂಡಿತು.

ಅನೇಕ ವರ್ಷಗಳಿಂದ ಜಾತ್ರೋತ್ಸವದ ಅಂಗಳದಲ್ಲಿ ನಡೆಯುತ್ತಿದ್ದ ಚಿತ್ರಸಂತೆಗೆ ಈ ಬಾರಿ ಹೊಸ ಕಾಯಕಲ್ಪ ನೀಡುವುದರೊಂದಿಗೆ ಆಧುನಿಕ ಯುಗಕ್ಕೆ ಬಾಗಿಲು ತೆರೆದುಕೊಳ್ಳುವಂತೆ ‘ಕಲಾವೈಭವ’ ಎಂಬ ಶಿರೋನಾಮೆಯನ್ನಿಟ್ಟು ಆರಂಭಿಸಲಾದ ಕಲಾಪ್ರದರ್ಶನ ವಸ್ತುಪ್ರದರ್ಶನದ ಜನಾಕರ್ಷಣೆಯ ಪ್ರದರ್ಶನವಾಗಿ ಹೊರಹೊಮ್ಮಿದೆ.

೭೬ ಮಳಿಗೆಗಳನ್ನು ಒಳಗೊಂಡ ಈ ಕಲಾವೈಭವದ ಪ್ರದರ್ಶನ ಹಾಗೂ ಮಾರಾಟದಲ್ಲಿ ಮೈಸೂರಿನ ಕಾವಾ, ಜೆಎಸ್‌ಎಸ್ ಸಂಸ್ಥೆಯ ಹಾಲಬಾವಿಯ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಧಾರವಾಡ, ಗೋಕಾಕ್, ದೂರದ ಬಾಗಲಕೋಟೆ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ೧೩೦ಕ್ಕೂ ಹೆಚ್ಚು ಜನ ಭಾಗಿಯಾಗಿ ಚಿತ್ರಗಳನ್ನು ಬಿಡಿಸುತ್ತಲೇ ಪ್ರದರ್ಶನಕ್ಕಿಟ್ಟು ಆಸಕ್ತರಿಗೆ ಮಾರಾಟವನ್ನು ಮಾಡುತ್ತಿದ್ದಾರೆ.

ಕಲಾವಿದರು ಈ ಕಲಾವೈಭದಲ್ಲಿ ನಮ್ಮ ಪರಂಪರೆಯ ಗ್ರಾಮೀಣ ಕಲೆಗಳೂ ಸೇರಿದಂತೆ ಆಧುನಿಕ ಯುಗದ ಆವಿಷ್ಕಾರವಾದ ಎಐವರೆಗಿನ ವಿವಿಧ ಮಜಲುಗಳನ್ನು ತಮ್ಮ ಕುಂಚದಿಂದ ಬಿಡಿಸುತ್ತಿರುವುದು ಅವರುಗಳ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ.

ಇಂದಿನ ಕಾಲಘಟ್ಟದ ಅನಿವಾರ್ಯ ಸಾಧನಗಳಲ್ಲಿ ಒಂದಾದ ಮೊಬೈಲ್ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಕೆಲವೇ ದಿನಗಳಲ್ಲಿ ಹುಟ್ಟುವ ಮಗುವಿಗೂ ಅನಿವಾರ್ಯವಾಗಬಹುದು ಎಂಬ ಎಚ್ಚರಿಕೆಯ ಸಂದೇಶ ಸಾರುವ ಪ್ರದರ್ಶನ ಕಲಾವೈಭವದ ಹಾಗೂ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದವರೆಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚರಂಡಿ ಸ್ವಚ್ಛಗೊಳಿಸಿ

ಮೈಸೂರಿನ ಹೆಬ್ಬಾಳು ಬಡಾವಣೆಯ ಸೂರ್ಯಬೇಕರಿ ಸಮೀಪ ಎರಡನೇ ಅಡ್ಡರಸ್ತೆಯ ಬಳಿ ಇರುವ ಚರಂಡಿಯನ್ನು ಕಳೆದ ಎರಡು-ಮೂರು ತಿಂಗಳಿನಿಂದ ಸ್ವಚ್ಛಗೊಳಿಸದೇ ಇರುವುದರಿಂದ…

30 mins ago

ಓದುಗರ ಪತ್ರ: ಪೌರಕಾರ್ಮಿಕರ ವಿಶ್ರಾಂತಿಗೃಹ ಸದ್ಭಳಕೆಯಾಗಲಿ

ಮೈಸೂರಿನ ಲಷ್ಕರ್ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿರುವ ವೀರನಗೆರೆಯಲ್ಲಿ ೨-೯-೧೯೮೫ ರಂದು ಉಚಿತ ವಾಚನಾಲಯವನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅಂದಿನ…

32 mins ago

ಓದುಗರ ಪತ್ರ: ಲಿಂಗದೇವರಕೊಪ್ಪಲಿನಲ್ಲಿ ಬಸ್ ನಿಲುಗಡೆಯಾಗಲಿ

ಮೈಸೂರಿನ ಲಿಂಗದೇವರಕೊಪ್ಪಲು ಗ್ರಾಮದಲ್ಲಿರುವ ಗಾರ್ಮೆಂಟ್ಸ್, ಕಾರ್ಖಾನೆಗಳಿಗೆ ಸುತ್ತಮುತ್ತಲಿನ ಕಾರ್ಮಿಕರು ಬರುತ್ತಾರೆ. ಆದರೆ ಈ ಸ್ಥಳದಲ್ಲಿ ಮೈಸೂರಿನಿಂದ ಮಡಿಕೇರಿ, ಹಾಸನ ಕಡೆಗೆ…

35 mins ago

ಓದುಗರ ಪತ್ರ: ಸುತ್ತೂರು ಜಾತ್ರೆ ಬಹುಮುಖ ಸಾಂಸ್ಕೃತಿಕ ಸಂಗಮ

ಸುತ್ತೂರು ಜಾತ್ರಾ ಮಹೋತ್ಸವ ನಿಜಕ್ಕೂ ಸಾಂಸ್ಕೃತಿಕ ಉತ್ಸವವೇ ಆಗಿದೆ. ಎಲ್ಲ ರೀತಿಯ ಮನರಂಜನೆಗಳ ಜೊತೆಗೆ ಮನೋವಿಕಾಸವನ್ನು ಮೂಡಿಸುವ ವಿಶಿಷ್ಟ ಜಾತ್ರೆ…

37 mins ago

ಜಯಪುರ ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ಜಾತ್ರೆ

ಕೊಂಡೋತ್ಸವಕ್ಕೆ ೫ ಎತ್ತಿನ ಗಾಡಿಗಳಲ್ಲಿ ಖಗ್ಗಲಿ ಸೌದೆ ತಂದ ಗ್ರಾಮಸ್ಥರು ಮೈಸೂರು: ತಾಲ್ಲೂಕಿನ ಜಯಪುರ ಗ್ರಾಮದ ಶ್ರೀ ಜೇಡಿಕಟ್ಟೆ ಮಹದೇಶ್ವರ…

40 mins ago

ಮೂಲಸೌಲಭ್ಯ ವಂಚಿತ ಯಳಂದೂರು ಸಂತೆ ಮೈದಾನ

ಎಂ.ಗೂಳೀಪುರ ನಂದೀಶ್ ಕೊಳೆತ ಪದಾರ್ಥಗಳಿಂದ ದುರ್ನಾತ; ಹಲವು ಅಂಗಡಿಗಳು ನಿರುಪಯುಕ್ತ ಯಳಂದೂರು: ಪಟ್ಟಣದ ಕೇಂದ್ರಸ್ಥಾನದಲ್ಲಿನ ಸಂತೆ ಮೈದಾನವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ.…

46 mins ago