ಎಸ್.ಎಸ್.ಭಟ್
ನಂಜನಗೂಡು: ವ್ಯವಹಾರ ನಡೆಸಿಲ್ಲ ಎಂದು ಮತದಾನದ ಅವಕಾಶಕ್ಕೆ ಕೊಕ್ಕೆ; ಸದಸ್ಯರ ಆಕ್ರೋಶ
ನಂಜನಗೂಡು: ವ್ಯವಹಾರ ಮಾಡಲು ಅವಕಾಶವೇ ಇಲ್ಲ. ವ್ಯವಹಾರ ಮಾಡದಿದ್ದರೆ ಮತದಾನ ಮಾಡುವ ಹಕ್ಕೇ ಇಲ್ಲ. ಹೇಗಿದೆ ನೋಡಿ, ನಮ್ಮ ಚುನಾವಣಾ ವ್ಯವಸ್ಥೆ. ಇಂಥ ಅವ್ಯವಸ್ಥೆಯಿಂದಾಗಿ ನ.೨ರಂದು ನಡೆಯಲಿರುವ ನಂಜನಗೂಡು ಟಿಎಪಿಸಿಎಂಎಸ್‌ನ ೯೮೯ ಜನ ಸದಸ್ಯರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಬಹುದಾದ ವಿಪರ‍್ಯಾಸ ಎದುರಾಗಿದೆ.
೧,೩೦೧ ಸದಸ್ಯರಿರುವ ನಂಜನಗೂಡು ಟಿಎಪಿಸಿಎಂಎಸ್ನಲ್ಲಿ ಈಗ ಕೇವಲ ೪೧೨ ಜನರಿಗೆ ಮಾತ್ರ ಮತದಾನದ ಅವಕಾಶವಿದ್ದು, ಉಳಿದ ೯೮೯ ಜನ ಸದಸ್ಯರು ಮತದಾನದಿಂದ ವಂಚಿತರಾಗುವಂತಾಗಿದೆ. ಟಿಎಪಿಸಿಎಂಎಸ್‌ನಲ್ಲಿ ಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ಖರೀದಿಸಿ ವ್ಯವಹಾರ ಮಾಡಿರಬೇಕು. ಇಲ್ಲವೇ ಸಂಸ್ಥೆಯಲ್ಲಿ ಹಣ ಕಟ್ಟಿ ಹಿಂಪಡೆಯಬೇಕು. ಅಂಥವರು ತಮ್ಮ ೮ ಜನಪ್ರತಿನಿಽಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಇಲ್ಲಿ ಕೃಷಿಕರು ಖರೀದಿಸಬಹುದಾದ ಯಾವುದೇ ವ್ಯವಸ್ಥೆಯೇ ಇಲ್ಲವಾದ್ದರಿಂದ ಕೃಷಿಕರೇನು ಮಾಡಬೇಕು ಎನ್ನುತ್ತಾರೆ ಬಹುತೇಕ ಸದಸ್ಯರು.
ಮಂಡ್ಯ ಜಿಲ್ಲೆಯಲ್ಲೂ ಇದೇ ರೀತಿ ಪರಿಸ್ಥಿತಿ ಕಂಡು ಬಂದಾಗ ಅಲ್ಲಿನ ಸಹಾಯಕ ಇಲಾಖೆಯ ಜಂಟಿ ನಿಬಂಧಕರು ವ್ಯವಹಾರ ಮಾಡದೆ ಮತದಾನದಿಂದ ವಂಚಿತರಾದ ಎಲ್ಲ ಸದಸ್ಯರುಗಳಿಗೂ ಮತದಾನದ ಅವಕಾಶ ನೀಡಿದ್ದಾರೆ. ಅದೇ ಪರಿಸ್ಥಿತಿ ನಂಜನಗೂಡಿನಲ್ಲೂ ಎದುರಾಗಿದ್ದು, ಮಂಡ್ಯದಂತೆ ಇಲ್ಲೂ ನಮಗೆ ಮತದಾನದ ಅವಕಾಶ ನೀಡಿ ಎನ್ನುತ್ತಿದ್ದಾರೆ ನಂಜನಗೂಡು ಟಿಎಪಿಸಿಎಂಎಸ್ ಸದಸ್ಯರು.
ಕಳೆದ ತಿಂಗಳು ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲೂ ಇದು ಚರ್ಚಿತವಾಗಿ ವ್ಯವಹಾರ ಮಾಡಲು ಅವಕಾಶವೇ ಇಲ್ಲದ ನಂಜನಗೂಡು ಟಿಎಪಿಸಿಎಂಎಸ್ ಸದಸ್ಯರುಗಳಿಗೆ ತಮ್ಮ ಪ್ರತಿನಿಽಯನ್ನು ಆಯ್ಕೆ ಮಾಡುವ ಮತದಾನದ ಹಕ್ಕನ್ನು ಕಲ್ಪಿಸಬೇಕು ಎಂದು ಸರ್ವಾನುಮತದ ನಿರ್ಣಯ ಮಾಡಲಾಗಿತ್ತು. ಈಗ ಚುನಾವಣೆ ದಿನಾಂಕ ಪ್ರಕಟವಾಗಿದೆ. ಇಲ್ಲಿನ ೯೮೯ ಜನರು ಮತದಾನದ ಹಕ್ಕಿಂದ ವಂಚಿತರಾಗಿದ್ದಾರೆ. ಹಾಗಾದರೆ ಮಂಡ್ಯಕ್ಕೊಂದು ಕಾನೂನು, ಮೈಸೂರಿಗೊಂದು ಕಾನೂನು ಇದೆಯೇ ಎನ್ನುತ್ತಾರೆ ಇಲ್ಲಿನ ಟಿಎಪಿಸಿಎಂಎಸ್‌ನ ಮತದಾನದ ಹಕ್ಕಿಂದ ವಂಚಿತರಾದವರು.
ತಾಲ್ಲೂಕಿನ ೩೦ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ೨೯ ಸಹಕಾರ ಸಂಘಗಳು ತಮ್ಮ ನಾಲ್ಕು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ಈ ವ್ಯವಹಾರದ ಗೊಂದಲದಿಂದಾಗಿ ಪ್ರತಿನಿಽಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಬಂದಿದೆ.
ಒಂದು ಸಂಸ್ಥೆಗೆ ಮಾತ್ರ ಹಕ್ಕಿದೆ. ಆದರೆ ನಾಮಪತ್ರಕ್ಕೆ ಸೂಚಕರಾಗಲೂ ಬೇರ‍್ಯಾರೂ ಇಲ್ಲವಾದ್ದರಿಂದ ಚುನಾವಣೆಯ ಕಣಕ್ಕಿಳಿಯಲು ಆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಕ್ಕಿದ್ದು, ನಾಮಪತ್ರ ಸಲ್ಲಿಸಲೇ ಅವಕಾಶವಿಲ್ಲದ ವಿಪರ್ಯಾಸ ಸಹ ಈಗ ಎದುರಾಗಿದೆ.
” ನಂಜನಗೂಡು ಟಿಎಪಿಸಿಎಂಎಸ್‌ನಲ್ಲಿ ಷೇರುದಾರ ಸದಸ್ಯರುಗಳಿಗೆ ವ್ಯವಹಾರ ಮಾಡಲು ಯಾವುದೇ ಅವಕಾಶವಿಲ್ಲದ್ದರಿಂದ ಎಲ್ಲ ೧,೩೦೧ ಸದಸ್ಯರುಗಳಿಗೂ ಮತದಾನದ ಹಕ್ಕು ಕಲ್ಪಿಸಬೇಕು. ಇಂದು ಇಲಾಖೆಯ ಜೆಆರ್ ಅವರಿಗೆ ಲಿಖಿತವಾಗಿ ಮನವಿ ಮಾಡಲಾಗಿತ್ತು. ಮಂಡ್ಯದಲ್ಲಿ ಅದಕ್ಕೆ ಪುರಸ್ಕಾರ ಸಿಕ್ಕಿದೆ. ಮೈಸೂರಲ್ಲಿ ಸಿಕ್ಕಿಲ್ಲ. ಜೆಆರ್ ಅವರು ಮಂಡ್ಯದಂತೆ ಇಲ್ಲೂ ಎಲ್ಲರಿಗೂ ಮತದಾನದ ಅವಕಾಶ ನೀಡಬೇಕು.”
-ಕುರಹಟ್ಟಿ ಮಹೇಶ, ಅಧ್ಯಕ್ಷ, ನಂಜನಗೂಡು ಟಿಎಪಿಸಿಎಂಎಸ್
” ನಂಜನಗೂಡು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸೆ.೨೯ರಂದು ಹಣದ ವ್ಯವಹಾರ ಮಾಡಲು ಅಂತಿಮ ದಿನ ಎನ್ನಲಾಗಿತ್ತು. ಆದರೆ ಅಕ್ಟೋಬರ್ ೪ರವರೆಗೆ ಹಣದ ವ್ಯವಹಾರ ತೋರಿಸಲಾಗಿ ಅಕ್ರಮ ಪಟ್ಟಿ ಸಿದ್ಧಪಡಿಸಲಾಗಿದ್ದು ಮಂಡ್ಯದಲ್ಲಿ ಯಾವ ಆಧಾರದ ಮೇಲೆ ಮತದಾನಕ್ಕೆ ಅವಕಾಶ ನೀಡಲಾಗಿದೆಯೋ ಅದೇ ಆಧಾರದ ಮೇಲೆ ನಂಜನಗೂಡಿನಲ್ಲಿಯೂ ಸದಸ್ಯರುಗಳಿಗೆ ಮತದಾನದ ಅವಕಾಶ ನೀಡಬೇಕು.”
-ಸಿಂಧುವಳ್ಳಿ ಕೆಂಪಣ್ಣ, ಟಿಎಪಿಸಿಎಂಎಸ್ ನಿರ್ದೇಶಕ
” ವ್ಯವಹಾರ ಮಾಡಲು ಅವಕಾಶವೇ ಇಲ್ಲದಿದ್ದರೂ ವ್ಯವಹಾರದ ನಿಮಿತ್ತ ಮತದಾನದಿಂದ ವಂಚಿತರಾದವರು ನ್ಯಾಯಕ್ಕಾಗಿ ಉಚ್ಚನ್ಯಾಯಾಲಯದ ಮೊರೆ ಹೋಗಬೇಕಾಗಿದೆ.”
-ಡಿ.ಬಿ.ಜೋಷಿ, ಸಹಕಾರ ರಂಗದ ನಿವೃತ್ತ ಅಧಿಕಾರಿ
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…