Andolana originals

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ

ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ;

ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ

ಮೈಸೂರು: ರಾಜ್ಯ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಡೆಸುವ ಸಭೆ- ಸಮಾರಂಭಗಳಲ್ಲಿ ಗಣ್ಯರಿಗೆ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ಇತ್ಯಾದಿ ನೆನಪಿನ ಕಾಣಿಕೆಗಳನ್ನು ನೀಡುವ ಬದಲಿಗೆ ಕನ್ನಡ ಪುಸ್ತಕಗಳನ್ನು ನೀಡಬಹುದೆಂದು ಸರ್ಕಾರವೇ ಹೊರಡಿಸಿದ್ದ ಸುತ್ತೋಲೆ ನಿಜವಾಗಿ ಅನುಷ್ಠಾನಕ್ಕೆ ಬಂದಿದೆಯೇ ಎನ್ನುವ ಪ್ರಶ್ನೆ ಮೂಡಿರುವ ಬೆನ್ನಲ್ಲೇ ಸರ್ಕಾರ ಹಳೆ ಸುತ್ತೋಲೆಗೆ ಮತ್ತಷ್ಟು ಅಂಶಗಳನ್ನು ಸೇರ್ಪಡೆ ಮಾಡಿದೆ.

ಸ್ಮರಣಿಕೆ, ಟ್ರೋಫಿ ಮತ್ತಿತರೆ ಪರಿಸರಕ್ಕೆ ಮಾರಕವಾದ ಹಾಗೂ ಅನಗತ್ಯವಾಗಿ ದುಂದುವೆಚ್ಚಕ್ಕೆ ಕಾರಣವಾಗುವ ಸ್ಮರಣಾರ್ಥ ವಸ್ತುಗಳನ್ನು ಗಣ್ಯರಿಗೆ ನೀಡೋದ್ಯಾಕೆ? ಕೊಡಲೇ ಬೇಕು ಅಂತಿದ್ದರೆ ಸಸಿಗಳು, ಪುಸ್ತಕ ಗಳಂತಹ ಪರಿಸರ ಸ್ನೇಹಿ ಆಯ್ಕೆಗಳನ್ನು ಮಾಡಿ ಎಂದು ಸರ್ಕಾರ ಹೇಳಿದೆ. ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಗಳಲ್ಲಿ ಸ್ಮರಣಿಕೆ ಮತ್ತು ಟ್ರೋಫಿಗಳನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರಿಗೆ ಸ್ಮರಣಿಕೆ, ಟ್ರೋಫಿ ಮತ್ತು ಇನ್ನಿತರೆ ಸ್ಮರಣಾರ್ಥ ವಸ್ತುಗಳನ್ನು ನೀಡುವುದು ನಿಯಮಿತ ಅಭ್ಯಾಸವಾಗಿದೆ. ಈ ಪದ್ಧತಿಯು ಆರಂಭದಲ್ಲಿ ಸದ್ಭಾವನೆ ಮತ್ತು ಮೆಚ್ಚುಗೆಯ ಸಂಕೇತದ ಉದ್ದೇಶವಾಗಿದ್ದರೂ ಗಣ್ಯರನ್ನು ಸನ್ಮಾನಿಸುವಂತಹ ಅಭ್ಯಾಸವು ಆರ್ಥಿಕ ಮಿತ ವ್ಯಯ, ಪರಿಸರ ಸುಸ್ಥಿರತೆ ಮತ್ತು ಸಾಗಣೆ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಪರಿಸರಕ್ಕೆ ಮಾರಕ: ಜೈವಿಕವಾಗಿ ವಿಘಟನೆಯಲ್ಲದ (ನಾನ್ ಬಯೋಡಿಗ್ರೇಡಿಬಲ್) ಲ್ಯಾಮಿನೇಟೆಡ್ ಮರ, ಪ್ಲಾಸ್ಟಿಕ್, ಲೋಹ ಮತ್ತು ಗಾಜಿನಂತಹ ಮರುಬಳಕೆ ಮಾಡಲಾಗದ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳಿಂದ ಸುತ್ತಮುತ್ತಲಿನ ನೈಸರ್ಗಿಕ ಪರಿಸರದ ಅವನತಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಈ ವಸ್ತುಗಳನ್ನು ಬೇರ್ಪಡಿಸುವುದು ಅಥವಾ ಮರುಬಳಕೆ ಮಾಡುವುದು ಕಷ್ಟಕರವಾಗಿದ್ದು, ಹೀಗೆ ನಿರಂತರವಾಗಿ ಶೇಖರಣೆಗೊಳ್ಳುವ ತ್ಯಾಜ್ಯವು ರಾಜ್ಯದ ಘನತ್ಯಾಜ್ಯ ನಿರ್ವಹಣಾ ಹೊರೆಯನ್ನು ಹೆಚ್ಚಿಸುವುದರೊಂದಿಗೆ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಅನಿವಾರ್ಯವಲ್ಲದ ತ್ಯಾಜ್ಯವನ್ನು ಕಡಿಮೆ ಮಾಡುವ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ತದ್ವಿರುದ್ಧವಾಗುವುದಲ್ಲದೇ ಪರಿಸರ ಕಾಳಜಿಯ ಉದ್ದೇಶಗಳನ್ನು ಈಡೇರಿಸುವಲ್ಲಿ ವಿಫಲವಾಗಿರುತ್ತದೆ.

ಅನಗತ್ಯ ದುಂದುವೆಚ್ಚ: ವಿವಿಧ ಇಲಾಖೆಗಳು, ನಿಗಮ-ಮಂಡಳಿಗಳು ಸ್ಮರಣಿಕೆ ಮತ್ತು ಟ್ರೋಫಿಗಳ ಖರೀದಿಗೆ ವಾರ್ಷಿಕವಾಗಿ ಭಾರೀ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಆರ್ಥಿಕ ದೃಷ್ಟಿಕೋನದಿಂದ ಅಭಿವೃದ್ಧಿಯೇತರ ಮುಖ್ಯಸ್ಥರ ಅಡಿಯಲ್ಲಿನ ಸಂಚಿತ ವೆಚ್ಚವನ್ನುಉತ್ಪಾದಕ ಮತ್ತು ಕಲ್ಯಾಣ ಆಧಾರಿತ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ, ಗಣ್ಯರ ಅಥವಾ ಇಲಾಖಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಲಾಗುವ ಇಂತಹ ಅನಗತ್ಯ ಕಳಪೆ ವಸ್ತುಗಳ ಪುನರಾವರ್ತಿತ ಖರೀದಿ ಯಿಂದ ಅವುಗಳ ಸಂಗ್ರಹಣೆ, ನಿರ್ವಹಣೆ ಹಾಗೂ ವಿಲೇವಾರಿಯು ಕಠಿಣ ಸವಾಲಾಗಿ ಪರಿಣಮಿಸುತ್ತದೆ. ಪರಿಸರ ಕಾಳಜಿ, ಆರ್ಥಿಕತೆ, ಸರಳತೆ, ಸಂಪನ್ಮೂಲ ಸಂರಕ್ಷಣೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯ ಮನವರಿಕೆಯನ್ನು ಒತ್ತಿ ಹೇಳುವ ಸಾಮಾಜಿಕ ಮತ್ತು ಆಡಳಿತಾತ್ಮಕ ಮೌಲ್ಯಗಳಿಗೆ ಪ್ರಸಕ್ತ ಪದ್ಧತಿಯು ಹೊಂದಾಣಿಕೆಯಾಗುವುದಿಲ್ಲ. ಈ ಹಿನ್ನೆಲೆ ಯಲ್ಲಿ ಸರ್ಕಾರಿ ಪ್ರಾಯೋಜಿತ ಅಥವಾ ಅನುದಾನಿತ ಕಾರ್ಯ ಕ್ರಮಗಳ ಸಂದರ್ಭದಲ್ಲಿ ಸ್ಮರಣಿಕೆ, ಟ್ರೋಫಿ ಮತ್ತು ಅಂತಹ ವಸ್ತುಗಳ ಖರೀದಿ ಮತ್ತು ಪ್ರಸ್ತುತಿಯನ್ನು ನಿಷೇಧಿಸುವಂತೆ ಎಲ್ಲಾ ಇಲಾಖೆ, ನಿಗಮ-ಮಂಡಳಿ ಹಾಗೂ ಜಿಲ್ಲಾಡಳಿತಗಳಿಗೆ ಸೂಚಿಸಿದೆ.

ಇದನ್ನು ಓದಿ: ಡಿ.26ರಿಂದ ಕೊಡವ ಹಾಕಿ ಚಾಂಪಿಯನ್ ಟ್ರೋಫಿ

ಪರಿಸರ ಸ್ನೇಹಿ ಆಯ್ಕೆಗಳು: ಸ್ಮರಣಿಕೆ, ಟ್ರೋಫಿಗಳ ಬದಲಿಗೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ತಿಳಿಸಲಾಗಿದೆ

೧. ಪರಿಸರ ಕಾಳಜಿ, ಸಾರ್ವಜನಿಕ ಹೊಣೆಗಾರಿಕೆ ಹಾಗೂ ಆಡಳಿತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ
೨. ಯಾವುದೇ ಇಲಾಖೆ, ನಿಗಮ-ಮಂಡಳಿಯು ಸ್ಮರಣಿಕೆ ಅಥವಾ ಟ್ರೋಫಿ ಖರೀದಿಯಲ್ಲಿ ಯಾವುದೇ ಹೊಸ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವಂತಿಲ್ಲ
೩. ಪ್ರಸ್ತುತವಿರುವ ಸ್ಮರಣಿಕೆಗಳ ದಾಸ್ತಾನನ್ನು ಅಧಿಕೃತ ಮರುಬಳಕೆ ಏಜೆನ್ಸಿಗಳು ಅಥವಾ ಸಮಾಜ ಕಲ್ಯಾಣ ಸಂಸ್ಥೆಗಳ ಮೂಲಕ ಸಂಬಂಧಿತ ಇಲಾಖಾ ಮುಖ್ಯಸ್ಥರ ಅನುಮತಿಯೊಂದಿಗೆ ತ್ಯಜಿಸಬಹುದು ಅಥವಾ ದಾನ ಮಾಡಬಹುದು.

ಶಿಲಾನ್ಯಾಸಗಳು, ಉದ್ಘಾಟನೆಗಳು, ಸಮ್ಮೇಳನಗಳು, ಕಾರ್ಯಾಗಾರಗಳು, ಸನ್ಮಾನ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ-ಸಮಾರಂಭಗಳು ಮತ್ತು ರಾಜ್ಯ ಭೇಟಿಗಳಂತಹ ಎಲ್ಲಾ ಅಽಕೃತ ಚಟುವಟಿಕೆಗಳಿಗೆ ಅನ್ವಯವಾಗುತ್ತದೆ. ಅಽಕೃತ ರಾಜ್ಯ ಕ್ರೀಡಾ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಕ್ರೀಡಾಪಟುಗಳಿಗೆ ನೀಡುವ ಪ್ಲಾಸ್ಟಿಕ್ ಮುಕ್ತ ಟ್ರೋಫಿಗಳನ್ನು ಇದರಿಂದ ಹೊರತುಪಡಿಸಲಾಗಿದೆ.

” ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ ಕೊಡಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸರಿ. ಆದರೆ, ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಸನ್ಮಾನಿತರು, ಕ್ರೀಡಾ ವಿಜೇತರಿಗೆ ಸ್ಮರಣಿಕೆ, ಟ್ರೋಫಿ ಕೊಡಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಜನ ಒಪ್ಪಲ್ಲ. ಹೀಗಾಗಿ ಸುತ್ತೋಲೆಯ ಕಡ್ಡಾಯ ಜಾರಿಗೆ ಮುಂದಾಗಬೇಕು.”
– ಜೆ. ಗೋವಿಂದರಾಜು, ಜಿಲ್ಲಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

ಗಿರೀಶ್ ಹುಣಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಿಎಂಟಿಸಿ ಜನಹಿತ ಕಾಯಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…

16 mins ago

ಓದುಗರ ಪತ್ರ: ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…

19 mins ago

‘ಶಕ್ತಿ’ ಸ್ಕೀಮ್‌ನಿಂದ ಸಾರಿಗೆ ನಿಗಮಗಳಿಗೆ ನಿಶ್ಶಕ್ತಿ!

ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…

45 mins ago

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

5 hours ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

5 hours ago

ಮೈಸೂರಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ಹೇಗಿರಬೇಕು?

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…

6 hours ago