Andolana originals

ಟಿ-20 ವಿಶ್ವಕಪ್: ಕೌಂಟ್‌ಡೌನ್ ಶುರು

ಆರ್.ಎಲ್.ಮಂಜುನಾಥ್

ಮೈಸೂರು: ಕ್ರಿಕೆಟ್ ಪ್ರಿಯರಿಗೆ ಈಗ ಹಬ್ಬವೋ ಹಬ್ಬ. ಅದರಲ್ಲೂ ಕ್ರಿಕೆಟ್‌ನ ಭಾಷ್ಯವನ್ನೇ ಬದಲಿಸುತ್ತಿರುವ ಟಿ-೨೦ ಪಂದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು. ಕಡಿಮೆ ಸಮಯದಲ್ಲಿ ಭರಪೂರ ಮನರಂಜನೆಯ ರಸದೌತಣ ನೀಡುವ ಚುಟುಕು ಮಾದರಿಯ ಕ್ರಿಕೆಟ್ ಜಗತ್ತಿನಾದ್ಯಂತ ಜನಪ್ರಿಯವಾಗತೊಡಗಿದೆ.

ಹೌದು, ಈಗ ಫೆ.೭ರಿಂದ ಟಿ-೨೦ ವಿಶ್ವಕಪ್ ೨೦೨೬ ಆರಂಭವಾಗಲಿದ್ದು, ಮಾ.೮ರವರೆಗೆ ಭಾರತ ಮತ್ತು ಶ್ರೀಲಂಕಾ ದೇಶಗಳ ಜಂಟಿ ಸಹಭಾಗಿತ್ವದಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ನಡೆಯಲಿರುವ ಚುಟುಕು ಮಾದರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಟಿ-೨೦ ವಿಶ್ವಕಪ್ ಇತಿಹಾಸವನ್ನು ಗಮನಿಸಿದರೆ ಇಲ್ಲಿಯವರೆಗೆ ೯ ಆವೃತ್ತಿಗಳನ್ನು ಆಡಲಾಗಿದೆ. ಒಟ್ಟು ಆರು ರಾಷ್ಟ್ರೀಯ ತಂಡಗಳು ಇಲ್ಲಿಯವರೆಗೆ ಟಿ-೨೦ ವಿಶ್ವಕಪ್ ಕಿರೀಟ ತಮ್ಮದಾಗಿಸಿಕೊಂಡಿವೆ. ಈಗ ೧೦ನೇ ಆವೃತ್ತಿಯ ಕ್ರಿಕೆಟ್‌ಗೆ ತಂಡಗಳು ಸಜ್ಜಾಗುತ್ತಿವೆ.

ಕಳೆದ ಬಾರಿ ೨೦೨೪ರ ಟಿ-೨೦ ವಿಶ್ವಕಪ್ ಆವೃತ್ತಿಯಲ್ಲಿ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದಿರುವ ಟೀಮ್ ಇಂಡಿಯಾ, ಹಾಲಿ ಚಾಂಪಿಯನ್ ಆಗಿದ್ದು, ಈ ಬಾರಿಯೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ೨೦೦೭ರಲ್ಲಿ ವಿಶ್ವಕಪ್ ಆರಂಭವಾದಾಗ ಭಾರತ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.

ಭಾರತ ಟಿ-೨೦ ತಂಡ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಬ್ಯಾಟ್ಸ್ ಮನ್‌ಗಳು ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸುತ್ತಾ ಅಬ್ಬರಿ ಸುತ್ತಿದ್ದಾರೆ. ನಾಯಕ ಸೂರ್ಯ ಕುಮಾರ್ ನೇತೃತ್ವದ ತಂಡದಲ್ಲಿ ಟಿ-೨೦ ಮಾದರಿಯಲ್ಲಿ ನಂ.೧ ಆಟಗಾರನಾಗಿರುವ ಅಭಿಷೇಕ್ ಶರ್ಮಾ, ನ್ಯೂಜಿಲ್ಯಾಂಡ್ ವಿರುದ್ಧ ಶತಕ ಬಾರಿಸಿ ಅಬ್ಬರಿಸಿರುವ ಇಶಾನ್ ಕಿಶನ್, ಬಲಾಢ್ಯ ಬ್ಯಾಟ್ಸ್‌ಮನ್‌ಗಳಾದ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ನಿಖರ ಬೌಲಿಂಗ್‌ಗೆ ಹೆಸರಾದ ಜಸ್ಪ್ರೀತ್ ಬೂಮ್ರಾ, ಸ್ಪಿನ್ ಕೈಚಳಕ ತೋರುವ ಕುಲದೀಪ್ ಯಾದವ್, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮೊದಲಾದ ಆಟಗಾರರು ಇರುವುದು ತಂಡದ ಬಲ ಹೆಚ್ಚಿಸಿದೆ.

ಭಾರತದ ಆಟಗಾರರ ವಿವರ:  ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್‌ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣ.

ಭಾರತದ ವಿರುದ್ಧ ಆಡಲ್ಲ ಎಂದ ಪಾಕ್:

ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕ್ ನಡುವೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಾಕ್ ಸರ್ಕಾರ ಹೇಳಿದ್ದು, ಇದಕ್ಕೆ ಅಲ್ಲಿನ ಕ್ರಿಕೆಟ್ ಆಡಳಿತ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಎ ಗ್ರೂಪ್‌ನಲ್ಲಿದ್ದ ಪಾಕ್ ತಂಡ ಭಾರತದ ವಿರುದ್ಧ ಆಡುವ ಸಾಧ್ಯತೆ ಇಲ್ಲವಾಗಿದೆ. ಹೀಗಾಗಿ ಭಾರತಕ್ಕೆ ವಾಕ್ ಓವರ್ ಸಿಗಲಿದೆ. ಅಲ್ಲದೆ ಬಾಂಗ್ಲಾ ತಂಡ ಭಾರತದಲ್ಲಿ ಆಡುವುದಿಲ್ಲ ಎಂದಿರುವ ಹಿನ್ನೆಲೆಯಲ್ಲಿ ತಂಡವನ್ನು ಕೈಬಿಟ್ಟಿದ್ದು, ಸ್ಕಾಟ್‌ಲ್ಯಾಂಡ್‌ಗೆ ಅವಕಾಶ ಲಭಿಸಿದೆ.

ಭಾಗವಹಿಸಲಿರುವ ತಂಡಗಳು: 

ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಆಫಾನಿಸ್ಥಾನ, ಅಮೆರಿಕಾ, ಇಟಲಿ, ನೆದರ್‌ಲ್ಯಾಂಡ್, ನಮೀಬಿಯಾ, ಐರ್ಲೆಂಡ್, ಒಮನ್, ಸ್ಕಾಟ್‌ಲೆಂಡ್, ಯುಎಇ, ಒಮನ್, ನೇಪಾಳ.

೨೦ ತಂಡಗಳು, ೫೫ ಪಂದ್ಯಗಳು…: 

ಶ್ರೀಲಂಕಾದ ೩ ಸ್ಥಳಗಳಲ್ಲಿ ಕನಿಷ್ಠ ೨೦ ಪಂದ್ಯಗಳನ್ನು ಮತ್ತು ಭಾರತದ ೫ ಸ್ಥಳಗಳಲ್ಲಿ ಉಳಿದ ಪಂದ್ಯಗಳನ್ನು ನಡೆಸಲಾಗುತ್ತದೆ. ಒಟ್ಟು ೨೦ ತಂಡಗಳು ೫೫ ಪಂದ್ಯಗಳಲ್ಲಿ ಹಣಾಹಣಿ ನಡೆಸಲಿವೆ. ವಿಶ್ವಕಪ್ ೩ ಹಂತಗಳಲ್ಲಿ ಅಂದರೆ ಗುಂಪು ಹಂತ, ಸೂಪರ್ ೮ ಮತ್ತು ನಾಕೌಟ್ ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ.

ಪಂದ್ಯಗಳು ಎಲ್ಲೆಲ್ಲಿ?:  ಭಾರತದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ, ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣ, ಹೊಸದಿಲ್ಲಿಯ ಅರುಣ್ ಜೈಟ್ಲಿ ಕ್ರೀಡಾಂ ಗಣ, ಕೊಲ್ಕತಾದ ಈಡನ್‌ಗಾರ್ಡನ್, ಮುಂಬೈನ ವಾಂಖೆಡೆ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಅದೇ ರೀತಿ ಶ್ರೀಲಂಕಾದ ೩ ಸ್ಥಳಗಳಲ್ಲಿ ಪಂದ್ಯಗಳು ನಡೆಲಿದ್ದು, ಕೊಲಂಬೋದ ಪ್ರೇಮದಾಸ ಕ್ರೀಡಾಂಗಣ, ಸಿಂಹಳೀಯರ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನ, ಕ್ಯಾಂಡಿಯ ಪಲ್ಲಕೆಲೆ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಯಾಗಿವೆ.

ಟಿ-೨೦ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂವರು: 

ಟಿ-೨೦ ಮಾದರಿಯಿಂದ ನಿವೃತ್ತಿ ಪಡೆದಿರುವ ವಿರಾಟ್ ಕೊಹ್ಲಿ ಒಟ್ಟು ೩೫ ಪಂದ್ಯಗಳನ್ನು ಆಡಿದ್ದು, ೫೮ರ ಸರಾಸರಿಯಲ್ಲಿ ೧,೨೯೨ ರನ್ ಕಲೆ ಹಾಕಿ ಮೊದಲ ಸ್ಥಾನದಲ್ಲಿದ್ದಾರೆ. ಇದರಲ್ಲಿ ೧೫ ಅರ್ಧಶತಕಗಳು ಸಹ ಸೇರಿವೆ. ಸಿಕ್ಸರ್ ಸರದಾರ ರೋಹಿತ್ ಶರ್ಮಾ ಆಡಿದ ೪೭ ಪಂದ್ಯಗಳಲ್ಲಿ ೩೪ರ ಸರಾಸರಿಯಲ್ಲಿ ೧,೨೨೦ ರನ್ ಸಿಡಿಸಿ ೨ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಸ್ಟಾರ್ ಆಟಗಾರರಾಗಿದ್ದ ಮಹೇಲ ಜಯವರ್ಧನೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ ೩೧ ಪಂದ್ಯಗಳಲ್ಲಿ ೧,೦೧೬ ರನ್ ಸಿಡಿಸಿದ್ದಾರೆ.

ವಿಶ್ವಕಪ್ ವಿಜೇತ ತಂಡಗಳು: 

ಮೂರು ತಂಡಗಳು ಅಂದರೆ ವೆಸ್ಟ್ ಇಂಡೀಸ್ (೨೦೧೨, ೨೦೧೬ ), ಇಂಗ್ಲೆಂಡ್ (೨೦೧೦, ೨೦೨೨ ) ಮತ್ತು ಭಾರತ (೨೦೦೭, ೨೦೨೪) ತಲಾ ಎರಡು ಬಾರಿ ವಿಶ್ವಕಪ್ ಜಯಿಸಿವೆ. ಪಾಕಿಸ್ತಾನ (೨೦೦೯), ಶ್ರೀಲಂಕಾ (೨೦೧೪ ) ಮತ್ತು ಆಸ್ಟ್ರೇಲಿಯಾ (೨೦೨೧) ತಲಾ ಒಂದು ಬಾರಿ ಪ್ರಶಸ್ತಿಯನ್ನು ಪಡೆದಿವೆ.

ಪಾಕ್ ಬಂದರೆ ಫೈನಲ್ ಸ್ಥಳ ಬದಲು: 

ಸೆಮಿಫೈನಲ್ ಪಂದ್ಯಗಳು ಮಾ.೪ ಮತ್ತು ೫ರಂದು ನಡೆದರೆ, ಮಾ. ೮ರಂದು ಫೈನಲ್ ಪಂದ್ಯ ಆಯೋಜನೆಯಾಗಿದೆ. ಮೊದಲ ಸೆಮಿಫೈನಲ್ ಈಡನ್ ಗಾರ್ಡನ್‌ನಲ್ಲಿ ಮತ್ತು ಎರಡನೇ ಸೆಮಿಫೈನಲ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ, ಮೊದಲ ಸೆಮಿಫೈನಲ್ ಪಂದ್ಯ ಪಾಕಿಸ್ತಾನವನ್ನು ಒಳಗೊಂಡಿದ್ದರೆ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುತ್ತದೆ. ೨ನೇ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮಾ.೮ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದುವೇಳೆ ಪಾಕಿಸ್ತಾನ ತಂಡವನ್ನು ಒಳಗೊಂಡಿದ್ದರೆ ಕೊಲಂಬೋಗೆ ಸ್ಥಳಾಂತರಗೊಳ್ಳಲಿದೆ.

 

 

ಆಂದೋಲನ ಡೆಸ್ಕ್

Recent Posts

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಬಂಧನ ನೋಟಿಸ್‌ ಹಿಂಪಡೆದ ಕೋರ್ಟ್‌

ಮೈಸೂರು: ಮೈಸೂರು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ (ಜಯರಾಮು ಆರ್‌ ವಿರುದ್ಧ ಕರ್ನಾಟಕ ರಾಜ್ಯ) ಪ್ರಕರಣದಲ್ಲಿ…

8 hours ago

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ…

11 hours ago

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಬಂಧನ

ಬೆಂಗಳೂರು: 42ನೇ ಎಸಿಜೆಎಂ ನ್ಯಾಯಾಲಯ ಅರೆಸ್ಟ್‌ ವಾರೆಂಟ್‌ ಜಾರಿಯ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

11 hours ago

ಮಡಿಕೇರಿ| ಗಾಂಜಾ ಮಾರಾಟ: ಮೈಸೂರು ಮೂಲದ ನಾಲ್ವರ ಬಂಧನ

ಮಡಿಕೇರಿ: ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು…

11 hours ago

ಹನೂರು: ಚಿರತೆ ದಾಳಿಗೆ ಹಸುವಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಿರತೆ ದಾಳಿ ನಡೆಸಿದ ಪರಿಣಾಮ ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ…

11 hours ago

ಹನೂರು: ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಮತ್ತೆ ಕಾಡ್ಗಿಚ್ಚು: ಅರಣ್ಯ ಪ್ರದೇಶ ಸುಟ್ಟು ಭಸ್ಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಹಾವಿನಮೂಲೆ…

11 hours ago