Andolana originals

ಸುಗಮ ಸಂಗೀತ ಗಾಯಕ ಮಲ್ಲಣ್ಣಗೆ ಒಲಿದ ಶಿಶುನಾಳ ಪ್ರಶಸ್ತಿ

ಡಾ. ಮಹದೇವಸ್ವಾಮಿ ಹೆಗ್ಗೊಠಾರ

ಇಂಗ್ಲಿಷ್ ಅಧ್ಯಾಪನ ಹಾಗೂ ಸುಗಮ ಸಂಗೀತ ಗಾಯನದ ಮೂಲಕ ಹಳೇ ಮೈಸೂರು ಪ್ರಾಂತ್ಯ ದಲ್ಲಿ ಪ್ರೊ. ಮಲ್ಲಣ್ಣನವರು ಚಿರಪರಿಚಿತರು; ಅಭಿನವ ಕಾಳಿಂಗರಾಯರೆಂದೇ ಖ್ಯಾತನಾಮರಾದ ಇವರು ತಮ್ಮ ಸಂಗೀತ ಸಾಧನೆಗೆ ರಾಜ್ಯ ಸರ್ಕಾರದ ಸಂತ ಶಿಶುನಾಳ ಶರೀಫ ಪ್ರಶಸ್ತಿಗೆ ಭಾಜನರಾಗಿರುವುದು ಸ್ವಾಗತಾರ್ಹ.

ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲದವರಾದ ಎಸ್. ಮಲ್ಲಣ್ಣ ವೃತ್ತಿ ಯಿಂದ ಇಂಗ್ಲಿಷ್ ಪ್ರಾಧ್ಯಾಪಕರು; ಪ್ರವೃತ್ತಿಯಲ್ಲಿ ಸಂಗೀತ ಕಲಾವಿದರು. ಆ ಕಾಲದಲ್ಲಿ ಹಳ್ಳಿಯ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಭಾಷೆಯು ಪ್ರೊ. ಮಲ್ಲಣ್ಣನವರಿಂದ ಪಾಠ ಕೇಳಿದವರಿಗೆಲ್ಲ ಸಲೀಸು; ಅವರ ಸರಳವಾದ ಇಂಗ್ಲಿಷ್ ನೋಟ್ಸ್ ಮೈಸೂರು ವಿಶ್ವವಿದ್ಯಾನಿಲಯದಲ್ಲೆಲ್ಲ ಫೇಮಸ್ಸು!

ವಿದ್ಯಾರ್ಥಿ ಹಾಗೂ ಜನಸಾಮಾನ್ಯರ ನಾಡಿಮಿಡಿತ ವನ್ನು ಚೆನ್ನಾಗಿ ಅರಿತಿದ್ದ ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾ ಪಕರನ್ನು ಅವರ ಶಿಷ್ಯವೃಂದ ಆ ದಿನಗಳೊಂದಿಗೆ ಮರೆಯದೆ ನೆನಪಿಸಿಕೊಳ್ಳುತ್ತದೆ. ಅವರ ಶಿಷ್ಯರಲ್ಲಿ ಮುಖ್ಯವಾಗಿ ಎರಡು ವರ್ಗ. ನೇರವಾಗಿ ಪಾಠ ಕೇಳಿದ ಶಿಷ್ಯರು ಹಾಗೂ ಅವರ ನೋಟ್ಸ್ ಮೂಲಕ ಕಲಿತ ಏಕಲವ್ಯನಂತಹ ಶಿಷ್ಯರು.

ಮಲ್ಲಣ್ಣನವರ ತಂದೆ ಶಂಕರಪ್ಪನವರು ೧೯೪೦-೫೦ರ ದಶಕದಲ್ಲಿ ಜನಪ್ರಿಯ ನಾಟಕ ಕಲಾವಿದರು ಹಾಗೂ ಗಾಯಕರು. ಇಂತಹ ಕಲಾಭಿರುಚಿಯ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಲ್ಲಣ್ಣನವರಲ್ಲಿ ಸಂಗೀತ ರಕ್ತಗತವಾಗಿ ಬಂದ ಬಹುಶ್ರುತ ವಿದ್ಯೆ. ಕನ್ನಡ ಭಾವಗೀತೆ, ಜನಪದ ಗೀತೆ, ಚಿತ್ರಗೀತೆ, ವಚನ, ತತ್ವಪದ ಮುಂತಾದ ಪ್ರಕಾರಗಳಲ್ಲಿ ಹಾಡಿ, ಹಳಬರಿಗೆ ಉತ್ಸಾಹ, ಹೊಸಬರಿಗೆ ಪ್ರೋತ್ಸಾಹ ನೀಡುವ ಕೈಂಕರ್ಯ ಅವರದು. ಗಾಯನ ಲೋಕದ ದಿಗ್ಗಜರಾದ ಕಾಳಿಂಗರಾಯರು ಮತ್ತು ಪಿ. ಬಿ. ಶ್ರೀನಿವಾಸರ ಗಾಯನದ ಅನುಕರಣೆ, ಅನುಸರಣೆ ಮಲ್ಲಣ್ಣನವರಿಗೆ ನೀರು ಕುಡಿದಷ್ಟೇ ಸುಲಭ. ಕುವೆಂಪು, ದ. ರಾ. ಬೇಂದ್ರೆ, ರಾಜರತ್ನಂ, ಅಡಿಗ, ಜಿ. ಎಸ್. ಶಿವರುದ್ರಪ್ಪ, ಕೆ. ಎಸ್. ನರಸಿಂಹಸ್ವಾಮಿ, ಕೆ. ಎಸ್. ನಿಸಾರ್ ಅಹಮದ್ ಮೊದಲಾದವರ ಭಾವಗೀತೆಗಳನ್ನು ಮಲ್ಲಣ್ಣ ಮನ ತುಂಬಿ ಹಾಡಿ ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ.

ಹಿರಿಯ ಕವಿಗಳಾದ ಸಿಪಿಕೆ, ಜಯಪ್ಪ ಹೊನ್ನಾಳಿ ಸೇರಿದಂತೆ ಹೊಸ ತಲೆಮಾರಿನ ಕವಿಗಳ ನೂರಾರು ಭಾವಗೀತೆಗಳಿಗೆ ಸ್ವತಃ ರಾಗ ಸಂಯೋಜನೆ ಮಾಡಿ ಸಿಡಿಗಳನ್ನು ಹೊರತಂದಿದ್ದಾರೆ. ಮೂರು ದಶಕಗಳ ಹಿಂದೆಯೇ ಹಂಸ ಧ್ವನಿ ಎಂಬ ಸಂಗೀತ ಟ್ರಸ್ಟ್ ಕಟ್ಟಿ ಕೊಂಡು ಯುವ ಕಲಾವಿದರಿಗೂ ಧ್ವನಿಯಾಗಿದ್ದಾರೆ. ಅವರು ತಮ್ಮ ೭೫ರ ಹರಯದಲ್ಲೂ ಮೊನ್ನೆ ಮೊನ್ನೆ ಮೈಸೂರಿನ ಗಾನಭಾರತಿಯಲ್ಲಿ ನಡೆಸಿಕೊಟ್ಟ ಕಾರ್ಯ ಕ್ರಮವು ಸಂಗೀತ ಪ್ರೇಮಿಗಳನ್ನು ರಂಜಿಸಿದೆ. ಮಲ್ಲಣ್ಣ ಅವರ ಪತ್ನಿ ಪ್ರೊ. ಕೆ. ಆರ್. ಪ್ರೇಮಲೀಲಾ ಅವರು ಕೂಡ ಕವಯಿತ್ರಿಯಾಗಿದ್ದು, ಅವರು ರಚಿಸಿರುವ ಹಲವು ಕವನಗಳಿಗೂ ಮಲ್ಲಣ್ಣ ರಾಗ ಸಂಯೋಜಿಸಿ ಹಾಡಿರು ವುದು ವಿಶೇಷ.

(ಲೇಖಕರು, ಹುಣಸೂರು ತಾಲ್ಲೂಕು ರತ್ನಪುರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು)

 

ಆಂದೋಲನ ಡೆಸ್ಕ್

Recent Posts

ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ ಪಿಎಸ್‌ಎಲ್‌ವಿ ರಾಕೆಟ್‌

ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಪಿಎಸ್‌ಎಲ್‌ವಿ-C62 ರಾಕೆಟ್‌ ಮೂಲಕ EOS-N1 ಅನ್ವೇಷಾ ಸೇರಿದಂತೆ 16 ಉಪಗ್ರಹಗಳನ್ನು ಉಡಾವಣೆ ಮಾಡಿದೆ.…

34 mins ago

ವಾಯುಭಾರ ಕುಸಿತ: ರಾಜ್ಯದಲ್ಲಿ ಮತ್ತೆ ಮೂರು ದಿನ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

1 hour ago

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ಆತಂಕ

ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಗುರುಪುರ ಸಮೀಪದ ಹೊಸೂರು ಗೇಟ್ ಬಳಿ ಹುಲಿ ದಾಳಿ…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ‘ಅರಸು, ಸಿದ್ದರಾಮಯ್ಯ ಎದುರಿಸಿದ ಸವಾಲುಗಳು ವಿಭಿನ್ನ’

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ…

5 hours ago

ಕೇರಳ ಸರ್ಕಾರ ಭಾಷಾ ಸೌಹಾರ್ದತೆ ಕಾಪಾಡಲಿ

ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ…

5 hours ago

ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆಯಲು ಹಿಂದೇಟು

ದೂರ ನಂಜುಂಡಸ್ವಾಮಿ ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ  ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ…

5 hours ago