Andolana originals

ಮಳೆಗಾಲದಲ್ಲೇ ವೈಟ್‌ ಟಾಪಿಂಗ್‌ ಆಗಬೇಕೆ?

ವಸಂತ್‌ ಕುಮಾರ್‌, ಮೈಸೂರು ಮಠ

ಪ್ರತಿ ವರ್ಷವೂ ಪಾಲಿಕೆಯ ಬಜೆಟ್‌ನಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗುತ್ತದೆ. ೨೦೨೪-೨೦೨೫ರಲ್ಲಿ ಕೊಟ್ಟ ಹಣದಲ್ಲಿ ಎಷ್ಟು ಉದ್ದ ರಸ್ತೆಗಳಿಗೆ ದುರಸ್ತಿ ಯಾ ಡಾಂಬರಿನ ಯಾ ವೈಟ್ ಟಾಪಿಂಗ್ ಕೆಲಸಗಳು ಮುಗಿದಿವೆ ಎಂದು ತಿಳಿಯುವ ಮುನ್ನವೇ ೨೦೨೫-೨೬ರಲ್ಲಿ ಪುನಃ ಹಣವನ್ನು ಮಂಜೂರು ಮಾಡಲಾಗಿದೆ. ಇದರ ಅರ್ಥ ಏನು? ಏಕೆಂದರೆ, ನಾಗರಿಕರಿಗೆ ತಿಳಿದ ಮಟ್ಟಿಗೆ ಹೋದ ವರುಷ ಬಹಳಷ್ಟು ರಸ್ತೆಗಳು ದುರಸ್ತಿಯನ್ನೇ ಕಂಡಿರಲಿಲ್ಲ. ಈ ಅನನುಕೂಲವಲ್ಲದೆ, ನೀರು ಮತ್ತು ಒಳ ಚರಂಡಿ ಇಲಾಖೆಗಳೂ ಕೇಬಲ್ ಹಾಕುವವರೂ ರಸ್ತೆಗಳ ಹನನಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ.

ದಸರಾ ಹಬ್ಬದ ಹೆಸರಿನಲ್ಲೂ ಜಂಬೂ ಸವಾರಿಯು ಸಾಗುವ ಮುಖ್ಯ ಮಾರ್ಗವಾದ ಸಯ್ಯಾಜಿರಾವ್ ರಸ್ತೆಯೂ ಡಾಂಬರು ಕಾಣಲಿಲ್ಲ. ನಮ್ಮ ಹಣ ಏನಾಯಿತು?

ರಸ್ತೆಗಳ ದುರಸ್ತಿಯ ಪ್ರಕ್ರಿಯೆಯು ಜನಗಳ ಪಾಲಿಗೆ ಒಂದು ಶಾಪವಾಗಿಯೂ ಮತ್ತು ವಿಷ ವರ್ತುಲವಾಗಿಯೂ ಕಾಡುತ್ತಿದೆ. ಏಕೆ ಹೀಗೆ? ಪ್ರತಿ ಬಾರಿಯೂ, ಡಾಂಬರು ಹಾಕುವ/ದುರಸ್ತಿ ಕಾರ್ಯ ಚಟುವಟಿಕೆಗಳು ಮಳೆ ಬಂದಾಗಲೇ ಮೊದಲಾಗಬೇಕೆ? ಹೀಗೆ ಹಾಕಿದ ಡಾಂಬರು ೩ರಿಂದ ೬ ತಿಂಗಳುಗಳೊಳಗೆ ಏಕೆ ಶಿಥಿಲಾವಸ್ಥೆಗೊಳಗಾಗುತ್ತವೆ ? ಇದರ ಹಿಂದಿರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರವೇನು? ಎನ್ನುವುದನ್ನು ವಿಶ್ಲೇಷಿಸಿ ನೋಡಿ ಕೆಳ ಕಂಡ ಸಲಹೆಗಳನ್ನು ನೀಡಲಾಗಿದೆ ಮತ್ತು ಅವನ್ನು ಪರಿಗಣಿಸಿ ಮೈಸೂರು ಮಹಾನಗರ ಪಾಲಿಕೆಯು ಕಾರ್ಯರೂಪಕ್ಕೆ ತಂದು ತನ್ನ ಕೆಲಸಗಳನ್ನು ಸುಲಭವಾಗಿಸಿಕೊಂಡು ಮತ್ತು ನಾಗರಿಕರು ಸುಂದರವಾದ ರಸ್ತೆಗಳನ್ನು ಕಾಣುವ ಬಯಕೆಯನ್ನೂ ಸಂಪನ್ನಗೊಳಿಸುವುದೆಂದು ನಂಬಲಾಗುತ್ತದೆ. ನಗರದ ರಸ್ತೆ ದುರಸ್ತಿ ಕಾರ್ಯಕ್ರಮಗಳ ರೂಪುರೇಷೆಯನ್ನು ಕೆಳಕಂಡಂತೆ ಬದಲಾಯಿಸಿಕೊಳ್ಳಬೇಕು:

೧. ಜುಲೈ ತಿಂಗಳಿನಲ್ಲಿ – ಮಳೆ ನಿಂತ ಮೇಲೆ ಯಾವ ಯಾವ ರಸ್ತೆಗಳನ್ನು ದುರಸ್ತಿಗೆ ಒಳಪಡಿಸಬೇಕು ಎನ್ನುವ ಸಮೀಕ್ಷೆಯನ್ನು ಕೈಗೊಳ್ಳಬೇಕು ಮತ್ತು ಅವುಗಳನ್ನು ಗುರುತಿಸಿ ಅ.
ಆ. ಇ ವರ್ಗಗಳಾಗಿ ವಿಂಗಡಿಸಬೇಕು. ಅ – ಅತಿಯಾಗಿ ಕೆಟ್ಟಿರುವವು; ಆ – ಸುಮಾರಾಗಿ ದುರಸ್ತಿ ಮಾಡುವಂತಹವು ಮತ್ತು ಇ – ದುರಸ್ತಿ ಮಾಡಬೇಕಾದರೂ ನಿಧಾನವಾಗಿ ಮಾಡುವಂತಹವು.

೨. ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ – ಅವುಗಳ ಅಂಕಿ ಅಂಶಗಳ ತಯಾರಿಕೆ, ಅಂದಾಜು ವೆಚ್ಚ, ಟೆಂಡರ್ ಪ್ರಕ್ರಿಯೆ, ಪರಿಶೀಲನೆ, ಮಾತು ಕಥೆಗಳ ಪ್ರಕ್ರಿಯೆ, ಭಾಂಗಿಗಳ ವಿತರಣೆ, ಕಾರ್ಯ ಸೂಚಿಗಳನ್ನು ನೀಡುವಿಕೆ ಮುಂತಾದವುಗಳನ್ನು ಮುಗಿಸುವುದು.

೩. ಅಕ್ಟೋಬರ್ ತಿಂಗಳಿನಲ್ಲಿ ಗುತ್ತಿಗೆದಾರಿಗೆ ಮುಂಗಡ ಹಣ ನೀಡುವಿಕೆ, ಸಾಮಾನು ಸರಂಜಮುಗಳನ್ನು ಕೊಂಡು ತಂದು ಅವುಗಳನ್ನು ಆಯಾ ವಿಭಾಗಗಳಲ್ಲಿ ಶೇಖರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

೪. ನವೆಂಬರ್-ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಡಾಂಬರು ಹಾಕಿ, ಅವುಗಳ ಲೆಕ್ಕ ಮತ್ತು ಪರಿಶೋಧನೆ ಮಾಡುವ ಪ್ರಕ್ರಿಯೆಯನ್ನು ಮುಗಿಸಿ

೫. ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಗುತ್ತಿಗೆದಾರರಿಗೆ ಅಂತಿಮವಾಗಿ ನೀಡಬೇಕಾದ ಹಣವನ್ನು ಪಾವತಿ ಮಾಡುವ ಮುನ್ನ ಅವರುಗಳು ಮಾಡಿರುವ ಕೆಲಸಗಳಲ್ಲಿ ಕುಂದು ಕೊರತೆಗಳು, ನ್ಯೂನತೆಗಳು ಕಂಡು ಬಂದಲ್ಲಿ, ಅವುಗಳನ್ನು ಸರಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಮೇಲ್ಕಂಡ ಸಲಹೆಗಳನ್ನು ಕಾರ್ಯ ರೂಪಕ್ಕೆ ತಂದರೆ, ಡಾಂಬರು ಹಾಕಿದ ರಸ್ತೆಗಳು ಮಳೆಯಿಂದ ಶಿಥಿಲಗೊಳ್ಳುವುದಿಲ್ಲ; ಬಿಸಿಲುಗಾಲದಲ್ಲಿರುವ ಸೂರ್ಯನ ಶಾಖದಿಂದ ಡಾಂಬರು ಕರಗಿ ಸರಿಯಾಗಿ ರೀತಿಯಲ್ಲಿ ಸೆಟ್ ಆಗಿ ರಸ್ತೆಗಳು ಸಾಕಷ್ಟು ಕಾಲ ಉಳಿದುಕೊಳ್ಳುವುದರಲ್ಲಿ ಸಂದೇಹವಿರುವುದಿಲ್ಲ.

ಇದಲ್ಲದೆ ದಸರಾ ಸಮಾರಂಭಗಳ ಕಾಲದಲ್ಲಿ ಮಾತ್ರ, ‘ರಾಜ ಮಾರ್ಗ’ವನ್ನು ಸಿಂಗರಿಸುವ ಮತ್ತು ಜಂಬೂ ಸವಾರಿ ಸಾಗುವ ಮಾರ್ಗದ ದುರಸ್ತಿಯನ್ನು ಒಂದು ಬೇರೆ ರೀತಿಯ ಸಾಧಕ ಅಂಗಭೂತವಾಗಿ ಪರಿಗಣಿಸಬೇಕಾಗುವುದೆಂದು ಸಲಹೆ ನೀಡ ಲಾಗುತ್ತಿದೆ. ಸಿಂಗರಿಸುವ ನೆಪ ದಲ್ಲಿ ಈ ಮಾರ್ಗದಲ್ಲಿರುವ ಹತ್ತಾರು ವರ್ಷಗಳಿಂದ ಬೆಳೆದು ನಿಂತಿರುವ ಮತ್ತು ನೆರಳು ಕೊಟ್ಟು ಜನಗಳ ನೆತ್ತಿ ತಂಪು ಮಾಡುತ್ತಿರುವ ಪ್ರಕೃತಿಯ ಸಿರಿಯಾದ ಮರಗಳನ್ನು ಹನನ ಮಾಡಬಾರದಾಗಿ ವಿನಂತಿಸಿಕೊಳ್ಳಲಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

14 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

15 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

15 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

16 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

20 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

20 hours ago