Andolana originals

ಫೆ.೫ರಂದು ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ

ಹೇಮಂತ್ ಕುಮಾರ್

ಕಾಶಿ ನಂತರ ಸ್ಮಶಾನವಾಸಿ ಶಿವನ ದೇವಸ್ಥಾನವೆಂಬ ಹೆಗ್ಗಳಿಕೆ 

ಮಂಡ್ಯ: ದೇಶದಲ್ಲೇ ಭಸ್ಮೋದ್ಧಾರಿಯಾದ ಶಿವ ಸ್ಮಶಾನವಾಸಿಯಾಗಿರುವ ದೇವಾಲಯ ಕಾಶಿ ಕ್ಷೇತ್ರದಲ್ಲಿದೆ. ಅದನ್ನು ಹೊರತುಪಡಿಸಿದರೆ ದಕ್ಷಿಣದಲ್ಲಿರುವ ಏಕೈಕ ದೇವಾಲಯ ಸಾತನೂರಿನಲ್ಲಿರುವುದು ಬಹುತೇಕರಿಗೆ ತಿಳಿದಿಲ್ಲ.

ಈ ದೇವಾಲಯದ ವಿಶೇಷವೆಂದರೆ ಮುಂಭಾಗ ಸಾರ್ವಜನಿಕ ಸ್ಮಶಾನ, ಪಕ್ಕದಲ್ಲೇ ಹರಿಯುವ ಕಾವೇರಿ ತೊರೆ, ಮಧ್ಯ ಅಶ್ವತ್ಥ ವೃಕ್ಷವಿದೆ. ಇಂತಹ ಪ್ರಶಾಂತವಾದ ಸ್ಥಳದಲ್ಲಿರುವ ಶ್ರೀ ಶಂಭುಲಿಂಗೇಶ್ವರಸ್ವಾಮಿಯ ದೇವಾಲಯ ಇದೀಗ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಮಹೋತ್ಸವಕ್ಕೆ ಸಿದ್ಧಗೊಂಡಿದೆ.

ಗ್ರಾಮದ ಸ್ಮಶಾನದ ಆವರಣದಲ್ಲಿ ಶಿಥಿಲಗೊಂಡಿದ್ದ ಪುರಾತನವಾದ ಶ್ರೀ ಶಂಭುಲಿಂಗೇಶ್ವರ ದೇವಾಲಯವನ್ನು ನೆಲಸಮಗೊಳಿಸಿ, ನೂತನವಾಗಿ ಸುಮಾರು ೧ ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ವಾಸ್ತುಶಿಲ್ಪ ಶಾಸ್ತ್ರ ಪ್ರಕಾರ ಶಿಲಾಮಯವಾಗಿ ನಿರ್ಮಾಣಗೊಳಿಸಿದ್ದಾರೆ.

ಈ ದೇವರ ಒಕ್ಕಲಿನವರು, ಭಕ್ತಾದಿಗಳು ವಿವಿಧೆಡೆ ನೆಲೆಸಿದ್ದಾರೆ. ಪ್ರತಿ ವರ್ಷ ದೀಪಾವಳಿ ಹಾಗೂ ಶಿವರಾತ್ರಿ ಹಬ್ಬದಂದು ಕುಟುಂಬ ಸಮೇತರಾಗಿ ಆಗಮಿಸಿ, ವಸ್ತ್ರ, ಬೆಲ್ಲ, ಅಕ್ಕಿ ಸೇರಿದಂತೆ ಪಡಿ ಅರ್ಪಿಸಿ ದೇವರ ದರ್ಶನ ಪಡೆಯುವುದು ಇಲ್ಲಿನ ವಾಡಿಕೆ. ಈಗ ಅವರೆಲ್ಲರ ಸಹಕಾರ ಪಡೆದು ಶ್ರೀ ಶಂಭುಲಿಂಗೇಶ್ವರ ಸೇವಾ ಟ್ರಸ್ಟ್ ನೂತನ ದೇವಾಲಯ ನಿರ್ಮಿಸಿ, ಇದೀಗ ಲೋಕಾರ್ಪಣೆಗೆ ಸಿದ್ಧಗೊಳಿಸಿದೆ.

ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಮಹೋತ್ಸವ ಫೆ.೫ ಮತ್ತು ೬ರಂದು ವಿಜೃಂಭಣೆಯಿಂದ ನಡೆಸಲು ಗ್ರಾಮಸ್ಥರು ಸಜ್ಜಾಗಿದ್ದು, ಫೆ.೫ರ ಗುರುವಾರ ಸಂಜೆ ೫.೩೦ಕ್ಕೆ ಚುಂಚಶ್ರೀ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ಹಾಗೂ ವಿಶ್ವಮಾನವ ಕ್ಷೇತ್ರದ ಡಾ.ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕುಂಭಾಭಿಷೇಕ ನೆರವೇರಲಿದೆ.

ಫೆ.೬ರ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸುವರು. ಜಾ.ದಳ ಮುಖಂಡ ಬಿ.ಆರ್.ರಾಮಚಂದ್ರು ಅಧ್ಯಕ್ಷತೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ, ಮಾಜಿ ಶಾಸಕ ಎಂ.ಶ್ರೀನಿವಾಸ್, ಎಂ.ಎಸ್. ಆತ್ಮಾನಂದ, ಜಾ.ದಳ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಶ್ರೀ ಶಂಭುಲಿಂಗೇಶ್ವರ ಸೇವಾ ಟ್ರಸ್ಟ್ ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ಹನೂರು| ಕಾಡಾನೆ ದಾಳಿ: ಆಟೋ ಜಖಂ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ವ್ಯಾಪಾರ ಮಾಡಲು…

7 mins ago

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾದ ಉದ್ವಿಗ್ನತೆ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು.!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಭಾರತೀಯ ನಾಗರಿಕರು ಒಗ್ಗಟ್ಟಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ…

23 mins ago

ಆರೋಗ್ಯ ಕೇಂದ್ರದ ಮುಂಭಾಗವೇ ವಾಹನಗಳ ಪಾರ್ಕಿಂಗ್:‌ ಸಾರ್ವಜನಿಕರಿಗೆ ಕಿರಿಕಿರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ…

35 mins ago

ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವಾಸಿಗಳಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಕಾಲೋನಿಗೆ…

41 mins ago

ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಮೈಸೂರು: ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಘಟಕದ 46ನೇ ತಂಡದ ಸಿವಿಲ್‌ ಪೊಲೀಸ್‌…

1 hour ago

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ 80 ಲಕ್ಷ ಜನರಿಂದ ನೋ ಕಿಂಗ್ಸ್‌ ಚಳುವಳಿ ಟ್ರಂಪ್‌ ನೀತಿ ವಿರೋಧಿಸಿ…

2 hours ago