Andolana originals

ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಪರೀಕ್ಷೆ ಬರೆಯಲು ಒಟ್ಟು ೩೯,೧೦೩ ವಿದ್ಯಾರ್ಥಿಗಳ ನೋಂದಾವಣೆ

ಜಿಲ್ಲೆಯಲ್ಲಿ ೧೩೩ ಪರೀಕ್ಷಾ ಕೇಂದ್ರಗಳು

ಸಿಂಧುವಳ್ಳಿ ಸುಧೀರ
ಮೈಸೂರು: ಮಾ. ೨೧ರಿಂದ ಏ. ೪ರವರೆಗೆ ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು ೬೮೮ ಶಾಲೆಗಳಿದ್ದು, ಅವುಗಳಲ್ಲಿ ೨೭೬ ಸರ್ಕಾರಿ, ೧೨೪ ಅನುದಾನಿತ ಮತ್ತು ೨೮೮ ಅನುದಾನ ರಹಿತ ಶಾಲೆಗಳಿವೆ.

ಮೈಸೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೧೩೩ ಪರೀಕ್ಷಾ ಕೇಂದ್ರಗಳನ್ನು ಗೊತ್ತುಪಡಿಸಲಾಗಿದ್ದು, ನಗರದಲ್ಲಿ ೪೩, ಗ್ರಾಮೀಣ ಭಾಗದಲ್ಲಿ ೯೦ ಪರೀಕ್ಷಾ ಕೇಂದ್ರಗಳಿವೆ. ಅವುಗಳಲ್ಲಿ ೭೫ ಸರ್ಕಾರಿ, ೨೫ ಅನುದಾನಿತ, ೩೩ ಅನುದಾನ ರಹಿತ ಪರೀಕ್ಷಾ ಕೇಂದ್ರಗಳಿವೆ.

ಮೈಸೂರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ೩೯,೧೦೩ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆ ಪೈಕಿ ೧೯,೯೮೯ ಬಾಲಕರು ಮತ್ತು ೧೯,೧೧೪ ಮಂದಿ ಬಾಲಕಿಯರಾಗಿದ್ದಾರೆ.

ಪರೀಕ್ಷೆಗೆ ನೋಂದಾಯಿಸಿಕೊಡಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ೩೭,೯೦೪ ಶಾಲಾ ರೆಗ್ಯುಲರ್ ವಿದ್ಯಾರ್ಥಿಗಳಿದ್ದು, ಅವರಲ್ಲಿ ೧೯,೧೧೪ ಬಾಲಕರು ಮತ್ತು ೧೮,೯೭೦ ಬಾಲಕಿಯರು ಇದ್ದಾರೆ. ೬೦೯ ಶಾಲಾ ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳಿದ್ದು, ಅವರಲ್ಲಿ ೪೯೪ ಬಾಲಕರು ಮತ್ತು ೧೧೫ ಬಾಲಕಿಯರಿದ್ದಾರೆ. ೪೬೫ ಖಾಸಗಿ ವಿದ್ಯಾರ್ಥಿಗಳಲ್ಲಿ ೨೯೭ ಬಾಲಕರು ಮತ್ತು ೧೬೮ ಬಾಲಕಿಯರಿದ್ದಾರೆ. ೧೨೫ ಖಾಸಗಿ ಪುನಾರಾವರ್ತಿತ ವಿದ್ಯಾರ್ಥಿಗಳಲ್ಲಿ ೮೪ ಬಾಲಕರು, ೪೧ ಬಾಲಕಿಯರಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ೧೩೩ ಮುಖ್ಯ ಅಧಿಕ್ಷಕರು, ೨೪ ಉಪ ಮುಖ್ಯ ಅಧಿಕ್ಷಕರು, ೫೪ ಮಾರ್ಗಾಧಿಕಾರಿಗಳು, ೧೩೩ ಪ್ರಶ್ನೆ ಪತ್ರಿಕೆ ಪಾಲಕರು, ೧೩೩ ಸ್ಥಾನಿಕ ಜಾಗೃತ ದಳದವರು, ೧೩೩ ಮೊಬೈಲ್ ಸ್ವಾಧೀನ ಅಧಿಕಾರಿಗಳು, ೧೮ ತಾಲ್ಲೂಕು ಹಂತದ ಜಾಗೃತ ದಳ, ೩ ಜಿಲ್ಲಾ ಹಂತದ ಜಾಗೃತದಳ, ೨ ಜಿಲ್ಲಾಽ ಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾ ಹಕ ಅಧಿಕಾ ರಿಗಳು ಸೂಚಿಸಿದ ತಂಡವನ್ನು ನೇಮಕಗೊಳಿಸಲಾಗಿದೆ.

ʻವಿದ್ಯಾರ್ಥಿಗಳಿಗೆ ಸಕಲ ಅನುಕೂಲ’

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಸಕಲ ರೀತಿಯ ಅನುಕೂಲಗಳನ್ನೂ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರತಿಯೊಂದು ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೆ ಪ್ರಾಥಮಿಕ ಚಿಕಿತ್ಸೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮರಗಳ ಕೊಂಬೆಗಳನ್ನು ಕತ್ತರಿಸಿ

ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…

23 mins ago

ಓದುಗರ ಪತ್ರ:  ಕುಸ್ತಿಪಟುಗಳಿಗೆ ತರಬೇತಿ ಸ್ವಾಗತಾರ್ಹ

ರಾಜ್ಯದಲ್ಲಿ ೩೧೫ ಕುಸ್ತಿಪಟುಗಳಿಗೆ ಉಚಿತವಾಗಿ ನುರಿತ ಕುಸ್ತಿ ತರಬೇತುದಾರರಿಂದ ವೈಜ್ಞಾನಿಕ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಹಾಗೂ ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ…

29 mins ago

ಓದುಗರ ಪತ್ರ:  ರಾಜ್ಯ ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಒಳ್ಳೆಯ ಬೆಳವಣಿಗೆ

ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು…

33 mins ago

ಓದುಗರ ಪತ್ರ:  ವರುಣ ನಾಲೆಗೆ ತಡೆಗೋಡೆ ನಿರ್ಮಿಸಿ

ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ.…

34 mins ago

ಮೈಸೂರು ಮುಡಾ ಹಗರಣ: ಇಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ…

37 mins ago

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್‌

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಹಲವಾರು ರಾಜ್ಯ, ಹಲವಾರು ಧರ್ಮ, ಹಲವಾರು ಆಹಾರ ವೈವಿಧ್ಯತೆ, ಹಲವಾರು ಭಾಷೆ, ಹಲವಾರು ಸಂಸ್ಕ ತಿಗಳು…

1 hour ago