Andolana originals

ಸಿದ್ದರಾಮಯ್ಯರಿಗೆ ಯಾರೂ ಸರಿಸಾಟಿಯಿಲ್ಲ

ಎನ್.ಎಸ್.ಶಂಕರ್

ಎಲ್ಲ ಜಾತಿ ವರ್ಗಗಳಲ್ಲೂ ಅವರನ್ನು ಮೆಚ್ಚುವ ಜನರಿದ್ದಾರೆ

ಆ ಎತ್ತರದ ನಾಯಕರು ಕರ್ನಾಟಕದಲ್ಲಂತೂ ಇಲ್ಲ

 ‘ನೀವೇನೇ ಹೇಳಿ ಸಾರ್, ಸಿದ್ದರಾಮಣ್ಣ ಜನ ಮಡಗವ್ನೆ. ಅದೇನು ಜನ ಸಾರ್ ಅಲ್ಲಿ? ಯಬ್ಬಾ, ಕಾಲಿಡಕ್ಕಾಗಲ್ಲ, ಅಷ್ಟು ಜನ!’ ಹೀಗೆಂದವನು ಒಬ್ಬ ಆಟೋ ಚಾಲಕ. ಹತ್ತು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಮೊದಲ ಮಗ ರಾಕೇಶ್ ಬೆಲ್ಜಿಯಂನಲ್ಲಿ ಅಕಾಲ ಮರಣಕ್ಕೆ ತುತ್ತಾಗಿ ಆತನ ದೇಹವನ್ನು ಇಲ್ಲಿ ತಂದು ಮಣ್ಣು ಮಾಡುವ ಸಂದರ್ಭದಲ್ಲಿ ಸೇರಿದ್ದ ಜನಜಂಗುಳಿಯನ್ನು ಟಿವಿಯಲ್ಲಿ ಕಂಡು ಆತನ ಬಾಯಲ್ಲಿ ಈ ಉದ್ಗಾರ ಹೊರಟಿತ್ತು.

ಅದು ನಿಜ. ಕರ್ನಾಟಕ ಕಾಂಗ್ರೆಸ್ ಎಂಬ ಸಮುದ್ರದಲ್ಲಿ ಜನಾನುರಾಗದ ದೃಷ್ಟಿಯಿಂದ ಸಿದ್ದರಾಮಯ್ಯನವರಿಗೆ ಸಾಟಿಯಾಗುವುದಿರಲಿ, ಅವರ ಹತ್ತಿರಕ್ಕೂ ಬರಬಲ್ಲ ಇನ್ನೊಬ್ಬ ನಾಯಕನಿಲ್ಲ. ‘ಸಿದ್ದು’ ಕೇವಲ ಕುರುಬರ ನಾಯಕರಲ್ಲ, ಹಿಂದುಳಿದ ವರ್ಗಗಳ ನಾಯಕರಷ್ಟೇ ಅಲ್ಲ, ಅವರನ್ನು ಮೆಚ್ಚುವ, ಹಿಂಬಾಲಿಸುವ ಜನ ಎಲ್ಲ ಜಾತಿ/ ವರ್ಗಗಳಲ್ಲೂ ಇದ್ದಾರೆ ಎಂಬುದೇ ಅವರ ಹೆಗ್ಗಳಿಕೆ.

ಈಗ ಅವರು ಅಧಿಕಾರದಿಂದ ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಬಗ್ಗೆ ಪೋಸ್ಟ್ ಮಾಡುತ್ತಿರುವ ಬಹುತೇಕರ ಸೊಲ್ಲು ಒಂದೇ: ‘ಸಿದ್ದರಾಮಯ್ಯ ಮೊದಲ ಅವಧಿಯಲ್ಲಿದ್ದಷ್ಟು ಖಡಕ್ ಆಗಿ, ಖಚಿತವಾಗಿ ಎರಡನೇ ಅವಧಿಯಲ್ಲಿ ಇರಲಿಲ್ಲ. ಅವರ ಆಡಳಿತ ಈ ಬಾರಿ ತುಸು ಸಡಿಲವಾಯಿತು; ನಿರ್ಣಾಯಕ ವಿಷಯಗಳಲ್ಲಿ ಅವರು ತಲೆ ತಪ್ಪಿಸಿಕೊಂಡು ಹೋಗುವ ಧೋರಣೆ ತೋರಿಸುತ್ತಿದ್ದಾರೆ…’ ಇತ್ಯಾದಿ.

ಗೆಳೆಯರೊಬ್ಬರು- ಇವರು ಒಂದು ಸುದ್ದಿ ವಾಹಿನಿಯ ಮುಖ್ಯಸ್ಥರು- ಸಿದ್ದರಾಮಯ್ಯನವರನ್ನು ಈ ಹಿಂದೆ ಒಮ್ಮೆ ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಏಕೆ ಬಂಧಿಸಲಿಲ್ಲ?’ ಎಂದು ಕೇಳಿದರು, ಖಾಸಗಿಯಾಗಿ. ಅದಕ್ಕೆ ಸಿದ್ದು ‘ಸುಮ್ನಿರಪ್ಪ, ನನ್ನನ್ನು ಆಮೇಲೆ anti Brahmin ಅಂತ ಬ್ರಾಂಡ್ ಮಾಡಿಬಿಡ್ತಾರೆ’ ಅಂದರು!

ಈ ಹಿಂಜರಿಕೆಯೇ ಅವರನ್ನು ಜಾತಿ ಜನಗಣತಿ, ಒಳ ಮೀಸಲಾತಿ, ಹಿಂದುತ್ವದ ಆಟಾಟೋಪಗಳ ಎದುರು ಗಡಸು ನಿರ್ಧಾರ ಕೈಗೊಳ್ಳದಿರುವುದು… ಮುಂತಾದ ‘ನಿಷ್ಕ್ರಿಯತೆ’ಗೆ ದೂಡಿತು ಅನ್ನುವಂತೆ ಕಾಣುತ್ತದೆ.

ಜೊತೆಗೆ ಬೆಂಗಳೂರಿಗೆ ಸುರಂಗ ಕೊರೆಯುವ ಸಾವಿರಾರು ಕೋಟಿ ರೂಪಾಯಿ ಯೋಜನೆಗಳ ಮಾತಾಡುತ್ತಿದ್ದಾಗ ಅದಕ್ಕೆ ಕಡಿವಾಣ ಹಾಕದಿರುವುದೂ ಸಿದ್ದರಾಮಯ್ಯನವರ ನಿರ್ಣಯ ಶಕ್ತಿ ಕುಂದಿದ್ದಕ್ಕೆ ಸಾಕ್ಷಿಯಾಗಿ ಕಾಣುತ್ತದೆ. ರಾಜಕಾರಣಿಗಳು ದೊಡ್ಡ, ಇನ್ನೂ ದೊಡ್ಡ ಯೋಜನೆಗಳನ್ನು ಯಾಕಾಗಿ ರೂಪಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿರುವಾಗ ಸಿದ್ದು ಇನ್ನಷ್ಟು ಕ್ರಿಯಾಶೀಲರಾಗಿರಬೇಕಿತ್ತು ಎಂದು ಜನ ನಿರೀಕ್ಷಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಸಿದ್ದರಾಮಯ್ಯನವರನ್ನು ಎರಡನೇ ದೇವರಾಜ ಅರಸು ಅನ್ನುವವರೂ ಇದ್ದಾರೆ. ಆದರೆ, ಅರಸು ಯಾವುದೇ ನಿರ್ಧಾರ ಕೈಗೊಳ್ಳುವಾಗ ‘ಯಾರೇನು ಹೇಳುತ್ತಾರೆ’ ಎಂದು ಕ್ಷಣ ಮಾತ್ರವೂ ತಲೆ ಕೆಡಿಸಿಕೊಳ್ಳದೆ ಕಾರ್ಯಪ್ರವೃತ್ತರಾಗುತ್ತಿದ್ದರು. ಇಡೀ ಸಮಾಜವನ್ನೇ ಎದುರು ಹಾಕಿಕೊಳ್ಳಲೂ ಅವರು ಹಿಂಜರಿಯುತ್ತಿರಲಿಲ್ಲ. ಸಿದ್ದು ಕೂಡ ಅಷ್ಟೇ ನಿಷ್ಠುರವಾಗಿರಬೇಕಿತ್ತು ಎಂದು ನನ್ನಂಥವರು ಆಸೆಪಟ್ಟಿದ್ದರು.

ಅಷ್ಟಾದರೂ, ಸಂವಿಧಾನ, ಸಾಮಾಜಿಕ ನ್ಯಾಯ, ಕೋಮುವಾದ ವಿರೋಽ ನಿಲುವು- ಇಂಥ ತಾತ್ವಿಕ ಪ್ರಶ್ನೆಗಳು ಬಂದಾಗ ಸಿದ್ದರಾಮಯ್ಯನವರಷ್ಟು ಖಡಾಖಂಡಿತವಾಗಿದ್ದ, ಆ ಎತ್ತರದ ನಾಯಕರು ಕರ್ನಾಟಕದಲ್ಲಂತೂ ಇಲ್ಲ. ಜೊತೆಗೆ ಅವರು ತಂದ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಜನಜೀವನಕ್ಕೇ ಹೊಸ ಲವಲವಿಕೆ, ಹೊಸ ಜೀವ ಬಂದಿದೆ. ಹೀಗಿರುವಾಗ ಇನ್ನೆರಡು ವರ್ಷಗಳಲ್ಲಿ ಮತ್ತೆ ಚುನಾವಣೆ ಎದುರಿಸಬೇಕಿರುವ ಈ ಹಂತದಲ್ಲಿ ‘ಹೈಕಮಾಂಡ್’ ಸಿದ್ದರಾಮಯ್ಯನವರನ್ನು ಬದಲಾಯಿಸುವ ‘ರಿಸ್ಕ್’ ತೆಗೆದುಕೊಳ್ಳಬಾರದಿತ್ತು. ಇನ್ನು ಮುಂದೆ ಯಾರು ಬರಲಿದ್ದಾರೆಯೋ ಗೊತ್ತಿಲ್ಲ. ಬರುವವರು ನಮ್ಮ ನಾಡನ್ನು ಹೇಗೆಲ್ಲ ಚೆಂಡಾಡುವರೋ ಗೊತ್ತಿಲ್ಲವಲ್ಲ?!…

” ಸಂವಿಧಾನ, ಸಾಮಾಜಿಕ ನ್ಯಾಯ, ಕೋಮುವಾದ ವಿರೋಧಿ ನಿಲುವು- ಇಂಥ ತಾತ್ವಿಕ ಪ್ರಶ್ನೆಗಳು ಬಂದಾಗ ಸಿದ್ದರಾಮಯ್ಯನವರಷ್ಟು ಖಡಾಖಂಡಿತವಾಗಿದ್ದ, ಆ ಎತ್ತರದ ನಾಯಕರು ಕರ್ನಾಟಕದಲ್ಲಂತೂ ಇಲ್ಲ. ಜೊತೆಗೆ ಅವರು ತಂದ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಜನಜೀವನಕ್ಕೇ ಹೊಸ ಲವಲವಿಕೆ, ಹೊಸ ಜೀವ ಬಂದಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

10 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

10 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

10 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

10 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

10 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

10 hours ago