Andolana originals

ತಂತ್ರಜ್ಞಾನದ ಕಣ್ಣಲ್ಲಿ ಸಾಮಾಜಿಕ ಕಾಳಜಿ

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಸಾಮಾಜಿಕ ಆವಿಷ್ಕಾರ (ಸೋಷಿಯಲ್ ಇನೊವೇಶನ್) ಅಧ್ಯಯನದಡಿಯಲ್ಲಿ ಸಾಮಾಜಿಕ ಕಾಳಜಿಯುಳ್ಳ ‘ಸಂತೃಪ್ತಿ ಹಾಗೂ ಲೈಫ್’ ಎಂಬ ಎರಡು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕುರಿತು ಸಂಶೋಧನೆ ಮಾಡಿದ್ದಾರೆ.

ಈಗಾಗಲೇ ಎರಡೂ ಯೋಜನೆಗಳ ಪೇಟೆಂಟ್ ನೀಡಲಾಗಿದ್ದು, ಈ ಯೋಜನೆಗಳನ್ನು ಅಳವಡಿಸಿಕೊಂಡು ಸಾಮಾಜಿಕ ಕಾರ್ಯ ಕೈಗೊಳ್ಳುವ ಸಲುವಾಗಿ ಖಾಸಗಿ ಕಂಪೆನಿಗಳು ಹೂಡಿಕೆಗೆ ಮುಂದಾಗಿವೆ. ಸಂಶೋಧನೆಗೆ ಕಾರಣವಾದ ವಿಡಿಯೋ: ಈ ಹಿಂದೆ ಬೆಂಗಳೂರಿನ ಮೆಟ್ರೊ ನಿಲ್ದಾಣದಲ್ಲಿ ತಾಯಿಯೊಬ್ಬರು ಹಸುಗೂಸಿಗೆ ಹಾಲುಣಿಸಲು ಪರದಾಡಿ, ಒಂದು ಜನರೇಟರ್ ಬಾಕ್ಸ್ ಹಿಂಭಾಗಕ್ಕೆ ಹೋಗಿ ಮಗುವಿನ ಹಸಿವು ನೀಗಿಸಿದ್ದ ಯಾರೋ ಒಬ್ಬರು, ವಿಡಿಯೋ ಚಿತ್ರೀಕರಿಸಿದ್ದು, ಅದು ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಗಮನಕ್ಕೆ ಬಂದಿತ್ತು. ಆ ಘಟನೆಯನ್ನು ಆಧರಿಸಿ ಕಾಲೇಜಿನ ಮಾಹಿತಿ ವಿಜ್ಞಾನ ಇಂಜಿನಿಯರಿಂಗ್(ಐಎಸ್‌ಇ) ವಿಭಾಗದ ವಿದ್ಯಾರ್ಥಿ ಪ್ರಣವ್ ಕುಮಾರ್ ಹಾಗೂ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಸಹಾಯಕ ಪ್ರಾಧ್ಯಾಪಕಿ ಡಿ.ಎಲ್.ಗಿರಿಜಾ ಅವರು ‘ಸಂತೃಪ್ತಿ’ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದಾರೆ.

ಇದನ್ನು ಓದಿ: ವಿಡಿಯೋ, ಪಿಡಿಎಫ್ ಭಾಷಾಂತರಿಸುವ ‘ಕ್ವಿಕ್ ಆಪ್’ 

ಹೇಗೆ ಕಾರ್ಯನಿರ್ವಹಿಸುತ್ತದೆ?: ಸಂತೃಪ್ತಿ ತಂತ್ರಜ್ಞಾನದಲ್ಲಿ ಒಂದು ಆಸನ ಅಥವಾ ಚಿಕ್ಕ ಕೊಠಡಿಯನ್ನು ನಿರ್ಮಿಸಿ, ಅದರಲ್ಲಿ ತಾಯಿಯು ಮಗುವಿಗೆ ಎದೆ ಹಾಲೂಡಲು ಬೇಕಾದ ಎಲ್ಲ ಸವಲತ್ತುಗಳನ್ನೂ ಅಳವಡಿಸಲಾಗಿರುತ್ತದೆ. ಇದಕ್ಕಾಗಿ ಸರ್ಕಾರ ನೀಡುವ ತಾಯಿ ಕಾರ್ಡ್‌ನಂತೆ, ಫೀಡಿಂಗ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಎಟಿಎಂ ಕಾರ್ಡ್ ರೀತಿಯಲ್ಲಿ ಕಾರ್ಯನಿರ್ವಹಿಸ ಲಿದ್ದು, ಒಮ್ಮೆ ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಆಸನವು ತೆರೆದುಕೊಳ್ಳುವ ಅಥವಾ ಮುಚ್ಚುವ ವ್ಯವಸ್ಥೆ ಹೊಂದಿದೆ. ಒಳಗಡೆ ತಾಯಿಗೆ ಬೇಕಾದ ವಾತಾವರಣವನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿರುತ್ತದೆ. ಫೀಡಿಂಗ್ ಕಾರ್ಡ್ ಮಗು ಹುಟ್ಟಿದ ದಿನದಿಂದ ೨ ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಬಳಿಕ ಆ ಕಾರ್ಡ್‌ನ್ನು ನಿಷ್ಕ್ರಿಯಗೊಳಿಸ ಲಾಗುತ್ತದೆ. ಈ ‘ಸಂತೃಪ್ತಿ’ ತಂತ್ರಜ್ಞಾನವನ್ನು ಸಾರ್ವಜನಿಕ ಸ್ಥಳಗಳು, ಮೆಟ್ರೊ, ಬಸ್‌ಗಳು, ವಿಮಾನ, ನಿಲ್ದಾಣಗಳು ಇನ್ನಿತರ ಸ್ಥಳಗಳಲ್ಲಿ ಅಳವಡಿಸಲು ಸಾಧ್ಯವಿರುತ್ತದೆ.

‘ಸಂತೃಪ್ತಿ ಆವಿಷ್ಕಾರದ ಮಾಡೆಲ್‌ಗಾಗಿ ೪ ಸಾವಿರ ರೂ. ವೆಚ್ಚ ತಗುಲಿದ್ದು, ಸ್ಥಾಪಿಸಲು ೪೦ ಸಾವಿರ ರೂ.ಗಳಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೂಡಿಕೆ ಮಾಡಲು ಮುಂದಾಗಿದೆ.

ಲೈಫ್ ಆವಿಷ್ಕಾರ: (ಲಿವಿಂಗ್-ಬೀಯಿಂಗ್ ಐಡೆಂಟಿಫಿಕೇಷನ್ ಫರ್ ಹೆನಾಂಸುಡ್ ವೆಹಿಕಲ್ ಸೇಫ್ಟಿ) ಲೈಫ್ ತಂತ್ರಜ್ಞಾನವನ್ನು ವಾಹನಗಳ ಸುರಕ್ಷತೆಗಾಗಿ ಆವಿಷ್ಕರಿಸಲಾಗಿದೆ. ಲೈಫ್ ರೀತಿಯ ತಂತ್ರಜ್ಞಾನವನ್ನು ಯಾವುದೇ ಕಂಪೆನಿಯೂ ಬಿಡುಗಡೆ ಮಾಡಿಲ್ಲ. ಮನೆಗಳ ಮುಂಭಾಗ ಅಥವಾ ಬೇರೆ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಸಹಜ. ಅಂತಹ ಸಂದರ್ಭಗಳಲ್ಲಿ ನಾಯಿ, ಬೆಕ್ಕು ಇತ್ಯಾದಿ ಸಣ್ಣಪುಟ್ಟ ಪ್ರಾಣಿಗಳು ವಾಹನಗಳ ಕೆಳಗೆ ನೆರಳಿಗಾಗಿಯೋ ಅಥವಾ ಬೆಚ್ಚನೆ ಜಾಗ ಅಂತಲೋ ಮಲಗಿಬಿಡುತ್ತವೆ. ಒಮ್ಮೊಮ್ಮೆ ಮಕ್ಕಳು ಆಟವಾಡುವ ಸಂದರ್ಭದಲ್ಲಿ ವಾಹನಗಳ ಕೆಳಗೆ ತೂರಿಕೊಳ್ಳುವುದೂ ಇದೆ. ಅದರ ಅರಿವಿಲ್ಲದೇ ಚಾಲಕರು ವಾಹನ ಚಲಾಯಿಸಿಬಿಟ್ಟರೆ ದೊಡ್ಡ ಅನಾಹುತವಾಗುತ್ತದೆ. ಅಂತಹ ಸಂಭಾವ್ಯ ಅಪಘಾತವನ್ನು ತಪ್ಪಿಸುವ ಸಲುವಾಗಿ ಕಾಲೇಜಿನ ಮಾಹಿತಿ ವಿಜ್ಞಾನ ಇಂಜಿನಿಯರಿಂಗ್(ಐಎಸ್‌ಇ) ವಿದ್ಯಾರ್ಥಿಗಳಾದ ಡಿ.ಎಸ್.ಪ್ರವಚನ್ ಮತ್ತು ಪ್ರಣವ್ ಎಸ್.ಹಂಡ್ರೋಲ್ ಅವರು ಈ ಲೈಫ್ ಉಪಕರಣವನ್ನು ಹೊರತಂದಿದ್ದಾರೆ.

ಕಾರ್ಯ ನಿರ್ವಹಣೆ ವಿಧಾನ: ಕಾರು, ಬಸ್ಸು, ಲಾರಿ, ಮತ್ತಿತರ ವಾಹನಗಳ ಕೆಳಗೆ ಮಧ್ಯಭಾಗದಲ್ಲಿ ಲೈಫ್ ಅಳವಡಿಸಬಹುದು. ಉಪಕರಣದಲ್ಲಿ ೩೬೦ ಡಿಗ್ರಿ ಕ್ಯಾಮೆರಾ, ಕ್ಯಾಮೆರಾ ಕಂಟ್ರೋಲರ್, ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ, ಹಗಲು ಮತ್ತು ರಾತ್ರಿ ಗುರುತಿಸುವಿಕೆ ತಂತ್ರಜ್ಞಾನವನ್ನೂ ಬಳಸಲಾಗಿದೆ. ವಾಹನಗಳಲ್ಲಿ ಡಿಸ್‌ಪ್ಲೇ ಅಳವಡಿಸಿ ಮಾನಿಟರ್ ಮಾಡಲಾಗುವುದು. ಉಪಕರಣಕ್ಕೆ ೩ ಲಕ್ಷಕ್ಕೂ ಹೆಚ್ಚಿನ ಜೀವಿಗಳ ಚಿತ್ರಗಳನ್ನು ಅಳವಡಿಸಿದ್ದು, ಅಷ್ಟನ್ನೂ ಸುಲಭವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಲೈಫ್ ಆವಿಷ್ಕಾರಕ್ಕಾಗಿ ೧೦ ಸಾವಿರ ರೂ. ವೆಚ್ಚವಾಗಲಿದೆ. ಇದಕ್ಕಾಗಿ ಭಾರತದ ಪ್ರತಿಷ್ಠಿತ ವಾಹನ ತಯಾರಿಕಾ ಕಂಪೆನಿ ಹೂಡಿಕೆ ಮಾಡಲು ಮುಂದಾಗಿದೆ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕಿ ಎಂ.ಡಿ.ಗಿರಿಜಾ.

ಇದನ್ನು ಓದಿ; ಅಪಘಾತ : ಕೊಲ್ಕತ್ತಾ ಮೂಲದ ಪ್ರವಾಸಿ ಸಾವು

ವಿದ್ಯಾವರ್ಧಕ ಕಾಲೇಜಿನ

ಸಾಮಾಜಿಕ ಕಾಳಜಿಯುಳ್ಳ

ಆವಿಷ್ಕಾರಗಳಿಗೆ ಹೆಚ್ಚು

ಪ್ರೋತ್ಸಾಹ ನೀಡುತ್ತಿದೆ. ನಮ್ಮ

ಆವಿಷ್ಕಾರಕ್ಕೆ ಆರ್ಥಿಕ ಸಹಾಯ

ಮತ್ತು ಪ್ರಾಧ್ಯಾಪಕರ

ಉತ್ತೇಜನ ಹೆಚ್ಚು ದೊರೆತಿದೆ.

-ಪ್ರಣವ್ ಕುಮಾರ್,

ವಿದ್ಯಾರ್ಥಿ, ಮಾಹಿತಿ ವಿಜ್ಞಾನ

ಇಂಜಿನಿಯರಿಂಗ್(ಐಎಸ್‌ಇ)

ಇವತ್ತಿನ ತಂತ್ರಜ್ಞಾನದ ಯುಗದಲ್ಲಿ

ಹೊಸ ರೀತಿ ಆವಿಷ್ಕಾರಗಳನ್ನು

ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ

ಪ್ರೋತ್ಸಾಹ ನೀಡುವ ಕೆಲಸಗಳು

ನಿರಂತರವಾಗಿ ನಡೆಯುತ್ತಿರುತ್ತವೆ.

ಕಾಲೇಜಿನ ಕಾರ್ಯವೈಖರಿ ಕುರಿತು

ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

-ಡಾ.ಬಿ.ಸದಾಶಿವೇಗೌಡ,

ಪ್ರಾಂಶುಪಾಲರು, ವಿದ್ಯಾವರ್ಧಕ

ಇಂಜಿನಿಯರಿಂಗ್ ಕಾಲೇಜು

-ಕೆ.ಎಂ.ಅನುಚೇತನ್

ಆಂದೋಲನ ಡೆಸ್ಕ್

Recent Posts

ಪ್ರೀತಿ ವಿಚಾರವಾಗಿ ಹಲ್ಲೆ: ಮನನೊಂದು ಯುವಕ ಆತ್ಮಹತ್ಯೆ

ಮೈಸೂರು: ಯುವತಿಯ ಪ್ರೀತಿ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ…

57 seconds ago

ರಾಷ್ಟ್ರಕವಿ ಕುವೆಂಪು ಕಟ್ಟಿದ ಸಂವಿಧಾನ ಸ್ವಾಗತ ಗೀತೆ

ನಮ್ಮ ಸಂವಿಧಾನಕ್ಕೆ ಬರೋಬ್ಬರಿ 75ವರ್ಷಗಳು ತುಂಬಿವೆ. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವೇ ‘ಸಾಮಾಜಿಕ ನ್ಯಾಯದ ತಾಯಿ’. ಸರ್ವಜನಾಂಗದ ಹಿತರಕ್ಷಣೆಯ ಹೊಣೆಹೊತ್ತ…

35 mins ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಚಲನ ಮೂಡಿಸಿದ ಬಿಜೆಪಿ-ಜಾ.ದಳ ಮೈತ್ರಿ ವಿಚಾರ

ಭವಿಷ್ಯದ ಗುರಿಸಾಧನೆಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ  ಕಳೆದ ವಾರ ಬಿಜೆಪಿ-ಜಾ.ದಳ ಪಾಳೆಯಗಳಲ್ಲಿ ದೊಡ್ಡ ಮಟ್ಟದ ಸಂಚಲನ…

49 mins ago

ಆಟಿಕೆ ಮಾರಾಟಗಾರರ ಸುರಕ್ಷತೆಗೆ ಸರ್ಕಾರಗಳು ಮುಂದಾಗಲಿ

2025ರ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಘೋರ ದುರಂತಕ್ಕೆ ಸಾಕ್ಷಿಯಾದದ್ದು ಅತ್ಯಂತ ವಿಷಾದಕರ ಮತ್ತು ಆತಂಕಕಾರಿ ಸಂಗತಿ. ಹೊಟ್ಟೆ ಪಾಡಿಗಾಗಿ…

1 hour ago

ಕ್ರೀಡಾಲೋಕದ ಸಿಹಿ-ಕಹಿ ಮೆಲುಕು

ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು 2025ರ ವರ್ಷಪೂರ್ತಿ ಸುಂದರ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದು. ಅದೇ ಮಾದರಿಯಲ್ಲಿ ಪ್ರಸಕ್ತ…

2 hours ago

ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ ಮಂಗಗಳ ಕಾಟ

* ರೈತರ ಕೈಗೆ ಸಿಗದ ಫಸಲು * ಸ್ಥಳಾಂತರಕ್ಕೆ  ಅನುಮತಿ ನೀಡಲು ಅರಣ್ಯ ಇಲಾಖೆಯಿಂದ ಮನವಿ * ವಾನರ ಸೇನೆ…

3 hours ago