• ಎರಡನೇ ತಂಡದಲ್ಲಿ ಬಂದರೂ ಮಹೇಂದ್ರನ ಮೇಲೆ ಹೆಚ್ಚಿದ ವಿಶ್ವಾಸ
• ಮೃದು ಸ್ವಭಾವದಿಂದಲೇ ಗಮನ ಸೆಳೆಯುತ್ತಿರುವ ಮಹೇಂದ್ರ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲಿ ಅಂಬಾರಿ ಹೊರುವ ಮೂಲಕ ಮಹೇಂದ್ರ ಆನೆ ಹ್ಯಾಟ್ರಿಕ್ ಸಾಧನೆ ಮಾಡಲಿದೆ.
ಎರಡನೇ ತಂಡದಲ್ಲಿ ಅರಮನೆಗೆ ಆಗಮಿಸಿದ್ದರೂ ಮಹೇಂದ್ರ ಅಧಿಕಾರಿಗಳ ಮನಗೆದ್ದಿ ದ್ದಾನೆ. ಈ ಹಿನ್ನೆಲೆಯಲ್ಲಿಯೇ ಶ್ರೀರಂಗಪಟ್ಟಣದ ದಸರೆಯ ಜವಾಬ್ದಾರಿಯನ್ನು ತನ್ನ
ಹೆಗಲಿಗೇರಿಸಿಕೊಳ್ಳಲಿದ್ದಾನೆ.
ಸತತ ಮೂರನೇ ವರ್ಷ ದಸರಾ ಮಹೋತ ವದಲ್ಲಿ ಭಾಗವಹಿಸುತ್ತಿರುವ ಮಹೇಂದ್ರ ಜಂಬೂಸವಾರಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾನೆ. 41 ವರ್ಷದ ಮಹೇಂದ್ರ 2022 ಮತ್ತು 2023ರಲ್ಲಿ ಮೊದಲ ತಂಡದಲ್ಲಿಯೇ ಮೈಸೂರಿಗೆ ಆಗಮಿಸಿ ಅರಮನೆ ಆವರಣದ ಬಿಡಾರ ಸೇರಿತ್ತು. ಆದರೆ, ಈ ಬಾರಿ ಕೆಲ ಗೊಂದಲ ಹಾಗೂ ತಪ್ಪು ನಿರ್ಧಾರದಿಂದಾಗಿ ಎರಡನೇ ತಂಡದಲ್ಲಿ ಆಗಮಿಸಿದ್ದು, ಈಗಾಗಲೇ ಮೊದಲ ತಂಡದ ಗಜಪಡೆಯೊಂದಿಗೆ ತಾಲೀಮಿನಲ್ಲಿ ಪಾಲ್ಗೊಂಡಿದೆ.
ಹ್ಯಾಟ್ರಿಕ್ ಸಾಧನೆ: ಮೈಸೂರು ದಸರಾ ಮಾದರಿಯಲ್ಲಿಯೇ ಶ್ರೀರಂಗಪಟ್ಟಣದಲ್ಲೂ ದಸರಾ ಆಚರಿಸುವ ಪದ್ಧತಿಯಿದ್ದು, ಅಲ್ಲಿ ಆನೆ ಮೇಲೆ ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯುಳ್ಳ ಮರದ ಅಂಬಾರಿ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ಈ ಬಾರಿ ನವರಾತ್ರಿ ಆರಂಭದ ಮರುದಿನವೇ ಅ.4ರಂದು ಶ್ರೀರಂಗಪಟ್ಟಣ ದಸರಾ ಆಚರಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಿಂದ ಯಾವ ಆನೆ ಕಳುಹಿಸಬೇಕು ಎಂದು ಚರ್ಚಿಸಿ ಕಳೆದ ಎರಡು ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಂಡು ಎನಿಸಿಕೊಂಡಿರುವ ಮಹೇಂದ್ರನನ್ನೇ ಈ ಬಾರಿಯೂ ಶ್ರೀರಂಗಪಟ್ಟಣಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.
ಸುಮಾರು 300ರಿಂದ 400 ಕೆಜಿ ತೂಕದ ಮರದ ಅಂಬಾರಿಯನ್ನು ಕ್ರೇನ್ ಮೂಲಕ ಆನೆ ಮೇಲಿಟ್ಟು ಕಟ್ಟುವ ಪದ್ಧತಿಯಿದೆ. ನಾಲ್ಕು ವರ್ಷಗಳ ಹಿಂದೆ ಪಟಾಕಿ ಶಬ್ದಕ್ಕೆ ಅಂಬಾರಿ ಹೊತ್ತಿದ್ದ ಹೆದರಿದ ಗೋಪಾಲಸ್ವಾಮಿ ಶ್ರೀರಂಗಪಟ್ಟಣ ದಸರೆಯಲ್ಲಿ ಹಿಮ್ಮುಖವಾಗಿ ವೇಗವಾಗಿ ತಿರುಗಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಮರು ವರ್ಷವೇ ಮೊದಲ ಬಾರಿಗೆ ಪಾಲ್ಗೊಂಡಿದ್ದ ಮಹೇಂದ್ರನಿಗೆ ಶ್ರೀರಂಗಪಟ್ಟಣ ದಸರೆಯ ಜವಾಬ್ದಾರಿ ವಹಿಸಲಾಗಿತ್ತು. ಮೊದಲ ವರ್ಷವೇ ಅತ್ಯುತ್ತಮವಾಗಿ ವರ್ತಿಸಿದ್ದ ಮಹೇಂದ್ರ ತನ್ನ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಂಡಿತ್ತು. ಇದೀಗ ಸತತ ಮೂರನೇ ಬಾರಿಯೂ ಅಂಬಾರಿ ಹೊರುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲು ಸಜ್ಜಾಗಿದೆ. ಈ ಹಿಂದೆ ಕ್ಯಾಪ್ಟನ್ ಅಭಿಮನ್ಯು ಶ್ರೀರಂಗಪಟ್ಟಣ ದಸರೆಯಲ್ಲಿ ಅಂಬಾರಿ ಹೊತ್ತು ಹ್ಯಾಟ್ರಿಕ್ ಸಾಧನೆ ಮಾಡಿತ್ತು.
ಸತತ ಮೂರನೇ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದರೊಂದಿಗೆ ಮೂರು ಬಾರಿಯೂ ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಜವಾಬ್ದಾರಿ ನಿಭಾಯಿಸಲಿದ್ದಾನೆ. ಮಹೇಂದ್ರ ಆನೆ ಸೌಮ್ಯ ಸ್ವಭಾವಿಯಾಗಿದ್ದು, ಜವಾಬ್ದಾರಿ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾನೆ.
-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…